»   » ಲಕ್ಷ್ಮಿ ಥಿಯೇಟರ್ ನಲ್ಲಿ ನಿನ್ನೆ ಜನವೋ ಜನ, ಹೌಸ್ ಫುಲ್ ಪ್ರದರ್ಶನ: ಯಾವ ಚಿತ್ರಕ್ಕೆ.?

ಲಕ್ಷ್ಮಿ ಥಿಯೇಟರ್ ನಲ್ಲಿ ನಿನ್ನೆ ಜನವೋ ಜನ, ಹೌಸ್ ಫುಲ್ ಪ್ರದರ್ಶನ: ಯಾವ ಚಿತ್ರಕ್ಕೆ.?

Posted By:
Subscribe to Filmibeat Kannada

ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಸಿದ್ಧ ಚಿತ್ರಮಂದಿರಗಳ ಪೈಕಿ ಲಕ್ಷ್ಮಿ ಥಿಯೇಟರ್ ಕೂಡ ಒಂದು. ಮಾಸ್ ಮತ್ತು ಕ್ಲಾಸ್... ಎಂಬ ಭೇದ ಭಾವ ಇಲ್ಲದೆ ಎಲ್ಲ ವರ್ಗದ ಜನರು ಭೇಟಿ ಕೊಡುವ ಲಕ್ಷ್ಮಿ ಥಿಯೇಟರ್ ನಲ್ಲಿ ನಿನ್ನೆ ಜನವೋ.. ಜನ. ಅದಕ್ಕೆ ಕಾರಣ 'ಬಂಗಾರ s/o ಬಂಗಾರದ ಮನುಷ್ಯ'.

ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರ ನಿನ್ನೆ ಸಂಜೆ ಮೈಸೂರಿನ ಲಕ್ಷ್ಮಿ ಥಿಯೇಟರ್ ನಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ.[ವಿಮರ್ಶೆ: 'ಬಂಗಾರದ ಮನುಷ್ಯ'ನ ಪ್ರತಿರೂಪ ಶಿವಣ್ಣನ ಈ 'ಬಂಗಾರ' ರೂಪ]

ತಮಾಷೆಯ ಸಂಗತಿ ಅಲ್ಲ.!

ಯೋಗಿ.ಜಿ.ರಾಜ್ ನಿರ್ದೇಶನ ಇರುವ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರ ಬಿಡುಗಡೆ ಆಗಿ ವಾರ ಕಳೆದಿದೆ. ಆದರೂ, ಈ ಸಿನಿಮಾ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಅಂದ್ರೆ ತಮಾಷೆಯ ಸಂಗತಿ ಅಲ್ಲ.

ಗ್ರಾಮೀಣ ಭಾಗದಲ್ಲಿ ಮೆಚ್ಚುಗೆ

ರೈತರ ಸಂಕಷ್ಟ ಮತ್ತು ಅದಕ್ಕೆ ಪರಿಹಾರ ನೀಡುವ ಕುರಿತು ಚಿತ್ರಕಥೆ ಹೊಂದಿರುವ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರಕ್ಕೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ. ರೈತಾಪಿ ವಲಯದಿಂದ ಚಿತ್ರತಂಡಕ್ಕೆ ಪ್ರಶಂಸೆ ಕೂಡ ಲಭಿಸಿದೆ.

ಮಾಜಿ ಪ್ರಧಾನಿ ಮೆಚ್ಚಿಕೊಂಡಿದ್ರು

ಮಣ್ಣಿನ ಮಗ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕೂಡ ಇತ್ತೀಚೆಗಷ್ಟೇ 'ಬಂಗಾರ s/o ಬಂಗಾರದ ಮನುಷ್ಯ' ಚಿತ್ರವನ್ನ ವೀಕ್ಷಿಸಿ ಭೇಷ್ ಎಂದಿದ್ದರು. ಇದೀಗ ಸಾಮಾನ್ಯ ಜನರು ಕೂಡ 'ಬಂಗಾರ s/o ಬಂಗಾರದ ಮನುಷ್ಯ'ನನ್ನು ಕಣ್ತುಂಬಿಕೊಳ್ಳಲು ಥಿಯೇಟರ್ ಬಳಿ ಹೆಜ್ಜೆ ಹಾಕುತ್ತಿದ್ದಾರೆ.['ಬಂಗಾರದ ಮನುಷ್ಯ' ನೋಡಿದ ಮಣ್ಣಿನ ಮಗ ದೇವೇಗೌಡರು ಎಷ್ಟು ಸ್ಟಾರ್ ಕೊಟ್ರು.?]

ನೀವು ವೀಕ್ಷಿಸಿದ್ರಾ.?

'ಬಂಗಾರ s/o ಬಂಗಾರದ ಮನುಷ್ಯ' ಚಿತ್ರವನ್ನ ನೀವು ವೀಕ್ಷಿಸಿದ್ರಾ.? ನೀವು ಚಿತ್ರವನ್ನ ನೋಡಿದ್ರೆ, ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ... ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ...

English summary
'Bangara s/o Bangarada Manushya' housefull show at Lakshmi Theater, Mysuru yesterday (May 27th) evening.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada