»   » 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಕಿಚ್ಚ ಸುದೀಪ್ ವಿಮರ್ಶೆ..!

'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕೆ ಕಿಚ್ಚ ಸುದೀಪ್ ವಿಮರ್ಶೆ..!

Posted By:
Subscribe to Filmibeat Kannada

ಜನವರಿ 20 ರಂದು ಸತೀಶ್ ನೀನಾಸಂ ಹಾಗೂ ಶೃತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು' ಬಿಡುಗಡೆಯಾಗುತ್ತಿದೆ ಅನ್ನೋ ವಿಷಯ ಎಲ್ಲರಿಗೂ ಗೊತ್ತೇ ಇದೆ. ಆದ್ರೆ ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆ ಆಗುವ ಮುನ್ನವೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನೆಯಲ್ಲಿ ಬಿಡುಗಡೆ ಆಗಿದೆ.[ಕನ್ನಡ ಚಿತ್ರಗಳಿಗೆ ನಿಮ್ಮಿಂದಲೇ ಅನ್ಯಾಯ: ಸತೀಶ್ ನೀನಾಸಂ ಆಕ್ರೋಶ!]

ಅಂದಹಾಗೆ ಈ ಹಿಂದೆ 'ಕಿರಿಕ್ ಪಾರ್ಟಿ' ಚಿತ್ರ ನೋಡಿ ಚಿತ್ರತಂಡಕ್ಕೆ ವಿಶೇಷ ಪಾರ್ಟಿ ಆರೇಂಜ್ ಮಾಡಿದ್ದ ಕಿಚ್ಚ, 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರ ನೋಡಿ ಮನಸೋತಿದ್ದಾರಂತೆ. ಅಂತೂ ಇಂತೂ ಚಿತ್ರಕ್ಕೆ ಮೊದಲ ವಿಮರ್ಶೆ ಅಭಿನಯ ಚಕ್ರವರ್ತಿ ಕಡೆಯಿಂದಲೇ ಬಂದಿದೆ. 'ಬ್ಯೂಟಿಫುಲ್ ಮನಸ್ಸುಗಳು' ನೋಡಿ ಕಿಚ್ಚ ಮನಸಾರೆ ಏನಂದ್ರು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಕಿಚ್ಚನ ಮನೆಯಲ್ಲಿ ರಿಲೀಸ್ ಆಯ್ತು 'ಬ್ಯೂಟಿಫುಲ್ ಮನಸ್ಸುಗಳು'

ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ಒಂದು ಹೊಸ ಬೆಳವಣಿಗೆ ಶುರುವಾಗಿದೆ. ಅದೇನಂದ್ರೆ ಉತ್ತಮ ಸಿನಿಮಾಗಳಿಗೆ ಸ್ಟಾರ್ ನಟರು ಬೆಂಬಲ ಕೊಡುತ್ತಿರುವುದು. ಅಂತೆಯೇ ಇತ್ತೀಚೆಗೆ ಯಶಸ್ಸಿನ ನಾಗಾಲೋಟದಲ್ಲಿ ಓಡುತ್ತಿರುವ 'ಕಿರಿಕ್ ಪಾರ್ಟಿ' ಸಿನಿಮಾವನ್ನು ಮನೆಯಲ್ಲೇ ಕುಳಿತು ನೋಡಿದ್ದ ಕಿಚ್ಚ, ಅದೇ ರೀತಿ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರವನ್ನು ಮನೆಯಲ್ಲೇ ಕುಳಿತು ನೋಡಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರ ಥಿಯೇಟರ್ ಗಳಲ್ಲಿ ಬಿಡುಗಡೆ ಆಗುವ ಮುನ್ನ ಸುದೀಪ್ ಮನೆಯಲ್ಲಿ ಬಿಡುಗಡೆ ಆಗಿದೆ.['ಬ್ಯೂಟಿಫುಲ್ ಮನಸ್ಸು'ಗಳಿಗೆ 'ದರ್ಶನ್' ಅತಿಥಿ]

'ಬ್ಯೂಟಿಫುಲ್ ಮನಸ್ಸುಗಳು' ನೋಡಿ ಕಿಚ್ಚ ಏನಂದ್ರು?

" 'ಕಿರಿಕ್ ಪಾರ್ಟಿ' ನಂತರ ಒಂದು ಅಮೇಜಿಂಗ್ ಸಿನಿಮಾ ನೋಡಿದೆ. 'ಬ್ಯೂಟಿಫುಲ್ ಮನಸ್ಸುಗಳು' ವಾವ್ಹ್......... ಬ್ರಿಲಿಯಂಟ್ ಪರ್ಫಾಮೆನ್ಸ್.. ಜಸ್ಟ್ ಬ್ರಿಲಿಯಂಟ್" ಎಂದು ಟ್ವೀಟ್ ಮಾಡಿದ್ದಾರೆ.

ಶೃತಿ ಹರಿಹರನ್ ಪ್ರತಿಕ್ರಿಯೆ

ಕಿಚ್ಚ ಸುದೀಪ್ ಟ್ವೀಟ್‌ ಗೆ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದ ನಾಯಕಿ ಶೃತಿ ಹರಿಹರನ್ ಪ್ರತಿಕ್ರಿಯಿಸಿ, "ಬ್ಯೂಟಿಫುಲ್ ಮನಸ್ಸುಗಳು' ಬಗ್ಗೆ ಮೊದಲ ರಿವೀವ್ ಅನ್ನು ಒನ್ ಅಂಡ್ ಓನ್ಲಿ @ಕಿಚ್ಚ ಸುದೀಪ್ ಸರ್ ನೀಡಿದ್ದಾರೆ. ನಿಮ್ಮ ಸಹಕಾರ ಮತ್ತು ಪ್ರೋತ್ಸಾಹಕ್ಕೆ ಥ್ಯಾಂಕ್ ಸರ್" ಎಂದು ಟ್ವೀಟ್ ಮಾಡಿದ್ದಾರೆ.

'ಬ್ಯೂಟಿಫುಲ್ ಮನಸ್ಸುಗಳು' ನಾಳೆ ರಿಲೀಸ್

ಸತೀಶ್ ನೀನಾಸಂ ಹಾಗೂ ಶೃತಿ ಹರಿಹರನ್ ಅಭಿನಯದ 'ಬ್ಯೂಟಿಫುಲ್ ಮನಸ್ಸುಗಳು' ರಾಜ್ಯಾದಂತ ನಾಳೆ ತೆರೆಕಾಣುತ್ತಿದೆ. ಈ ಹಿಂದೆ 'ಒಲವೇ ಮಂದಾರ', 'ಟೋನಿ', 'ಬುಲೆಟ್ ಬಸ್ಯ' ಅಂತಹ ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ 'ನೀರ್ ದೋಸೆ' ಖ್ಯಾತಿಯ ನಿರ್ಮಾಪಕ ಪ್ರಸನ್ನ ಬಂಡವಾಳ ಹಾಕಿದ್ದಾರೆ. ಇನ್ನು ಬಿಜೆ ಭರತ್ ಅವರ ಸಂಗೀತ ನಿರ್ದೇಶನವಿದ್ದು, ಕಿರಣ್ ಹಂಪಾಪುರ ಅವರ ಛಾಯಗ್ರಹಣ 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರಕ್ಕಿದೆ.

English summary
Sathish Neenasam Starrer 'Beautiful Manassugalu' Cinema grand release on january 20. But before releasing in Theatre's released in Kiccha Sudeep home. Here is what Kiccha Sudeep reviewa about 'Beautiful Manassugalu',

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada