For Quick Alerts
  ALLOW NOTIFICATIONS  
  For Daily Alerts

  ಬುಲೆಟ್ ಪ್ರಕಾಶ್ ಸಾವಿನ ಬಗ್ಗೆ ಮಗ ರಕ್ಷಕ್ ಹೇಳಿದ ಆಘಾತಕಾರಿ ಸಂಗತಿ

  |

  ಖ್ಯಾತ ಹಾಸ್ಯ ನಟ ಬುಲೆಟ್ ಪ್ರಕಾಶ್ ನಮ್ಮನ್ನು ಅಗಲಿ ಕೆಲವು ದಿನಗಳು ಉರುಳಿವೆ. ಅವರು ತಮ್ಮ ಪಾತ್ರಗಳ ಮೂಲಕ ಮುಂದೆಯೂ ಜನರನ್ನು ನಕ್ಕು ನಲಿಸುತ್ತಾ ಅಜರಾಮರವಾಗಿ ಉಳಿಯಲಿದ್ದಾರೆ. ಆದರೆ ಅವರ ಸಾವು ಚಿತ್ರರಂಗದ ಹಾಸ್ಯ ಪರಂಪರೆಗೆ ಉಂಟಾದ ದೊಡ್ಡ ನಷ್ಟ.

  Recommended Video

  ದೇಹದ ತೂಕ ಇಳಿಸಿಕೊಳ್ಳಲು ಮಾಡಿಸಿಕೊಂಡ ಶಸ್ತ್ರಚಿಕಿತ್ಸೆಯೇ ಜೀವಕ್ಕೆ ಮುಳುವಾಯ್ತಾ??| Bullet Prakash No More

  ತಮ್ಮ ಭವಿಷ್ಯದ ಸಿನಿಮಾ ಪಯಣದ ಬಗ್ಗೆ ಬುಲೆಟ್ ಪ್ರಕಾಶ್ ಅಪಾರ ಕನಸು ಕಂಡಿದ್ದರು. ಅವರು ಬಹಳ ಮಹತ್ವಾಕಾಂಕ್ಷಿ ಎಂದೇ ಅವರನ್ನು ಬಲ್ಲವರು ಹೇಳುತ್ತಾರೆ. ಮಗನನ್ನು ಹೀರೋ ಆಗಿ ಮಾಡಬೇಕು ಎನ್ನುವುದು ಅವರ ಮಹದಾಸೆಯಾಗಿತ್ತು. ಆದರೆ ಅನಾರೋಗ್ಯ ಮತ್ತು ಹುಂಬತನ ಅವರ ಬದುಕನ್ನು ಕಸಿದುಕೊಂಡಿತು. ಬುಲೆಟ್ ಪ್ರಕಾಶ್ ಇನ್ನಿಲ್ಲ ಎಂಬ ಸುದ್ದಿ ಹರಿದಾಡಿದಾಗ ಮಗ ರಕ್ಷಕ್ ಅದೆಲ್ಲ ಸುಳ್ಳು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳುತ್ತಿದ್ದರು. ತಂದೆ ಸಾವನ್ನು ಗೆದ್ದು ಬರುತ್ತಾರೆ ಎಂಬ ಆಸೆ ಅವರಲ್ಲಿ ಕೊನೆಯ ಕ್ಷಣದವರೆಗೂ ಉಳಿದಿತ್ತು. ಆದರೆ ಆ ಸಾವಿನ ಬಗ್ಗೆ ಅವರಿಗೆ ಈ ಹಿಂದೆಯೇ ತಿಳಿದಿತ್ತು. ಮುಂದೆ ಓದಿ...

  ಬುಲೆಟ್ ಪ್ರಕಾಶ್ ಆಸ್ಪತ್ರೆ ಬಿಲ್ ಪಾವತಿಸಿದ್ದು ಈ ಇಬ್ಬರು ಸಚಿವರುಬುಲೆಟ್ ಪ್ರಕಾಶ್ ಆಸ್ಪತ್ರೆ ಬಿಲ್ ಪಾವತಿಸಿದ್ದು ಈ ಇಬ್ಬರು ಸಚಿವರು

  ರಕ್ಷಕ್‌ಗೆ ಮೊದಲೇ ಗೊತ್ತಿತ್ತು

  ರಕ್ಷಕ್‌ಗೆ ಮೊದಲೇ ಗೊತ್ತಿತ್ತು

  ಬುಲೆಟ್ ಪ್ರಕಾಶ್ ಅವರ ಸಾವಿನ ಸುದ್ದಿ ರಕ್ಷಕ್‌ಗೆ ಮೊದಲೇ ಗೊತ್ತಿತ್ತು. ಅದು 18 ದಿನಗಳ ಹಿಂದೆ. ಬುಲೆಟ್ ಪ್ರಕಾಶ್ ಮತ್ತು ಅವರ ಕುಟುಂಬ ಅಪಾರವಾಗಿ ನಂಬುವ ಅರ್ಜುನ್ ಗುರುಗಳ ಬಳಿ ಮಾತನಾಡಿದಾಗ ಬುಲೆಟ್ ಪ್ರಕಾಶ್ ಅವರ ಆಯಸ್ಸು ಇನ್ನು 18 ದಿನಗಳು ಮಾತ್ರ ಎಂದು ರಕ್ಷಕ್ ಬಳಿ ಅವರು ಹೇಳಿದ್ದರಂತೆ. ಅದನ್ನು ಮಾಧ್ಯಮ ಸಂದರ್ಶನವೊಂದರಲ್ಲಿ ರಕ್ಷಕ್ ಹೇಳಿಕೊಂಡಿದ್ದಾರೆ.

  ಅಪ್ಪ ಇನ್ನು ಕಾಣಿಸುವುದಿಲ್ಲ ಎಂದರು

  ಅಪ್ಪ ಇನ್ನು ಕಾಣಿಸುವುದಿಲ್ಲ ಎಂದರು

  ಮಾರ್ಚ್ 19ರಂದು ಅಪ್ಪ ತುಂಬಾ ನರಳುತ್ತಿದ್ದರು. ಅರ್ಜುನ್ ಗುರುಗಳಿಗೆ ವಿಡಿಯೋ ಕಾಲ್ ಮಾಡಿದೆ. ಒಂದೆರಡು ಕೊಬ್ಬರಿ ಎಣ್ಣೆ ಡಬ್ಬ, ತಾಯತ ಕೊಟ್ಟು ಕಳಿಸುತ್ತೇನೆ. ನೋಡೋಣ, ಏನೂ ಆಗೊಲ್ಲ ಎಂದು ಅಪ್ಪನ ಮುಂದೆ ಹೇಳಿದರು. ಆಮೇಲೆ ನನ್ನನ್ನು ಬೇರೆ ಕಡೆ ಬರುವಂತೆ ಕರೆದು ಹೇಳಿದರು, ಇಂದಿನಿಂದ 18 ದಿನ ನಿಮ್ಮ ಅಪ್ಪನನ್ನು, ಅವರ ಮುಖವನ್ನು ಚೆನ್ನಾಗಿ ನೋಡಿಕೋ. ಆಮೇಲೆ ಆಗೊಲ್ಲ. 18 ದಿನದ ಬಳಿಕ ಅಪ್ಪ ಕಾಣಿಸೊಲ್ಲ. ನಾವೂ ಏನೂ ಮಾಡೋಕೆ ಆಗೊಲ್ಲ. ನಮ್ಮ ಕೈಯಲ್ಲಾದ ಪ್ರಯತ್ನ ಮಾಡಿದ್ದೇವೆ. ಉಳಿದದ್ದು ದೇವರಿಗೆ ಬಿಟ್ಟಿದ್ದು. ಯಾರಿಗೂ ಹೇಳಬೇಡ. ಮನಸಲ್ಲೇ ಇಟ್ಟುಕೋ ಎಂದರು ಎಂದು ರಕ್ಷಕ್ ನೆನಪಿಸಿಕೊಂಡಿದ್ದಾರೆ.

  ನಕ್ಕು ನಗಿಸಿದ ಹಾಸ್ಯ ಪ್ರತಿಭೆಗೆ ಕಣ್ಣೀರ ವಿದಾಯ: ಮಣ್ಣಲ್ಲಿ ಮಣ್ಣಾದ ಬುಲೆಟ್ ಪ್ರಕಾಶ್ನಕ್ಕು ನಗಿಸಿದ ಹಾಸ್ಯ ಪ್ರತಿಭೆಗೆ ಕಣ್ಣೀರ ವಿದಾಯ: ಮಣ್ಣಲ್ಲಿ ಮಣ್ಣಾದ ಬುಲೆಟ್ ಪ್ರಕಾಶ್

  ಅಂದೂ ಕೂಡ ಗುಡುಗು ಮಿಂಚು

  ಅಂದೂ ಕೂಡ ಗುಡುಗು ಮಿಂಚು

  ಗುರುಗಳು ಹೇಳಿದ ಮಾತು ಕೇಳಿ ತುಂಬಾ ಬೇಜಾರಾಯ್ತು. ಅವರ ಬಳಿ ಹೋದಾಗ ಯಾವಾಗಲೂ ಬುದ್ಧಿ ಮಾತು ಹೇಳೋರು. ಏನೂ ಆಗೊಲ್ಲ 10-15 ವರ್ಷ ಬದುಕಿರುತ್ತಾರೆ, ನಾವೆಲ್ಲ ಸಪೋರ್ಟ್ ಕೊಡ್ತೀವಿ. ನಿನಗೊಂದು ನೆಲೆ ಮಾಡಿಕೊಡುತ್ತಾನೆ ಎನ್ನುತ್ತಿದ್ದರು. ಈಗ ಇದ್ದಕ್ಕಿದ್ದ ಹಾಗೆ ಆತ ಇನ್ನು ಇರುವುದಿಲ್ಲ. ಜಾಸ್ತಿ ದಿನ ಇಲ್ಲ. ಇಂದಿನಿಂದ 18 ದಿನ ಮಾತ್ರ. ಪುಸ್ತಕದಲ್ಲಿ ಬರೆದಿಟ್ಟುಕೋ ಎಂದಾಗ ಏನು ಹೇಳುವುದು? ಅವರು ಹಾಗೆ ಹೇಳಿದ ದಿನ ಭಾರಿ ಮಳೆ ಗುಡುಗು. ಅಪ್ಪ ಸತ್ತಾಗ ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಇರಿಸಾಗಲೂ ಒಳ್ಳೆ ಮಳೆ ಗುಡುಗು. ಎಲ್ಲ ನಿಜ ಆಗಿದೆ. ಏನೂ ಮಾಡಲು ಆಗೊಲ್ಲ ಎಂದು ಭಾವುಕರಾದರು.

  ನಾನೊಬ್ಬನೇ ನುಂಗಿಕೊಂಡೆ

  ನಾನೊಬ್ಬನೇ ನುಂಗಿಕೊಂಡೆ

  ನನ್ನ ಕೈಲಾದಷ್ಟು ಪ್ರಯತ್ನ ಮಾಡಿದೆ. ಈ 18 ದಿನ ಅಲ್ಲ. ಅಪ್ಪನ ಆಪರೇಷನ್‌ ಆದಾಗಿನಿಂದಲೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ. ಐದು ತಿಂಗಳಿಂದ ಅಪ್ಪ ತುಂಬಾ ನರಳುತ್ತಿದ್ದರು. ಮನೆಯಲ್ಲಿ ಅಮ್ಮ, ಅಕ್ಕ, ಚಿಕ್ಕಪ್ಪ ಇವರಿಗೆ ಮಾತ್ರ ಗೊತ್ತಿತ್ತು. ಅದರ ಬಗ್ಗೆ ಯಾರಿಗೂ ಹೇಳುತ್ತಿರಲಿಲ್ಲ. ಆದರೆ ಈ 18 ದಿನದ ಸಂಗತಿಯನ್ನು ನಾನು ಒಬ್ಬನೇ ನುಂಗಿಕೊಂಡೆ. ನೋಡೋಣ ದೇವರಿಗೆ ಬಿಟ್ಟಿದ್ದು ಎನ್ನುತ್ತಾ ಪ್ರಯತ್ನ ಮಾಡಿದೆವು.

  ಬುಲೆಟ್ ಪ್ರಕಾಶ್ ಪ್ರಾಣಕ್ಕೆ ಕುತ್ತು ತಂದಿತಾ ಆ ಒಂದು ಆಪರೇಷನ್ಬುಲೆಟ್ ಪ್ರಕಾಶ್ ಪ್ರಾಣಕ್ಕೆ ಕುತ್ತು ತಂದಿತಾ ಆ ಒಂದು ಆಪರೇಷನ್

  ಅಂದೂ ಕೂಡ ಬುಲೆಟ್ ಸೌಂಡ್

  ಅಂದೂ ಕೂಡ ಬುಲೆಟ್ ಸೌಂಡ್

  ಕೊಲಂಬಿಯಾ, ಫೋರ್ಟಿಸ್‌ನಂತಹ ದೊಡ್ಡ ಆಸ್ಪತ್ರೆಗಳಲ್ಲಿಯೇ ಚಿಕಿತ್ಸೆ ಕೊಡಿಸಿದ್ದೆವು. ನಮ್ಮ ಕೈಯಲ್ಲಿ ಆಗಿದ್ದನ್ನೆಲ್ಲ ಮಾಡಿದೆವು. ಗುರುಗಳು ಸಮಯ ನೀಡಿದ್ದು ಸಂಜೆ 4.45 ನಿಮಿಷಕ್ಕೆ. ಅದೇ ಸಮಯ ಅಂದು ಕೂಡ ಗಾಳಿ ಮಳೆ ಬುಲೆಟ್ ಸೌಂಡ್. ಹೋದ ದಿನವೂ ಬುಲೆಟ್ ಸೌಂಡ್ ಇತ್ತು ಎಂದರು.

  ಅವರು ನಮ್ಮ ಜತೆ ಇದ್ದಾರೆ ಎನಿಸುತ್ತಿದೆ

  ಅವರು ನಮ್ಮ ಜತೆ ಇದ್ದಾರೆ ಎನಿಸುತ್ತಿದೆ

  ಅಪ್ಪ ನಮ್ಮ ಜತೆ ಇಲ್ಲ ಎನಿಸುತ್ತಿಲ್ಲ. ಆಫೀಸಲ್ಲಿ ಖಾಲಿ ಕುರ್ಚಿ ಖಾಲಿ ಎನಿಸುತ್ತಿಲ್ಲ. ನಮ್ಮ ಪಕ್ಕದಲ್ಲೇ ಇದ್ದಾರೆ ಎನಿಸುತ್ತಿದೆ. ಅವರ ರೂಮ್ ಸ್ವಚ್ಛಗೊಳಿಸುವಾಗ ಎಲ್ಲವನ್ನೂ ತೆಗೆಯೋಣ ಎಂದರು. ನಾನು ರೂಮ್ ಖಾಲಿ ಮಾಡಬೇಡಿ ಎಲ್ಲವೂ ಹೇಗಿತ್ತೋ ಹಾಗೆಯೇ ಇರಲಿ. ಅವರ ಪರ್ಫ್ಯೂಮ್, ಗ್ಲಾಸ್ ಹಾಗೆಯೇ ಇರಲಿ ಎಂದೆ. ಅವರು ಮನೆಯಲ್ಲಿದ್ದಾಗ ಆಫೀಸ್ ಬಿಟ್ಟರೆ, ರೂಮಲ್ಲಿ ಮಾತ್ರ ಇರುತ್ತಿದ್ದರು. ಹಾಲಲ್ಲಿ ಕೂರುತ್ತಿರಲಿಲ್ಲ. 'ರಕ್ಷಕ್' ಎಂದು ಕೂಗಿದರೆ ಎರಡೇ ಸಕೆಂಡ್‌ಗೆ ಅಲ್ಲಿರುತ್ತಿದ್ದೆ. ಎಷ್ಟೊಂದು ಸಲ ಕರೆಯುತ್ತಿದ್ದರು.

  ಎಲ್ಲರೂ ಧೈರ್ಯ ತುಂಬುತ್ತಿದ್ದಾರೆ

  ಎಲ್ಲರೂ ಧೈರ್ಯ ತುಂಬುತ್ತಿದ್ದಾರೆ

  ದರ್ಶನ್ ಅವರು ನನ್ನ ಮುಂದೆಯೇ ಫೋನ್‌ನಲ್ಲಿ ಅಮ್ಮನ ಬಳಿ ಮಾತನಾಡಿದರು. ಮಗಳ ಮದುವೆ ನನ್ನ ಜವಾಬ್ದಾರಿ. ಬೇರೆ ಏನಾದರೂ ಸಹಾಯ ಬೇಕಾದರೆ ನನ್ನ ಬಳಿ ಬನ್ನಿ ಮಾಡುತ್ತೇನೆ ಎಂದರು. ಅವರ ಎಲ್ಲ ಒಡನಾಡಿಗಳಿಗೂ ಕೊನೆಯ ಕ್ಷಣದಲ್ಲಿ ನೋಡಲು ಆಗಿಲ್ಲ ಎಂಬ ಬೇಸರ ಇದೆ. ನನ್ನ ಜತೆ ಮಾತನಾಡಿದ ಅನೇಕರು ಕಣ್ಣೀರು ಹಾಕಿದರು. ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತೇನೆ. ವಿಜಿ ಅಂಕಲ್ (ದುನಿಯಾ ವಿಜಯ್), ಪ್ರೇಮ್ ಅಂಕಲ್ (ನೆನಪಿರಲಿ ಪ್ರೇಮ್) ಕೊನೆಯವರೆಗೂ ಜತೆಗಿದ್ದರು. ಅವರಿಗೆ ಕೈಮುಗಿಯುತ್ತೇನೆ. ಎಲ್ಲರೂ ಜತೆಗಿರುತ್ತೇವೆ ಎಂಬ ಧೈರ್ಯ ತುಂಬಿದ್ದಾರೆ.

  ಅಪ್ಪನ ಕನಸು ನನಸು ಮಾಡಬೇಕು

  ಅಪ್ಪನ ಕನಸು ನನಸು ಮಾಡಬೇಕು

  ನನ್ನ ಗುರಿ ಹೀರೋ ಆಗಬೇಕು ಎನ್ನುವುದು. ಅಪ್ಪನಿಗೂ ಇದ್ದ ಕನಸು ಅದು. ನನ್ನ ಕೊನೆಯ ಉಸಿರು ಬಿಡುವಾಗ ನಿನ್ನ ಕಟೌಟ್ ನೋಡಬೇಕು, ನಿನ್ನ ಅಕ್ಕನ ಮದುವೆ ನೋಡಬೇಕು ಎಂದಿದ್ದರು. ಅವರ ಕನಸನ್ನು ಈಡೇರಿಸಲು ನಾನು ಪ್ರಯತ್ನಿಸುತ್ತೇನೆ ಎಂದರು ರಕ್ಷಕ್.

  English summary
  Bullet Prakash's son Rakshak has revealed that, Arjun guruji has told him on March 19th he will live only for next 18 days from this date.
  Tuesday, April 14, 2020, 13:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X