For Quick Alerts
  ALLOW NOTIFICATIONS  
  For Daily Alerts

  ರಾತ್ರಿ 'ಬಾಂಬ್' ಸಿಡಿಸಿ ಬೆಳಗ್ಗೆ 'ಉಲ್ಟಾ' ಹೊಡೆದ ಬುಲೆಟ್ ಪ್ರಕಾಶ್

  By Bharath Kumar
  |

  ನಿನ್ನೆ (ಮೇ 23) ರಾತ್ರಿ ಇದ್ದಕ್ಕಿದ್ದಂತೆ ನಟ ಬುಲೆಟ್ ಪ್ರಕಾಶ್ ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ವಿರುದ್ಧ ಸಿಡಿದೆದ್ದಿದ್ದರು. ಇದಕ್ಕೆಲ್ಲಾ ಕಾರಣ 'ಒಬ್ಬ ದೊಡ್ಡ ನಟ, ಆ ದೊಡ್ಡ ನಟನ ಸಣ್ಣತನದ ಪರಿಚಯ ನಾಳೆ ಮಾಡ್ತಿನಿ'' ಎಂದು ಬಾಂಬ್ ಸಿಡಿಸಿದ್ದರು. ಅದು ಯಾರು ಎಂಬುದನ್ನ ಬೆಳಿಗ್ಗೆ ಮಾಧ್ಯಮಗಳ ಎದುರು ಬಹಿರಂಗ ಪಡಿಸುತ್ತೇನೆ ಎಂದು ಇಡೀ ಕನ್ನಡ ಚಿತ್ರರಂಗಕ್ಕೆ ಶಾಕ್ ನೀಡಿದ್ದರು.

  ನಿರೀಕ್ಷೆಯಂತೆ ಇಂದು (ಮೇ 24) ಬುಲೆಟ್ ಪ್ರಕಾಶ್ ಅವರು ಆ ನಟನ ಹೆಸರನ್ನ ಹೇಳುತ್ತಾರೆ ಎಂದು ಇಡೀ ಕರ್ನಾಟಕ ಕಾಯುತ್ತಿತ್ತು. ಆದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬುಲೆಟ್ ಪ್ರಕಾಶ್ ಉಲ್ಟಾ ಹೊಡೆದಿದ್ದಾರೆ. ಈ ಮೂಲಕ ರಾತ್ರಿ ಬುಲೆಟ್ ಪ್ರಕಾಶ್ ಸಿಡಿಸಿದ್ದ ಬಾಂಬ್ ಸಿಡಿಯುವ ಮುನ್ನವೇ ಠುಸ್ ಆಗಿದೆ.[ದೊಡ್ಡ ನಟನ ಸಣ್ಣತನ ಇಂದು ಬಯಲು: ಬುಲೆಟ್ ಪ್ರಕಾಶ್ ರಿಂದ ಮಹಾ ಸ್ಫೋಟ.!]

  ಅಷ್ಟಕ್ಕೂ, ಬುಲೆಟ್ ಪ್ರಕಾಶ್ ತಮ್ಮ ನಿಲುವನ್ನ ಬದಲಿಸಲು ಕಾರಣವೇನು? ಯಾಕೆ ಆ ನಟನ ಹೆಸರು ಹೇಳುವುದಿಲ್ಲ ಎಂದರು ಎಂಬುದನ್ನ ಮುಂದೆ ಓದಿ.....

  ಉಲ್ಟಾ ಹೊಡೆದ ಬುಲೆಟ್ ಪ್ರಕಾಶ್!

  ಉಲ್ಟಾ ಹೊಡೆದ ಬುಲೆಟ್ ಪ್ರಕಾಶ್!

  ಕನ್ನಡ ಚಿತ್ರರಂಗದಲ್ಲಿ ಗುಂಪುಗಾರಿಕೆಗೆ ಕಾರಣವಾದ ನಟನ ಬಗ್ಗೆ ಬೆಳಿಗ್ಗೆ ಹೇಳುತ್ತೇನೆ ಎಂದಿದ್ದ ನಟ ಬುಲೆಟ್ ಪ್ರಕಾಶ್, ಸೂರ್ಯೋದಯವಾಗುತ್ತಿದ್ದಂತೆ ಮತ್ತೆ ಶಾಕ್ ನೀಡಿದ್ದಾರೆ. ''ಆ ನಟನ ಬಗ್ಗೆ ಈಗ ಹೇಳಲ್ಲ'' ಎಂದು ಉಲ್ಟಾ ಹೊಡೆದಿದ್ದಾರೆ.[ದಿನಕರ್ ಮತ್ತು ಬುಲೆಟ್ ಪ್ರಕಾಶ್ ಮಧ್ಯೆ ಹುಳಿ ಹಿಂಡಿದವರು ಯಾರು?]

  ಭಾವನೆಯಲ್ಲಿ ಬಂದ ಮಾತುಗಳಂತೆ

  ಭಾವನೆಯಲ್ಲಿ ಬಂದ ಮಾತುಗಳಂತೆ

  ದರ್ಶನ್ ಕಿವಿಗೆ ಪುಂಗಿ ಊದೋರು ಇದ್ದಾರಾ.? ಕಿಚ್ಚ-ದಚ್ಚು ಮಹಾಬಿರುಕಿಗೆ ಕಾರಣ ಇದೇನಾ.?]

  ದೊಡ್ಡವರು ಫೋನ್ ಮಾಡಿದ್ದರಂತೆ

  ದೊಡ್ಡವರು ಫೋನ್ ಮಾಡಿದ್ದರಂತೆ

  ''ಇಂಡಸ್ಟ್ರಿಯಲ್ಲಿ, ದೊಡ್ಡವರು, ಕಿರಿಯರು ಎಲ್ಲರೂ ದೂರವಾಣಿಯಲ್ಲಿ ಕರೆ ಮಾಡಿ, ದಯವಿಟ್ಟು ಯಾವುದೇ ಕಾರಣಕ್ಕೂ ಸಮಸ್ಯೆ ಮಾಡಿಕೊಳ್ಳಬೇಡಿ. ಏನಾದರೂ ಇದ್ದರೇ ನಾಲ್ಕು ಗೋಡೆಗಳ ಮಧ್ಯೆ ನಾವು ಕೂತು ಚರ್ಚೆ ಮಾಡಿಕೊಳ್ಳೋಣ. ಇದು ಇಲ್ಲಿಗೆ ನಿಲ್ಲಿಸೋಣ ಎಂದರು'' ಎಂದು ತಮ್ಮ ನಿಲುವು ಬದಲಿಸಿದ್ದರ ಬಗ್ಗೆ ಸಮಜಾಯಿಶಿ ಕೊಟ್ಟಿದ್ದಾರೆ.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

  ದೊಡ್ಡವರ ಮಾತಿಗೆ ಬೆಲೆ

  ದೊಡ್ಡವರ ಮಾತಿಗೆ ಬೆಲೆ

  ''ಮುಂದಿನ ದಿನಗಳಲ್ಲಿ ಈ ರೀತಿಯಾದ ಅನಾಹುತಗಳು ಆಗಬಾರದು. ಇಂಡಸ್ಟ್ರಿಯಲ್ಲಿ ನಾವೆಲ್ಲಾ ಒಂದು. ಒಂದಾಗಿರೋಣ. ಒಂದಾಗಿ ಬದುಕೋಣ ಅಂತ ನನಗೆ ಹಿರಿಯ ಹೇಳಿರುವುದರಿಂದ ಅವರ ಮಾತಿಗೆ ಬೆಲೆ ಕೊಟ್ಟಿದ್ದೀನಿ'' ಎಂದರು.[ಸಂಧಾನ ಸಕ್ಸಸ್; ದಿನಕರ್ - ಬುಲೆಟ್ ಪ್ರಕಾಶ್ ವಿವಾದ ಕ್ಲೋಸ್!]

  ನನ್ನ ಹೇಳಿಕೆಯಿಂದ ಹಿಂದೆ ಸರಿಯುತ್ತಿಲ್ಲ

  ನನ್ನ ಹೇಳಿಕೆಯಿಂದ ಹಿಂದೆ ಸರಿಯುತ್ತಿಲ್ಲ

  ''ನನಗೆ ನೋವಾಗಿಲ್ಲ ಅಂತಲ್ಲ. ನನಗೂ ನೋವಾಗಿರುವುದು ನಿಜ. ಹಾಗೇ, ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯುತ್ತಿಲ್ಲ'' ಎಂದು ಹೇಳುವ ಮೂಲಕ, ನಿನ್ನೆ ತಾವು ಟ್ವೀಟ್ ಮಾಡಿದ್ದ ಅಷ್ಟೂ ಸಂಗತಿಗಳು ನಿಜ ಎಂದು ಒಪ್ಪಿಕೊಂಡಿದ್ದಾರೆ.

  ಕ್ಷಮೆ ಕೇಳುತ್ತೇನೆ

  ಕ್ಷಮೆ ಕೇಳುತ್ತೇನೆ

  ''ನಾನು ಹೇಳಬೇಕು ಎನ್ನಿಸಿದ್ದನ್ನ ಇವತ್ತು ನಾನು ಹೇಳುತ್ತಿಲ್ಲ. ದಯವಿಟ್ಟು ನನ್ನ ಕಡೆಯಿಂದ ಯಾರಿಗಾದರೂ ನೋವಾಗಿದ್ದಲ್ಲಿ ಕ್ಷಮೆ ಕೇಳ್ತಿನಿ'' ಎಂದು ಎಲ್ಲರನ್ನು ಕ್ಷಮೆ ಕೇಳಿದರು.

  ಬುಲೆಟ್ ಪ್ರಕಾಶ್ ಗೆ ಫೋನ್ ಮಾಡಿದ್ದು ಯಾರು?

  ಬುಲೆಟ್ ಪ್ರಕಾಶ್ ಗೆ ಫೋನ್ ಮಾಡಿದ್ದು ಯಾರು?

  ಹಾಗಾದ್ರೆ, ನಟ ಬುಲೆಟ್ ಪ್ರಕಾಶ್ ಅವರಿಗೆ ಕರೆ ಮಾಡಿ, ಯಾವುದನ್ನ ಹೇಳಬೇಡಿ ಎಂದು ಹೇಳಿದ 'ಆ' ದೊಡ್ಡವರು ಯಾರು? ಎಂಬುದು ಈಗ ಪ್ರಶ್ನೆಯಾಗಿ ಉಳಿದಿದೆ.

  ಪ್ರಚಾರದ ಗಿಮಿಕ್ ಇರಬಹುದಾ?

  ಪ್ರಚಾರದ ಗಿಮಿಕ್ ಇರಬಹುದಾ?

  ಇನ್ನು ರಾತ್ರಿ ಹೇಳುತ್ತೇನೆ ಎಂದು ಟ್ವೀಟ್ ಮಾಡಿ, ಬೆಳಗಾಗುವಷ್ಟರಲ್ಲಿ ಉಲ್ಟಾ ಹೊಡೆದಿರುವ ಬುಲೆಟ್ ಪ್ರಕಾಶ್, ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದಾರಾ ಎಂಬ ಅನುಮಾನ ಕೂಡ ಮೂಡುತ್ತೆ.

  ಬುಲೆಟ್ ಪ್ರಕಾಶ್ ನಿನ್ನೆ ಏನು ಹೇಳಿದ್ದರು?

  ಬುಲೆಟ್ ಪ್ರಕಾಶ್ ನಿನ್ನೆ ಏನು ಹೇಳಿದ್ದರು?

  ''ಚಿತ್ರರಂಗದ ಮನಸ್ತಾಪ, ಗುಂಪುಗಾರಿಕೆ, ಭಿನ್ನಾಭಿಪ್ರಾಯಕ್ಕೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ, ದೊಡ್ಡ ನಟನ ಸಣ್ಣತನ ನಿಮಗೆ ಪರಿಚಯ ಮಾಡಿಸುತ್ತೇನೆ, ದೀಪ ಇರುವ ಮೊದಲು ಜೋರಾಗಿ ಉರಿಯುತ್ತದೆ'' ಎಂದು ಟ್ವೀಟ್ ಮಾಡಿದ್ದರು.

  English summary
  Kannada Actor Bullet Prakash Wont Reveal The Real Face of Famous Kannada Actor. Yesterday He Had Tweeted 'I will Reveal who is Responsible for Groupism in Sandalwood'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X