»   » 'ರಾಜಕುಮಾರ'ನ 'ಬೊಂಬೆ' ಹಾಡಿಗೆ ಮನಸೋತ ಪಾಕ್ ದೇಶದ ಯುವಕ

'ರಾಜಕುಮಾರ'ನ 'ಬೊಂಬೆ' ಹಾಡಿಗೆ ಮನಸೋತ ಪಾಕ್ ದೇಶದ ಯುವಕ

Posted By:
Subscribe to Filmibeat Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರದ 'ಬೊಂಬೆ ಹೇಳುತೈತೆ' ಹಾಡು ಅದಕ್ಕಿಂತ ಸೂಪರ್ ಹಿಟ್ ಆಗಿದೆ ಅಂದ್ರೆ ನಂಬಲೇಬೇಕು.

ಈ ಹಾಡು ಎಷ್ಟರ ಮಟ್ಟಿಗೆ ಮೋಡಿ ಮಾಡಿದೆ ಅಂದ್ರೆ, ಕೇವಲ ಕನ್ನಡ ಕಲಾಭಿಮಾನಿಗಳು ಮಾತ್ರವಲ್ಲದೇ, ಬೇರೆ ಭಾಷೆಯ ಚಿತ್ರ ಪ್ರೇಮಿಗಳು ಕೂಡ ಈ ಹಾಡಿಗೆ ತಲೆ ಬಾಗುತ್ತಿದ್ದಾರೆ. ಹೀಗಿರುವಾಗ ಪಾಕ್ ದೇಶದ ಯುವಕನೊಬ್ಬ ಬೊಂಬೆಯ ಗಾನಕ್ಕೆ ಮನಸೋತಿದ್ದಾನೆ.

ಹೌದು, ಪಾಕಿಸ್ತಾನದ ಯುವಕನೊಬ್ಬ 'ಬೊಂಬೆ ಹೇಳುತೈತೆ' ಹಾಡಿಗೆ ಫಿದಾ ಆಗಿದ್ದು, ತನ್ನ ಧ್ವನಿಯಲ್ಲಿ ಈ ಹಾಡನ್ನ ಹಾಡಿದ್ದಾನೆ. ಈ ಹಾಡಿಗೆ ಸೋಶಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಮುಂದೆ ಓದಿ......

ಪಾಕಿಸ್ತಾನಿ ಯುವಕನ ಕಂಠದಲ್ಲಿ 'ಬೊಂಬೆ ಹೇಳುತೈತೆ'!

'ರಾಜಕುಮಾರ' ಚಿತ್ರದ 'ಬೊಂಬೆ ಹೇಳುತೈತೆ' ಹಾಡಿಗೆ ಪಾಕಿಸ್ತಾನ ಯುವಕ ಅಜ್ಮಲ್ ಮುಘಲ್ ಫಿದಾ ಆಗಿದ್ದು, ಈ ಹಾಡನ್ನ ತನ್ನ ಕಂಠದಲ್ಲಿ ಹಾಡಿದ್ದಾರೆ. ಈಗ ಈ ವಿಡಿಯೋ ಕ್ಲಿಪ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.[ಅಣ್ಣಾವ್ರ ವರ್ಷನ್ ನಲ್ಲಿ ರಿಲೀಸ್ ಆಯ್ತು 'ಬೊಂಬೆ ಹೇಳುತೈತೆ' ಹಾಡು]

ಟಿ-ಶರ್ಟ್ ಮೇಲಿದೆ ಪಾಕಿಸ್ತಾನದ ಚಿಹ್ನೆ

ಅಜ್ಮಲ್ ಮುಘಲ್ ನಿಜವಾಗಲೂ ಪಾಕಿಸ್ತಾನದವರು ಎಂಬ ಕುತೂಹಲ, ಅನುಮಾನ ಕಾಡುವುದು ಸಹಜ. ಆದ್ರೆ, ತಾನೊಬ್ಬ ಪಾಕಿಸ್ತಾನಿ ಎಂದು ಬಿಂಬಿಸಿಕೊಂಡಿರುವ ಅಜ್ಮಲ್ ತನ್ನ ಟಿ-ಶರ್ಟ್ ಮೇಲೆ ಪಾಕಿಸ್ತಾನದ ಚಿಹ್ನೆ ಹಾಕಿಕೊಂಡು 'ಬೊಂಬೆ ಹೇಳುತೈತೆ' ಹಾಡನ್ನ ಹಾಡಿದ್ದಾರೆ.['ಬೊಂಬೆ ಹೇಳುತೈತೆ' ಹಾಡಿಗೆ ಹರಿಕೃಷ್ಣ ಟ್ಯೂನ್ ಮಾಡಿದ ವಿಡಿಯೋ ನೋಡಿ!]

ಅಜ್ಮಲ್ ಮುಘಲ್ ಯಾರು?

ಅಷ್ಟಕ್ಕೂ, ಅಜ್ಮಲ್ ಮುಘಲ್ ಯಾರು ಎಂಬುದನ್ನ ಹುಡುಕಿದಾಗ, ಅವರ ಫೇಸ್ ಬುಕ್ ಪ್ರೊಫೈಲ್ ನಲ್ಲಿ 'ಪಾಕಿಸ್ತಾನದ ಲಾಹೋರ್ ನವರು ಎಂದು ತಿಳಿದು ಬಂದಿದೆ.

ನಾನೊಬ್ಬ ಪಾಕಿಸ್ತಾನಿ: ಅಜ್ಮಲ್

ಇನ್ನು ಹಾಡು ಹೇಳಿ ಮುಗಿಸಿದ ನಂತರ ಅಜ್ಮಲ್ ಅವರೇ ಹೇಳಿದಾಗೆ '' ನಾನೊಬ್ಬ ಪಾಕಿಸ್ತಾನಿ, ನನಗೆ ಈ ಹಾಡು ಇಷ್ಟವಾಯಿತು. ಅದಕ್ಕೆ ಹಾಡಲು ಪ್ರಯತ್ನ ಪಟ್ಟೆ. ನನ್ನ ಹಾಡಿನಲ್ಲಿ ಏನಾದರೂ ತಪ್ಪಾಗಿದ್ದರೇ ಕ್ಷಮಿಸಿ. ಯಾಕಂದ್ರೆ, ನನ್ನ ಮಾತೃ ಭಾಷೆ ಉರ್ದು. ಹಾಗಾಗಿ ನನಗೆ ಕನ್ನಡದ ಬಗ್ಗೆ ಹೆಚ್ಚು ಗೊತ್ತಿಲ್ಲ. ಧನ್ಯವಾದಗಳು'' ಎಂದು ಹೇಳಿದ್ದಾರೆ.

ಕನ್ನಡ ಹಾಡು ಹಾಡಿರುವುದು ಇದೇ ಮೊದಲಲ್ಲ

ಅಂದ್ಹಾಗೆ, ಅಜ್ಮಲ್ ಮುಘಲ್ ಕನ್ನಡ ಹಾಡು ಹಾಡಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆ 'ಗಾಳಿಪಟ' ಚಿತ್ರದ 'ಮಿಂಚಾಗಿ ನೀನು ಬರಲು' ಹಾಡನ್ನ ಕೂಡ ಕನ್ನಡದಲ್ಲಿ ಹಾಡಿದ್ದಾರೆ.[ಗಾಳಿಪಟ ಹಾಡು ಹಾಡಿರುವುದು ನೋಡಿ]

ಪಾಕ್ ಅಭಿಮಾನಿ ಮನಗೆದ್ದ 'ರಾಜಕುಮಾರ'

ಅದೇನೆ ಇರಲಿ, ಕನ್ನಡ ಹಾಡೊಂದಕ್ಕೆ ನಮ್ಮ ಶತ್ರು ದೇಶವೆಂದೇ ಬಿಂಬಿತವಾಗಿರುವ ಪಾಕ್ ಅಭಿಮಾನಿ ಮೆಚ್ಚಿಕೊಂಡಿದ್ದಾರೆ ಅಂದ್ರೆ ನಿಜಕ್ಕೂ ಖುಷಿಯ ವಿವಾರವೇ ಸರಿ.[ಅಜ್ಮಲ್ ಹಾಡಿರುವ ಬೊಂಬೆ ಹೇಳುತೈತೆ ಹಾಡು ಕೇಳಿ]

'ಬೊಂಬೆ ಹೇಳುತೈತೆ' ಹಾಡಿನ ಬಗ್ಗೆ

ಪುನೀತ್ ರಾಜ್ ಕುಮಾರ್ ಅಭಿನಯದ 'ರಾಜಕುಮಾರ' ಚಿತ್ರದ ಹಾಡು. ನಿರ್ದೇಶಕ ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿದ್ದು, ಗಾಯಕ ವಿಜಯ ಪ್ರಕಾಶ್ ಕಂಠದಲ್ಲಿ ಮೂಡಿ ಬಂದಿದೆ. ಇನ್ನು ಈ ಸೂಪರ್ ಹಾಡಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದುವರೆಗೂ ಯ್ಯೂಟ್ಯೂಬ್ ನಲ್ಲಿ 1.5 ಕೋಟಿಗಿಂತ ಹೆಚ್ಚು ಜನರು ಈ ಹಾಡಿನ ಮೇಕಿಂಗ್ ವರ್ಷನ್ ನೋಡಿದ್ದಾರೆ.[ಬೊಂಬೆ ಹೇಳುತೈತೆ ಹಾಡು ಕೇಳಿ]

English summary
Rajakumara Movie Bombe Helutaite Song Sung By Pakistani Boy Ajmal Mughal

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada