For Quick Alerts
  ALLOW NOTIFICATIONS  
  For Daily Alerts

  'ದಿನಕರ್ ತೂಗುದೀಪ ಅವರಿಗೆ ಅಹಂಕಾರ ನೆತ್ತಿಗೇರಿದೆ!'

  By Harshitha
  |

  ''ದಿನಕರ್ ಗೆ ಅಹಂಕಾರ ನೆತ್ತಿಗೇರಿದೆ. ಅವನ ಬಂಡವಾಳ ಏನು ಅಂತ ನನಗೆ ಗೊತ್ತು. 2011 ರಲ್ಲಿ ಏನೇನು ನಡೆಯಿತು. ಹಿಸ್ಟ್ರಿ ಜನಕ್ಕೆ ಗೊತ್ತು. ಜನ ಮೂಢರು ಅಲ್ಲ. ಅವನು ಕುಡಿದಾಗ ಆಡಿದ ಅವತಾರಗಳೆಲ್ಲಾ ನನಗೆ ಗೊತ್ತು''

  ಹೀಗಂತ ಮಾಧ್ಯಮಗಳ ಮುಂದೆ ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ, ಎಲ್ಲಕ್ಕಿಂತ ಹೆಚ್ಚಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ ಮೇಲೆ ಹಾಸ್ಯ ನಟ ಬುಲೆಟ್ ಪ್ರಕಾಶ್ ಹೌಹಾರಿದರು.[ಬುಲೆಟ್ ಪ್ರಕಾಶ್ v/s ದಿನಕರ್ ; ಅಸಲಿಗೆ ನಿನ್ನೆ ರಾತ್ರಿ ನಡೆದದ್ದೇನು?]

  ನಿನ್ನೆ ರಾತ್ರಿ ದಿನಕರ್ ತೂಗುದೀಪ, ದರ್ಶನ್ ಆಪ್ತ ಮಲ್ಲಿಕಾರ್ಜುನ್ ಮತ್ತು ಪಿಸ್ತಾ ಸೀನ ಹಾಗು ಬುಲೆಟ್ ಪ್ರಕಾಶ್ ನಡುವೆ ಆದ ರಾದ್ಧಾಂತ, ನಟ ಬುಲೆಟ್ ಪ್ರಕಾಶ್ ರವರ ನಾಲಿಗೆ ಹೀಗೆಲ್ಲಾ ನುಲಿದಾಡುವಂತೆ ಮಾಡಿದೆ.

  ಕೋಪ, ರೋಷ, ಆವೇಷದಲ್ಲಿ ಮಾಧ್ಯಮಗಳ ಮುಂದೆ ದಿನಕರ್ ತೂಗುದೀಪ ವಿರುದ್ಧ ಬುಲೆಟ್ ಪ್ರಕಾಶ್ ಬಿಟ್ಟಿರುವ ಮಾತಿನ ಬಾಣಗಳು ಇಲ್ಲಿವೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

  ದಿನಕರ್ ಗೆ ಅಹಂಕಾರ ನೆತ್ತಿಗೇರಿದೆ!

  ದಿನಕರ್ ಗೆ ಅಹಂಕಾರ ನೆತ್ತಿಗೇರಿದೆ!

  ''ನಾನು ಕುಡಿದದ್ದು ಸತ್ಯ. ಕುಡಿದು ನಾನು ನನ್ನ ಮನೆಯಲ್ಲಿ ಇದ್ದೆ. ಅವನು ಕುಡಿದು ಆಡಿದ ಅವತಾರ ಎಲ್ಲಾ ಹೇಳ್ಲಾ ನಾನು? ಅವನಿಗೆ ಅಹಂಕಾರ ನೆತ್ತಿಗೇರಿದೆ. ಅವನ ಬಂಡವಾಳ ಏನು ಅಂತ ನನಗೆ ಗೊತ್ತು. ನಾನು ಎಲ್ಲಾ ಹೇಳುವುದಕ್ಕೆ ಹೋಗಲ್ಲ'' - ಬುಲೆಟ್ ಪ್ರಕಾಶ್[ಬುಲೆಟ್ ಪ್ರಕಾಶ್ ದೊಡ್ಡ ಸುಳ್ಳುಗಾರ; ದಿನಕರ್ ತೂಗುದೀಪ ಸಿಡಿಸಿದ ಬಾಂಬ್!]

  ಜನ ನೋಡಿದ್ದಾರೆ!

  ಜನ ನೋಡಿದ್ದಾರೆ!

  ''ಎಲ್ಲಾ ಜನ ನೋಡಿದ್ದಾರೆ. 2011 ರಲ್ಲಿ ಏನೇನು ನಡೆಯಿತು. ಹಿಸ್ಟ್ರಿ ಜನಕ್ಕೆ ಗೊತ್ತು. ಜನ ಮೂಢರು ಅಲ್ಲ. ಮೂರ್ಖರು ಅಲ್ಲ. ಈಗ ನಾನು ಏನಾದರೂ ಹೇಳಿದ್ರೆ ಢೋಂಗಿ (ಸುಳ್ಳು) ಮಾತನಾಡಿದ ಹಾಗೆ ಅಗುತ್ತೆ'' - ಬುಲೆಟ್ ಪ್ರಕಾಶ್[ಕುಚಿಕು ಗೆಳೆಯರ ಗಲಾಟೆ; ಬುಲೆಟ್ ಪ್ರಕಾಶ್ ಬಾಯ್ಬಿಟ್ಟ ಸತ್ಯ]

  ಮಗಳೇ ಸಾಕ್ಷಿ

  ಮಗಳೇ ಸಾಕ್ಷಿ

  ''ಸಮಯ ಬಂದ್ರೆ ನನ್ನ ಮಗಳ ಕರ್ಕೊಂಡು ಬಂದು ಹೇಳಿಸುತ್ತೇನೆ. ಅವಳೊಬ್ಬಳೇ ಪುರಾವೆ ಇರುವುದು ನನಗೆ. ನಾನು ಅವನು ಮಾತನಾಡಿದ ಮೇಲೆ ಯಾರ್ಯಾರು ಫೋನ್ ಮಾಡಿದ್ರು, ಏನೇನು ಮಾತನಾಡಿದ್ರು ಎಲ್ಲಾ ನನ್ನ ಹತ್ರ ದಾಖಲೆ ಇದೆ'' - ಬುಲೆಟ್ ಪ್ರಕಾಶ್

  ದರ್ಶನ್ ಗೆ ಏನೂ ಹೇಳಿಲ್ಲ!

  ದರ್ಶನ್ ಗೆ ಏನೂ ಹೇಳಿಲ್ಲ!

  ''ನಾನು ದರ್ಶನ್ ಜೊತೆ ಒಂದು ಮಾತು ಕೂಡ ಹೇಳಿಲ್ಲ. ಹೇಳಿದರೆ, ಎಲ್ಲಿ ಅಣ್ಣ-ತಮ್ಮಂದಿರ ನಡುವೆ ಹುಳಿ ಹಿಂಡಿದ ಹಾಗೆ ಆಗುತ್ತೆ ಅಂತ ಹೇಳಿಲ್ಲ. ಮಂಜುನಾಥ ಸ್ವಾಮಿ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ ನಾನು ಹೇಳಿಲ್ಲ'' - ಬುಲೆಟ್ ಪ್ರಕಾಶ್

  ಸಿನಿಮಾ ಗತಿ ಏನು?

  ಸಿನಿಮಾ ಗತಿ ಏನು?

  ''ದರ್ಶನ್ ಇಷ್ಟ ಪಟ್ಟರೆ ಸಿನಿಮಾ ಮಾಡ್ತೀನಿ. ಸಿನಿಮಾ ತಂದಿರೋದೇ, ಸಿನಿಮಾ ಮಾಡುವುದಕ್ಕೆ. ಈಗಲೇ ಯಾವುದೇ ಆತುರದ ನಿರ್ಧಾರ ಮಾಡಲ್ಲ. ಏನೇನು ಆಗುತ್ತೋ, ಎಲ್ಲಾ ಫೇಸ್ ಮಾಡಬೇಕು'' - ಬುಲೆಟ್ ಪ್ರಕಾಶ್

  ಫ್ರೆಂಡ್ ಶಿಪ್ ಕಟ್ ಆದರೆ...

  ಫ್ರೆಂಡ್ ಶಿಪ್ ಕಟ್ ಆದರೆ...

  ''ಫ್ರೆಂಡ್ ಶಿಪ್ ಕಟ್ ಆದರೆ ಏನೂ ಮಾಡೋಕೆ ಆಗಲ್ಲ. ಒಂದೊಳ್ಳೆ ಫ್ರೆಂಡ್ ನ ಮಿಸ್ ಮಾಡಿಕೊಂಡೆ ಅಂದುಕೊಳ್ಳುತ್ತೇನೆ. ಫ್ರೆಂಡ್ ಶಿಪ್ ಗಟ್ಟಿಯಾಗುವುದಕ್ಕೆ ಸಿನಿಮಾ ಮಾಡುವುದಕ್ಕೆ ಮುಂದಾದೆ'' - ಬುಲೆಟ್ ಪ್ರಕಾಶ್

  ದುಡ್ಡು ಕೊಟ್ಟೆ ಸಿನಿಮಾ ಮಾಡಿಸುವುದು!

  ದುಡ್ಡು ಕೊಟ್ಟೆ ಸಿನಿಮಾ ಮಾಡಿಸುವುದು!

  ''ನಾನು ದುಡ್ಡು ಕೊಟ್ಟೆ ಮಾಡಿಸುವುದು. ಎಷ್ಟೋ ಜನ ಅಂದರು ಫ್ರೀ ಡೇಟ್ ಅಂತ. ಆದರೆ, ನನ್ನ ಮನಸಾಕ್ಷಿಗೆ ಗೊತ್ತು. ದುಡ್ಡು ಕೊಟ್ಟೆ ಮಾಡಿಸಿಕೊಳ್ಳುವುದು'' - ಬುಲೆಟ್ ಪ್ರಕಾಶ್

  ತಲೆ ಬೋಳಿಸಿಕೊಳ್ಳುತ್ತೇನೆ!

  ತಲೆ ಬೋಳಿಸಿಕೊಳ್ಳುತ್ತೇನೆ!

  ''ನಗಿಸುವವನ ಜೀವನದಲ್ಲಿ ಇಷ್ಟೆಲ್ಲಾ ಆಟವಾಡಿದ್ರಲ್ಲಾ ಅಂತ ನೋವಾಗುತ್ತೆ. ಡೇಟ್ ಕೊಟ್ಟರೆ ಸಂತೋಷ, ಸಿನಿಮಾ ಮಾಡ್ತೀನಿ. ಇಲ್ಲಾ ಅಂದ್ರೂ ಸಂತೋಷ, ನಟನೆ ಮಾಡಿಕೊಂಡು ಇರ್ತೀನಿ. ದೇವರು ಒಳ್ಳೆಯದು ಮಾಡಲಿ ಅವರಿಗೆ. ಎಲ್ಲವೂ ಜನರ ಮುಂದೆ ಇದೆ. ಒಳ್ಳೆಯದು ಯಾವುದು, ಕೆಟ್ಟದು ಯಾವುದು ಜನ ತೀರ್ಮಾನ ಮಾಡ್ತಾರೆ. ನನ್ನ ತಪ್ಪು ಇದ್ದರೆ, ತಲೆ ಬಗ್ಗಿಸುತ್ತೇನೆ. ಮೆಜೆಸ್ಟಿಕ್ ಸರ್ಕಲ್ ನಲ್ಲಿ ಅಣ್ಣಮ್ಮ ದೇವಿ ಮುಂದೆ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ತಪ್ಪು ಇಲ್ಲಾ ಅಂದ್ರೆ ನಿಂತುಕೊಳ್ಳುತ್ತೇನೆ'' - ಬುಲೆಟ್ ಪ್ರಕಾಶ್

  ಅಣ್ಣ-ತಮ್ಮ ಬೇರೆ ಮಾಡುವುದಕ್ಕೆ ನಾನು ಯಾರು?

  ಅಣ್ಣ-ತಮ್ಮ ಬೇರೆ ಮಾಡುವುದಕ್ಕೆ ನಾನು ಯಾರು?

  ''ಅವನಿಗೆ ಗೊತ್ತೇಯಿಲ್ಲ. ಅವನ ಅಣ್ಣನ ಪಿಕ್ಚರ್ ಮಾಡುತ್ತಿರುವುದು. ಅಣ್ಣ-ತಮ್ಮ ಬೇರೆ ಮಾಡುವುದಕ್ಕೆ ನಾನು ಯಾರು. ನೀವು ಚೆನ್ನಾಗಿರಿ. ನಿಮ್ಮನ್ನ ಬೇರೆ ಮಾಡುವುದಕ್ಕೆ ನಾನು ಯಾರು. ನಾನೊಬ್ಬ ಸ್ನೇಹಿತ ಅಷ್ಟುಬಿಟ್ಟರೆ, ಯಾವುದೇ ವೈಯುಕ್ತಿಕ ದ್ವೇಷ, ಅಸೂಯೆ ಏನೂ ಇಲ್ಲ'' - ಬುಲೆಟ್ ಪ್ರಕಾಶ್

  English summary
  Bullet Prakash has lodged complaint in Amruthahalli Police Station, Bengaluru against Director Dinakar Toogudeepa for threatening him last night (February 3rd). During an interaction with the media, Bullet Prakash has made serious remarks on Dinakar Toogudeepa.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X