Don't Miss!
- News
ಫೆಬ್ರವರಿ 3ರಂದು 303 ರೈಲುಗಳನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ- ಸಂಪೂರ್ಣ ಪಟ್ಟಿ ಇಲ್ಲಿದೆ
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ದಿಢೀರ್ ಇಳಿಕೆ; ಭಾರೀ ಉಳಿತಾಯ ಪಕ್ಕಾ!
- Sports
2015ರ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಜೊತೆಗಿನ ಜಗಳದ ಬಗ್ಗೆ ಆಘಾತಕಾರಿ ವಿಷಯ ಬಿಚ್ಚಿಟ್ಟ ಪಾಕ್ ಮಾಜಿ ವೇಗಿ
- Finance
ಕರ್ನಾಟಕದಲ್ಲಿ ಇ-ಬಸ್ಗಳ ಮಾರಾಟವೆಷ್ಟು? ಭಾರತದಲ್ಲಿ ಹೆಚ್ಚಿದ ಬೇಡಿಕೆ ಪ್ರಮಾಣವೆಷ್ಟು? ತಿಳಿಯಿರಿ
- Lifestyle
Horoscope Today 3 Feb 2023: ಶುಕ್ರವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Automobiles
ಭಾರತದಲ್ಲಿ ಮಾರುತಿ ಜಿಮ್ನಿ ಎಸ್ಯುವಿಗೆ ಭಾರೀ ಡಿಮ್ಯಾಂಡ್: ಪ್ರತಿಸ್ಪರ್ಧಿಗಳಿಗೆ ಹೆಚ್ಚಿದ ಆತಂಕ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಯಾರು ನೆಮ್ಮದಿಯಾಗಿ ಮಲಗುತ್ತಿದ್ದಾರೋ ಅವರ ನಿದ್ದೆ ಕೆಡಿಸಿದ್ದೀನಿ" – ಚಾಲೆಂಜಿಂಗ್ ಸ್ಟಾರ್ ದರ್ಶನ್!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು ನೇರಾ ನೇರ. ಮನಸ್ಸಿಗೆ ಅನಿಸಿದ್ದನ್ನು ಫಿಲ್ಟರ್ ಇಲ್ಲದೆ ಮಾತಾಡುತ್ತಾರೆ. ಇದು ಇವತ್ತಿನ ದಾಟಿಯಲ್ಲ. ಹಲವು ದಿನಗಳಿಂದ ದರ್ಶನ್ ನಡೆ,ನುಡಿ ಎಲ್ಲವೂ ಹೀಗೆ ಇರುತ್ತೆ.
ಕೆಲವೊಮ್ಮೆ ದರ್ಶನ್ ಇಂತಹ ನೇರ ನುಡಿಗಳಿಂದಲೇ ಪೇಚಿಗೆ ಸಿಲುಕಿದ್ದೂ ಇದೆ. ಬೇಡ ಅಂದರೂ ವಿವಾದಗಳು ಇವರನ್ನು ಹಿಂಬಾಲಿಸಿಕೊಂಡು ಬರುತ್ತವೆ. ಕೆಲವು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ಸುದ್ದಿಯಲ್ಲಿದ್ದಾರೆ.
ಸಂಕ್ರಾಂತಿ
ಸಂಭ್ರಮದಲ್ಲಿ
ಮುಳುಗೆದ್ದ
ಯಶ್,
ದರ್ಶನ್,
ರಕ್ಷಿತಾ
ಪ್ರೇಮ್!
ಹೊಸಪೇಟೆಯಲ್ಲಿ ಚಪ್ಪಲಿ ಎಸೆದ ಪ್ರಕರಣದ ಬಳಿಕ ದರ್ಶನ್ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತಾಡಿದ್ದಾರೆ. ನಿರೂಪಕ ಆರ್ ಜೆ ಮಯೂರ್ ಸಂದರ್ಶನದಲ್ಲಿ ದರ್ಶನ್ ಮುಕ್ತವಾಗಿ ಕೆಲವು ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಯಾರು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದರೋ ಅವರ ನಿದ್ದೆ ಕೆಡಿಸಿದ್ದೀನಿ ಅಂದಿದ್ದಾರೆ. ಈ ಸಂದರ್ಶನದ ಸಾರಾಂಶ ಇಲ್ಲಿದೆ.

'ದರ್ಶನ್‌ನಿಂದ ಅವರ ನಿದ್ದೆ ಕೆಡುತ್ತಿದೆ'
"ಒಂದು ಖುಷಿ ಪಡುತ್ತೇನೆ. ನೀವೆಲ್ಲಾ ಟಾರ್ಗೆಟ್ ಅನ್ನುತ್ತಿದ್ದೀರಲ್ಲ.. ಯಾರು ಯಾರು ನೆಮ್ಮದಿಯಾಗಿ ಬದುಕುತ್ತಿದ್ದಾರಲ್ಲ, ಅವರ ನಿದ್ದೆ ಕೆಡಿಸಿದ್ದೀನಿ ಅನ್ನೋದೊಂದು ನನಗೆ ಅಭ್ಯಾಸ. ನನ್ನ ಬಗ್ಗೆ ನನಗೆ ಹೆಮ್ಮೆಯಿದೆ. ದರ್ಶನ್‌ನಿಂದ ಅವರ ನಿದ್ದೆ ಕೆಡುತ್ತಿದೆಯಾ? ಮಾಡಿಕೊಳ್ಳಿ. ನಾನಂತೂ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದೇನೆ." ಎಂದು ದರ್ಶನ್ ಹೇಳಿದ್ದಾರೆ.

'ನನ್ನ ದುಡ್ಡಿಂದ ನಾನು ಹೀರೊ ಆಗಿಲ್ಲ'
"ಪ್ರೊಡಕ್ಷನ್ ಹೌಸ್‌ನಿಂದ ಸಿನಿಮಾ ಮಾಡುತ್ತಿರೋದು ದೊಡ್ಡ ವಿಷಯವೇನಲ್ಲ. ಆಮೇಲೆ ನನ್ನ ಪ್ರೊಡಕ್ಷನ್ ಹೌಸ್‌ನಲ್ಲಿ ನಾನೇ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲ. ನಾನು ಇನ್ನೊಬ್ಬರ ದುಡ್ಡಿನಿಂದ ತಾನೇ ಹೀರೊ ಆಗಿರೋದು. ನನ್ನ ದುಡ್ಡಿಂದ ನಾನು ಹೀರೊ ಆಗಿಲ್ಲ. ಇಲ್ಲ ನನ್ನ ಅಪ್ಪನ ಮನೆಯಿಂದ ತದು ಹಾಕಿಲ್ಲ.ಬೇರೆ ನಿರ್ಮಾಪಕರಿಗೂ ನಾನು ಡೇಟ್ಸ್ ಕೊಡಬೇಕು. ಅವರೂ ಕೆಲಸ ಮಾಡಬೇಕು. ನಮ್ಮ ಪ್ರೊಡಕ್ಷನ್ ಹೌಸ್‌ನಲ್ಲಿ ಇವತ್ತಿಲ್ಲ ಇನ್ನೊಂದು ದಿನ ಮಾಡಿಕೊಳ್ಳಬಹುದು."

ಎರಡು ಕೈಯಿಂದ ತಾನೇ ಚಪ್ಪಾಳೆ?
ಫ್ಯಾನ್ಸ್ ವಾರ್ ಬಗ್ಗೆ ಕೇಳಿದ ಪ್ರಶ್ನೆಗೆ ದರ್ಶನ್ ಮನಬಿಚ್ಚಿ ಮಾತಾಡಿದ್ದಾರೆ. "ಎರಡು ಕೈಯಿಂದ ತಾನೇ ಚಪ್ಪಾಳೆ. ಒಬ್ಬರು ಮಾತ್ರ ಆಟ ಆಡೋದಿಲ್ಲ ಅಲ್ವಾ? ನೀವು ಸುಮ್ಮನಿದ್ದರೆ, ಅವರೂ ಸುಮ್ಮನಿರುತ್ತಾರೆ. ಒಬ್ಬರಿಗೆ ಒಬ್ಬರು ಬೇಕೇ ಬೇಕು. ಇದನ್ನು ಮಾಡಬೇಕು. ಮಾಡಬಾರದು ಅಂತ ಹೇಳಲ್ಲ. ಅಲ್ಲೇ ಕಾಣಿಸುತ್ತಿದೆ ಅದು ಏನು ಅಂತ. ಅದು ಹುಚ್ಚು ಅಭಿಮಾನ. ನಮ್ಮವನಿಗೆ ಹೀಗಂದ ಅಂದರೆ, ಅವರೆಇಗೂ ಹೀಗಂದೇ ಅನ್ನುತ್ತೇವೆ. ಇಲ್ಲಿವರೆಗೂ ನಾನು ತೆಡೆಯುತ್ತಿದ್ದೆ. ಆದರೆ ಮೊನ್ನೆಯಿಂದ ನಾನು ಸುಮ್ಮನಾದೆ. ಮಾತಾಡುವುದಕ್ಕೆ ಹೋದಾಹ ನನಗೆ ಬೈಗುಳ ಬಂತು. ಸುಮ್ಮನೆ ಇದ್ದುಬಿಡಣ್ಣ. ನಾವು ನೋಡಿಕೊಳ್ಳುತ್ತೇನೆ ಅಂದ್ರು." ಎಂದು ಅಭಿಮಾನಿಗಳ ಬಗ್ಗೆ ಮಾತಾಡಿದ್ದಾರೆ.

'ತಂಗಳು ತಿಂದುಕೊಂಡು ಇರುತ್ತಿದ್ದೆ'
"ನಾನು ತುಂಬಾ ಸರ್ವೆ ಸಾಧಾರಣ ಮನುಷ್ಯ. ಪ್ರತಿದಿನ ವರ್ಕ್‌ಔಟ್ ಮಾಡುತ್ತೇನೆ. ನಿನ್ನೆ ಮೊನ್ನೆಯದು ಹಳಕು-ಪಳುಕು ತಂಗಳು ತಿಂದುಕೊಂಡು ಇರುತ್ತೇನೆ. ನನಗೆ ಫ್ರೆಶ್ ಬೇಕು ಅಂತಾನೇ ಇಲ್ಲ. ನಿನ್ನೆ ಏನೋ ತಿಂದಿರುತ್ತೇನೆ. ಅದನ್ನೇ ಎತ್ತಿಟ್ಟಿರು ಬೆಳಗ್ಗೆನೂ ತಿನ್ನುತ್ತೇನೆ ಎನ್ನುತ್ತೇನೆ." ಎಂದು ತಾನೆಷ್ಟು ಸಿಂಪಲ್ ಅನ್ನೋದನ್ನು ಈ ಸಂದರ್ಶನದಲ್ಲಿ ಹೇಳಿದ್ದಾರೆ.