For Quick Alerts
  ALLOW NOTIFICATIONS  
  For Daily Alerts

  ಫಿಟ್ನೆಸ್ ಬಗ್ಗೆ ಗಮನ ಕೊಡು ಎಂದು ಚಿರುಗೆ ಬಯ್ಯುತ್ತಿದ್ದರು ಅರ್ಜುನ್ ಸರ್ಜಾ

  |

  ಚಿರಂಜೀವಿ ಸರ್ಜಾ ಅವರದು ಎತ್ತರದ ನಿಲುವಿನ ದೇಹ. ಇತ್ತೀಚೆಗೆ ಅವರು ತುಂಬಾ ದಪ್ಪಗಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಜಿಮ್‌ನಲ್ಲಿ ಹೆಚ್ಚು ಹೆಚ್ಚು ಬೆವರು ಸುರಿಸಿ ದೇಹವನ್ನು ಉಬ್ಬಿಸಿಕೊಂಡಿದ್ದರು. ದೈಹಿಕ ಕಸರತ್ತು ಅವರ ಕುಟುಂಬಕ್ಕೆ ಹೊಸತಲ್ಲ. ಏಕೆಂದರೆ ಚಿತ್ರರಂಗದ ಕುಟುಂಬದಿಂದ ಬಂದವರಾದ ಅವರಿಗೆ ದೇಹದಾರ್ಢ್ಯ ಕಾಪಾಡಿಕೊಳ್ಳುವ ಕಲೆ ರಕ್ತಗತವಾಗಿಯೇ ಬಂದಿತ್ತು.

  Chiranjeevi Sarja | ಸ್ಯಾಡಲ್ ವುಡ್ ನಟ ಚಿರಂಜೀವಿ ಸರ್ಜಾ ಇನ್ನಿಲ್ಲ | FILMIBEAT KANNADA

  ಆದರೆ ಮಾವ ಅರ್ಜುನ್ ಸರ್ಜಾ ಅವರಂತೆ ಚಿರಂಜೀವಿ ಕಟ್ಟುನಿಟ್ಟಾಗಿ ದೇಹದ ಫಿಟ್ನೆಸ್ ಕುರಿತು ಗಮನ ಹರಿಸುತ್ತಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಅವರ ಮಾವ ಅರ್ಜುನ್ ಸರ್ಜಾ ಕೂಡ ಕೋಪಗೊಂಡಿದ್ದರು ಎಂಬುದನ್ನು ಅವರ ಕುಟುಂಬಕ್ಕೆ ಆಪ್ತರಾಗಿರುವ ಸುಮಲತಾ ಅಂಬರೀಷ್ ತಿಳಿಸಿದ್ದಾರೆ. ಮುಂದೆ ಓದಿ...

  ಅಂಬರೀಷ್ ಎಂದರೆ ಚಿರುಗೆ ಪ್ರಾಣ

  ಅಂಬರೀಷ್ ಎಂದರೆ ಚಿರುಗೆ ಪ್ರಾಣ

  ಚಿರು ಮತ್ತು ಮೇಘನಾ ಇಬ್ಬರು ಅಭಿಷೇಕ್‌ಗೆ ಚಿಕ್ಕಂದಿನಿಂದಲೂ ಬಹಳ ಆತ್ಮೀಯರು. ಮೂವರೂ ಒಟ್ಟಿಗೆ ಜಿಮ್‌ಗೆ ಹೋಗುತ್ತಿದ್ದರು. ಆಗಾಗ್ಗೆ ಮನೆಗೆ ಬರುತ್ತಿದ್ದರು. ಅಂಬರೀಷ್ ಎಂದರೆ ಚಿರುಗೆ ಪ್ರಾಣ. ಅವರ ಎದುರು ಆತ ಕೂರುತ್ತಿರಲಿಲ್ಲ. ಅವರ ತಲೆ ಕೈ ಕಾಲುಗಳಿಗೆ ಮಸಾಜ್ ಮಾಡುತ್ತಿದ್ದನು.

  ಚಿರಂಜೀವಿ ಸರ್ಜಾ ಕೈಯಲ್ಲಿದ್ದ ನಾಲ್ಕು ಸಿನಿಮಾಗಳು ಇವುಚಿರಂಜೀವಿ ಸರ್ಜಾ ಕೈಯಲ್ಲಿದ್ದ ನಾಲ್ಕು ಸಿನಿಮಾಗಳು ಇವು

  ಅರ್ಜುನ್ ಬಯ್ಯುತ್ತಿದ್ದರು

  ಅರ್ಜುನ್ ಬಯ್ಯುತ್ತಿದ್ದರು

  ಚಿರಂಜೀವಿ ಬಹಳ ಕೂಲ್ ಹುಡುಗ. ಯಾವುದರ ಬಗ್ಗೆಯೂ ಸೀರಿಯಸ್ ಆಗುತ್ತಿರಲಿಲ್ಲ. ಫಿಟ್ನೆಸ್ ಬಗ್ಗೆ ಸೀರಿಯಸ್ಸಾಗಿ ಇರು ಎಂದು ಅರ್ಜುನ್ ಬಯ್ಯುತ್ತಿದ್ದರು ಎಂದು ಸುಮಲತಾ ನೆನಪಿಸಿಕೊಂಡಿದ್ದಾರೆ. ಈ ಕೆಟ್ಟ ಸುದ್ದಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಮೇಘನಾ ನಾಲ್ಕೈದು ತಿಂಗಳ ಗರ್ಭಿಣಿ ಎಂದು ಕೇಳಿ ದುಃಖ ಹೆಚ್ಚುತ್ತಿದೆ ಎಂದು ಅವರು ಭಾವುಕರಾದರು.

  ರಕ್ತಗತವಾಗಿ ಬಂದಿದೆ

  ರಕ್ತಗತವಾಗಿ ಬಂದಿದೆ

  'ಫಿಟ್ನೆಸ್ ನಮಗೆ ರಕ್ತಗತವಾಗಿಯೇ ಬಂದಿದೆ ಎಂದು ಚಿರಂಜೀವಿ ಸರ್ಜಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ಅಜ್ಜ ಶಕ್ತಿ ಪ್ರಸಾದ್, ಮಾವ ಅರ್ಜುನ್ ಸರ್ಜಾ ಮತ್ತು ಅವರ ಸಹೋದರ ಧ್ರುವ ಸರ್ಜಾ ಎಲ್ಲರೂ ಫಿಟ್ನೆಸ್‌ಗೆ ಗಮನ ಹರಿಸುತ್ತಿದ್ದರು. ಅದರಲ್ಲಿಯೂ ಅವರ ಊಟ, ದಿನಚರಿ, ಫಿಟ್ನೆಸ್ ವರ್ಕೌಟ್ ಹೇಗಿರಬೇಕು ಎಂದು ಅರ್ಜುನ್ ಸರ್ಜಾ ಟಿಪ್ಸ್ ನೀಡುತ್ತಿದ್ದರು.

  ಚಿರಂಜೀವಿ-ಮೇಘನಾ ಮದುವೆಗೆ ಸಹಾಯ ಮಾಡಿದ್ದೆ: ಜಗ್ಗೇಶ್ಚಿರಂಜೀವಿ-ಮೇಘನಾ ಮದುವೆಗೆ ಸಹಾಯ ಮಾಡಿದ್ದೆ: ಜಗ್ಗೇಶ್

  ಮನೆಯಲ್ಲಿಯೇ ಜಿಮ್

  ಮನೆಯಲ್ಲಿಯೇ ಜಿಮ್

  ಮನೆಯಲ್ಲಿಯೇ ಜಿಮ್ ಸಲಕರಣೆಗಳಿದ್ದವು. ಆದರೂ ಚಿರಂಜೀವಿ ಆಗಾಗೆ ಜಿಮ್‌ಗೆ ಹೋಗಿ ವರ್ಕೌಟ್ ಮಾಡುತ್ತಿದ್ದರು. ಟ್ರೇನರ್ ಇದ್ದಾಗ ಹೆಚ್ಚು ಶಿಸ್ತು, ಕಲಿಕೆ ಇರುತ್ತದೆ ಎಂದು ಚಿರಂಜೀವಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

  English summary
  Actor Arjun Sarja told Chiranjeevi Sarja to be more serious about his fitness.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X