»   » ಚಾಲೆಂಜಿಂಗ್ ಸ್ಟಾರ್ 'ಬೃಂದಾವನ'ಕ್ಕೆ ಕತ್ತರಿ ಪ್ರಯೋಗ

ಚಾಲೆಂಜಿಂಗ್ ಸ್ಟಾರ್ 'ಬೃಂದಾವನ'ಕ್ಕೆ ಕತ್ತರಿ ಪ್ರಯೋಗ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಬೃಂದಾವನ' ಚಿತ್ರ ತೆರೆಕಂಡು ಒಂದು ವಾರವಾಗುತ್ತಿದೆ. ಯಶಸ್ವಿಯಾಗಿಯೂ ಮುನ್ನುಗ್ಗುತ್ತಿದೆ. ಇದೇ ಸಂದರ್ಭದಲ್ಲಿ ಸುದೀರ್ಘವಾಗಿದ್ದ ಚಿತ್ರದ ಉದ್ದವನ್ನು ಮೊಟಗುಗೊಳಿಸಿದ್ದಾರೆ ನಿರ್ದೇಶಕ ಕೆ.ಮಾದೇಶ್.

ಬೃಂದಾವನ ಚಿತ್ರದ ಅವಧಿಯನ್ನು ಹದಿನೈದು ನಿಮಿಷಗಳಷ್ಟು ಕಟ್ ಮಾಡಲಾಗಿದೆ. ಈಗ ಚಿತ್ರದ ಅವಧಿ ಎರಡು ಗಂಟೆ ನಲವತ್ತೈದು ನಿಮಿಷಕ್ಕೆ ಇಳಿದಿದೆ. ಕತ್ತರಿ ಪ್ರಯೋಗಕ್ಕೂ ಮೊದಲು ಚಿತ್ರದ ಅವಧಿ ಮೂರು ಗಂಟೆಗಳಷ್ಟಿತ್ತು.


ಚಿತ್ರದ ಅವಧಿ ಜಾಸ್ತಿಯಾಗಿ ಪ್ರೇಕ್ಷಕರು ತೂಕಡಿಸುವ ಹಾಗಾಗ ಬಾರದು ಎಂಬ ಕಾರಣಕ್ಕೆ ಈ ಕತ್ತರಿ ಪ್ರಯೋಗ. ಈ ಹಿಂದೆ ಬುಲ್ ಬುಲ್ ಚಿತ್ರಕ್ಕೂ ಇದೇ ರೀತಿ ಮಾಡಲಾಗಿತ್ತು. ದರ್ಶನ್ ಚಿತ್ರಗಳಷ್ಟೇ ಅಲ್ಲ ಆಗಾಗ ಈ ರೀತಿ ಕೆಲವು ಚಿತ್ರಗಳಿಗೆ ಕತ್ತರಿ ಏಟು ಬೀಳುತ್ತಲೇ ಇದೆ. [ಬೃಂದಾವನ]

ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ನೀಡಿದೆ. ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಚಿತ್ರಕ್ಕಿದ್ದು ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ತಿಕಾ ನಾಯರ್ ಹಾಗೂ ಮಿಲನಾ ಚಿತ್ರದ ಇಬ್ಬರು ನಾಯಕಿಯರು. ಚಿತ್ರಕ್ಕೆ ಕೆ.ವಿ.ರಾಜು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ ಹಾಗೂ ರಮೇಶ್ ಬಾಬು ಅವರ ಛಾಯಾಗ್ರಹಣವಿದೆ. (ಏಜೆನ್ಸೀಸ್)

English summary
Challenging Star Darshan latest film 'Brindavana' cutting it down by 15 minutes. After considering the views of the audience chopped it off to keep the phase continuing said the director.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada