For Quick Alerts
  ALLOW NOTIFICATIONS  
  For Daily Alerts

  ರವಿಚಂದ್ರನ್ 'ಗೌರಿ' ಸಿನಿಮಾದಲ್ಲಿ ಇರೋದೇ ಮೂರು ಪಾತ್ರ: ಇದೊಂದು ಕ್ರೇಜಿ ಪಿಕ್ಚರ್

  |

  ಕ್ರೇಜಿಸ್ಟಾರ್ ರವಿಚಂದ್ರನ್ ಹೊಸ ಸಿನಿಮಾಗಳನ್ನು ಹುಡುಕಿಕೊಂಡು ಹೊರಟಿದ್ದಾರೆ. 2023ರಲ್ಲಿ ಪ್ರೇಕ್ಷಕರ ಹೊಸ ರೀತಿಯ ಸಿನಿಮಾ ನೀಡಲೇಬೇಕು ಅಂತ ಪಣ ತೊಟ್ಟು ನಿಂತಿರೋ ಹಾಗಿದೆ. ಈ ಕಾರಣಕ್ಕೆ ಕ್ರೇಜಿಸ್ಟಾರ್ ಹೊಸ ಸಿನಿಮಾವೊಂದು ಇಂದು (ಡಿಸೆಂಬರ್ 9) ಸೆಟ್ಟೇರಿದೆ.

  ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿದ್ರೆ, ಎನ್.ಎಸ್.ರಾಜಕುಮಾರ್ ಈ ಹೊಸ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಂದ್ಹಾಗೆ ಈ ಹೊಸ ಸಿನಿಮಾದ ಹೆಸರು 'ಗೌರಿ'. ಈ ಸಿನಿಮಾ ಮುಹೂರ್ತ ಇತ್ತೀಚಿಗೆ ನೆರವೇರಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ 'ಗೌರಿ' ಸಿನಿಮಾದ ಮೊದಲ ಸನ್ನಿವೇಶಕ್ಕೆ ಕ್ಲ್ಯಾಪ್ ಮಾಡಿ ಶುಭ ಕೋರಿದ್ದಾರೆ. ಅಣ್ಣಾವ್ರ ಜೊತೆ ಮೂವತ್ತಕ್ಕೂ ಅಧಿಕ ವರ್ಷಗಳ ಕಾಲ ಸಹಾಯಕರಾಗಿ ಕಾರ್ಯ ನಿರ್ವಹಿಸಿರೋ ಚನ್ನ ಈ ಸಿನಿಮಾಗೆ ಕ್ಯಾಮೆರಾ ಚಾಲನೆ ಮಾಡಿದ್ರು.

  'ಇಡೀ ಸಿನಿಮಾದಲ್ಲಿಸ ಇರೋದೇ ಮೂರು ಪಾತ್ರ'

  ಸ್ಯಾಂಡಲ್‌ವುಡ್‌ಗೆ ಕಂಟೆಂಟ್ ಇರುವ ಸಿನಿಮಾ ಕೊಡಬೇಕು ಅನ್ನೋದು ಗೊತ್ತಾಗಿ ಹೋಗಿದೆ. ಅದರಲ್ಲೂ ಈ ವರ್ಷ ಕನ್ನಡ ಚಿತ್ರರಂಗದ ಅದ್ಭುತ ಸಾಧನೆಗಳನ್ನು ಮಾಡಿದೆ. ಪ್ಯಾನ್ ಇಂಡಿಯಾ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟಕ್ಕೆ ಸಾಧನೆ ಮಾಡಿವೆ. ಹೀಗಾಗಿ ವಿಭಿನ್ನ ಕಥೆಯುಳ್ಳ ಸಿನಿಮಾಗಳನ್ನು ತೆರೆಮೇಲೆ ತರುವುದಕ್ಕೆ ನಿರ್ಮಾಪಕ ರಾಜ್‌ಕುಮಾರ್ ನಿರ್ಧರಿಸಿದ್ದಾರೆ.

  ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರುವ 'ಗೌರಿ' ಕೂಡ ವಿಭಿನ್ನ ಕಥೆಯ ಸಿನಿಮಾ. ಇಡೀ ಸಿನಿಮಾ ಪೂರ್ತಿ ಕೇವಲ ಮೂರೇ ಪಾತ್ರಗಳಿರುತ್ತದೆ. ಈ ಮೂರು ಪಾತ್ರಗಳೊಂದಿಗೆ ಕೆಲವು ಪ್ರಾಣಿಗಳನ್ನು ಸಹ ಸಿನಿಮಾದಲ್ಲಿ ಬಳಸಿಕೊಳ್ಳುತ್ತಿರೋದಾಗಿ ನಿರ್ದೇಶಕರು ಹೇಳಿದ್ದಾರೆ. ದಾಂಡೇಲಿಯಲ್ಲಿಯೇ 'ಗೌರಿ' ಸಿನಿಮಾದ ಬಹುಭಾಗದ ಚಿತ್ರೀಕರಣ ನಡೆಯಲಿದೆ. "ಹೊಸವರ್ಷಕ್ಕೆ ಹೊಸತರಹದ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಇನ್ನು ರಾಜಕುಮಾರ್ ಎಂಬ ಹೆಸರು ಸದಾ ನನ್ನ ಜೊತೆ ಇರುತ್ತದೆ ಎಂಬುದಕ್ಕೆ ಈ ಚಿತ್ರದ ನಿರ್ಮಾಪಕ ರಾಜಕುಮಾರ್ ಅವರೇ ಸಾಕ್ಷಿ" ಎಂದು ರವಿಚಂದ್ರನ್ ಹರ್ಷ ವ್ಯಕ್ತಪಡಿಸಿದ್ದಾರೆ.

  ಮುಂಬೈ ಬೆಡಗಿ ಬರ್ಕಾ ಬಷ್ಟ್ ಸ್ಯಾಂಡಲ್‌ವುಡ್ ಎಂಟ್ರಿ

  ಸಿನಿಮಾದಲ್ಲಿರುವ ಮೂರು ಪಾತ್ರಗಳಲ್ಲಿ ನಾಯಕಿ ಪಾತ್ರ ಕೂಡ ಒಂದು ಬರ್ಕಾ ಬಿಷ್ಟ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. "ನನಗೆ ಕನ್ನಡದಲ್ಲಿ‌ ಇದು ಮೊದಲನೆಯ ಚಿತ್ರ. ಅದರಲ್ಲೂ ದಕ್ಷಿಣ ಭಾರತದಲ್ಲೇ ಮೊದಲು ಎನ್ನಬಹುದು. ರವಿಚಂದ್ರನ್ ಸರ್ ಜೊತೆ ನಟಿಸುತ್ತಿರುವುದು ಸಂತಸ ತಂದಿದೆ" ಎನ್ನುತ್ತಾರೆ ಬರ್ಕಾ ಬಿಷ್ಟ್ ಖುಷಿ ವ್ಯಕ್ತಪಡಿಸಿದ್ದಾರೆ.

  Crazy Star Ravichandran GOwri Movie Launched By Shivarajkumar In Bengaluru

  ಹಾಗೇ ನಿರ್ದೇಶಕ ಅನೀಸ್ ಅವರಿಗೂ ಇದು ಮೊದಲ ಸಿನಿಮಾ. ವಿಶಿಷ್ಟ ಸಿನಿಮಾವನ್ನು ತೆರೆಮೇಲೆ ತರುತ್ತಿರುವ ಆತ್ಮವಿಶ್ವಾಸದಲ್ಲಿ ನಿರ್ದೇಶಕರಿದ್ದಾರೆ. "ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಖ್ಯಾತ ನಟರಾದ ರವಿಚಂದ್ರನ್ ನನ್ನ ಮೊದಲ ನಿರ್ದೇಶನದ ಚಿತ್ರದಲ್ಲಿ ನಾಯಕರಾಗಿರುವುದು ಖುಷಿ ಕೊಟ್ಟಿದೆ. ಮುಂಬೈನ ಬರ್ಕಾ ಬಿಷ್ಟ್ ಈ ಚಿತ್ರದ ನಾಯಕಿ. ಗ್ರೀಷ್ಮಾ ಎಂಬ ಬಾಲ ಕಲಾವಿದೆ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒಟ್ಟು ಮೂರೇ ಪಾತ್ರಗಳಿವೆ. ಇದೊಂದು ಕೌಟುಂಬಿಕ ಚಿತ್ರ. ಈ ಚಿತ್ರದಲ್ಲಿ ಗಂಡ ಮತ್ತು ಹೆಂಡತಿಯ ನಡುವೆ ಯಾಕೆ ಸಮಸ್ಯೆಗಳು ಬರುತ್ತವೆ ಎಂಬುದನ್ನು ತೋರಿಸುತ್ತಿದ್ದೇವೆ." ಎಂದು ನಿರ್ದೇಶಕರು ಹೇಳಿದ್ದಾರೆ.

  ಗಂಡ ಹೆಂಡ್ತಿ ನಡುವಿನ ಪ್ರೀತಿಗೆ ಸಮಸ್ಯೆ ಎದುರಾಗುವುದು ಯಾಕೆ? ಅವರಿ ಈ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳುತ್ತಾರೆ ಎಂಬುವುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. 'ಗೌರಿ' ಸಿನಿಮಾಗೆ 'ಶಂಕರ B/H' ಸಬ್ ಟೈಟಲ್ ಕೂಡ ಇದ್ದು, ಕುತೂಹಲ ಮೂಡಿಸಿದೆ. ಅಲ್ಲದೆ ಇದೊಂದು ಕೌಟುಂಬಿಕ ಚಿತ್ರವಾದರೂ, ಕಥೆ ಕಾಡಿನಲ್ಲಿ ನಡೆಯುತ್ತದೆ. ಹೀಗಾಗಿ ದಾಂಡೇಲಿ, ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ತೀರ್ಮಾನಿಸಿದೆ.

  English summary
  Crazy Star Ravichandran Gowri Movie Launched By Shivarajkumar In Bengaluru, Know more.
  Friday, December 9, 2022, 23:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X