For Quick Alerts
  ALLOW NOTIFICATIONS  
  For Daily Alerts

  ಕ್ರೈಂ ಥ್ರಿಲ್ಲರ್ ಕಥೆಗೆ ಜೈ ಎಂದ ಚಂದನ್ ಶೆಟ್ಟಿ: ವಿಜಯ ದಶಮಿಗೆ ಮುಹೂರ್ತ!

  |

  ಚಂದನ್ ಶೆಟ್ಟಿ ಹಾಡುಗಳನ್ನು ಕೇಳಿ ಎಂಜಾಯ್ ಮಾಡಿದ್ದೀರಿ. ಇನ್ಮುಂದೆ ಇದೇ ಚಂದನ್ ಶೆಟ್ಟಿ ಹೀರೊ ಆಗಿಯೂ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದ ಚಿತ್ರೀಕರಿಣದಲ್ಲಿ ಭಾಗಿಯಾಗಿದ್ದಾರೆ. ಆ ಸಿನಿಮಾ ಬಿಡುಗಡೆಯಾಗಿಲ್ಲ. ಅಷ್ಟರಲ್ಲೇ ಮತ್ತೊಂದು ಸಿನಿಮಾ ಅವರನ್ನು ಹುಡುಕಿಕೊಂಡು ಬಂದಿದೆ.

  ಗಾಯನ ಹಾಗೂ ಸಂಗೀತ ನಿರ್ದೇಶನದ ಜೊತೆಗೆ ಚಂದನ್ ಶೆಟ್ಟಿ ನಟನೆಗೂ ಕೈ ಹಾಕಿದ್ದಾರೆ. ಹೀರೊ ಆಗಿ ಕನ್ನಡದ ಗಾಯಕನಿಗೆ ಯಶಸ್ಸು ಸಿಗುತ್ತಾ? ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಆದರೆ, ಅಷ್ಟರೊಳಗೆ ಚಂದನ್ ಶೆಟ್ಟಿಗೆ ಮತ್ತೊಂದು ಅವಕಾಶ ಸಿಕ್ಕಿದೆ.

  ಚಂದನ್ ಶೆಟ್ಟಿ ಹೀರೊ ಆಗಲಿರುವ ಹೊಸ ಸಿನಿಮಾ ವಿಜಯ ದಶಮಿ ಶುಭದಿನದಂದು ಆರಂಭವಾಗಲಿದೆ. ಈಗಾಗಲೇ ಸಿನಿಮಾ ಸೆಟ್ಟೇರಿಸಲು ಬೇಕಿರೋ ಸಕಲ ಸಿದ್ಧತೆಗಳನ್ನೂ ಚಿತ್ರತಂಡ ಮಾಡಿಕೊಂಡಿದೆ. ಮೊದಲ ಸಿನಿಮಾಗಿಂತ ಎರಡನೇ ಸಿನಿಮಾ ವಿಭಿನ್ನವಾಗಿರಲಿದೆ. ‌

  ಕನ್ನಡ ಚಿತ್ರರಂಗದಲ್ಲಿ ಆಡಿಯೋ ರಿಲೀಸ್, ಪ್ರೀ ರಿಲೀಸ್ ಇವೆಂಟ್ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಿಕೊಡುವ ನವರಸನ್ ಈ ಸಿನಿಮಾದ ನಿರ್ಮಾಪಕ. ಮೈ ಮೂವೀ ಬಜಾರ್ ಹಾಗೂ ಶ್ರೇಯಸ್ ಮೀಡಿಯಾದ ಮಾಲೀಕ ನವರಸನ್ ಚಂದನ್ ಶೆಟ್ಟಿ ಸಿನಿಮಾಗೆ ಬಂಡವಾಳವನ್ನು ಹೂಡುತ್ತಿದ್ದಾರೆ. ಈ ಹಿಂದೆ 'ದಮಯಂತಿ' ಸೇರಿದಂತೆ ಸುಮಾರು ನಾಲ್ಕು ಚಿತ್ರಗಳನ್ನು ನವರಸನ್ ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಬೇರೆ ಬೇರೆ ಸಿನಿಮಾಗಳಿಗೆ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕೆಲಸ ಮಾಡುತ್ತಿದ್ದಾರೆ.

  Chandan Shetty New Kannada Movie Will Start On Dasara Festival

  ವಿಜಯ ದಶಮಿಗೆ ಸೆಟ್ಟೇರುತ್ತಿರುವ ಈ ಸಿನಿಮಾ ಕ್ರೈಮ್ ಥ್ರಿಲ್ಲರ್ ಸಿನಿಮಾ. ವಿಭಿನ್ನ ಸ್ಟೋರಿಯನ್ನು ಕಿರಣ್ ಕುಮಾರ್ ನಿರ್ದೇಶಿಸಲಿದ್ದಾರೆ. ಈ ಸಿನಿಮಾ ಕಿರಣ್‌ಗೆ ಚೊಚ್ಚಲ ಚಿತ್ರ. ಸ್ವತ: ಚಂದನ್ ಶೆಟ್ಟಿ ತಮ್ಮ ಸಿನಿಮಾಗೆ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಗ್ರಾಹಕರಾಗಿದ್ದು, ತಬಲ ನಾಣಿ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಹಲವು ಪಾತ್ರಗಳ ಆಯ್ಕೆ ಆಗಬೇಕಿದೆ.

  ವಿಜಯ ದಶಮಿಗೆ ಸಿನಿಮಾ ಮುಹೂರ್ತ ಕಾಣುತ್ತಿದ್ದಂತೆ ಶೂಟಿಂಗ್‌ಗೆ ಚಿತ್ರತಂಡ ರೆಡಿಯಾಗಲಿದೆ. ಅಕ್ಟೋಬರ್ 10ರಿಂದ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. ಅಷ್ಟರೊಳಗೆ ಸಿನಿಮಾದ ಇನ್ನುಳಿದ ಪ್ರಮುಖ ಪಾತ್ರಗಳ ಆಯ್ಕೆ ನಡೆಯಲಿದೆ.

  English summary
  Chandan Shetty New Kannada Movie Will Start On Dasara Festival, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X