»   » ದೊಡ್ಡ ನಟನ ಸಣ್ಣತನ ಇಂದು ಬಯಲು: ಬುಲೆಟ್ ಪ್ರಕಾಶ್ ರಿಂದ ಮಹಾ ಸ್ಫೋಟ.!

ದೊಡ್ಡ ನಟನ ಸಣ್ಣತನ ಇಂದು ಬಯಲು: ಬುಲೆಟ್ ಪ್ರಕಾಶ್ ರಿಂದ ಮಹಾ ಸ್ಫೋಟ.!

Posted By:
Subscribe to Filmibeat Kannada

ನಟ ಬುಲೆಟ್ ಪ್ರಕಾಶ್ ಫುಲ್ ಗರಂ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ವಿರುದ್ಧ ಸಿಡಿದೆದ್ದಿದ್ದಾರೆ. ದೊಡ್ಡ ನಟನ ವಿರುದ್ಧ ತೊಡೆ ತಟ್ಟಿ ನಿಲ್ಲಲು ಕಡೆಗೂ ಮನಸ್ಸು ಮಾಡಿದ್ದಾರೆ.

ಹೌದು, ತೆರೆಮೇಲೆ ಸದಾ ಕಚಗುಳಿ ಇಡುವ ನಟ ಬುಲೆಟ್ ಪ್ರಕಾಶ್ ನಿನ್ನೆ (ಮೇ 23) ಕೊಂಚ ಕೋಪಗೊಂಡಿದ್ದಾರೆ. ಅದಕ್ಕೆ ಸಾಕ್ಷಿ ಅವರು ಮಾಡಿರುವ ಸಾಲು ಸಾಲು ಟ್ವೀಟ್ ಗಳು..![ಬುಲೆಟ್ ಪ್ರಕಾಶ್ ಸಿಡಿಸಿದ 'ಬಾಂಬ್' ಬೆಳಗಾಗುವಷ್ಟರಲ್ಲಿ 'ಠುಸ್' ಆಯ್ತು]

ಇಂದು (ಮೇ 24, ಬುಧವಾರ) ಮಾಧ್ಯಮಗಳ ಮುಂದೆ ಕನ್ನಡ ಚಿತ್ರರಂಗದ ದೊಡ್ಡ ನಟನ ಅಸಲಿ ಮುಖವಾಡ ಬಯಲು ಮಾಡುವುದಾಗಿ ನಟ ಬುಲೆಟ್ ಪ್ರಕಾಶ್ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿರಿ....

ಇದ್ದಕ್ಕಿದ್ದಂತೆ ರೊಚ್ಚಿಗೆದ್ದ ನಟ ಬುಲೆಟ್ ಪ್ರಕಾಶ್

ನಿನ್ನೆ ಸಂಜೆ ಸೂರ್ಯ ಮುಳುಗುತ್ತಿದ್ದಂತೆಯೇ... ನಟ ಬುಲೆಟ್ ಪ್ರಕಾಶ್ ರೊಚ್ಚಿಗೆದ್ದ ಹಾಗಿದೆ. ಕನ್ನಡ ಚಿತ್ರರಂಗದಲ್ಲಿ ಉಂಟಾಗಿರುವ ಮನಸ್ತಾಪ, ಗುಂಪುಗಾರಿಕೆಯ ಮೂಲ ಕಾರಣ ಬಯಲು ಮಾಡಲು ನಟ ಬುಲೆಟ್ ಪ್ರಕಾಶ್ ಪಣ ತೊಟ್ಟಿರುವಂತಿದೆ.[ದರ್ಶನ್ ಕಿವಿಗೆ ಪುಂಗಿ ಊದೋರು ಇದ್ದಾರಾ.? ಕಿಚ್ಚ-ದಚ್ಚು ಮಹಾಬಿರುಕಿಗೆ ಕಾರಣ ಇದೇನಾ.?]

ಬುಲೆಟ್ ಪ್ರಕಾಶ್ ರಿಂದ ಸಿಡಿದ ಮೊದಲ ಟ್ವೀಟ್

''ಚಿತ್ರರಂಗದ ಮನಸ್ತಾಪ, ಗುಂಪುಗಾರಿಕೆ, ಭಿನ್ನಾಭಿಪ್ರಾಯಕ್ಕೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ'' ಎಂದು ನಟ ಬುಲೆಟ್ ಪ್ರಕಾಶ್ ಮೊದಲು ಟ್ವೀಟ್ ಮಾಡಿದರು.[ದರ್ಶನ್ ಗೆ ಟ್ವಿಟ್ಟರ್, ಫೇಸ್ ಬುಕ್ ಬಳಸಲು ಬರಲ್ವಂತೆ! ಟ್ವೀಟ್ ಮಾಡೋದ್ಯಾರು?]

ಬುಲೆಟ್ ಪ್ರಕಾಶ್ ರಿಂದ ಸಿಡಿದ ಎರಡನೇ ಟ್ವೀಟ್

''ದೊಡ್ಡ ನಟನ ಸಣ್ಣತನ ನಿಮಗೆ ಪರಿಚಯ ಮಾಡಿಸುತ್ತೇನೆ'' ಎಂದು ಟ್ವಿಟ್ಟರ್ ನಲ್ಲಿ ಬುಲೆಟ್ ಪ್ರಕಾಶ್ ಬರೆದುಕೊಂಡಿದ್ದಾರೆ.[ಸಂಧಾನ ಸಕ್ಸಸ್; ದಿನಕರ್ - ಬುಲೆಟ್ ಪ್ರಕಾಶ್ ವಿವಾದ ಕ್ಲೋಸ್!]

ಬುಲೆಟ್ ಪ್ರಕಾಶ್ ರಿಂದ ಸಿಡಿದ ಮೂರನೇ ಟ್ವೀಟ್

''ದೀಪ ಇರುವ ಮೊದಲು ಜೋರಾಗಿ ಉರಿಯುತ್ತದೆ'' ಎಂದು ಮಾರ್ಮಿಕವಾಗಿ 'ಆ' ನಟನ ಕುರಿತು ಹೇಳಿದ್ದಾರೆ ನಟ ಬುಲೆಟ್ ಪ್ರಕಾಶ್.

ಯಾರು 'ಆ' ದೊಡ್ಡ ನಟ.?

ಬುಲೆಟ್ ಪ್ರಕಾಶ್ ಹೀಗೆ ಟ್ವೀಟ್ ಮಾಡುತ್ತಿದ್ದಂತೆಯೇ, 'ಆ' ದೊಡ್ಡ ನಟ ಯಾರು.? ಎಂಬ ಪ್ರಶ್ನೆ ಎಲ್ಲರ ತಲೆಯಲ್ಲೂ ಕೊರೆಯುತ್ತಿದೆ.

ನಟ ಬುಲೆಟ್ ಪ್ರಕಾಶ್ ಏನಂತಾರೆ.?

''ಡಾ.ರಾಜ್ ಕುಮಾರ್ ಕಟ್ಟಿದ ಕನ್ನಡ ಚಿತ್ರರಂಗ ಚೆನ್ನಾಗಿತ್ತು. ಆದರೆ 'ಆ' ವ್ಯಕ್ತಿಯ ಸ್ವಾರ್ಥದಿಂದಾಗಿ ಕನ್ನಡ ಚಿತ್ರರಂಗ ಈಗ ಹಾಳಾಗಿದೆ. ಹೀಗಾಗಿ 'ಆ' ವ್ಯಕ್ತಿಯ ವಿರುದ್ಧ ನಾನು ಬೆಳಗ್ಗೆ ಸಂಪೂರ್ಣವಾಗಿ ತಿಳಿಸುತ್ತೇನೆ'' ಎನ್ನುತ್ತಾರೆ ನಟ ಬುಲೆಟ್ ಪ್ರಕಾಶ್

ಎಲ್ಲರೂ ಮೆಚ್ಚಿಕೊಳ್ಳುವ ವ್ಯಕ್ತಿ

''ನಾನು ಸತ್ಯವನ್ನೇ ಹೇಳುತ್ತೇನೆ. ಎಲ್ಲರೂ ಇಷ್ಟಪಡುವ, ಮೆಚ್ಚಿಕೊಳ್ಳುವಂತಹ ನಟನ ಬಗ್ಗೆ ನಾನು ನಾಳೆ ಹೇಳುತ್ತೇನೆ'' - ಬುಲೆಟ್ ಪ್ರಕಾಶ್

'ಆ' ವ್ಯಕ್ತಿಯೇ ದರ್ಶನ್ ರನ್ನ ಹಾಳು ಮಾಡಿದ್ದು.!

''ಆ' ವ್ಯಕ್ತಿಯೇ ದರ್ಶನ್ ರವರನ್ನ ಹಾಳು ಮಾಡಿದ್ದು. ಚೆನ್ನಾಗಿ ಇದ್ದ ಚಿತ್ರರಂಗದಲ್ಲಿ ಸುಂಟರಗಾಳಿ ಏಳಲು 'ಆ' ವ್ಯಕ್ತಿಯೇ ಕಾರಣ. ಗುಂಪುಗಾರಿಕೆ ಆತನಿಂದಲೇ ಆರಂಭವಾಗಿದ್ದು'' ಎಂದು ಕೋಪದಿಂದ ನುಡಿಯುತ್ತಾರೆ ನಟ ಬುಲೆಟ್ ಪ್ರಕಾಶ್.

ಎಲ್ಲ ಪ್ರಶ್ನೆಗಳಿಗೂ ನಾಳೆ ಉತ್ತರ

ನಾಳೆ (ಮೇ 24) ಪ್ರೆಸ್ ಮೀಟ್ ಕರೆದು ಮಾಧ್ಯಮಗಳ ಮುಂದೆ 'ಮಹಾ ಸ್ಫೋಟ' ನಡೆಸುವುದಾಗಿ ಬುಲೆಟ್ ಪ್ರಕಾಶ್ ಹೇಳಿಕೊಂಡಿದ್ದಾರೆ. ಅವರು ಬೆಟ್ಟು ಮಾಡಿ ತೋರಿಸುತ್ತಿರುವ 'ಆ' ವ್ಯಕ್ತಿ ಯಾರು.? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾಳೆಯ ವರೆಗೂ ನೀವು ಕಾಯಲೇಬೇಕು.

English summary
Kannada Actor Bullet Prakash has taken his twitter account to express his desire to reveal the real face of Famous Kannada Actor who is responsible for Groupism in Sandalwood. Bullet Prakash to reveal the truth tomorrow (May 24th) in front of Media.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada