For Quick Alerts
  ALLOW NOTIFICATIONS  
  For Daily Alerts

  ಸೀತಾರಾಮ್ ಬಿನೋಯ್ ಬಳಿಕ 'ಕೇಸ್ ಆಫ್ ಕೊಂಡಾಣ' ಹುಡುಕಿ ಹೊರಟ ವಿಜಯ್ ರಾಘವೇಂದ್ರ!

  |

  ವಿಜಯ್ ರಾಘವೇಂದ್ರ ನಟಿಸಿದ್ದ 'ಸೀತಾರಾಮ್ ಬಿನೋಯ್' ಸಿನಿಮಾಗೆ ವೀಕ್ಷಕರಿಂದ ಮೆಚ್ಚುಗೆ ಸಿಕ್ಕಿತ್ತು. ಇದು ವಿಜಯ್ ರಾಘವೇಂದ್ರ ಅಭಿಮಾನಯದ 50ನೇ ಸಿನಿಮಾ ಆಗಿತ್ತು. ಇದೇ ಚಿತ್ರದ ಮೂಲಕ ದೇವಿ ಪ್ರಸಾದ್ ಶೆಟ್ಟಿ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು.

  ಈಗ ಇದೇ ಕಾಂಬಿನೇಷನ್ ಮತ್ತೆ ಒಂದಾಗುತ್ತಿದೆ. 'ಕೇಸ್ ಆಫ್ ಕೊಂಡಾಣ' ಸಿನಿಮಾ ಮೂಲಕ ಮತ್ತೆ ಈ ಜೋಡಿ ಸಸ್ಪೆನ್ಸ್ ಪ್ರಿಯರಿಗೆ ಕಿಕ್ ಕೊಡಲು ಸಜ್ಜಾಗಿದ್ದಾರೆ. ಈ ಸಿನಿಮಾಗೆ ಸದ್ಯ ಮುಹೂರ್ತ ಮಾಡಲಾಗಿದೆ.

  ವಿಜಯ್ ರಾಘವೇಂದ್ರ ಮುಂದಿನ ಸಿನಿಮಾಗೆ ಭಾವನಾ ಮೆನನ್ ನಾಯಕಿ; ಖಡಕ್ ಪಾತ್ರದಲ್ಲಿ ನಟನೆವಿಜಯ್ ರಾಘವೇಂದ್ರ ಮುಂದಿನ ಸಿನಿಮಾಗೆ ಭಾವನಾ ಮೆನನ್ ನಾಯಕಿ; ಖಡಕ್ ಪಾತ್ರದಲ್ಲಿ ನಟನೆ

  ವಿಜಯ ರಾಘವೇಂದ್ರಗೆ 'ಸೀತಾರಾಮ್ ಬಿನೋಯ್ ಕೇಸ್ ನಂಬರ್ 18' ಮತ್ತೊಮ್ಮೆ ಸಕ್ಸಸ್ ತಂದುಕೊಟ್ಟಿತ್ತು. ಪೊಲೀಸ್ ಅಧಿಕಾರಿಯಾಗಿ ವಿಜಯ್ ರಾಘವೇಂದ್ರ ಮಿಂಚಿದ್ದರು. ದೇವಿಪ್ರಸಾದ್ ಶೆಟ್ಟಿ ಹಾಗೂ ವಿಜಯ್ ರಾಘವೇಂದ್ರ ಕಾಂಬಿನೇಷನ್ ಸಿನಿಪ್ರಿಯರಿಗೆ ಇಷ್ಟ ಆಗಿತ್ತು. ಈಗ ಮತ್ತದೇ ಕಾಂಬಿನೇಷನ್ ಪ್ರೇಕ್ಷಕರಿಗೆ ಕಿಕ್ ಕೊಡುವುದಕ್ಕೆ ಹೊಸ ಸಿನಿಮಾವನ್ನು ಹೊತ್ತು ಬರುತ್ತಿದೆ. ಇದೂ ಕೂಡ ಸಸ್ಪೆನ್ಸ್ ಸಿನಿಮಾ ಆಗಿದ್ದು ಪ್ರೇಕ್ಷಕರಿಗೆ ಕಿಕ್ ಕೊಡಲಿದೆ. ಅದುವೇ 'ಕೇಸ್ ಆಫ್ ಕೊಂಡಾಣ'.

  ಹಿರಿಯ ಪತ್ರಕರ್ತರಾದ ಜೋಗಿ ಈ ಸಿನಿಮಾ ಸಂಭಾಷಣೆ ಬರೆಯುತ್ತಿದ್ದಾರೆ. 'ಇದೊಳ್ಳೆ ರಾಮಾಯಣ' ಸಿನಿಮಾ ನಂತರ ಯಾವುದೇ ಚಿತ್ರಕ್ಕೆ ಸಂಭಾಷಣೆ ಬರೆಯದ ಜೋಗಿ, ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. "ಈ ಟೀಂ ಬಂದು ಕಥೆ ಹೇಳಿದಾಗ ನಾನು ತುಂಬಾ ಎಕ್ಸೈಟ್ ಆದೆ. ಈ ಹುಡುಗರ ಹತ್ತಿರ ಬಹಳ ಕಲಿಯುವುದು ಇದೆ ಅನಿಸುತ್ತದೆ. ಸುಂದರವಾದ ತಂಡ, ಸುಂದರವಾದ ಕಥೆ. ಬಹಳ ಸುಂದರವಾಗಿ ಪ್ರೆಸೆಂಟ್ ಮಾಡಲು ಹೊರಟಿದ್ದಾರೆ. ನಿಜವಾಗಲೂ ಬಹಳ ಸಂತೋಷವಾಗುತ್ತಿದೆ." ಎಂದರು ಜೋಗಿ ಹೇಳಿದ್ದಾರೆ.

  ಮತ್ತೊಮ್ಮೆ ಕ್ರೈಮ್ ಕಥೆಯನ್ನು ಹೇಳಲು ಹೊರಟಿದ್ದಾರೆ ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ. ತನಿಖಾ ಥ್ರಿಲ್ಲರ್‌ ಕಥೆಯನ್ನು ಪ್ರೇಕ್ಷಕರಿಗೆ ಮುಂದಿಡಲು ಸಜ್ಜಾಗಿದ್ದಾರೆ. 09/2018 ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಹಾಗೂ ಭಾವನಾ ಮೆನನ್ ಇಬ್ಬರೂ ಪೊಲೀಸ್ ಅಧಿಕಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ವೈದ್ಯೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  After Seetharam Benoy Vijay Raghavendra Deviprasad Shetty Reunite For Case of Kondana

  ಸಾತ್ವಿಕ್ ಹೆಬ್ಬಾರ್ ಮತ್ತು ದೇವಿಪ್ರಸಾದ್ ಶೆಟ್ಟಿ ಜೊತೆಗೆ ಅರವಿಂದ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಕೇಸ್ ಆಫ್ ಕೊಂಡಾಣ'ಕ್ಕೆ ವಿಶ್ವಜಿತ್ ರಾವ್ ಛಾಯಾಗ್ರಹಣ, ಶಶಾಂಕ್ ನಾರಾಯಣ ಸಂಕಲನ, ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನವಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯವಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿಯವರ ಸಂಗೀತವಿದೆ. ಸೆಪ್ಟೆಂಬರ್ 28 ರಿಂದ ಶೂಟಿಂಗ್ ಆರಂಭವಾಗಲಿದ್ದು, ಸಂಪೂರ್ಣ ಚಿತ್ರೀಕರಣವನ್ನು ಬೆಂಗಳೂರಿನಲ್ಲಿಯೇ ಶೂಟಿಂಗ್ ಆಗುತ್ತೆ.

  English summary
  After Seetharam Benoy Vijay Raghavendra Deviprasad Shetty Reunite For Case of Kondana, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X