Don't Miss!
- News
ಗಮನಿಸಿ; ಫೆ.8ರ ತನಕ ಹುಬ್ಬಳ್ಳಿ-ಬೆಂಗಳೂರು ರೈಲು ಸೇವೆ ವ್ಯತ್ಯಯ
- Sports
Ind Vs Aus Test: ಮೊದಲ ಟೆಸ್ಟ್ ಪಂದ್ಯಕ್ಕೆ ಮುನ್ನ ಭಾರತ ತಂಡಕ್ಕೆ ವಿಶೇಷ ತರಬೇತಿ ಏರ್ಪಡಿಸಿದ ಬಿಸಿಸಿಐ
- Technology
ಏರ್ಟೆಲ್ ಜೊತೆಗೆ ಕೈ ಮಿಲಾಯಿಸಿದ ಮೆಟ್ರೋ, ಇನ್ಮುಂದೆ ಪ್ರಯಾಣಿಕರಿಗೆ ಈ ಸೇವೆ ಇನ್ನಷ್ಟು ಸರಳ!
- Automobiles
ರೀ ಎಂಟ್ರಿ ಕೊಡಲಿವೆಯೇ ಮಿಂಚಿ ಮರೆಯಾದ ಲೆಜೆಂಡರಿ ಕಾರುಗಳು?: ಹೊಸ ವಿನ್ಯಾಸ, ಎಂಜಿನ್ ಬದಲಾವಣೆ!
- Lifestyle
February 2023 Horoscope : ಫೆಬ್ರವರಿ ತಿಂಗಳ ಭವಿಷ್ಯ: ಮೇಷ-ಮೀನದವರೆಗಿನ ರಾಶಿಗಳ ರಾಶಿಫಲ ಹೇಗಿದೆ?
- Finance
Budget 2023: ರಾಷ್ಟ್ರಪತಿ ಭಾಷಣದೊಂದಿಗೆ ಜ.31ರಿಂದ ಬಜೆಟ್ ಅಧಿವೇಶನ ಆರಂಭ, ಈ ಮಾಹಿತಿ ತಿಳಿದಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು' : 5 ವರ್ಷಗಳ ಬಳಿಕ ಕಿಚ್ಚನಿಗೆ ದರ್ಶನ್ ಪ್ರತಿಕ್ರಿಯೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್‌ಗೆ ಇಡೀ ಕನ್ನಡ ಚಿತ್ರರಂಗ ಬೆಂಬಲ ವ್ಯಕ್ತಪಡಿಸಿದೆ. ಘಟನೆ ನಡೆದು ಎರಡು ದಿನಗಳಾಗಿದ್ದರೂ, ದರ್ಶನ್ ಮಾತ್ರ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ.
ಇಂದು(ಡಿಸೆಂಬರ್ 21) ತನಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ದರ್ಶನ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಆದರೆ, ಎಲ್ಲರಿಗೂ ಅಚ್ಚರಿ ಹಾಗೂ ಖುಷಿಯಾಗಿರೋದು ಕಿಚ್ಚ ಸುದೀಪ್ ಬೆಂಬಲಕ್ಕೂ ದರ್ಶನ್ ಥ್ಯಾಂಕ್ಸ್ ಹೇಳಿದ್ದಾರೆ.
ಹೊಸಪೇಟೆ
ಈವೆಂಟ್
ವಿಡಿಯೋ
ಶೇರ್
ಮಾಡಿ
"ಥ್ಯಾಂಕ್ಯೂ"
ಎಂದ
ಚಾಲೆಂಜಿಂಗ್
ಸ್ಟಾರ್
ಇದೇ ಐದು ವರ್ಷಗಳ ಹಿಂದೆ ದರ್ಶನ್ ಒಂದೇ ಒಂದು ಟ್ವೀಟ್ ಮೂಲಕ ಕಿಚ್ಚ ಸುದೀಪ್ ಫ್ರೆಂಡ್‌ಶಿಪ್‌ಗೆ ಗುಡ್‌ಬೈ ಹೇಳಿದ್ದರು. ಈಗ ಅದೇ ಟ್ವೀಟ್ ಮೂಲಕ ಕಿಚ್ಚ ಸುದೀಪ್‌ಗೆ ಧನ್ಯವಾದ ಹೇಳಿದ್ದು ಇಬ್ಬರ ಅಭಿಮಾನಿಗಳಿಗೂ ಅಚ್ಚರಿ ಜೊತೆ ಡಬಲ್ ಖುಷಿಯಾಗಿರೋದಂತೂ ಸತ್ಯ.

ಕಿಚ್ಚ ಸುದೀಪ್‌ಗೆ ದರ್ಶನ್ ಪ್ರತಿಕ್ರಿಯೆ
ಹೊಸಪೇಟೆಯಲ್ಲಿ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಯ ಬಳಿಕ ಕಿಚ್ಚ ಸುದೀಪ್ ಪತ್ರ ಬರೆದಿದ್ದರು. ದರ್ಶನ್ ದೂರವಿದ್ದರೂ ಅದ್ಯಾವುದನ್ನೂ ಲೆಕ್ಕಿಸದೆ ಬೆಂಬಲಕ್ಕೆ ನಿಂತಿದ್ದರು. ಈಗ ಘಟನೆ ನಡೆದು ಎರಡು ದಿನಗಳ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವಿಟರ್ ಮೂಲಕವೇ 'ನಿಮ್ಮ ಪ್ರೀತಿಯ ಸಾಲುಗಳಿಗೆ ಧನ್ಯವಾದಗಳು' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಇದೇ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

'ಇಡೀ ರಾಜ್ಯವೇ ಖುಷಿ ಪಡೋ ವಿಷಯ'
ದರ್ಶನ್ ಹಾಗೂ ಸುದೀಪ್ ಇಬ್ಬರೂ ಯಾವಾಗ ಒಂದಾಗುತ್ತಾರೋ ಅಂತ ಅದೆಷ್ಟೋ ಮಂದಿ ಕಾಯುತ್ತಿದ್ದರು. ಆದರೆ, ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಒಂದಾಗುವ ಲಕ್ಷಣಗಳ ಮಾತ್ರ ಕಾಣಿಸುತ್ತಿರಲಿಲ್ಲ. ಈಗ ದರ್ಶನ್ ಟ್ವೀಟ್ ನೋಡಿ ಇಬ್ಬರ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಅಭಿಮಾನಿಗಳು "ಇದು ಇಡೀ ರಾಜ್ಯವೇ ಖುಷಿ ಪಡೋ ವಿಷಯ" ಅಂತ ಟ್ರೋಲ್ ಮಾಡುತ್ತಿದ್ದಾರೆ. ಇಬ್ಬರ ಅಭಿಮಾನಿಗಳು ಕೂಡ ಈಗ ಬೆಳವಣಿಗೆ ಬಗ್ಗೆ ಫುಲ್ ಖುಷಿಯಾಗಿದ್ದಾರೆ.

'ನಾನು ಸುದೀಪ್ ಸ್ನೇಹಿತರಲ್ಲ'
ಕುಚಿಕುಗಳಾಗಿದ್ದ ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರೂ ಐದು ವರ್ಷಗಳ ಬೇರೆ ಬೇರೆಯಾಗಿದ್ದರು. ಮಾರ್ಚ್ 5, 2017ರಂದು ದರ್ಶನ್ ಟ್ವೀಟ್ ಮೂಲಕ ನಾವಿಬ್ಬರೂ ಸ್ನೇಹಿತರಲ್ಲ ಎಂದು ಹೇಳಿದ್ದರು. " ನಾನು ಸುದೀಪ್ ಇಬ್ಬರೂ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರೂ ಒಂದೇ ಚಿತ್ರರಂಗದಲ್ಲಿ ಕೆಲಸ ಮಾಡುವ ಸ್ನೇಹಿತರಷ್ಟೇ. ಬೇರೆ ಊಹಾ ಪೋಹಗಳು ಬೇಡ. ಇದು ಇಲ್ಲಿಗೆ ಮುಗಿದಿದೆ." ಎಂದು ದರ್ಶನ್ ಟ್ವೀಟ್ ಮಾಡಿದ್ದರು.

'ಕಾಯೋಕೆ ಸೆಲೆಬ್ರಿಟಿಗಳಿರುತ್ತಾರೆ'
ಇದೇ ವೇಳೆ ದರ್ಶನ್ ತನ್ನ ಅಭಿಮಾನಿಗಳಿಗೂ ಪತ್ರ ಬರೆದು ಧನ್ಯವಾದಗಳನ್ನು ತಿಳಿಸಿದ್ದಾರೆ. "ಈ ಸಮಯದಲ್ಲಿ ನನಗಿಂತಲೂ ನನ್ನ ಸೆಲೆಬ್ರಿಟಿಗಳಿಗೆ ಹೆಚ್ಚು ನೋವಾಗಿದೆ ಎಂಬ ಅರಿವು ನನಗಿದೆ. ಇಂಥ ಘಟನೆಗಳು ಒಬ್ಬ ವ್ಯಕ್ತಿಯನ್ನು ಮತ್ತಷ್ಟು ಬಲಪಡಿಸುತ್ತದೆಯೇ ಹೊರತೂ ಬಲಹೀನನನ್ನಾಗಿ ಮಾಡುವುದಿಲ್ಲ. ಅದಕ್ಕೆ ತಕ್ಕ ಉದಾಹರಣೆಗಳು ನಮ್ಮ ಕನ್ನಡ ನೆಲದಲ್ಲೇ ನೋಡಿದ್ದೇವೆ. ಈ ಸಮಯದಲ್ಲಿ ನ್ಯಾಯದ ಪರ ನಿಂತ ಪ್ರತಿಯೊಬ್ಬ ಚಿತ್ರರಂಗದ ಗೆಳೆಯರು, ನಟರಿಗೆ ಧನ್ಯವಾದಗಳು. ಈ ಘಟನೆಯನ್ನು ತಪ್ಪು ಹಾದಿಯಲ್ಲಿ ಪ್ರೇರೇಪಿಸಲು ಪ್ರಯತ್ನಿಸಿದ ಕೆಲವರಿಗೂ ಧನ್ಯವಾದಗಳು. ಮೊದಲಿಂದಲೂ ಹೇಳಿಕೊಂಡು ಬಂದಿದ್ದೇನೆ, ಹಾಳು ಮಾಡೋಕೆ ನೂರು ಜನ ಇದ್ರೆ, ಕಾಯೋಕೆ ನಮ್ಮ ಕೋಟ್ಯಾಂತರ ಸೆಲೆಬ್ರಿಟಿಗಳಿರುತ್ತಾರೆ. ನಿಮ್ಮ ಈ ಪ್ರೀತಿಯ ಅಪ್ಪುಗೆಗೆ ಈ ದಾಸ ಸದಾ ಚಿರಋಣಿ." ಎಂದು ದರ್ಶನ್ ಹೇಳಿದ್ದಾರೆ.