»   » ಬಾಹುಬಲಿ ಚಿತ್ರ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ

ಬಾಹುಬಲಿ ಚಿತ್ರ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಪ್ರಭಾಸ್, ರಾಣಾ ದಗ್ಗುಬಾಟಿ, ಸುದೀಪ್, ಅನುಷ್ಕಾ ಶೆಟ್ಟಿ ಸೇರಿದಂತೆ ಬಹು ತಾರಾಗಣವಿರುವ ಬಹು ನಿರೀಕ್ಷಿತ ಚಿತ್ರ ಬಾಹುಬಲಿ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಹತ್ತು ಹಲವು ಮಾಧ್ಯಮ, ಅಭಿಮಾನಿಗಳು ಕಾತುರದಿಂದ ಕೇಳುತ್ತಿದ್ದ ಪ್ರಶ್ನೆಗೆ ನಿರ್ದೇಶಕ ರಾಜಮೌಳಿ ಉತ್ತರಿಸಿದ್ದಾರೆ. ಮೇ.15ರಂದು ಚಿತ್ರ ವಿಶ್ವದೆಲ್ಲೆಡೆ ದಾಖಲೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಇತ್ತಿಚೆಗಷ್ಟೇ ಬಾಹುಬಲಿ ಚಿತ್ರದ ವಿವಾದದ ಬಗ್ಗೆ ಎದ್ದಿದ್ದ ಗೊಂದಲಕ್ಕೆ ಚಿತ್ರ ತಂಡ ತೆರೆ ಎಳೆದಿತ್ತು. ತೆಲುಗು ಅಲ್ಲದೆ ತಮಿಳು, ಮಲಯಾಳಂ, ಹಿಂದಿ ಎಲ್ಲಾ ಭಾಷೆಗಳಲ್ಲೂ 'ಬಾಹುಬಲಿ' ಎಂಬ ಒಂದೇ ಹೆಸರಿನಲ್ಲೇ ಚಿತ್ರ ತೆರೆ ಕಾಣಲಿದೆ ಎಂದು ನಿರ್ದೇಶಕ ರಾಜಮೌಳಿ ಸಾಮಾಜಿಕ ಜಾಲ ತಾಣಗಳಲ್ಲಿ ಸ್ಪಷ್ಟನೆ ನೀಡಿದ್ದರು. [ಕುಡ್ಲದ ಬಾಲೆ ಅನುಷ್ಕಾಗೆ ಭರ್ಜರಿ ಗಿಫ್ಟ್]

BREAKING- Baahubali Releasing On May 15

ಬಾಹುಬಲಿ ಚಿತ್ರದ ಟಾಕಿ ಭಾಗ ಮುಕ್ತಾಯವಾಗಿದೆ. ಇಷ್ಟರಲ್ಲೇ ಒಂದು ವಿಶಿಷ್ಟ ಹಾಡು ನಿಮ್ಮ ಮುಂದೆ ಬರಲಿದೆ, ಬಾಹು ಬಲಿ ಚಿತ್ರದ ಮೊದಲ ಭಾಗ ಮೇ.15 ರಂದು ಬಿಡುಗಡೆಗೊಳ್ಳುತ್ತಿದೆ ಎಂದು ಹೇಳಲು ಸಂತೋಷವಾಗುತ್ತಿದೆ ಎಂದು ರಾಜಮೌಳಿ ಅವರು ಟ್ವೀಟ್ ಮೂಲಕ ಘೋಷಿಸಿದ್ದಾರೆ.

ಲಭ್ಯ ಮಾಹಿತಿ ಪ್ರಕಾರ ಮುಂದಿನ ತಿಂಗಳು ಚಿತ್ರದ ಆಡಿಯೋ ರಿಲೀಸ್ ಆಗುವ ಸಾಧ್ಯತೆಯಿದೆ. ಅದಕ್ಕೂ ಮುನ್ನ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಲು ಚಿತ್ರ ತಂಡ ನಿರ್ಧರಿಸಿತ್ತು. ಅದರೆ, ಅಭಿಮಾನಿಗಳ ಒತ್ತಡಕ್ಕೆ ಮಣಿದು ಮುಂಚಿತವಾಗಿ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ.

ಐತಿಹಾಸಿಕ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಕನ್ನಡದ ಕಿಚ್ಚ ಸುದೀಪ್ ಅವರದ್ದು ಯುದ್ಧ ಶಸ್ತ್ರಾಸ್ತ್ರ ಡೀಲರ್ ಪಾತ್ರವಂತೆ. ಪ್ರಭಾಸ್ ಸೇರಿದಂತೆ ಎಲ್ಲರಿಗೂ ಎರಡು ಶೇಡ್ ಪಾತ್ರ ಇದೆ. ರಾಣಾ ದಗ್ಗುಬಾತಿ ನೆಗಟೆವ್ ಶೇಡ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. [ಬಾಹುಬಲಿಯಲ್ಲಿ ಸುದೀಪ್ ಪಾತ್ರ ಏನ್ಗೊತ್ತಾ?]

ಬಾಹುಬಲಿ ಚಿತ್ರಕ್ಕೆ ಎಂದಿನಂತೆ ರಾಜಮೌಳಿ ತಂಡದ ಆಸ್ಥಾನ ಪ್ರತಿಭೆ ಎಂಎಂ ಕೀರವಾಣಿ ಅವರು ಸಂಗೀತ ನೀಡಿದ್ದಾರೆ. ಕೆಕೆ ಸೆಂಥಿಲ್ ಕುಮಾರ್ ಕೆಮರಾ ವರ್ಕ್ ಮಾಡಿದ್ದಾರೆ. ಶೋಭು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ಹಾಗೂ ಕೆ ರಾಘವೇಂದ್ರ ರಾವ್ ರಂಥ ದೊಡ್ಡ ಚಿತ್ರ ನಿರ್ಮಾಣಗಾರರು ಚಿತ್ರಕ್ಕೆ ಹಣ ಹೂಡಿದ್ದಾರೆ.

English summary
SS Rajamouli has finally announced the Magnus opus, Baahubali Release Date. The film is releasing on May 15. The long wait has come to an end and it is a happy moment for all the Telugu movie fans including Rajamouli and Prabhas Fans.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada