For Quick Alerts
  ALLOW NOTIFICATIONS  
  For Daily Alerts

  'ಭಜರಂಗಿ 2' ಚಿತ್ರೀಕರಣಕ್ಕೆ ಹೋಗುತ್ತಿದ್ದ ಕಲಾವಿದರ ಬಸ್ ಅಪಘಾತ

  |

  ನಟ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾಗೆ ಮತ್ತೊಂದು ವಿಘ್ನ ಎದುರಾಗಿದೆ. ಚಿತ್ರತಂಡ ಪ್ರಯಾಣ ಮಾಡುತ್ತಿದ್ದ ಬಸ್ ಅಪಘಾತಕ್ಕಿಡಾಗಿದೆ.

  Recommended Video

  ಭಜರಂಗಿ ಬಂದು ಬೆಂಕಿಯಿಂದ ಕಾಪಾಡ್ದ ಅಂದ್ರು ಶಿವಣ್ಣ | SHIVANNA | A HARSHA | BHAVANA | FILMIBEAT KANNADA

  ನೆಲಮಂಗಲ ತಾಲ್ಲೂಕ್ ಶ್ರೀನಿವಾಸಪುರ ಬಳಿ ಘಟನೆ ನಡೆದಿದೆ. 60 ಮಂದಿ ಕಲಾವಿದರು ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದರು. ಬಸ್ ಹೈ ಓಲ್ಟೇಜ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ವೇಗವಾಗಿ ಬಂದ ಬಸ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ ಮುಂದೆ ಇರುವ ಗಾಜು ಪುಡಿಪುಡಿಯಾಗಿದೆ. ಅದೃಷ್ಟವಶಾತ್ ಯಾವುದೇ ಕಲಾವಿದರಿಗೆ ತೊಂದರೆ ಆಗಿಲ್ಲ.

  ಅಂದಹಾಗೆ, ಕೆಲದಿನಗಳ ಹಿಂದೆಯಷ್ಟೇ ಸಿನಿಮಾದ ಸೆಟ್ ಗೆ ಬೆಂಕಿ ಬಿದ್ದಿತ್ತು. ಇದೀಗ ಮತ್ತೆ ಬಸ್ ಅಪಘಾತ ಆಗಿದ್ದು, 'ಭಜರಂಗಿ 2' ಸಿನಿಮಾಗೆ ಮತ್ತೊಂದು ವಿಘ್ನ ಬಂದಿದೆ.

  'ಭಜರಂಗಿ 2' ಎ ಹರ್ಷ ನಿರ್ದೇಶನದ, ಜಯಣ್ಣ ಹಾಗೂ ಭೋಗೆಂದ್ರ ನಿರ್ಮಾಣದ ಸಿನಿಮಾ. ಈ ಚಿತ್ರದ ಮೂಲಕ ಮೂರನೇ ಬಾರಿಗೆ ಶಿವಣ್ಣ ಹಾಗೂ ಹರ್ಷ ಒಂದಾಗುತ್ತಿದ್ದಾರೆ.

  English summary
  'Bajrangi 2' kannada movie team bus got accident in near Nelamangala.
  Saturday, January 18, 2020, 10:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X