For Quick Alerts
  ALLOW NOTIFICATIONS  
  For Daily Alerts

  ಜಾತಿ ಧರ್ಮದ ಭೇದ-ಭಾವವಿಲ್ಲದೆ 'ಗಂಗಾರತಿ'ಯಲ್ಲಿ ಪಾಲ್ಗೊಂಡ 'ಬನಾರಸ್' ಜೋಡಿ!

  |

  ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ಬನಾರಸ್'. ಬೇರೆ ಬೇರೆ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿರೋದ್ರಿಂದ ಅದ್ಧೂರಿ ಪ್ರಚಾರದಲ್ಲಿ ಬ್ಯುಸಿಯಾಗಿದೆ. ಸದ್ಯ ಹಿಂದಿ ಬೆಲ್ಟ್‌ ಪ್ರಬಲವಾಗಿರುವ ಏರಿಯಾಗಳಲ್ಲಿ ಚಿತ್ರತಂಡ ಪ್ರಚಾರದಲ್ಲಿ ತೊಡಗಿದೆ.

  ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ 'ಬನಾರಸ್' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಝೈದ್‌ಗೆ ನಾಯಕಿಯಾಗಿ ಸೋನಾಲ್ ಮಾಂತೆರೊ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಜಂಟಿಯಾಗಿ ಹಿಂದಿ ಸಿನಿಮಾ ನೋಡುವ ಏರಿಯಾಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ.

  ಗಂಗಾರತಿಯಲ್ಲಿ ಪಾಲ್ಗೊಂಡ ಝೈದ್ ಖಾನ್-ಸೋನಾಲ್!

  ಜಯತೀರ್ಥ ನಿರ್ದೇಶಿಸಿದ 'ಬನಾರಸ್' ಸಿನಿಮಾದ ಕಥೆ ವಾರಾಣಾಸಿಯಲ್ಲಿ ತೆರೆದುಕೊಳ್ಳುತ್ತೆ. ಗಂಗಾ ನದಿಯ ತಟದಲ್ಲಿಯೇ ಶುರುವಾಗೋ ಸಿನಿಮಾವನ್ನು ನೋಡುವುದಕ್ಕೆ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಈ ಸಿನಿಮಾಗ ಮಾಯಾಗಂಗೆ ಹಾಡು ಸಿನಿಪ್ರಿಯರ ಮನಗೆದ್ದಿದೆ. ಈಗ ಮತ್ತೆ ಅದೇ ನದಿಯ ತಟದಲ್ಲಿ ಸಿನಿಮಾ ತಂಡ ಕಾಣಿಸಿಕೊಂಡಿದೆ.

  'ಬನಾರಸ್' ಸಿನಿಮಾದ ಹೀರೊ ಝೈದ್ ಖಾನ್ ಹಾಗೂ ನಾಯಕಿ ಸೋನಾಲ್ ಮಾಂತೆರೋ ಇಬ್ಬರೂ ವಾರಾಣಾಸಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ವತ: ಗಂಗಾರತಿಯಲ್ಲಿ ಪಾಲ್ಗೊಂಡು ಗಂಗಾ ಮಾತೆಯ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

  ಜಾತಿ-ಮತಗಳ ಭೇದವಿಲ್ಲದೆ ಧಾರ್ಮಿಕ ಕ್ಷೇತ್ರ ದರ್ಶನ

  ಸಿನಿಮಾ ಬಿಡುಗಡೆಗೆ ಹತ್ತಿರವಾಗುತ್ತಿದ್ದಂತೆ ಝೈದ್ ಖಾನ್ ನಿರಂತರ ಪ್ರಚಾರದಲ್ಲಿ ತೊಡಗಿದ್ದಾರೆ. ಜಾತಿ-ಧರ್ಮಗಳ ಭೇದ-ಭಾವವಿಲ್ಲದೆ ಧಾರ್ಮಿಕ ಕ್ಷೇತ್ರಗಳ ದರ್ಶನ ಮಾಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ದೇವಸ್ಥಾನ, ಮಸೀದಿಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಸದ್ಯ ವಾರಾಣಾಸಿಗೆ ತೆರೆಳಿ ಗಂಗಾರತಿಯಲ್ಲಿ ಪಾಲ್ಗೊಂಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

  ಝೈದ್ ಖಾನ್ ಹಾಗೂ ಸೋನಲ್ ಮೊಂತೆರೊ ಗಂಗಾರತಿಯಲ್ಲಿ ಪಾಲ್ಗೊಂಡು, ವಿಧಿವಿಧಾನಗಳೊಂದಿಗೆ ಭಕ್ತಿ ಭಾವದಲ್ಲಿ ಮಿಂದೆದ್ದಿದ್ದಾರೆ. ಸದ್ಯ ವಾರಾಣಾಸಿಯಲ್ಲಿ ನಡೆಯುತ್ತಿರುವ ಪ್ರಪ್ರಥಮ ಮಣಿಕರ್ಣಿಕಾ ಫಿಲಂ ಫೆಸ್ಟಿವಲ್‌ನಲ್ಲಿಯೂ 'ಬನಾರಸ್' ಜೋಡಿ ಭಾಗಿಯಾಗಿತ್ತು. ಬಾಲಿವುಡ್‌ನ ಹಿರಿಯ ನಟ ಸಂಜಯ್ ಮಿಶ್ರಾ ಈ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಹಾಗೇ ಅವರೇ ಖುದ್ದಾಗಿ 'ಬನಾರಸ್' ಜೋಡಿಗೆ ಸನ್ಮಾನವನ್ನೂ ಮಾಡಿದ್ದಾರೆ.

  Banaras Actor Zaid Khan And Sonal Monteiro Performed Gangarathi In Varanasi

  ನವೆಂಬರ್ 4ರಂದು 'ಬನಾರಸ್' ರಿಲೀಸ್

  ಜೈದ್ ಖಾನ್ ಅಭಿನಯದ ಮೊದಲ ಸಿನಿಮಾ 'ಬನಾರಸ್' ದೇಶಾದ್ಯಂತ ಬಿಡುಗಡೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮುಂದಿನ ತಿಂಗಳು ನವೆಂಬರ್ 4ರಂದು ಈ ಸಿನಿಮಾ ದೇಶಾದ್ಯಂತ ರಿಲೀಸ್ ಆಗುತ್ತಿದೆ.

  ಟೈ ಟ್ರಾವೆಲ್ ಹಿನ್ನೆಲೆಯುಳ್ಳ ಪ್ರೇಮಕಥೆ ಅನ್ನೋದು ಟ್ರೈಲರ್‌ ನೋಡಿ ಅಂದಾಜಿಗೆ ಬಂದಿದೆ. 'ಬೆಲ್ ಬಾಟಂ' ಅಂತಹ ಯಶಸ್ವಿ ಸಿನಿಮಾವನ್ನು ನೀಡಿರುವ ಜಯತೀರ್ಥ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವುದರಿಂದ 'ಬನಾರಸ್' ಕೂಡ ಅಷ್ಟೇ ಮಜವಾಗಿರುತ್ತೆ ಅನ್ನೋ ನಿರೀಕ್ಷೆಇದೆ.

  English summary
  Banaras Actor Zaid Khan And Sonal Monteiro Performed Gangarathi In Varanasi, Know More.
  Sunday, October 16, 2022, 21:00
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X