»   » ಬುಲೆಟ್ ಪ್ರಕಾಶ್ ಬೆಟ್ಟು ಮಾಡಿ ತೋರಿಸಿದ 'ಆ' ಪ್ರಖ್ಯಾತ ನಟ ಯಾರು.?

ಬುಲೆಟ್ ಪ್ರಕಾಶ್ ಬೆಟ್ಟು ಮಾಡಿ ತೋರಿಸಿದ 'ಆ' ಪ್ರಖ್ಯಾತ ನಟ ಯಾರು.?

Posted By:
Subscribe to Filmibeat Kannada

ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ನಟ ಬುಲೆಟ್ ಪ್ರಕಾಶ್, ನಿನ್ನೆ ಸಂಜೆ ಇದಕ್ಕಿದ್ದಂತೆ ದೊಡ್ಡ ಬ್ರೇಕಿಂಗ್ ನ್ಯೂಸ್ ಕೊಟ್ಟರು. ''ಗಾಂಧಿನಗರದಲ್ಲಿನ ಮನಸ್ತಾಪ, ಭಿನ್ನಾಭಿಪ್ರಾಯಕ್ಕೆ ಕಾರಣವಾಗಿರುವ 'ಪ್ರಖ್ಯಾತ' ನಟನ ಕುರಿತು ನಾಳೆ ಬಹಿರಂಗ ಪಡಿಸುತ್ತೇನೆ'' ಎಂದು ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್ ಮತ್ತು ಟ್ವಿಟ್ಟರ್ ನಲ್ಲಿ ನಿನ್ನೆ ಬರೆದುಕೊಂಡಿದ್ದರು.

ಅಷ್ಟಕ್ಕೂ, ಬುಲೆಟ್ ಪ್ರಕಾಶ್ ಯಾರ ಹೆಸರನ್ನ ಹೇಳಬಹುದು ಎಂದು ಎಲ್ಲರೂ ತಲೆಗೆ ಹುಳ ಬಿಟ್ಟುಕೊಂಡಿದ್ದರು. ಆ ಹುಳವನ್ನ ಹಾಗೇ ಹರಿಯಲು ಬಿಟ್ಟಿರುವ ಬುಲೆಟ್ ಪ್ರಕಾಶ್, ಇಂದು 'ಬಾಂಬ್' ಸಿಡಿಸಲು ಹಿಂದೇಟು ಹಾಕಿದ್ದಾರೆ.[ದೊಡ್ಡ ನಟನ ಸಣ್ಣತನ ಇಂದು ಬಯಲು: ಬುಲೆಟ್ ಪ್ರಕಾಶ್ ರಿಂದ ಮಹಾ ಸ್ಫೋಟ.!]

ಕನ್ನಡ ಚಿತ್ರರಂಗದಲ್ಲಿರುವ 'ದೊಡ್ಡ ದೊಡ್ಡವರು' ಅವರಿಗೆ ಫೋನ್ ಮಾಡಿ ಬುದ್ದಿ ಮಾತು ಹೇಳಿರುವುದರಿಂದ 'ಮಹಾ ಸ್ಫೋಟ'ದಿಂದ ಬುಲೆಟ್ ಪ್ರಕಾಶ್ ಹಿಂದೆ ಸರಿದಿದ್ದಾರೆ. ಹಾಗಾದ್ರೆ, ಬುಲೆಟ್ ಪ್ರಕಾಶ್ ಹೇಳಲು ಹೊರಟಿದ್ದ 'ಆ' ಪ್ರಖ್ಯಾತ ನಟ ಯಾರು.?

'ಆ' ಪ್ರಖ್ಯಾತ ನಟ ಯಾರು.?

ಸ್ಯಾಂಡಲ್ ವುಡ್ ನಲ್ಲಿ ಗುಂಪುಗಾರಿಕೆಗೆ ಕಾರಣವಾಗಿರುವ 'ಆ' ಪ್ರಖ್ಯಾತ ನಟನ ಹೆಸರನ್ನ ಬುಲೆಟ್ ಪ್ರಕಾಶ್ ಎಲ್ಲೂ ಹೇಳಿಲ್ಲ. ಆದ್ರೆ, ನಿನ್ನೆ (ಮೇ 23) ಸಂಜೆ 'ಪಬ್ಲಿಕ್ ಟಿವಿ' ಜೊತೆ ದೂರವಾಣಿ ಮೂಲಕ ಮಾತನಾಡಿದ್ದ ಬುಲೆಟ್ ಪ್ರಕಾಶ್, 'ಆ' ದೊಡ್ಡ ನಟ ಯಾರು ಎಂಬ ಪ್ರಶ್ನೆಗೆ ಸುಳಿವು ನೀಡಿದ್ದಾರೆ. ಆ ಸುಳಿವು ಏನು ಅಂದ್ರೆ....

ಯಾರು ಅಂತ ಹೇಳಿ....

''ನೀವು ಹೇಳಲು ಹೊರಟಿರುವ 'ಆ' ನಟ ಯಾರು'' ಎಂದು ನಿನ್ನೆ ಸಂಜೆ 'ಪಬ್ಲಿಕ್ ಟಿವಿ' ಆಂಕರ್ ಕೇಳಿದಾಗ, ''ಎರಡೇ ಲೈನ್ ನಾನು ಹೇಳುವುದು... ಆ ಎರಡು ಲೈನ್ ನಿಂದ ಅರ್ಥ ಮಾಡಿಕೊಳ್ಳಿ...'' ಎಂದು ಬುಲೆಟ್ ಪ್ರಕಾಶ್ ಕ್ಲೂ ನೀಡಲು ಆರಂಭಿಸಿದರು.

ಕ್ಲೂ ನಂಬರ್ 1

''ಸುಂಟರಗಾಳಿ ಅಂತ ಹೇಳಿದ್ರಲ್ಲ... 'ದಿ ವಿಲನ್' ಶೂಟಿಂಗ್ ನಲ್ಲಿ... ಅಲ್ಲಿ ಯಾರೋ ಒಬ್ಬ ಆರ್ಟಿಸ್ಟ್ ಇದ್ರಲ್ಲ.... ಅಥಣಿಯಲ್ಲಿ... ಇಷ್ಟು ಗೊತ್ತಾಯ್ತಲ್ವಾ.?'' ಎಂದು 'ಆ' ದೊಡ್ಡ ನಟ ಯಾರು ಎಂಬುದನ್ನ ಬುಲೆಟ್ ಪ್ರಕಾಶ್ ಮಾರ್ಮಿಕವಾಗಿ ಹೊರಹಾಕಿದರು.

ಕ್ಲೂ ನಂಬರ್ 2

''ಶಿವಣ್ಣನ ಪಕ್ಕದಲ್ಲಿ ಒಬ್ಬರು ನಿಂತವ್ರೆ. ಅಪ್ಪು ಶೂಟಿಂಗ್ ಗೆ ಹೋಗಿ ಕುಳಿತುಕೊಳ್ತಾರೆ. ಅಪ್ಪು ಶೂಟಿಂಗ್ ಗೆ ಹೋಗಿ ಟೀ ಕುಡಿಯುತ್ತಾರೆ'' ಎಂದು ಸಹ ಬುಲೆಟ್ ಪ್ರಕಾಶ್ ಹೇಳಿದರು.

ದರ್ಶನ್ ಮನೆಯನ್ನ ಹಾಳು ಮಾಡಿದ್ದಾರಂತೆ.!

ಇಷ್ಟು ಸಾಲದು ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಟಾಪಿಕ್ ತೆಗೆದ ಬುಲೆಟ್ ಪ್ರಕಾಶ್, ''ದರ್ಶನ್ ರವರನ್ನ ಯಾರು ಹಾಳು ಮಾಡಿದವರು.? ಇಂಡಸ್ಟ್ರಿಯನ್ನ ಹಾಳು ಮಾಡಿದವರು ಯಾರು.? ಯಾರಿಗೋಸ್ಕರ, ಯಾರು ಯಾರ ಜೊತೆ ಇದ್ದಾರೆ.?'' ಎಂದರು.

'ಆ' ನಟನಿಂದಲೇ ಎಲ್ಲಾ ಆಗಿದ್ದು.!

''ಒಬ್ಬನಿಂದ ಮಾತ್ರ ಗಾಂಧಿನಗರದಲ್ಲಿ ಗುಂಪುಗಾರಿಕೆ ಶುರು ಆಗಿದ್ದು. ಚೆನ್ನಾಗಿ ಇದ್ದ ಮನೆಯನ್ನ ಹಾಳು ಮಾಡಿದವರು ಅವರು. ಅವರವರ ವೈಯುಕ್ತಿಕ ಜೀವನಕ್ಕೆ ಇಂಡಸ್ಟ್ರಿಯನ್ನ ಹಾಳು ಮಾಡಿದವರು ಅವರು'' ಎಂದ 'ಆ' ನಟನ ಬಗ್ಗೆ ಬುಲೆಟ್ ಪ್ರಕಾಶ್ ಆರೋಪಿಸಿದರು.

ಸತ್ಯ ಹೇಳುತ್ತಿದ್ದೇನೆ

''ನಾನು ಸತ್ಯ ಹೇಳುತ್ತೇನೆ. ಯಾಕಂದ್ರೆ ನಾನು ಅಂಥ ಮನುಷ್ಯ. ಎಲ್ಲರನ್ನೂ ಮೆಚ್ಚಿಸುವಂತೆ ಒಬ್ಬ ಆಕ್ಟ್ ಮಾಡುತ್ತಿದ್ದಾನೆ. ಬೆಳಗ್ಗೆ ಅವನ ಬಗ್ಗೆ ಹೇಳುತ್ತೇನೆ'' ಎಂದಿದ್ದರು ಬುಲೆಟ್ ಪ್ರಕಾಶ್. ಆದ್ರೆ, ಬೆಳಗಾಗುವಷ್ಟರಲ್ಲಿ ಸನ್ನಿವೇಶ ಬದಲಾಗಿದೆ.

'ಡಮ್ಮಿ' ಬುಲೆಟ್

''ರಾತ್ರಿ ಇಂಡಸ್ಟ್ರಿಯ ಹಿತೈಷಿಗಳಿಂದ ಫೋನ್ ಬಂದಿತ್ತು. ಅವರ ಮಾತಿಗೆ ಬೆಲೆ ಕೊಡಬೇಕು. ಹೀಗಾಗಿ ಇಂದು ನಾನು ಏನನ್ನೂ ಹೇಳುವುದಿಲ್ಲ. ನನ್ನಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಇರಲಿ'' ಎಂದು ಇಂದು ಬುಲೆಟ್ ಪ್ರಕಾಶ್ ಉಲ್ಟಾ ಹೊಡೆದಿದ್ದಾರೆ.[ಬುಲೆಟ್ ಪ್ರಕಾಶ್ ಸಿಡಿಸಿದ 'ಬಾಂಬ್' ಬೆಳಗಾಗುವಷ್ಟರಲ್ಲಿ 'ಠುಸ್' ಆಯ್ತು]

ಹಾಗಾದ್ರೆ, 'ಆ' ನಟ ಯಾರು.?

ಬುಲೆಟ್ ಪ್ರಕಾಶ್ ಬಾಯಿಂದ ಹೊರಬರಬೇಕಿದ್ದ ದೊಡ್ಡ ರಹಸ್ಯ... ರಹಸ್ಯವಾಗಿಯೇ ಉಳಿದಿದೆ. 'ಆ' ನಟ ಯಾರು.? ಎಂಬ ಪ್ರಶ್ನೆಗೆ ಅವರ ಕೊಟ್ಟಿರುವ ಸುಳಿವುಗಳಷ್ಟೇ ಉತ್ತರ.!

ವಿಡಿಯೋ ನೋಡಿ

'ಪಬ್ಲಿಕ್ ಟಿವಿ' ಜೊತೆ ಬುಲೆಟ್ ಪ್ರಕಾಶ್ ದೂರವಾಣಿ ಮೂಲಕ ಮಾತನಾಡಿರುವ ವಿಡಿಯೋ ಇಲ್ಲಿದೆ. ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

English summary
Kannada Actor Bullet Prakash gives hint to Public TV about The Famous Kannada Actor whom he wanted to reveal the real side.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada