For Quick Alerts
  ALLOW NOTIFICATIONS  
  For Daily Alerts

  ಮತ್ತೆ 'ಲವ್ ಬರ್ಡ್ಸ್'ಗಳಾದ ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್

  |

  ಎಲ್ಲಾ ಚಿತ್ರರಂಗದಲ್ಲೂ ಹಿಟ್ ಪೇರ್ ಅಂತ ಇದ್ದೇ ಇರುತ್ತೆ. ಆ ಜೋಡಿ ತೆರೆಮೇಲೆ ಬಂದರೆ ಸಾಕು. ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡುತ್ತಾರೆ. ಹಾಗೇ ಸಿನಿಮಾ ಬ್ಲಾಕ್‌ ಬಸ್ಟರ್ ಹಿಟ್ ಆಗೋದು ಗ್ಯಾರಂಟಿ.

  ಕನ್ನಡ ಇಂತಹ ಹಿಟ್ ಜೋಡಿಗಳಿವೆ. ಆ ಪೇರ್‌ಗಳಲ್ಲಿ ಇತ್ತೀಚೆಗೆ ಗಮನ ಸೆಳೆಯುತ್ತಿರೋದು ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ. 'ಲವ್ ಮಾಕ್ಟೇಲ್' ಅನ್ನೋ ಒಂದು ಸಿನಿಮಾ ಇಬ್ಬರ ಬದುಕನ್ನೇ ಬದಲಿಸಿತ್ತು. ಆ ಬಳಿಕ ಬಂದ 'ಲವ್ ಮಾಕ್ಟೇಲ್ 2' ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಚಿಂದಿ ಉಡಾಯಿಸಿತ್ತು. ಈಗ ಇದೇ ಮತ್ತೆ ತೆರೆಮೇಲೆ ಬರೋದಕ್ಕೆ ಸಜ್ಜಾಗಿದೆ.

  'ಉಡುಂಬಾ’ ನಿರ್ದೇಶಕನಿಂದ ಹೊಸ ಸಿನಿಮಾ, ಕೈ ಜೋಡಿಸಿದ ಡಾರ್ಲಿಂಗ್ ಕೃಷ್ಣ'ಉಡುಂಬಾ’ ನಿರ್ದೇಶಕನಿಂದ ಹೊಸ ಸಿನಿಮಾ, ಕೈ ಜೋಡಿಸಿದ ಡಾರ್ಲಿಂಗ್ ಕೃಷ್ಣ

  ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದೆ. ಅದುವೇ 'ಲವ್ ಬರ್ಡ್ಸ್'. ಈ ಸಿನಿಮಾದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಸಿನಿಪ್ರಿಯರಿಗೆ ಕಿಕ್ ಕೊಡುತ್ತಿದೆ.

  ನಟ-ನಿರ್ಮಾಪಕ ಕಡ್ಡಿಪುಡಿ ಚಂದ್ರು ಈ ಸಿನಿಮಾಗೆ ಹಣ ಹಾಕಿದ್ದರೆ, ಅತ್ತ ಪಿ.ಸಿ.ಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ. ಡಾರ್ಲಿಂಗ್ ಕೃಷ್ಣ - ಮಿಲನಾ ನಾಗರಾಜ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ರಿಲೀಸ್ ಆಗಿರೋ ಟೀಸರ್‌ನಲ್ಲಿ ನಾಯಕ, ನಾಯಕಿಯ ಪಾತ್ರವನ್ನು ಪರಿಚಯಿಸಿದ್ದು, ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್ ಸಿನಿಮಾ 'ಲವ್ ಬರ್ಡ್ಸ್'ಗೆ ವಿಜಯ ರಾಘವೇಂದ್ರ ಹಾಗೂ ಅಜಯ್ ರಾವ್ ಸಾಥ್ ನೀಡಿದ್ದಾರೆ. 'ಲವ್ ಬರ್ಡ್ಸ್' ಸಿನಿಮಾದ ಟೀಸರ್ ರಿಲೀಸ್ ಮಾಡಿದ್ದು, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

  "ಲಾಕ್‌ಡೌನ್ ಸಮಯದಲ್ಲಿ ಈ ಕಥೆಯನ್ನು ಬರೆದಿದ್ದೇನೆ. ಮದುವೆಯಾದ ನನ್ನ ಸ್ನೇಹಿತರು ಹಂಚಿಕೊಳ್ಳುತ್ತಿದ್ದ ಕೆಲ ವಿಷಯಗಳೇ ಈ ಕಥೆಗೆ ಸ್ಪೂರ್ತಿ. ಕಥೆ ಬರೆಯಬೇಕಾದರೆ ಕೃಷ್ಣ - ಮಿಲನ ನಾಗರಾಜ್ ಅವರೆ ನಾಯಕ-ನಾಯಕಿ ಅಂತ ನಿರ್ಧರಿಸಿದ್ದೆ." ಎಂದು 'ಲವ್ ಬರ್ಡ್ಸ್' ಸಿನಿಮಾ ಬಗ್ಗೆ ನಿರ್ದೇಶಕ ಪಿ ಸಿ ಶೇಖರ್ ಮಾಹಿತಿ ನೀಡಿದ್ದಾರೆ.

  Darling Krishna And Milana Nagaraj Starrer Love Birds Movie Teaser Released

  "ನಾನು ಹಾಗೂ ಮಿಲನಾ 'ಲವ್ ಮಾಕ್ಟೇಲ್' ಸಿನಿಮಾ ಬಳಿಕ ಮಾಡಿದ ಸಿನಿಮಾವಿದು. ಅದರಲ್ಲಿ ಆದಿ ಹಾಗೂ ನಿಧಿ ಪಾತ್ರದಲ್ಲಿ ನೋಡಿದ್ರಿ. ಈ ಸಿನಿಮಾದಲ್ಲಿ ದೀಪಕ್ ಹಾಗೂ ಪೂಜಾ ಪಾತ್ರದಲ್ಲಿ ಅಭಿನಯಿಸಿದ್ದೇವೆ. ಆಕ್ಷನ್ ಸನ್ನಿವೇಶಗಳೂ ಇದ್ದು ಅವು ಚೆನ್ನಾಗಿವೆ."ಎನ್ನುತ್ತಾರೆ ಡಾರ್ಲಿಂಗ್ ಕೃಷ್ಣ.

  ಇನ್ನು ಮಿಲನಾ ನಾಗರಾಜ್ ಕೂಡ ಸಿನಿಮಾ ಬಗ್ಗೆ ಸಖತ್ ಖುಷಿಯಾಗಿದ್ದಾರೆ."ಕಥೆ ಇಷ್ಟ ಆಯ್ತು. ಪಿ.ಸಿ.ಶೇಖರ್ ಸುಂದರವಾಗಿ ಕಥೆ ಬರೆದಿದ್ದಾರೆ. 'ಲವ್ ಬರ್ಡ್ಸ್' ಚಿತ್ರದಲ್ಲಿ ಲವ್ ಅಷ್ಟೇ ಅಲ್ಲದೇ, ಬೇರೆ ವಿಷಯಗಳು ಇವೆ." ಎಂದು ಸಿನಿಮಾ ಬಗ್ಗೆ ಮಿಲನಾ ಮಾಹಿತಿ ನೀಡಿದ್ದಾರೆ.

  English summary
  Darling Krishna And Milana Nagaraj Starrer Love Birds Movie Teaser Released,Know More.
  Tuesday, January 17, 2023, 22:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X