For Quick Alerts
  ALLOW NOTIFICATIONS  
  For Daily Alerts

  ರೂಪೇಶ್ ಶೆಟ್ಟಿ 'ಬಿಗ್ ಬಾಸ್‌' ಗೆಲ್ಲುತ್ತಿದ್ದಂತೆ 'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾ ರಿಲೀಸ್‌ಗೆ ರೆಡಿ!

  |

  ಬಿಗ್‌ ಬಾಸ್ ಕನ್ನಡ ಸೀಸನ್ 9ನ್ನು ಗೆದ್ದು ಬಂದಿರೋ ರೂಪೇಶ್ ಶೆಟ್ಟಿ ಸಂಭ್ರಮ ಇನ್ನೂ ಮುಗಿದಿಲ್ಲ. ಬಿಗ್ ಬಾಸ್ ಮನೆಯಿಂದ ರೂಪೇಶ್ ಹೊರ ಬರುತ್ತಿದ್ದಂತೆ ಅವರೇ ನಟಿಸಿದ ಸಿನಿಮಾ ಬಿಡುಗಡೆ ರೆಡಿಯಾಗಿದೆ. ಅದುವೇ 'ಮಂಕು ಭಾಯ್ ಫಾಕ್ಸಿ ರಾಣಿ'.

  'ಮಂಕು ಭಾಯ್ ಫಾಕ್ಸಿ ರಾಣಿ' ಸಿನಿಮಾದಲ್ಲಿ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇದು ಗಗನ್. ಎಂ ನಿರ್ದೇಶನದ ಚೊಚ್ಚಲ ಸಿನಿಮಾ. 'ಮಂಕು ಭಾಯ್ ಫಾಕ್ಸಿ ರಾಣಿ' ಚಿತ್ರ ಇದೇ ಜನವರಿ 13ಕ್ಕೆ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗುತ್ತಿದೆ.

  ಬಿಗ್ ಬಾಸ್ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ, 'ಬ್ರಹ್ಮಗಂಟು' ಧಾರಾವಾಹಿಯ ಗೀತಾ ಭಾರತಿ ಹಾಗೂ ಪಂಚಮಿ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬಿಗ್ ಬಾಸ್ ರೂಪೇಶ್ ಶೆಟ್ಟಿ ಹೊರ ಬರುತ್ತಿದ್ದಂತೆ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಸಜ್ಜಾಗಿದ್ದಾರೆ.

  ಕಿರುಚಿತ್ರ, ಡಾಕ್ಯುಮೆಂಟರಿ ಮಾಡಿ ಅನುಭವವಿರೋ ಗಗನ್ ತುಳು ಸಿನಿಮಾವೊಂದಕ್ಕೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದರು. 'ಮಂಕು ಭಾಯ್ ಫಾಕ್ಸಿ ರಾಣಿ' ಅವರಿಗೆ ಚೊಚ್ಚಲ ನಿರ್ದೇಶನದ ಸಿನಿಮಾ. "ಮೊದಲು ಇದನ್ನು ಶಾರ್ಟ್ ಮೂವಿ ಮಾಡೋಣ ಎಂದು ಪ್ಲ್ಯಾನ್ ಮಾಡಿಕೊಂಡಿದ್ದೆ. ರೂಪೇಶ್ ಶೆಟ್ಟಿ ಈ ಸಿನಿಮಾ ಮಾಡಲು ಒಪ್ಪಿಕೊಂಡ ಮೇಲೆ ಇದರ ಕಥೆಯನ್ನು ಸಿನಿಮಾಗೆ ಹೇಗೆ ಬೇಕೋ ಹಾಗೆ ಸಿದ್ದ ಮಾಡಿಕೊಂಡ್ವಿ. 2019ರಲ್ಲಿ ಆರಂಭವಾದ ಸಿನಿಮಾವಿದು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ." ನಿರ್ದೇಶಕ ಗಗನ್ ಹೇಳಿದ್ದಾರೆ.

  ಅಂದ್ಹಾಗೆ ಇಡೀ ಸಿನಿಮಾ ಮಂಗಳೂರು ಕನ್ನಡ ಭಾಷೆಯಲ್ಲಿ ಸಾಗಲಿದೆ. ಯಕ್ಷಗಾನದಲ್ಲಿ ಸಿಂಹದ ವೇಷ ಹಾಕುವ ಹುಡುಗನ ಲೈಫ್‌ನಲ್ಲಿ ನಡೆಯುವ ಪ್ರೇಮಕಥೆಯ ಸುತ್ತ ಈ ಸಿನಿಮಾ ಸಾಗುತ್ತೆ. ನಾಯಕಿ ಪಂಚಮಿ ರಾವ್‌ಗೂ ಇದು ಮೊದಲ ಸಿನಿಮಾ. ಕ್ಲಾಸಿಕಲ್ ಡಾನ್ಸರ್ ಕೂಡ ಆಗಿರುವ ಪಂಚಮಿಗೆ ಸಿನಿಮಾದಲ್ಲಿ ನಟಿಸಬೇಕು ಅನ್ನೋ ಆಸೆ ಇತ್ತು. ಅದರಂತೆ ಈಗ ಸಿನಿಮಾ ಮಾಡಿದ್ದಾರೆ. ಇನ್ನೂ ಗೀತಾ ಭಾರತಿ ಭಟ್ ಲೀಡ್ ರೋಲ್‌ನಲ್ಲಿ ನಟಿಸಿರೋದು ಇದೇ ಮೊದಲು.

  Bigg Boss Winner Roopesh Shetty Movie Manku Bhai Release Date Fixed

  ಯಕ್ಷಗಾನದಲ್ಲಿ ಸಿಂಹದ ವೇಷ ಹಾಕೋ ಹುಡುಗನ ಕಥೆ ಈ ಸಿನಿಮಾದಲ್ಲಿದೆ. ಹೀರೊಗೆ ಸ್ನೇಹಿತರೇ ಪ್ರಪಂಚ. ಇಂತಹ ಹುಡುಗನ ಮುಗ್ಧ ಪ್ರೇಮಕಥೆ ಈ ಸಿನಿಮಾದಲ್ಲಿದೆ. ಈ ಸಿನಿಮಾ ರೂಪೇಶ್ ಶೆಟ್ಟಿ ಯಕ್ಷಗಾನದಲ್ಲಿ ಸಿಂಹದ ಪಾತ್ರ ಮಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ, ಕನ್ನಡದಲ್ಲಿ ಲೀಡ್ ಆಗಿ ನಟಿಸುತ್ತಿರುವ ಐದನೇ ಸಿನಿಮಾವಿದು. 'ಡೇಂಜರ್ ಝೋನ್', 'ಅನುಷ್ಕಾ', 'ನಿಶಬ್ಧ 2', 'ಗೋವಿಂದ ಗೋವಿಂದ' ಸಿನಿಮಾ ನಟಿಸಿದ್ದಾರೆ. ಈಗ 'ಮಂಕು ಭಾಯ್ ಫಾಕ್ಸಿ ರಾಣಿ' ಕೂಡ ಬಿಡುಗಡೆಗೆ ಸಜ್ಜಾಗಿದೆ.

  English summary
  Bigg Boss Winner Roopesh Shetty Movie Manku Bhai Release Date Fixed,Know More.
  Thursday, January 5, 2023, 23:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X