For Quick Alerts
  ALLOW NOTIFICATIONS  
  For Daily Alerts

  'ತಾರಕ್'ಗಾಗಿ ಮಲೇಷ್ಯಾದಲ್ಲಿ ದರ್ಶನ್ ಅದ್ಧೂರಿ ಸಾಹಸ

  By Suneel
  |

  ಡಿ ಬಾಸ್ 'ಚಕ್ರವರ್ತಿ' ಸಿನಿಮಾ ನಂತರ 'ತಾರಕ್' ಚಿತ್ರದಲ್ಲಿ ತೊಡಗಿಕೊಂಡಿರುವುದು ಅಭಿಮಾನಿಗಳಿಗೆಲ್ಲ ತಿಳಿದಿರುವ ವಿಷಯ. 'ತಾರಕ್' ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದ ನಿರ್ದೇಶಕ ಮಿಲನ ಪ್ರಕಾಶ್, ಚಿತ್ರದ ಎರಡನೇ ಹಂತದ ಶೂಟಿಂಗ್ ಗಾಗಿ ಮಲೇಷ್ಯಾ'ಗೆ ಹಾರಿದ್ದಾರೆ.[ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಬಂದ ತಾಜಾ ಸುದ್ದಿ ಇದು.!]

  ಮಲೇಷ್ಯಾದಲ್ಲಿ 'ತಾರಕ್' ಚಿತ್ರದ ಸಾಹಸ ಸನ್ನಿವೇಶಗಳ ಶೂಟಿಂಗ್ ನಡೆಯುತ್ತಿದ್ದು, ದರ್ಶನ್ ರವರು ಫೈಟ್ ಮಾಡುವ ಪ್ರಮುಖ ದೃಶ್ಯಗಳನ್ನು ಇಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಬಗ್ಗೆ ವಿಶೇಷ ಮಾಹಿತಿ ಇಲ್ಲಿದೆ ಓದಿ..

  ಮಲೇಷ್ಯಾದಲ್ಲಿ 'ತಾರಕ್' ಚಿತ್ರೀಕರಣ

  ಮಲೇಷ್ಯಾದಲ್ಲಿ 'ತಾರಕ್' ಚಿತ್ರೀಕರಣ

  'ದಾಸ' ದರ್ಶನ್ ಅಭಿನಯದ 'ತಾರಕ್' ಚಿತ್ರದಲ್ಲಿನ ಅದ್ಧೂರಿ ಫೈಟಿಂಗ್ ದೃಶ್ಯಗಳನ್ನು ನಿರ್ದೇಶಕ ಮಿಲನ ಪ್ರಕಾಶ್ ಮಲೇಷ್ಯಾದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಇಲ್ಲಿ ಸೆರೆಹಿಡಿಯಲಿರುವ ಸಾಹಸ ಸನ್ನಿವೇಶಗಳು ಚಿತ್ರದ ಪ್ರಮುಖ ದೃಶ್ಯಗಳಾಗಿದ್ದು, ಮೈನವಿರೇಳಿಸುವ ಸೀನ್ ಗಳನ್ನು ಹೊಂದಿರಲಿವೆಯಂತೆ.

  ವಾಹನಗಳ ನಡುವೆ ಸಾಹಸ ದೃಶ್ಯ

  ವಾಹನಗಳ ನಡುವೆ ಸಾಹಸ ದೃಶ್ಯ

  ಇನ್ನೊಂದು ಕೂತುಹಲಕಾರಿ ವಿಷಯ ಅಂದ್ರೆ ಮಲೇಷ್ಯಾದಲ್ಲಿ ಶೂಟ್ ಮಾಡುತ್ತಿರುವ ಫೈಟಿಂಗ್ ಸೀನ್ ಗಳನ್ನು ವಾಹನಗಳ ಮಧ್ಯೆ ಚಿತ್ರೀಕರಿಸಲಾಗುತ್ತಿದೆ. ಅದಕ್ಕಾಗಿ ಅದ್ಧೂರಿಯಾಗಿಯೇ ಪೂರ್ವಸಿದ್ಧತೆ ಮಾಡಿಕೊಂಡಿದೆ ಚಿತ್ರತಂಡ.

  'ತಾರಕ್'ಕ್ಕೆ ವಿಜಯನ್ ಸಾಹಸ ನಿರ್ದೇಶನ

  'ತಾರಕ್'ಕ್ಕೆ ವಿಜಯನ್ ಸಾಹಸ ನಿರ್ದೇಶನ

  ದರ್ಶನ್ ರವರ 'ತಾರಕ್' ಸಿನಿಮಾವನ್ನು ಅದ್ಧೂರಿಯಾಗಿ ಮೇಕಿಂಗ್ ಮಾಡಲಾಗುತ್ತಿದೆ. ಆದ್ದರಿಂದ ಮಿಲನ ಪ್ರಕಾಶ್ ರವರು ಚಿತ್ರದ ಸಾಹಸ ನಿರ್ದೇಶನಕ್ಕೆ ತಮಿಳು ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್ ವಿಜಯನ್ ರವರಿಂದ ಫೈಟಿಂಗ್ ದೃಶ್ಯಗಳ ಸಂಯೋಜನೆ ಮಾಡಿಸಿದ್ದಾರೆ. ಈ ದೃಶ್ಯಗಳಿಗೆ ಮಲೇಷ್ಯಾದ ಸಾಹಸ ಕಲಾವಿದರಿಂದಲೇ ಅಭಿನಯ ಮಾಡಿಸಲಾಗಿದೆ.

  ಆಕ್ಷನ್ ದೃಶ್ಯಗಳಿಗೆ ದರ್ಶನ್ ವರ್ಕೌಟ್

  ಆಕ್ಷನ್ ದೃಶ್ಯಗಳಿಗೆ ದರ್ಶನ್ ವರ್ಕೌಟ್

  ಅಂದಹಾಗೆ ಮಲೇಷ್ಯಾದಲ್ಲಿ ಸೆರೆಹಿಡಿಯುತ್ತಿರುವ ಫೈಟಿಂಗ್ ದೃಶ್ಯಗಳಿಗಾಗಿ ದರ್ಶನ್ ರವರು ಸಖತ್ ವರ್ಕೌಟ್ ಮಾಡಿಯೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರಂತೆ.

  ಸ್ವಿಟ್ಜರ್ ಲ್ಯಾಂಡ್ ನಲ್ಲಿ ಹಾಡುಗಳ ಚಿತ್ರೀಕರಣ

  ಸ್ವಿಟ್ಜರ್ ಲ್ಯಾಂಡ್ ನಲ್ಲಿ ಹಾಡುಗಳ ಚಿತ್ರೀಕರಣ

  'ತಾರಕ್' ಚಿತ್ರತಂಡ ಮಲೇಷ್ಯಾದಲ್ಲಿ ಶೂಟಿಂಗ್ ಮುಗಿಸಿದ ನಂತರ ಸಾಂಗ್ ಗಳ ಚಿತ್ರೀಕರಣಕ್ಕಾಗಿ ಇಟಲಿ ಮತ್ತು ಸ್ವಿಟ್ಜರ್ ಲ್ಯಾಂಡ್ ಗೆ ತೆರಳಲಿದೆ.

  'ತಾರಕ್' ಚಿತ್ರದಲ್ಲಿ ಬಹುದೊಡ್ಡ ತಾರಾಬಳಗ

  'ತಾರಕ್' ಚಿತ್ರದಲ್ಲಿ ಬಹುದೊಡ್ಡ ತಾರಾಬಳಗ

  ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ 'ತಾರಕ್' ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಟಿ ಶ್ರುತಿ ಹರಿಹರನ್ ಮತ್ತು ನಟಿ ಶಾನ್ವಿ ಶ್ರೀವಾಸ್ತವ ಅಭಿನಯಿಸುತ್ತಿದ್ದಾರೆ. ಅಲ್ಲದೇ ಸ್ಯಾಂಡಲ್ ವುಡ್ ನ ಪ್ರಮುಖ ತಾರೆಯರು ಈ ಚಿತ್ರದಲ್ಲಿದ್ದಾರೆ.['ತಾರಕ್' ಚಿತ್ರೀಕರಣದಲ್ಲಿ ದರ್ಶನ್ ಜೊತೆ ಶ್ರುತಿ ಹರಿಹರನ್ ರೊಮ್ಯಾನ್ಸ್]

  ಅಭಿಮಾನಿಯೊಂದಿಗೆ ದಾಸ

  ಅಭಿಮಾನಿಯೊಂದಿಗೆ ದಾಸ

  'ತಾರಕ್' ಸಿನಿಮಾ ಶೂಟಿಂಗ್ ವೇಳೆ ಮಲೇಷ್ಯಾ ಅಭಿಮಾನಿಯೊಂದಿಗೆ ದರ್ಶನ್ ಇರುವ ಫೋಟೋ ನೋಡಿ.

  English summary
  Kannada Actor Darshan Starrer 'Tarak' movie shooting at Malaysia. This Movie is directing by Milana Prakash.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X