For Quick Alerts
  ALLOW NOTIFICATIONS  
  For Daily Alerts

  'ರೇಮೊ' ಹೀರೊಗೆ ಸ್ಯಾಂಡಲ್‌ವುಡ್‌ ನಾಲ್ವರು ನಿರ್ದೇಶಕರಿಂದ ಆಫರ್!

  |

  ಪವನ್ ಒಡೆಯರ್ ನಿರ್ದೇಶಿಸಿದ ಮ್ಯೂಸಿಕಲ್ ಸಿನಿಮಾ 'ರೇಮೊ' ಇದೇ ವಾರ ಬಿಡುಗಡೆಯಾಗುತ್ತಿದೆ. ಹೊಸ ಪ್ರತಿಭೆ ಇಶಾನ್ ಈ ಸಿನಿಮಾ ಮೂಲಕ ರಾಕ್ ಸ್ಟಾರ್ ಆಗಿ ಥಿಯೇಟರ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

  ಇತ್ತೀಚೆಗಷ್ಟೆ 'ರೇಮೊ' ಸಿನಿಮಾ ಬಿಡುಗಡೆಗೂ ಮುನ್ನವೇ ಚಿತ್ರತಂಡ ಪ್ರಿ-ರಿಲೀಸ್ ಇವೆಂಟ್ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ರಚಿಚಂದ್ರನ್ ಸೇರಿದಂತೆ ಡಿಕೆ ಶಿವಕುಮಾರ್ ಅಂತಹ ಗಣ್ಯರು ಸೇರಿದ್ದರು. ಅಂದ್ಹಾಗೆ ಸಿನಿಮಾ ಇದೇ ನವೆಂಬರ್ 25ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದ್ದು, ಭರ್ಜರಿ ಪ್ರಚಾರ ಮಾಡಲಾಗಿದೆ.

  ಈ ಮಧ್ಯೆನೇ 'ರೇಮೊ' ಸಿನಿಮಾ ರಿಲೀಸ್‌ಗೂ ಮುನ್ನವೇ ಇಶಾನ್‌ಗೆ ಸ್ಯಾಂಡಲ್‌ವುಡ್‌ನಲ್ಲಿ ನಿರ್ದೇಶಕರಿಂದ ಭರ್ಜರಿ ಆಫರ್ ಸಿಕ್ಕಿದೆ. ಕನ್ನಡ ಚಿತ್ರರಂಗ ನಾಲ್ವರು ನಿರ್ದೇಶಕರು ಇಶಾನ್‌ಗೆ ಸಿನಿಮಾ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗುತ್ತಿದೆ.

  ಪವನ್ ಒಡೆಯರ್ ಬಳಿಕ ಈಗಾಗಲೇ 'ಜೇಮ್ಸ್' ಖ್ಯಾತಿಯ ಚೇತನ್ ಕುಮಾರ್ ಜೊತೆಗೆ ಇಶಾನ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಅದರ ಜೊತೆಗೆ ಶಿವಣ್ಣನ 125ನೇ ಸಿನಿಮಾ 'ವೇದ' ನಿರ್ದೇಶಿಸಿರುವ ಎ ಹರ್ಷ ಜೊತೆಗೂ ಸಿನಿಮಾ ಮಾಡುತ್ತಿದ್ದಾರೆ. ಹಾಗೇ ಅನಿಲ್ ಕುಮಾರ್ ಹಾಗೂ ಯುವ ರಾಜ್ ಕುಮಾರ್ ಜೊತೆ ಸಿನಿಮಾ ಮಾಡಬೇಕಿದ್ದ ಪುನೀತ್ ರುದ್ರನಾಗ್ ಜೊತೆಗೂ ಇಶಾನ್ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಎಲ್ಲಾ ನಿರ್ದೇಶಕರು ಇಶಾನ್ ಜೊತೆಗೆ ಈಗಾಗಲೇ ಮಾತುಕತೆ ನಡೆಸಿದ್ದು,ಶೀಘ್ರದಲ್ಲಿಯೇ ಡೇಟ್ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿದೆ.

  'ರೆಮೋ' ಬಾಲಿವುಡ್ ಸಿನಿಮಾ ಫೀಲ್ ಕೊಡುತ್ತಿದೆ. ಈ ಸಿನಿಮಾದ ಹಾಡು, ಟೀಸರ್, ಟ್ರೈಲರ್ ಎಲ್ಲವಕ್ಕೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಬಾಲಿವುಡ್ ಹೀರೊಗಳಂತೆ ಕಾಣುವ ಇಶಾನ್ ಲುಕ್, ಪರ್ಸನಾಲಿಟಿ, ಸ್ಕ್ರೀನ್ ಅಪಿಯರೆನ್ಸ್ ಎಲ್ಲವೂ ಸ್ಯಾಂಡಲ್‌ವುಡ್ ನಿರ್ದೇಶಕರಿಗೆ ಇಷ್ಟ ಆಗಿದೆ. ಈ ಕಾರಣಕ್ಕೆ ನಾಲ್ವವರು ನಿರ್ದೇಶಕರು ಒಬ್ಬರಂತೆ ಒಬ್ಬರು ಇಶಾನ್‌ಗೆ ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ.

  Chethan, Harsha, Anil And Puneeth Rudranag Will Be Direction Raymo Star Ishaan

  ಸದ್ಯಕ್ಕೀಗ 'ರೇಮೊ' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರೋ ಇಶಾನ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇಶಾನ್ ಜೊತೆಗೆ ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಪ್ರೇಕ್ಷಕರನ್ನು ಅದ್ಯಾವ ರೀತಿ ಮೋಡಿ ಮಾಡುತ್ತಿದೆ ಅನ್ನೋದು ಇನ್ನು ಕೆಲವು ದಿನಗಳಲ್ಲಿ ಗೊತ್ತಾಗಲಿದೆ.

  English summary
  Chethan, Harsha, Anil And Puneeth Rudranag Will Be Direction Raymo Star Ishaan, Know More.
  Monday, November 21, 2022, 23:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X