For Quick Alerts
  ALLOW NOTIFICATIONS  
  For Daily Alerts

  ಅಶ್ವಿನಿ ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ'ಯನ್ನು ಎಲ್ಲಿ ನೋಡ್ತಾರೆ? ಕಾರ್ಯಕ್ರಮದ ಪಟ್ಟಿಯೇನು?

  |

  'ಗಂಧದ ಗುಡಿ' ಸಿನಿಮಾ ಪ್ರೀಮಿಯರ್ ಶೋ ನಡೆದಿದೆ. ಎಲ್ಲಾ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿದೆ. ಪುನೀತ್ ರಾಜ್‌ಕುಮಾರ್ ಅವರನ್ನುಕೊನೆಯ ಬಾರಿ ಕಣ್ತುಂಬಿ ಕೊಳ್ಳುವ ಅವಕಾಶ ಅಭಿಮಾನಿಗಳ ಮುಂದಿದೆ.

  ಪುನೀತ್ ರಾಜ್‌ಕುಮಾರ್ ಇದ್ದಿದ್ದರೆ ಅಭಿಮಾನಿಗಳೊಂದಿಗೆ ಈ ವಿಶೇಷವಾದ ಸಿನಿಮಾವನ್ನು ವೀಕ್ಷಿಸುತ್ತಿದ್ದರು. ಅವರೊಂದಿಗೆ ಕೂಡ ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದರು. ಈಗ ಅವರ ಸ್ಥಾನದಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿಂತು ಆ ಕೆಲಸವನ್ನು ಮಾಡುತ್ತಿದ್ದಾರೆ.

  ಪತ್ನಿ ಜೊತೆ ಮಾತಾಡಲು ಬೆಟ್ಟ ಹತ್ತಿದ್ದ ಅಪ್ಪು: 'ಗಂಧದ ಗುಡಿ'ಯಲ್ಲಿ ಅಶ್ವಿನಿ ಸರ್ಪ್ರೈಸ್ ಎಂಟ್ರಿ!ಪತ್ನಿ ಜೊತೆ ಮಾತಾಡಲು ಬೆಟ್ಟ ಹತ್ತಿದ್ದ ಅಪ್ಪು: 'ಗಂಧದ ಗುಡಿ'ಯಲ್ಲಿ ಅಶ್ವಿನಿ ಸರ್ಪ್ರೈಸ್ ಎಂಟ್ರಿ!

  'ಗಂಧದ ಗುಡಿ' ಸಿನಿಮಾ ಬಿಡುಗಡೆ ಹಾಗೂ ಪುನೀತ್ ರಾಜ್‌ಕುಮಾರ್ ಮೊದಲ ವರ್ಷದ ಪುಣ್ಯಸ್ಮರಣೆಯಂದು ಏನೆಲ್ಲಾ ನಡೆಯುತ್ತೆ? 'ಗಂಧದ ಗುಡಿ' ಸಿನಿಮಾವನ್ನು ಅಪ್ಪು ಪತ್ನಿ ಎಲ್ಲೆಲ್ಲಿ ನೋಡುತ್ತಾರೆ? ಎಷ್ಟು ಗಂಟೆಗೆ ಅನ್ನೋ ಡಿಟೈಲ್ಸ್ ಇಲ್ಲಿದೆ.

  ನರ್ತಕಿಯಲ್ಲಿ 'ಗಂಧದ ಗುಡಿ' ವೀಕ್ಷಣೆ

  ನರ್ತಕಿಯಲ್ಲಿ 'ಗಂಧದ ಗುಡಿ' ವೀಕ್ಷಣೆ

  ಅಕ್ಟೋಬರ್ 28ರಂದು 'ಗಂಧದ ಗುಡಿ' ಸಿನಿಮಾ ಗ್ರ್ಯಾಂಡ್ ಆಗಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಅಭಿಮಾನಿಗಳಿಗಾಗಿ ಬೆಳಗ್ಗೆ 8 ಗಂಟೆಗೆ ಮೊದಲ ಶೋವನ್ನು ಅರೇಂಜ್ ಮಾಡಲಾಗಿದೆ. ಈ ಕಾರಣಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರಮುಖ ಚಿತ್ರಮಂದಿರ ನರ್ತಕಿಯಲ್ಲಿ ಪವರ್‌ಸ್ಟಾರ್ ಅಭಿಮಾನಿಗಳೊಂದಿಗೆ ಕೂತು ಮೊದಲ ಶೋವನ್ನು ವೀಕ್ಷಣೆ ಮಾಡಲಿದ್ದಾರೆ. ಅಪ್ಪು ಅಗಲಿಕೆ ಬಳಿಕ ಇದೇ ಮೊದಲ ಬಾರಿಗೆ ಅವರ ಸಿನಿಮಾವನ್ನು ಅಭಿಮಾನಿಗಳೊಂದಿಗೆ ಕೂತ ವೀಕ್ಷಣೆ ಮಾಡಲಿದ್ದಾರೆ. ಇದೇ ವೇಳೆ ಅಭಿಮಾನಿಗಳಿಂದ ನರ್ತಕಿ ಚಿತ್ರಮಂದಿರದ ಮುಂದೆ ಅದ್ಧೂರಿ ಸಂಭ್ರಮಾಚರಣೆ ನಡೆಯಲಿದೆ.

  ಅಪ್ಪು ಕೊನೆಯ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್: 'ಗಂಧದ ಗುಡಿ' ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್!ಅಪ್ಪು ಕೊನೆಯ ದರ್ಶನಕ್ಕೆ ಭರ್ಜರಿ ರೆಸ್ಪಾನ್ಸ್: 'ಗಂಧದ ಗುಡಿ' ಪ್ರೀಮಿಯರ್ ಶೋ ಟಿಕೆಟ್ ಸೋಲ್ಡ್ ಔಟ್!

  ರಾಜ್ ಸ್ಮಾರಕದಲ್ಲಿ ವಿಶೇಷ ಕಾರ್ಯಕ್ರಮ

  ರಾಜ್ ಸ್ಮಾರಕದಲ್ಲಿ ವಿಶೇಷ ಕಾರ್ಯಕ್ರಮ

  ನಾಳೆ (ಅಕ್ಟೋಬರ್ 28) 'ಗಂಧದ ಗುಡಿ' ಬಿಡುಗಡೆ ಹಿನ್ನೆಲೆ ಅಪ್ಪು ಅಭಿಮಾನಿಗಳು ಹಲವೆಡೆ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇದೇ ವೇಳೆ ಸಂಜೆ 6 ಗಂಟೆಗೆ 'ಗಂಧದ ಗುಡಿ' ಚಿತ್ರದ ಕುರಿತು ಅಶ್ವಿನಿ ಪುನೀತ್ ರಾಜ್‌ಕುಮಾರ್ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಡಾಕ್ಟರ್ ರಾಜ್ ಸ್ಮಾರಕದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

  ಮೊದಲ ಪುಣ್ಯಸ್ಮರಣೆಯಲ್ಲಿ ಭಾಗಿ

  ಮೊದಲ ಪುಣ್ಯಸ್ಮರಣೆಯಲ್ಲಿ ಭಾಗಿ

  ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಪಾರ ಅಭಿಮಾನಿಗಳನ್ನು ಅಗಲಿ ಅಕ್ಟೋಬರ್ 29ಕ್ಕೆ ಒಂದು ವರ್ಷ ಆಗಲಿದೆ. ಹೀಗಾಗಿ ಡಾ. ರಾಜ್‌ ಸ್ಮಾರಕದಲ್ಲಿ ಅಣ್ಣಾವ್ರ ಕುಟುಂಬ ವಿಶೇಷ ಪೂಜೆಯನ್ನು ಹಮ್ಮಿಕೊಂಡಿದೆ. ಡಾ.ರಾಜ್‌ಕುಮಾರ್, ಪಾರ್ವತಮ್ಮ ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಪುಣ್ಯಭೂಮಿಗೆ ಪೂಜೆಯನ್ನು ಸಲ್ಲಿಸಲಾಗುತ್ತಿದೆ. ಈ ವೇಳೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಈ ದಿನ ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಅಭಿಮಾನಿಗಳು ಭಾಗವಹಿಸುವ ಸಾಧ್ಯತೆಯಿದೆ. ಅವರಿಗಾಗಿ ಅಭಿಮಾನಿಗಳಿಂದ ಅನ್ನದಾಸೋಹ ನಡೆಯಲಿದೆ.

  ಅಪ್ಪು ಎಪಿಕ್ ಜರ್ನಿ 'ಗಂಧದಗುಡಿ' ಎಷ್ಟು ನಿಮಿಷಗಳ ಚಿತ್ರ? ಇಂಟರ್‌ವೆಲ್ ಇರುತ್ತಾ?ಅಪ್ಪು ಎಪಿಕ್ ಜರ್ನಿ 'ಗಂಧದಗುಡಿ' ಎಷ್ಟು ನಿಮಿಷಗಳ ಚಿತ್ರ? ಇಂಟರ್‌ವೆಲ್ ಇರುತ್ತಾ?

  ಚಿತ್ರಮಂದಿರದ ಮುಂದೆ ಸಂಭ್ರಮಾಚರಣೆ

  ಚಿತ್ರಮಂದಿರದ ಮುಂದೆ ಸಂಭ್ರಮಾಚರಣೆ

  ಬೆಂಗಳೂರಿನ ಜೆಪಿ ನಗರದಲ್ಲಿರುವ ಮಾದೇಶ ಚಿತ್ರಮಂದಿರ, ಕೆಜಿ ರಸ್ತೆಯಲ್ಲಿರುವ ಪ್ರಮುಖ ಚಿತ್ರಮಂದಿರ ನರ್ತಕಿ, ಪ್ರಸನ್ನ ಚಿತ್ರಮಂದಿರದಲ್ಲಿ ಬೆಳಗ್ಗೆ 8 ಹಾಗೂ 10 ಗಂಟೆ ಶೋಗಳಿಗೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಲಿದ್ದಾರೆ. 'ಗಂಧದಗುಡಿ' ಸಿನಿಮಾ ಬಿಡುಗಡೆ ಪ್ರಯುಕ್ತ ಅಭಿಮಾನಿಗಳು ಸಂಭ್ರಮಿಸಲಿದ್ದಾರೆ. ಅಕ್ಟೋಬರ್ 28ರಂದು ಅಭಿಮಾನಿಗಳು ಹಮ್ಮಿಕೊಂಡಿರೋ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.

  English summary
  Ashwini Puneeth Rajkumar Will Be Watching Gandhada Gudi In Theates With Fans, Know More.
  Thursday, October 27, 2022, 22:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X