Don't Miss!
- News
Rishi Sunak: ಕಾರಿನಲ್ಲಿ ಸೀಟ್ ಬೆಲ್ಟ್ ಧರಿಸದ ಬ್ರಿಟನ್ ಪ್ರಧಾನಿ ರಿಷಿ ಸುನಕ್ಗೆ ದಂಡ ವಿಧಿಸಿದ ಪೊಲೀಸರು
- Sports
ಆಪ್ತ ಸ್ನೇಹಿತನಿಂದಲೇ ಭಾರೀ ಮೊತ್ತದ ವಂಚನೆಗೊಳಗಾದ ಭಾರತ ತಂಡದ ವೇಗಿ ಉಮೇಶ್ ಯಾದವ್
- Finance
Air India Republic Day Sale: ರಿಯಾಯಿತಿ ದರದಲ್ಲಿ ಏರ್ಇಂಡಿಯಾ ಟಿಕೆಟ್, ದರ ಪರಿಶೀಲಿಸಿ
- Lifestyle
ವಾರ ಭವಿಷ್ಯ ಜ.22-ಜ.28: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Automobiles
200 km ರೇಂಜ್ ನೀಡುವ 'ಸಿಂಪಲ್ ಒನ್' ಎಲೆಕ್ಟ್ರಿಕ್ ಸ್ಕೂಟರ್ ಶೀಘ್ರ ಬಿಡುಗಡೆ: ಉತ್ಪಾದನಾ ಘಟಕ ಉದ್ಘಾಟನೆ
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್ ರಸ್ತೆಗೆ ಪುನೀತ್ ಹೆಸರು ಅಳವಡಿಸಿದ BBMP
ಕರ್ನಾಟಕ ರತ್ನ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆ ಬಳಿಕ ಬೆಂಗಳೂರಿನ ಯಾವುದಾದರೂ ಒಂದು ರಸ್ತೆಗೆ ಹೆಸರಿಡಬೇಕು ಎಂಬ ಕೂಗು ಕೇಳಿಬರುತ್ತಿತ್ತು. ಅದರಂತೆಯೇ, ಅಪ್ಪು ಅಭಿಮಾನಿಗಳೇ ಸ್ವಯಂ ಪ್ರೇರಿತರಾಗಿ ತಮ್ಮ ಊರಿನ ರಸ್ತೆಗಳಿಗೆ, ಸರ್ಕಲ್‌ಗಳಿಗೆ ಸ್ವಯಂ ಪ್ರೇರಿತರಾಗಿ ಹೆಸರಿಟ್ಟಿದ್ದನ್ನು ನೋಡಿದ್ದೇವೆ.
ಬೆಂಗಳೂರಿನ ಪ್ರಮುಖ ರಸ್ತೆಗೂ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರು ಇಡಬೇಕು ಎಂಬ ಕೂಗು ಕೇಳಿಬಂದಿತ್ತು. ಹೀಗಾಗಿ ಕೆಲವು ತಿಂಗಳುಗಳ ಹಿಂದೆನೇ ಬೆಂಗಳೂರಿನ ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್‌ಆರ್ ರಮೇಶ್ ಬಿಬಿಎಂಪಿ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದ್ದರು. ಆ ಬೆನ್ನಲ್ಲೇ ಸುಮಾರು 12 ಕಿ. ಮೀ ಉದ್ದದ ರಸ್ತೆಗೆ ಈಗ ಬಿಬಿಎಂಪಿ ಅಧಿಕಾರಿಗಳು ಕೂಡ ಅನುಮೋದನೆ ನೀಡಿದ್ದರು. ಈಗ ಪುನೀತ್ ಹೆಸರಿನ ರಸ್ತೆಗೆ ನಾಮಫಲಕವನ್ನು ಅಳವಡಿಸಲಾಗಿದೆ.
ರಾಜ್ಯದ
ಮೊಟ್ಟ
ಮೊದಲನೆಯ
ಹೈಡ್ರಾಲಿಕ್
ಜಿಮ್
'ಪುನೀತ್'
ಹೆಸರಿನಲ್ಲಿ
ಲೋಕಾರ್ಪಣೆ

ಬೆಂಗಳೂರು ರಸ್ತೆಗೆ ಪುನೀತ್ ನಾಮಫಲಕ
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿಯೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡುವ ಬಗ್ಗೆ ಅನುಮೋದನೆ ನೀಡಲಾಗಿತ್ತು. ಅದರಂತೆಯೇ ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್‌ವರೆಗಿನ 12 ಕಿ.ಮೀ ಉದ್ದದ ರಸ್ತೆಗೆ "ಕರ್ನಾಟಕ ರತ್ನ ಡಾll ಪುನೀತ್ ರಾಜ್ಕುಮಾರ್ ರಸ್ತೆ" ಎಂದು ನಾಮಕರಣ ಮಾಡಲಾಗಿದ್ದು, ಈಗ ನಾಮಫಲಕವನ್ನು ಅಳವಡಿಸಲಾಗುತ್ತಿದೆ.

ಪುನೀತ್ ರಸ್ತೆಯ ಮಾರ್ಗವೇನು?
12 ಕಿ.ಮೀ ಉದ್ದದ ರಸ್ತೆಗೆ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ರಸ್ತೆ ಹೆಸರು ಇಡಲಾಗಿದೆ. ಅಗತ್ಯ ಸ್ಥಳಗಳಲ್ಲಿ "ಕರ್ನಾಟಕ ರತ್ನ ಡಾll ಪುನೀತ್ ರಾಜ್ಕುಮಾರ್ ರಸ್ತೆ" ನಾಮಫಲಕವನ್ನು ಅಳವಡಿಸಲಾಗುತ್ತಿದೆ. ಇದು ಹೊಸಕೆರೆ ಹಳ್ಳಿ, ದೇವೇಗೌಡ ಪೆಟ್ರೋಲ್ ಬಂಕ್, ಕದಿರೇನಹಳ್ಳಿ ಪಾರ್ಕ್, ಸಾರಕ್ಕಿ ಸಿಗ್ನಲ್ ಮಾರ್ಗವಾಗಿ ಜೆಪಿ ನಗರ ಹಾಗೂ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಜಂಕ್ಷನ್ ತಲುಪಲಿದೆ.

ಇದೇ ರಸ್ತೆಗೆ ಅಂಬಿ ಹೆಸರಿಡಲು ಮನವಿ
ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್‌ವರೆಗಿನ 12 ಕಿ.ಮೀ ಉದ್ದದ ರಸ್ತೆ ಪುನೀತ್ ಹೆಸರು ಇಡುವ ನಿರ್ಧಾರಕ್ಕೆ ಮಾಡಿದಾಗ, ಅಂಬಿ ಅಭಿಮಾನಿಗಳು ಇದೇ ರಸ್ತೆ ರೆಬಲ್‌ಸ್ಟಾರ್ ಹೆಸರು ಇನ್ನುವಂತೆ ಮಾನವಿ ಮಾಡಿದ್ದರು. ಬಳಿಕ ಬಿಬಿಎಂಪಿ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಲಾಗಿತ್ತು.
ಪುನೀತ್ ಫ್ಯಾನ್ಸ್ ಫುಲ್ ಖುಷ್
ಈ ಬೆಳವಣಿಗೆಯಿಂದ ಅಪ್ಪು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಮೈಸೂರು ರಸ್ತೆಯ ನಾಯಂಡಹಳ್ಳಿ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ವೆಗಾ ಸಿಟಿ ಮಾಲ್ ಜಂಕ್ಷನ್‌ವರೆಗಿನ 12 ಕಿ.ಮೀ ರಸ್ತೆಗೆ "ಕರ್ನಾಟಕ ರತ್ನ ಡಾll ಪುನೀತ್ ರಾಜ್ಕುಮಾರ್ ರಸ್ತೆ" ನಾಮಫಲಕ ಬೀಳುತ್ತಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಮತ್ತೆ ಪುನೀತ್ ಕುಮಾರ್ ಸಾಮಾಜಿಕ ಕೆಲಸಗಳನ್ನು ನೆನದು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.