For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣ ವೇಳೆ ಅವಘಡ: ನಟ ಭುವನ್ ಮುಖಕ್ಕೆ ಗಾಯ

  By Bharath Kumar
  |

  ಬಿಗ್ ಬಾಸ್ ಖ್ಯಾತಿಯ ನಟ ಭುವನ್ ಪೊನ್ನಣ್ಣ ಅಭಿನಯಿಸುತ್ತಿರುವ 'ರಾಂಧವ' ಚಿತ್ರದ ಸಾಹಸ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದೆ. ಈ ವೇಳೆ ನಟ ಭುವನ್ ಗೆ ಮುಖಕ್ಕೆ ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

  ಬೆಂಗಳೂರಿನ ಹೆಸರಘಟ್ಟದಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಸಸ್ಟಂಟ್ ದೃಶ್ಯವನ್ನ ಯಾವುದೇ ರೋಪ್ ಇಲ್ಲದೇ ಚಿತ್ರೀಕರಣ ಮಾಡಿರುವುದೇ ಇದಕ್ಕೆ ಕಾರಣವೆನ್ನಲಾಗಿದೆ.

  ಓಡಿ ಬಂದ ಭುವನ್ ಕಾಲು ಜಾರಿದ್ದರಿಂದ ಆಯತಪ್ಪಿ ಬಿದ್ದಿದ್ದಾರೆ. ಸೊಂಟ, ಕಾಲು ಮತ್ತು ಮೂಗಿಗೆ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ.

  'ಬಿಗ್ ಬಾಸ್' ನಂತರ ಭುವನ್ ರಿಜೆಕ್ಟ್ ಮಾಡಿದ ಕಥೆಗಳೆಷ್ಟು?'ಬಿಗ್ ಬಾಸ್' ನಂತರ ಭುವನ್ ರಿಜೆಕ್ಟ್ ಮಾಡಿದ ಕಥೆಗಳೆಷ್ಟು?

  ಅಂದ್ಹಾಗೆ, ಈ ಚಿತ್ರಕ್ಕೆ ಸುನೀಲ್‌ ಎಸ್‌. ಆಚಾರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇದು ಮೂರು ತಲೆಮಾರುಗಳ ಕಥೆಯಾಗಿದ್ದು, ಆಕ್ಷನ್, ಥ್ರಿಲ್ಲರ್‌, ಸಸ್ಪೆನ್ಸ್ ಹಾಗೂ ಪ್ರೇಮಕಥೆ ಎಲ್ಲವೂ ಈ ಚಿತ್ರದಲ್ಲಿದೆ. ಶೇ.20ರಷ್ಟು ಕಂಪ್ಯೂಟರ್ ಗ್ರಾಫಿಕ್ಸ್‌ ಬಳಸಲಾಗುತ್ತಿದೆಯಂತೆ.

  ಚಿತ್ರದಲ್ಲಿ ಭುವನ್ ಗೆ ಇಬ್ಬರು ನಾಯಕಿಯರು ಇರಲಿದ್ದಾರೆ. ಒಬ್ಬರು ಶ್ರೀಯಾ ಅಂಚನ್ ನೃತ್ಯಗಾರ್ತಿಯಾಗಿ ನಟಿಸಲಿದ್ದಾರೆ. ಇನ್ನೊಬ್ಬ ನಾಯಕಿ ಇನ್ನೂ ಅಂತಿಮವಾಗಿಲ್ಲ. ಇನ್ನುಳಿದಂತೆ ಜಹಾಂಗೀರ್, ಲಕ್ಷೀ ಹೆಗಡೆ, ಪ್ರದೀಪ್, ದಯಾನಂದ, ಕುರಿಪ್ರತಾಪ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಗಾಯಕನಾಗಿ ಗುರ್ತಿಸಿಕೊಂಡಿರುವ ಶಶಾಂಕ್ ಶೇಷಗಿರಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ರಾಜಶಿವಶಂಕರ ಛಾಯಾಗ್ರಹಣ ರಾಂಧವನಿಗಿದೆ.

  ಯಪ್ಪಾ.... 'ಬಿಗ್ ಬಾಸ್' ಭುವನ್ ಗೆ ಸಿಕ್ಕಿರುವ ಹೊಸ ಟೈಟಲ್ ಕೇಳಿದ್ರಾ?ಯಪ್ಪಾ.... 'ಬಿಗ್ ಬಾಸ್' ಭುವನ್ ಗೆ ಸಿಕ್ಕಿರುವ ಹೊಸ ಟೈಟಲ್ ಕೇಳಿದ್ರಾ?

  English summary
  Actor Bhuvan Ponnanna was injured in the shooting of Kannada movie Randhava. Is being treated at the hospital.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X