Don't Miss!
- Technology
ವ್ಯೂಸಾನಿಕ್ನಿಂದ ಹೊಸ ಎರಡು ಮಾನಿಟರ್ ಲಾಂಚ್; ಪಾಪ್-ಅಪ್ ಕ್ಯಾಮೆರಾ ಆಯ್ಕೆ!
- News
ಕರ್ನಾಟಕದ ‘ಎ’ ವರ್ಗದ ದೇವಸ್ಥಾನಗಳಿಂದ ವರ್ಷಕ್ಕೆ 420 ಕೋಟಿ ರೂ. ಆದಾಯ!
- Sports
ಉಜ್ಜೈನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಟೀಂ ಇಂಡಿಯಾ ಆಟಗಾರರು: ಪಂತ್ ಗುಣಮುಖವಾಗುವಂತೆ ಪ್ರಾರ್ಥನೆ
- Automobiles
ಬಹುನಿರೀಕ್ಷಿತ 'ಹೀರೋ Xoom 110 ಸಿಸಿ' ಟೀಸರ್: ಜ.30ಕ್ಕೆ ಸ್ಕೂಟರ್ ಬಿಡುಗಡೆ.. ಹೋಂಡಾ ಡಿಯೋಗೆ ಪ್ರತಿಸ್ಪರ್ಧಿ!
- Lifestyle
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- Finance
ಹೊಸ ಕುಟುಂಬ ಸದಸ್ಯರ ಹೆಸರು ರೇಷನ್ ಕಾರ್ಡ್ಗೆ ಹೀಗೆ ಅಪ್ಡೇಟ್ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕ್ರಾಂತಿ' ರಿಲೀಸ್‌ಗೆ 3 ದಿನ ಬಾಕಿ: ಬೆಂಗಳೂರು, ಮೈಸೂರು, ತುಮಕೂರು, ಶಿವಮೊಗ್ಗದಲ್ಲಿ ಎಷ್ಟೆಷ್ಟು ಶೋ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ 'ಕ್ರಾಂತಿ' ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈಗಾಗಲೇ ಚಿತ್ರತಂಡ ಅಡ್ವಾನ್ಸ್ ಬುಕಿಂಗ್ ಅನ್ನೂ ಓಪನ್ ಮಾಡಿದೆ. ಈ ಬೆನ್ನಲ್ಲೇ ರಾಜ್ಯದ ಮೂಲೆ ಮೂಲೆಯಲ್ಲಿ ಟಿಕೆಟ್ ಖರೀದಿಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
'ಕ್ರಾಂತಿ' ಬಿಡುಗಡೆಗೂ ಒಂದು ದಿನ ಮುನ್ನ ಶಾರುಖ್ ಖಾನ್ ಕಮ್‌ಬ್ಯಾಕ್ ಸಿನಿಮಾ 'ಪಠಾಣ್' ರಿಲೀಸ್ ಆಗುತ್ತಿದೆ. ಜನವರಿ 25ನೇ ತಾರೀಕು ಈ ಒಂದು ದಿನ ಕರ್ನಾಟಕದಲ್ಲಿ 'ಪಠಾಣ್' ಸಿನಿಮಾಗೆ ಹೆಚ್ಚು ಶೋಗಳು ಸಿಕ್ಕಿವೆ. ಆದರೆ, ಜನವರಿ 26ರಿಂದ ಕರ್ನಾಟಕದಲ್ಲಿ ಅಸಲಿ ಆಟ ಶುರುವಾಗುತ್ತೆ ಎಂದು ವಿತರಕರು ಮಾತಾಡಿಕೊಳ್ಳುತ್ತಿದ್ದಾರೆ.
Kranti
Advance
Booking
:
3
ಗಂಟೆಗಳಲ್ಲಿ
25,000
ಟಿಕೆಟ್
ಮಾರಾಟ:
ಫಸ್ಟ್
ಡೇ
ಬಾಕ್ಸಾಫೀಸ್
ಧೂಳಿಪಟ!
'ಕ್ರಾಂತಿ' ಬಿಡುಗಡೆಗೆ ಇನ್ನೂ ಮೂರು ದಿನಗಳಿರುವಾಗಲೇ 'ಫಸ್ಟ್ ಡೇ ಫಸ್ಟ್ ಶೋ' ಎಲ್ಲೆಲ್ಲಿ ಎಷ್ಟೆಷ್ಟು ಶೋ ಅನ್ನೋ ಡಿಟೈಲ್ಸ್ ರಿಲೀಸ್ ಆಗಿದೆ. ಇನ್ನೂ ಮೂರು ದಿನಗಳ ಬಳಿಕ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಪ್ರಮುಖ ನಗರಗಳಲ್ಲಿ ಎಷ್ಟೆಷ್ಟು ಶೋಗಳು ಅನ್ನೋ ಪಟ್ಟಿ ಇಲ್ಲಿದೆ.

ಬೆಂಗಳೂರಿನಲ್ಲಿ 'ಕ್ರಾಂತಿ' ಶೋ ಎಷ್ಟು?
ಸ್ಯಾಂಡಲ್‌ವುಡ್, ಬಾಲಿವುಡ್, ಟಾಲಿವುಡ್, ಕಾಲಿವುಡ್ ಯಾವುದೇ ಇರಲಿ. ಕರ್ನಾಟಕದಲ್ಲಿ ಬೆಂಗಳೂರಿನಲ್ಲೇ ಹೆಚ್ಚು ಶೋಗಳು ಪ್ರದರ್ಶನ ಕಾಣುತ್ತವೆ. ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಫಸ್ಟ್ ಡೇ ಫಸ್ಟ್ ಡೇ ಬೆಂಗಳೂರಿನಲ್ಲಿ ಧೂಮ್ ಧಾಮ್ ಪ್ರದರ್ಶನಗಳು ಕಾಣುತ್ತವೆ. ರಿಲೀಸ್‌ಗೆ 3 ದಿನ ಮುನ್ನ ಬೆಂಗಳೂರಿನಲ್ಲಿ ಸುಮಾರು 480 ಶೋಗಳನ್ನು ಫಿಕ್ಸ್ ಮಾಡಲಾಗಿದೆ. ಇದರಲ್ಲಿ ಈಗಾಗಲೇ 95 ಶೋಗಳು ಫಾಸ್ಟ್ ಫಿಲ್ಲಿಂಗ್ ಇದ್ದರೆ, 22 ಶೋಗಳು ಸೋಲ್ಡ್ ಔಟ್ ಆಗಿವೆ. ರಿಲೀಸ್ ದಿನ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ಮೈಸೂರಿನಲ್ಲಿ ಭರ್ಜರಿ ರೆಸ್ಪಾನ್ಸ್
ಬೆಂಗಳೂರು ಬಿಟ್ಟರೆ, ಮೈಸೂರಿನಲ್ಲಿ ಸಿನಿಮಾಗಳಿಗೆ ಹೆಚ್ಚುನ ಪ್ರತಿಕ್ರಿಯೆ ಸಿಗುತ್ತೆ. 'ಕ್ರಾಂತಿ' ಅಡ್ವಾನ್ಸ್ ಬುಕಿಂಗ್‌ಗೆ ಅರಮನೆ ನಗರಿ ಮೈಸೂರಿನಲ್ಲೂ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇಲ್ಲಿ ಇದೂವರೆಗೂ 128 ಶೋಗಳನ್ನು ಫಿಕ್ಸ್ ಮಾಡಲಾಗಿದ್ದು, 67 ಶೋಗಳು ಫಾಸ್ಟ್ ಫಿಲ್ಲಿಂಗ್ ಆಗಿದ್ದು, 12 ಶೋಗಳು ಸೋಲ್ಡ್ ಔಟ್ ಆಗಿವೆ. ಬಿಡುಗಡೆ ವೇಳೆ ಶೋಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಶೋ?
ದರ್ಶನ್ ಸಿನಿಮಾ 'ಕ್ರಾಂತಿ' ಸಿನಿಮಾ ಕರ್ನಾಟಕದ ಬಹುತೇಕ ಕಡೆಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಸದ್ಯ ಬೆಂಗಳೂರು, ಮೈಸೂರು ಬಿಟ್ಟರೆ, ತುಮಕೂರಿನಲ್ಲಿ 19 ಶೋ ಸಿಕ್ಕಿದೆ. ಇದರಲ್ಲಲಿ 2 ಶೋ ಈಗಾಗಲೇ ಸೋಲ್ಡ್ ಔಟ್ ಆಗಿದೆ. ಶಿವಮೊಗ್ಗದಲ್ಲಿ 19 ಶೋ, ದಾವಣಗೆರೆಯಲ್ಲಿ 15 ಶೋ, ಹುಬ್ಬಳ್ಳಿಯಲ್ಲಿ 13 ಶೋಗಳು ಇದೂವರೆಗೂ ಸಿಕ್ಕಿದೆ.

ರಾಜ್ಯಾದ್ಯಂತ 'ಕ್ರಾಂತಿ' ಶೋ ಎಷ್ಟು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ರಾಂತಿ ಸಿನಿಮಾಗೆ ಈಗಾಗಲೇ ಹೆಚ್ಚು ಶೋ ಸಿಕ್ಕಿದೆ. ರಾಜ್ಯಾದ್ಯಂತ ಸುಮಾರು 700 ಶೋಗಳು ಮೊದಲ ಪ್ರದರ್ಶನ ಕಾಣಲಿವೆ. ರಿಲೀಸ್‌ಗೆ ಮೂರು ದಿನ ಇರುವುದರಿಂದ ಶೋಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಲೆಕ್ಕಾಚಾರದ ಪ್ರಕಾರ ಅಡ್ವಾನ್ಸ್ ಬುಕಿಂಗ್‌ನಿಂದ್ಲೇ ಸಿನಿಮಾದ ಕಲೆಕ್ಷನ್ 1.5 ಕೋಟಿ ರೂ.ನಿಂದ 2 ಕೋಟಿ ರೂ. ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.