For Quick Alerts
  ALLOW NOTIFICATIONS  
  For Daily Alerts

  ಈ ಮೂರು ಧಾರಾವಾಹಿಗಳನ್ನ ತಪ್ಪದೇ ನೋಡುತ್ತಿದ್ದರಂತೆ ಅಂಬಿ

  |

  ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನ ಸಿನಿಮಾಗಳಲ್ಲಿ, ಟಿವಿ ಸಂದರ್ಶನಗಳಲ್ಲಿ ಅಥವಾ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ನೋಡಿರುವುದುಂಟು. ಅವರ ವ್ಯಕ್ತಿತ್ವ, ಮಾತನಾಡುವ ಶೈಲಿ, ಬೈಯುವ ಗುಣ ಎಲ್ಲವೂ ಗೊತ್ತಿರುವ ಸಂಗತಿಯೇ.

  ಆದ್ರೆ, ಅನೇಕರಿಗೆ ಗೊತ್ತಿಲ್ಲದ ಅಂಬರೀಶ್ ಕಥೆ ಇಲ್ಲಿದೆ. ರೆಬೆಲ್ ಸ್ಟಾರ್ ತಮ್ಮ ಅಂತಿಮ ದಿನಗಳನ್ನ ತಮ್ಮ ಜೆಪಿ ನಗರದ ಮನೆಯಲ್ಲಿ ಹೆಚ್ಚಾಗಿ ಕಳೆಯಲಿಲ್ಲ. ಖಾಸಗಿ ಫ್ಲ್ಯಾಟ್ ವೊಂದರಲ್ಲಿ ವಾಸವಾಗಿದ್ದರು. ಅಂಬಿಗೆ ಮೊದಲೇ ಜನರ ಮಧ್ಯೆ ಬದುಕಿ ಅಭ್ಯಾಸವಾಗಿತ್ತು. ಆದ್ರೆ, ಅಲ್ಲಿ ಹೆಚ್ಚು ಜನ ಬರೋದಕ್ಕೆ ಅವಕಾಶವಿರಲಿಲ್ಲ.

  ಸಾವನ್ನ 'ಜೋಕರ್' ಎಂದು ಗೇಲಿ ಮಾಡಿದ್ರು ಅಂಬಿ: ಹಂಸಲೇಖ

  ಇಂತಹ ಸಮಯದಲ್ಲಿ ಟೈಂ ಪಾಸ್ ಗೆ ಏನೂ ಮಾಡೋದು ಅಂತ ಗೊತ್ತಾಗದೇ ಧಾರಾವಾಹಿಗಳನ್ನ ನೋಡುತ್ತಿದ್ದರಂತೆ ಜಲೀಲ. ಈ ವಿಷ್ಯವನ್ನ ಖುದ್ದು ಅಂಬಿ ಅವರೇ ಖಾಸಗಿ ವಾಹಿನಿಯಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು. ಹಾಗಿದ್ರೆ, ಅಂಬರೀಶ್ ಅವರು ನೋಡುತ್ತಿದ್ದ ಆ ಧಾರಾವಾಹಿಗಳು ಯಾವುದು.? ಮುಂದೆ ಓದಿ....

  ಅಂಬಿಗಾಗಿ ಒಂದು ಟಿವಿ ಇತ್ತು

  ಅಂಬಿಗಾಗಿ ಒಂದು ಟಿವಿ ಇತ್ತು

  ಅಂಬರೀಶ್ ವಾಸವಾಗಿದ್ದ ಫ್ಲ್ಯಾಟ್ ನಲ್ಲಿ ಅವರಿಗಾಗಿಯೇ ಒಂದು ಟಿವಿ ಮೀಸಲಾಗಿತ್ತು. ಹೆಚ್ಚಾಗಿ ಮನೆಯಲ್ಲೇ ಸಮಯ ಕಳೆಯುತ್ತಿದ್ದರಿಂದ ಟಿವಿಯೇ ಅವರ ಟೈಂ ಪಾಸ್ ಸಾಧನ. ಮನೆಗೆ ಯಾರೂ ಬರುವಂತಿರಲಿಲ್ಲ. ಯಾಕಂದ್ರೆ, ಹೆಚ್ಚು ಜನರು ಬಂದ್ರೆ, ಅಕ್ಕಪಕ್ಕದಲ್ಲಿರುವ ಕುಟುಂಬಗಳಿಗೆ ತೊಂದರೆಯಾಗಬಾರದು ಎಂಬ ಕಾರಣ.

  ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ

  ಆ ಮೂರು ಧಾರಾವಾಹಿ ಯಾವುದು.?

  ಆ ಮೂರು ಧಾರಾವಾಹಿ ಯಾವುದು.?

  ಅಂಬರೀಶ್ ಅವರು ಟಿವಿಯಲ್ಲಿ ಹೆಚ್ಚು ನೋಡುತ್ತಿದ್ದ ಧಾರಾವಾಹಿಗಳು ಮೂರೇ. ನಾಗಿಣಿ, ಸಿಂಧೂರ ಮತ್ತು ಹರ ಹರ ಮಹಾದೇವ (ಈಗ ಪ್ರಸಾರ ನಿಂತಿದೆ). ಈ ಧಾರಾವಾಹಿಗಳ ಬಗ್ಗೆ ಹೆಚ್ಚು ಒಲವು ಇತ್ತು ಎಂದು ಅಂಬಿ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

  ಈ ಭಾವನಾತ್ಮಕ ಫೋಟೋ ಹಿಂದಿನ ಛಾಯಾಗ್ರಾಹಕ ಇವರೇ

  ಧಾರಾವಾಹಿ ಬಿಟ್ರೆ ಗಾಲ್ಫ್, ಟೆನ್ನಿಸ್

  ಧಾರಾವಾಹಿ ಬಿಟ್ರೆ ಗಾಲ್ಫ್, ಟೆನ್ನಿಸ್

  ಧಾರಾವಾಹಿ ಬಿಟ್ರೆ ಅಂಬರೀಶ್ ಗಾಲ್ಫ್ ಮತ್ತು ಟೆನ್ನಿಸ್ ಪಂದ್ಯಗಳನ್ನ ಹೆಚ್ಚು ವೀಕ್ಷಿಸುತ್ತಿದ್ದರು. ಯಾವುದಾದರೂ ಪಂದ್ಯ ನೋಡೋಕೆ ಕೂತ್ರೆ, ರಾತ್ರಿ ಎನ್ನದೇ ನಿದ್ದೆ ಮಾಡದೇ ಮ್ಯಾಚ್ ನೋಡ್ತಿದ್ರಂತೆ. ಅಂಬರೀಶ್ ಅವರ ಪಂದ್ಯಗಳನ್ನ ನೋಡುವಾಗ ಸುಮಲತಾ ಅವರಿಗೆ ಬೇಜಾರಾಗಬಾರದು ಎಂಬ ಕಾರಣಕ್ಕೆ ಅವರಿಗೆ ಇನ್ನೊಂದು ಟಿವಿ ಕೊಡಿಸಿದ್ದರಂತೆ.

  ಅಪ್ಪಾಜಿ ದರ್ಶನಕ್ಕಾಗಿ ಸ್ವೀಡನ್ ನಿಂದ ಬಂದಿದ್ದು ದರ್ಶನ್ ಒಬ್ಬರೇ

  ಗಾಲ್ಫ್ ಆಡಲು ಹೋಗುತ್ತಿದ್ದರು

  ಗಾಲ್ಫ್ ಆಡಲು ಹೋಗುತ್ತಿದ್ದರು

  ಆಗ ಒಂದು ಅಥವಾ ಎರಡು ಚಾನಲ್ ಬರ್ತಿತ್ತು. ಈಗ ಲೆಕ್ಕಕ್ಕೆ ಇಲ್ಲದಷ್ಟು ಚಾನಲ್ ಗಳು. ಚೇಂಜ್ ಮಾಡ್ತಾ ಕೂತ್ರೆ ದಿನದ 24 ಗಂಟೆ ಹೋಗೋದೇ ಗೊತ್ತಾಗಲ್ಲ. ಇಂತಹದ್ರಲ್ಲಿ ಅಂಬರೀಶ್ ಹೇಗೋ ಟಿವಿಯ ಮುಂದೆ ಕೂತು ಟೈಂ ಪಾಸ್ ಮಾಡ್ತಿದ್ರು. ಸಮಯ ಸಿಕ್ಕಾಗ ಗಾಲ್ಫ್ ಅಡೋಕೆ ಹೋಗ್ತಿದ್ರಂತೆ.

  ಕೊನೆಯ ದಿನಗಳಲ್ಲಿ ಅಂಬಿಗಿದ್ದ ಎರಡು ಆಸೆ ಈಡೇರಲೇ ಇಲ್ಲ.!

  ಮಗ ಸಿನಿಮಾಗೆ ಬರೋದು ನನ್ನ ಆಸೆಯಾಗಿರಲಿಲ್ಲ

  ಮಗ ಸಿನಿಮಾಗೆ ಬರೋದು ನನ್ನ ಆಸೆಯಾಗಿರಲಿಲ್ಲ

  ನಾನು ಸಿನಿಮಾ ಆಕ್ಟರ್ ಮತ್ತು ರಾಜಕರಾಣಿ ಅಂದ ಮಾತ್ರಕ್ಕೆ, ನನ್ನ ಮಗನೂ ಇಂಡಸ್ಟ್ರಿಗೆ ಬರಬೇಕು ಎಂದು ಅಂಬರೀಶ್ ಅಂದುಕೊಂಡಿರಲಿಲ್ಲ. ಅಭಿಷೇಕ್ ಗೆ ಸಂಪೂರ್ಣವಾಗಿ ಸ್ವತಂತ್ರ ನೀಡಲಾಗಿತ್ತು. ಆದ್ರೆ, ಅವರು ಸಿನಿಮಾ ಮಾಡ್ತೀನಿ ಅಂದಾಗ, ಬೇಡ ಎನ್ನುವುದಕ್ಕೆ ಆಗಲ್ಲ ಮಾಡಲಿ ಎಂದು ಹೇಳಿದ್ದರು.

  English summary
  Rebel star ambarish was watch these three serials in his residence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X