twitter
    For Quick Alerts
    ALLOW NOTIFICATIONS  
    For Daily Alerts

    'ಮೇರಾ ಕುತ್ತಾ ಮೇರಾ ಗಲಿಮೇ ಶೇರ್ ಅನ್ನೋ ಜಾತಿಗೆ ಸೇರಿದವನು': ದರ್ಶನ್ 'ಕ್ರಾಂತಿ'

    |

    ಸ್ಯಾಂಡಲ್‌ವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲಿ 'ಕ್ರಾಂತಿ' ಕೂಡ ಒಂದು. ಕಳೆದ ಕೆಲವು ದಿನಗಳಿಂದ 'ಕ್ರಾಂತಿ' ಸಿನಿಮಾ ರಿಲೀಸ್ ಬಗ್ಗೆ ಅಪ್‌ಡೇಟ್ ನೀಡುವಂತೆ ಅಭಿಮಾನಿಗಳು ಒತ್ತಾಯ ಮಾಡಿದ್ದರು. ಅದಕ್ಕೀಗ ಚಿತ್ರತಂಡ ಸ್ಪಷನೆ ನೀಡಿದೆ.

    ದರ್ಶನ್ ಅಭಿನಯದ 'ಕ್ರಾಂತಿ' ಸಿನಿಮಾ ರಿಲೀಸ್‌ ಬಗ್ಗೆ ಗೊಂದಲವಿತ್ತು. ಇದೇ ಕನ್ನಡ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್ ಆಗುತ್ತೆ ಅನ್ನೋ ಗುಲ್ಲೆದ್ದಿತ್ತು. ಇನ್ನೊಂದು ಕಡೆ ಇನ್ನೂ ಸಿನಿಮಾ ಮುಗಿದಿಲ್ಲ. ರಿಲೀಸ್ ತಡವಾಗುತ್ತೆ ಎನ್ನಲಾಗುತ್ತಿತ್ತು. ಅದೆಲ್ಲದಕ್ಕೂ ತೆರೆ ಎಳೆದಿದ್ದು, 2023 ಜನವರಿ 26ಕ್ಕೆ ಸಿನಿಮಾ ರಿಲೀಸ್ ಆಗುತ್ತೆ ಎಂದು 'ಕ್ರಾಂತಿ' ಟೀಮ್ ಹೇಳಿದೆ.

    'ಕ್ರಾಂತಿ' ರೀ ಶೂಟ್.. ಹೊಸ ರಿಲೀಸ್ ಡೇಟ್ ಫಿಕ್ಸ್: ಪೋಸ್ಟರ್ ಡಿಸೈನರ್ ಬದಲಾದ್ರಾ?'ಕ್ರಾಂತಿ' ರೀ ಶೂಟ್.. ಹೊಸ ರಿಲೀಸ್ ಡೇಟ್ ಫಿಕ್ಸ್: ಪೋಸ್ಟರ್ ಡಿಸೈನರ್ ಬದಲಾದ್ರಾ?

    ಹಾಗೇ 'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ ಹೌದಾ ಅಲ್ವಾ? ಅನ್ನೋ ಗೊಂದಲಕ್ಕೂ ತೆರೆ ಬಿದ್ದಿದೆ. ಸ್ವತ: ದರ್ಶನ್ 'ಕ್ರಾಂತಿ'ವನ್ನು ಏನು? ಪ್ಯಾನ್ ಇಂಡಿಯಾ ಹೌದಾ ಅಲ್ವಾ? ಸಿನಿಮಾ ಕಥೆಯೇನು? ಅನ್ನೋದನ್ನು ಸವಿಸ್ತಾರವಾಗಿ ಬಿಡಿಸಿ ಇಟ್ಟಿದ್ದಾರೆ.

    'ಮೇರಾ ಕುತ್ತಾ ಮೇರಾ ಗಲಿಮೇ ಶೇರ್'

    'ಮೇರಾ ಕುತ್ತಾ ಮೇರಾ ಗಲಿಮೇ ಶೇರ್'

    "ನಾವು ಪ್ರಮುಖವಾಗಿ ಕನ್ನಡ ಸಿನಿಮಾ ಮಾಡುತ್ತಿದ್ದೇವೆ. ಪ್ಯಾನ್ ಇಂಡಿಯಾ ಸಿನಿಮಾವನ್ನೆಲ್ಲಾ ನಾವು ಯೋಚನೆ ಮಾಡಿಲ್ಲ. ನಾವು ಡಬ್ ಮಾಡುತ್ತೇವೆ ಕೊಡುತ್ತೇವೆ. ನಾವು ಅಲ್ಲಿಗೆ ಯಾವ ಪ್ರಚಾರಕ್ಕೂ ಹೋಗೋದಿಲ್ಲ. ನಾನಂತೂ ಹೋಗುತ್ತಿಲ್ಲ. ಸಾಕು ನಾನು ಇಲ್ಲಿ ಪ್ರಚಾರ ಮಾಡಿಕೊಳ್ಳುತ್ತೇನೆ. ಮೇರಾ ಕುತ್ತಾ ಮೇರಾ ಗಲಿಮೇ ಶೇರ್. ಆ ಜಾತಿಗೆ ಸೇರಿದವನು ನಾನು." ಎಂದು ದರ್ಶನ್ ಪ್ಯಾನ್ ಇಂಡಿಯಾ ಬಗ್ಗೆ ಮಾಹಿತಿ ನೀಡಿದ್ದಾರೆ.

    ಅಪ್ಪುಗೆ ನಿಂದಿಸಿ ವಿಡಿಯೋ ಮಾಡಿದ್ದ ಯುವಕನಿಂದ ಕ್ಷಮೆಯಾಚನೆ: ಪುನೀತ್ ಫೋಟೊ ಪೂಜೆ!ಅಪ್ಪುಗೆ ನಿಂದಿಸಿ ವಿಡಿಯೋ ಮಾಡಿದ್ದ ಯುವಕನಿಂದ ಕ್ಷಮೆಯಾಚನೆ: ಪುನೀತ್ ಫೋಟೊ ಪೂಜೆ!

    'ಕ್ರಾಂತಿ' ಕ್ಲಾಸ್- ಮಾಸ್ ಕಾಂಬಿನೇಷನ್

    'ಕ್ರಾಂತಿ' ಕ್ಲಾಸ್- ಮಾಸ್ ಕಾಂಬಿನೇಷನ್

    " ಬಿ ಸುರೇಶ್ ಕ್ಲಾಸಿ ಡೈರೆಕ್ಟರ್ ಅನ್ನಬಹುದು. ಹರಿಕೃಷ್ಣ ಮಾಸಿ ಡೈರೆಕ್ಟರ್ ಅಂತ ಹೇಳಬಹುದು. ಯಜಮಾನ ನೋಡಿದಾಗ ನಿಮಗೆ ಏನು ಅನಿಸುತ್ತೆ. ಇತ್ತ ಕ್ಲಾಸು ಇದೆ. ಅತ್ತ ಮಾಸ್ ಇದೆ ಅಂತ ಅನಿಸುತ್ತೆ. ಹರಿ ಪಕ್ಕಾ ಮಾಸ್. ಅವರಿಗೆ ಕ್ಲಾಸ್ ಎಲ್ಲಾ ಬರಲ್ಲ. ಹರಿ ಮಾತು ಎತ್ತಿದರೆ, ಮೇಲೆನೇ ಹಾರುತ್ತಿರಬೇಕು. ಇವರು ಹಾಗಲ್ಲ ಕೆಳಗಡೆಯಿಂದ ಹೋಗಿ ಅಂತಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮಾಡಿದಂತಹ ಸಿನಿಮಾ. ಜನರಿಗೆ ಚಪ್ಪಾಳೆ ಹೊಡೆಯುವುದಕ್ಕೆ, ಶಿಳ್ಳೆ ಹೊಡೆಯುವುದಕ್ಕೆ, ಕೂಗಾಡುವುದಕ್ಕೆ, ಕಿರುಚಾಡುವುದಕ್ಕೆ ಹಾಗೇ ಒಂದು ನೀತಿ ಕಥೆ ಹೇಳುವುದಕ್ಕೆ ಕ್ರಾಂತಿ ಸಿನಿಮಾವಿದೆ."

    10 ವರ್ಷ ಪೂರೈಸಿದ ರಚಿತಾ ದಾಸ ಹೇಳಿದ್ದೇನು?

    10 ವರ್ಷ ಪೂರೈಸಿದ ರಚಿತಾ ದಾಸ ಹೇಳಿದ್ದೇನು?

    "ಕುದುರೆನಾ ನೀರಿನವರೆಗೂ ಕರೆದುಕೊಂಡು ಹೋಗಬಹುದು. ಕುಡಿಯೋದು ಬಿಡೋದು ಅದಕ್ಕೆ ಬಿಟ್ಟಿದ್ದು. ನಾವು ಕೇವಲ ನಿಮಿತ್ತ ಆಗುತ್ತೇವೆ ಅಷ್ಟೇ. ಯಾರೂ ಯಾರನ್ನು ತರುವುದಕ್ಕೆ ಆಗುವುದಿಲ್ಲ. ಅವರ ಸಾಮರ್ಥ್ಯಕ್ಕೆ ತಕ್ಕಂತೆ ಬೆಳೆದಿದ್ದಾರೆ. ಒಬ್ಬ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ 10 ವರ್ಷ ಕಳೆಯುವುದು ಸರ್ವೆ ಸಾಮಾನ್ಯ ಮಾತಲ್ಲ. ಈಗಿನ ಟ್ರೆಂಡ್‌ನಲ್ಲಿ ಈಗ ತುಂಬಾನೇ ಕಷ್ಟ. 10 ವರ್ಷ ಬೆಳೆದಿರೋದು ತುಂಬಾನೇ ಗ್ರೇಟ್. ಹರಿ ಕೂಡ ತುಂಬಾನೇ ಸಿನಿಮಾ ಮಾಡಿದ್ದರು. ಹೆಸರು ಹಾಕಿರಲಿಲ್ಲ ಅಷ್ಟೇ. ನಾವೊಂದು ನಿಮಿತ್ತ ಆದೆವು ಅಷ್ಟೇ."

    'ಕ್ರಾಂತಿ'ಯಿಂದ ಶಿಕ್ಷಣ ವ್ಯವಸ್ಥೆ ಬದಲಾಗುತ್ತೆ ಅಂತಲ್ಲ

    'ಕ್ರಾಂತಿ'ಯಿಂದ ಶಿಕ್ಷಣ ವ್ಯವಸ್ಥೆ ಬದಲಾಗುತ್ತೆ ಅಂತಲ್ಲ

    "ಹೊರಗಡೆ ನಾನು ನೋಡಿದ್ದೇನೆ. ಯುರೋಪ್ ಆಗಬಹುದು. ಯುಎಸ್ ಆಗಬಹುದು. ಶಿಕ್ಷಣ ಮತ್ತು ಆರೋಗ್ಯ ಎರಡೂ ಅಲ್ಲಿ ಉಚಿತ. ತಾರಕ್ ಶೂಟ್ ಮಾಡುವಾಗ ವೆನಿಸ್‌ಗೆ ಹೋಗಿದ್ದೆ. ಪ್ಲಾಸ್ಟಿಕ್ ರೈಸ್ ಅಂತ ಚೀನಾದ ಅಕ್ಕಿಯನ್ನೇ ನಿಲ್ಲಿಸಿಬಿಟ್ರು. ಯಾಕೆ ನಿಲ್ಲಿಸಿದ್ರು ಅಂದ್ರೆ, ಆ ಅಕ್ಕಿ ತಿಂದು ಏನಾದ್ರೂ ಆದ್ರೆ, ಆಸ್ಪತ್ರೆಗೆ ನಾನು ದುಡ್ಡು ಕಟ್ಟಬೇಕಲ್ಲಾ ಅಂತ ನಿಲ್ಲಿಸಿತ್ತು. ನಮ್ಮಲ್ಲಿ ಅದು ಇಲ್ಲವಲ್ಲ. ಇಲ್ಲಿ ನಾನು ಸಿನಿಮಾ ಮಾಡಿದ ಕೂಡಲೇ ಎಜುಕೇಷನ್ ಸಿಸ್ಟಮ್ ಬದಲಾಗುತ್ತೆ ಅಂತಲ್ಲ. ಇವತ್ತು ಹಸು ಕರ ಹಾಕಿದ್ರೆ, ಎರಡು ವರ್ಷ ಬೇಕು. ಅಲ್ಲಿವರೆಗೂ ಕಾಯ್ಬೇಕು."

    English summary
    Darshan Says He Will Not Be Promoting Kranti For Other Languages, Know More
    Monday, October 31, 2022, 21:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X