twitter
    For Quick Alerts
    ALLOW NOTIFICATIONS  
    For Daily Alerts

    ಈ ನಾಲ್ಕು ದಿನ 'ಗಂಧದ ಗುಡಿ' ಟಿಕೆಟ್ ದರ ಇಳಿಸಲು ನಿರ್ಧರಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್!

    |

    ಪುನೀತ್ ರಾಜ್‌ಕುಮಾರ್ ಕಂಡ ಕನಸು 'ಗಂಧದ ಗುಡಿ'. ಕರುನಾಡಿ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ತೋರಿಸಬೇಕು ಅನ್ನೋ ಆಸೆ ಅಪ್ಪುಗಿತ್ತು. ಆದರೆ, ಪುನೀತ್ ರಾಜ್‌ಕುಮಾರ್ ಮಧ್ಯದಲ್ಲಿಯೇ ಆ ಕನಸನ್ನು ಮೊಟಕುಗೊಳಿ ಹೊರಟುಹೋಗ್ಬಿಟ್ರು.

    ಆದರೆ, ಅಪ್ಪು ಕಂಡ ಆ ಕನಸನ್ನು ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನೆರವೇರಿಸಿದ್ದಾರೆ. ಅಕ್ಟೋಬರ್ 28ರಂದು ಪವರ್‌ಸ್ಟಾರ್ ಕಂಡ ಕನಸನ್ನು ಲೋಕಾರ್ಪಣೆ ಮಾಡಿದ್ದರು. 'ಗಂಧದ ಗುಡಿ'ಯ ಮೂಲಕ ಮತ್ತೆ ಅಪ್ಪುವನ್ನು ಕಣ್ತುಂಬಿಕೊಂಡು ಅಭಿಮಾನಿಗಳು ಹಾಗೂ ಕನ್ನಡಿಗರು ಪುನೀತರಾಗಿದ್ದಾರೆ.

    'ಗಂಧದ ಗುಡಿ' ಸಿನಿಮಾ ಎಲ್ಲರಿಗೂ ತಲುಪುವಂತಾಗಬೇಕು. ಕರ್ನಾಟಕದ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರೆಲ್ಲರೂ ನೋಡಬೇಕು ಎಂಬುವ ಕಾರಣಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೊಸ ನಿರ್ಧಾರಕ್ಕೆ ಬಂದಿದ್ದಾರೆ. ನಾಲ್ಕು ದಿನಗಳ ಕಾಲ ಟಿಕೆಟ್ ದರವನ್ನು ಇಳಿಕೆ ಮಾಡಲು ಮುಂದಾಗಿದ್ದಾರೆ.

    ಅಶ್ವಿನಿ ಬಹಿರಂಗ ಪತ್ರ

    ಅಶ್ವಿನಿ ಬಹಿರಂಗ ಪತ್ರ

    ಗಂಧದ ಗುಡಿ ಸಿನಿಮಾ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಬೆನ್ನಲ್ಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಪತ್ರ ಬರೆದಿದ್ದಾರೆ. " ಗಂಧದ ಗುಡಿ ಅಪ್ಪು ಅವರ ಒಂದು ಕನಸು. ಕರ್ನಾಟಕದ ವನ್ಯ ಸಂಪತ್ತು ಹಾಗೂ ಪ್ರಕೃತಿ ಸೌಂದರ್ಯವನ್ನು ಕನ್ನಡಿಗರಿಗೆ ಪರಿಚಯಿಸುವ ಅವರ ಹಂಬಲ ಈ ಸಿನಿಮಾ ರೂಪುಗೊಳ್ಳಲು ಕಾರಣ. ಈ ಸಿನಿಮಾವನ್ನು ಎಲ್ಲಾ ಕನ್ನಡಿಗರು ನೋಡಬೇಕು, ಅದರಲ್ಲೂ ಮಕ್ಕಳು ನೋಡಬೇಕು ಎಂಬುದು ಅಪ್ಪು ಅವರ ಬಯಕೆಯಾಗಿತ್ತು" ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಈ ಕಾರಣಕ್ಕೆ ಟಿಕೆಟ್ ದರವನ್ನು ಇಳಿಕೆ ಮಾಡಲು ನಿರ್ಧರಿಸಿರುವುದಾಗಿಯೂ ಹೇಳಿದ್ದಾರೆ.

    ಸಿನಿಮಾ ಟಿಕೆಟ್ ದರ ಇಳಿಕೆ

    ಸಿನಿಮಾ ಟಿಕೆಟ್ ದರ ಇಳಿಕೆ

    ಕನ್ನಡಿಗರು ಹಾಗೂ ಮಕ್ಕಳು 'ಗಂಧದ ಗುಡಿ' ಸಿನಿಮಾವನ್ನು ನೋಡಬೇಕು ಅನ್ನೋ ಕಾರಣಕ್ಕೆ ಟಿಕೆಟ್ ದರವನ್ನು ಇಳಿಕೆ ಮಾಡಲು ಅಶ್ಚಿನಿ ಪುನೀತ್ ರಾಜ್‌ಕುಮಾರ್ ಹಾಗೂ ವಿತರಕರು ನಿರ್ಧರಿಸಿದ್ದಾರೆ. "ನಾನು ಮತ್ತು ಚಿತ್ರತಂಡ ಎಲ್ಲರೊಡನೆ ಚರ್ಚಿಸಿ, ವಿತರಕರ ಹಾಗೂ ಪ್ರದರ್ಶಕರ ಸಹಕಾರದೊಂದಿಗೆ ನಮ್ಮ ಚಿತ್ರ ಗಂಧದ ಗುಡಿಯನ್ನು 07-11-2022 ರಿಂದ 10-11-2022 ಗುರುವಾರದವರೆಗೂ ಸಿಂಗಲ್ ಸ್ಕ್ರೀನ್‌ಗಳಲ್ಲಿ 56 ರೂಪಾಯಿ ಹಾಗೂ ಮಲ್ಟಿಪ್ಲೆಕ್ಸ್‌ನಲ್ಲಿ 112 ರೂಪಾಯಿಗಳಿಗೆ ಕರ್ನಾಟಕದಾದ್ಯಂತ ದಿನದ ಎಲ್ಲಾ ಆಟಗಳು ಪ್ರದರ್ಶನ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ." ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.

    ಮಕ್ಕಳಿಗಾಗಿ 'ಗಂಧದ ಗುಡಿ'

    ಮಕ್ಕಳಿಗಾಗಿ 'ಗಂಧದ ಗುಡಿ'

    'ಗಂಧದ ಗುಡಿ' ರಿಲೀಸ್ ಆಗುತ್ತಿದ್ದಂತೆ ಇಡೀ ಕುಟುಂಬ ಸಿನಿಮಾ ನೋಡುತ್ತಿದೆ. ಅದರಲ್ಲೂ ಅಪ್ಪು ಅಭಿಮಾನಿಗಳು 'ಗಂಧದ ಗುಡಿ'ಯನ್ನು ಸರ್ಕಾರಿ ಶಾಲಾ ಮಕ್ಕಳಿಗೆ ತಮ್ಮದೇ ಸ್ವಂತ ಖರ್ಚಿನಲ್ಲಿ ತೋರಿಸಲು ನಿರ್ಧರಿಸಿದ್ದಾರೆ. ಈ ಬೆನ್ನಲ್ಲೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿತರಕರ ಸಹಕಾರದಿಂದ ಈ ಸಿನಿಮಾವನ್ನು ಟಿಕೆಟ್ ದರವನ್ನು ಕೂಡ ಕಡಿಮೆ ಮಾಡಿದ್ದಾರೆ. ಹೀಗಾಗಿ ಮುಂದಿನ ನಾಲ್ಕು ದಿನಗಳ ಕಾಲ ಪ್ರತಿಕ್ರಿಯೆ ಹೇಗಿರುತ್ತೆ? ಅನ್ನೋ ಕುತೂಹಲವಿದೆ.

    'ಗಂಧದ ಗುಡಿ'ಗೆ ಉತ್ತಮ ಪ್ರತಿಕ್ರಿಯೆ

    'ಗಂಧದ ಗುಡಿ'ಗೆ ಉತ್ತಮ ಪ್ರತಿಕ್ರಿಯೆ

    'ಗಂಧದ ಗುಡಿ' ಪ್ರೇಕ್ಷಕರಿಗೆ ಹಿಡಿದೆ. ಇದೊಂದು ಸಿನಿಮಾ ಆಗಿರದೆ. ಕನ್ನಡ ಚಿತ್ರರಂಗದ ಮಟ್ಟಿಗೆ ವಿಭಿನ್ನ ಪ್ರಯೋಗ. ಈ ಕಾರಣಕ್ಕೆ ಸಿನಿಮಾ ಬಿಡುಗಡೆಯಾದ ಒಂದು ವಾರದ ಬಳಿಕವೂ ಪ್ರತಿಕ್ರಿಯೆ ಉತ್ತಮವಾಗಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ ಸಿನಿಮಾ ತೋರಿಸಲು ಅಭಿಮಾನಿಗಳು ಹಾಗೂ ಗಣ್ಯ ಸ್ವಯಂ ಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ. ಹಾಗೇ ಬಾಕ್ಸಾಫೀಸ್‌ನಲ್ಲೂ ಅದ್ಭುತ ಗಳಿಕೆ ಆಗಿದೆ.

    English summary
    Ashwini Puneeth Rajkumar Redued Gandhada Gudi Ticket Price For 4 Days, Know More.
    Sunday, November 6, 2022, 20:42
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X