»   » ಶೃತಿ ಹರಿಹರನ್, ಸತೀಸ್ ನಿನಾಸಂ ಚಿತ್ರ 2 ಭಾಷೆಗಳಿಗೆ ರಿಮೇಕ್

ಶೃತಿ ಹರಿಹರನ್, ಸತೀಸ್ ನಿನಾಸಂ ಚಿತ್ರ 2 ಭಾಷೆಗಳಿಗೆ ರಿಮೇಕ್

Posted By:
Subscribe to Filmibeat Kannada
ಇತರೆ ಭಾಷೆ ಸಿನಿಮಾ ಗಳು ಮಾತ್ರ ಕನ್ನಡಕ್ಕೆ ರಿಮೇಕ್ ಆಗುತ್ತಿವೆ ಎಂಬ ಕೊರಗು ನಮ್ಮನ್ನು ಬೇಸರದಲ್ಲಿ ಇರಿಸಿತ್ತು. ಆದರೆ ಇತ್ತೀಚಿನ ಹೆಚ್ಚು ಕನ್ನಡ ಸಿನಿಮಾಗಳು ಪರಭಾಷೆಗಳಿಗೆ ರಿಮೇಕ್ ಆಗುವ ಮೂಲಕ ಕನ್ನಡಿಗರ ಕೊರಗನ್ನು ದೂರಮಾಡುತ್ತಿವೆ.['ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಕಿಚ್ಚ ಸುದೀಪ್ ವಿಮರ್ಶೆ..!]

ಅಂದಹಾಗೆ ಈಗ 25 ದಿನಗಳನ್ನು ಪೂರೈಸಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ 'ಬ್ಯೂಟಿಫುಲ್ ಮನಸ್ಸುಗಳು' 2 ಪರಭಾಷೆಗಳಿಗೆ ರಿಮೇಕ್ ಆಗುತ್ತಿದೆ. ಕನ್ನಡಿಗರ ಮನಸ್ಸು ಗೆದ್ದ ಜಯತೀರ್ಥ ಅವರ ಬ್ಯೂಟಿಫುಲ್ ಕಾನ್ಸೆಪ್ಟ್ ಸಿನಿಮಾ, ಯಾವ ಭಾಷೆಗಳಿಗೆ ರಿಮೇಕ್ ಆಗುತ್ತಿದೆ ಮತ್ತು ಚಿತ್ರದ ಯಶಸ್ಸಿನ ಕುರಿತ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ...

'ಬ್ಯೂಟಿಫುಲ್ ಮನಸ್ಸುಗಳು' ಪರಭಾಷೆಗಳಿಗೆ ರಿಮೇಕ್

ಕನ್ನಡದ ನಟ ಸತೀಶ್ ನಿನಾಸಂ ಮತ್ತು ನಟಿ ಶೃತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು' 25 ದಿನಗಳನ್ನು ಪೂರೈಸಿ ಇಂದಿಗೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಈಗ ಪರಭಾಷಾ ನಿರ್ಮಾಪಕರು ರಿಮೇಕ್ ರೈಟ್ಸ್ ಪಡೆದಿದ್ದಾರೆ. ಸಿನಿಮಾ ಯಾವ ಭಾಷೆಗಳಿಗೆ ರಿಮೇಕ್ ಆಗುತ್ತಿದೆ ತಿಳಿಬೇಕಾ?..[ವಿಮರ್ಶೆ: 'ಬ್ಯೂಟಿಫುಲ್ ಮನಸ್ಸುಗಳು' ಪ್ರಸ್ತುತ ಸಮಾಜಕ್ಕೆ ಕನ್ನಡಿ]

ಎರಡು ಭಾಷೆಗಳಿಗೆ 'ಬ್ಯೂಟಿಫುಲ್ ಮನಸ್ಸುಗಳು'

ದಕ್ಷಿಣ ಭಾರತದಲ್ಲಿ ಅತಿದೊಡ್ಡ ಮಾರುಕಟ್ಟೆ ಹೊಂದಿರುವ ತೆಲುಗು ಭಾಷೆಗೆ ಮತ್ತು ಮರಾಠಿ ಭಾಷೆಗೆ 'ಬ್ಯೂಟಿಫುಲ್ ಮನಸ್ಸುಗಳು' ರಿಮೇಕ್ ಆಗುತ್ತಿದೆ.

ನಿರ್ದೇಶಕರ ಒಲವು ಏನಿತ್ತು?

'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ನಿರ್ದೇಶಕ ಜಯತೀರ್ಥ ಅವರು ಮೊದಲಿಗೆ ಮಲಯಾಳಂ ಮತ್ತು ಮರಾಠಿ ಭಾಷೆಗಳಿಗೆ ಚಿತ್ರ ರಿಮೇಕ್ ಆಗಬೇಕೆಂದು ಅಂದುಕೊಂಡಿದ್ದರಂತೆ, ಆದರೆ ಈಗ ದೊಡ್ಡ ಸಿನಿಮಾ ಮಾರುಕಟ್ಟೆ ತೆಲುಗಿಗೆ ರಿಮೇಕ್ ಆಗುತ್ತಿರುವುದು ಇನ್ನೂ ಹೆಚ್ಚಿನ ಖುಷಿ ತಂದುಕೊಟ್ಟಿದೆ ಎಂದಿದ್ದಾರೆ.

ಅಮೆರಿಕಕ್ಕೆ ಹಾರುತ್ತಿವೆ 'ಬ್ಯೂಟಿಫೂಲ್ ಮನಸ್ಸುಗಳು'

ಭರ್ಜರಿ ಯಶಸ್ಸಿನಲ್ಲಿರುವ 'ಬ್ಯೂಟಿಫೂಲ್ ಮನಸ್ಸುಗಳು' ಸಿನಿಮಾ ಅಮೆರಿಕದ 100 ಚಿತ್ರ ಮಂದಿರಗಳಲ್ಲಿ ತೆರೆಕಾಣಲಿದೆಯಂತೆ. ಸದ್ಯದಲ್ಲಿ ಪಟ್ಟಿ ಸಿದ್ದಗೊಳಿಸುತ್ತಿದ್ದು, ಇದೇ ತಿಂಗಳ(ಫೆಬ್ರವರಿ) 23, 24, 25, 26 ರಂದು ಅಮೆರಿಕದಲ್ಲಿ ಚಿತ್ರ ಬಿಡುಗಡೆ ಆಗಲಿದೆ ಎಂದು ಚಿತ್ರದ ನಾಯಕ ಸತೀಶ್ ನಿನಾಸಂ ಟ್ವೀಟ್ ಮಾಡಿದ್ದಾರೆ.

ಸತೀಶ್ ನಿನಾಸಂ 2 ಸಿನಿಮಾಗಳು ಪರಭಾಷೆಗೆ ರಿಮೇಕ್

'ಬ್ಯೂಟಿಫುಲ್ ಮನಸ್ಸುಗಳು' ಚಿತ್ರ, ಸತೀಶ್ ನಿನಾಸಂ ಅಭಿನಯದ ರಿಮೇಕ್ ಆಗುತ್ತಿರುವ ಎರಡನೇ ಸಿನಿಮಾ ಆಗಿದ್ದು, ಈ ಹಿಂದೆ ಅವರ 'ಲೂಸಿಯ' ಚಿತ್ರ ಪರಭಾಷೆಗೆ ರಿಮೇಕ್ ಆಗಿದೆ.

English summary
Kannada Actor Satish Neenasam and Sruthi Hariharan starrer 'Beautiful Manasugalu' to be officially remade in Marathi and Telugu languages.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada