»   » ಫೆ.23 ರಿಂದ 96 ಥಿಯೇಟರ್ ಗಳಲ್ಲಿ 'ಬ್ಯೂಟಿಫುಲ್ ಮನಸ್ಸುಗಳು' ತೆರೆಗೆ

ಫೆ.23 ರಿಂದ 96 ಥಿಯೇಟರ್ ಗಳಲ್ಲಿ 'ಬ್ಯೂಟಿಫುಲ್ ಮನಸ್ಸುಗಳು' ತೆರೆಗೆ

Posted By:
Subscribe to Filmibeat Kannada

ಕರ್ನಾಟಕದ 20 ಥಿಯೇಟರ್ ಗಳಲ್ಲಿ 25 ದಿನ ಪೂರೈಸಿ, ಇನ್ನೂ ಸಹ ಭರ್ಜರಿ ಪ್ರದರ್ಶನ ಕಾಣುತ್ತಿದೆ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರ. ಸತೀಶ್ ನಿನಾಸಂ ಮತ್ತು ಶೃತಿ ಹರಿಹರನ್ ಅಭಿನಯದ ಈ ಚಿತ್ರ ಇಂದು (ಫೆ.23) ಅಮೆರಿಕದಲ್ಲಿ ಬಿಡುಗಡೆ ಆಗುತ್ತಿದೆ.[ಶೃತಿ ಹರಿಹರನ್, ಸತೀಸ್ ನಿನಾಸಂ ಚಿತ್ರ 2 ಭಾಷೆಗಳಿಗೆ ರಿಮೇಕ್]

ವಿಶೇಷ ಅಂದ್ರೆ ಜಯತೀರ್ಥ ನಿರ್ದೇಶನದ 'ಬ್ಯೂಟಿಫುಲ್ ಮನಸ್ಸುಗಳು' ಅಮೆರಿಕದ 96 ಚಿತ್ರಮಂದಿರಗಳಲ್ಲಿ ಇಂದಿನಿಂದ ಪ್ರದರ್ಶನ ಕಾಣುತ್ತಿದ್ದು, ವಿದೇಶಗಳಲ್ಲಿ ಅತಿಹೆಚ್ಚು ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿರುವ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

'Beautiful Manassugalu' Movie Release in America on February 23rd

ಅಂದಹಾಗೆ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರವನ್ನು ವಿ7 ಹಿಲ್ಸ್ ಮೀಡಿಯಾ ಸಂಸ್ಥೆಯ ವಿಜಯೇಂದ್ರ ಅವರು ಅಮೆರಿಕ ಒಂದರಲ್ಲೇ 96 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಅಲ್ಲದೇ ಕನ್ನಡದ ಸಿನಿಮಾ ವೊಂದನ್ನು ಇದೇ ಮೊಟ್ಟ ಮೊದಲ ಬಾರಿಗೆ ಓವರ್ ಸೀಸ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುತ್ತಿರುವುದು ಎಂಬುದು ಇನ್ನೊಂದು ವಿಶೇಷ. ಮಾರ್ಚ್ ಮೊದಲ ವಾರದಿಂದ 'ಬ್ಯೂಟಿಫುಲ್ ಮನಸ್ಸುಗಳು' ಸಿಂಗಾಪುರ್, ಮಲೇಷಿಯಾ, ಯುಕೆ ದುಬೈ, ಆಸ್ಟ್ರೇಲಿಯಾ ಮತ್ತು ಮುಂತಾದ ಕಡೆಗಳಲ್ಲಿಯೂ ತೆರೆ ಕಾಣಲಿದೆಯಂತೆ.[ಪ್ರೀತಿ ಗೊತ್ತಿರುವ ಎಲ್ಲರಿಗಾಗಿ ಲವ್ ಸಾಂಗ್ ಬಿಡುಗಡೆ: ಶೃತಿ ಹರಿಹರನ್]

'Beautiful Manassugalu' Movie Release in America on February 23rd

ಅಮೆರಿಕದಲ್ಲಿ 'ಬ್ಯೂಟಿಫುಲ್ ಮನಸ್ಸುಗಳು' ತೆರೆ ಕಾಣುತ್ತಿರುವ ಖುಷಿಯಲ್ಲಿರುವ ಚಿತ್ರದ ನಾಯಕಿ ಶೃತಿ ಹರಿಹರನ್, 'ಯುಎಸ್ ಎ ಕನ್ನಡಿಗರಿಗೆ ಸಂಕ್ರಾಂತಿ ಮತ್ತು ಶಿವರಾತ್ರಿ ಹಬ್ಬದ ಶುಭಾಶಯಗಳು, ಈ ಹಬ್ಬಗಳ ಪ್ರಯುಕ್ತ ನಮ್ಮ ಸಿನಿಮಾ 'ಬ್ಯೂಟಿಫುಲ್ ಮನಸ್ಸುಗಳು ಯುಎಸ್ ಎ ನಲ್ಲಿ 96 ಥಿಯೇಟರ್ಸ್ ನಲ್ಲಿ ರಿಲೀಸ್ ಆಗುತ್ತಿದೆ. ಸಿನಿಮಾ ನೋಡಿದ ನಂತರ ರಿವೀವ್ ಪೋಸ್ಟ್ ಮಾಡಲು ಮರೆಯದಿರಿ', ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.[ಸತೀಶ್ ನೀನಾಸಂ 'ದರ್ಶನ್, ಸುದೀಪ್, ಪುನೀತ್' ಬಗ್ಗೆ ಹೇಳಿದ ಮಾತುಗಳಿವು..]

English summary
Sathish Neenasam, Sruthi Hariharan Starrer Kannada Movie 'Beautiful Manassugalu' releasing today (February 23rd) across US in over over 96 Theaters. Should be a record.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada