For Quick Alerts
  ALLOW NOTIFICATIONS  
  For Daily Alerts

  'ಆರದ ಗಾಯ'ದಲ್ಲೇ ಶೂಟಿಂಗ್ ಗೆ ಹೊರಟ್ರಾ.? ದರ್ಶನ್ ಕೈ ಈಗ ಹೇಗಿದೆ.?

  |
  ದರ್ಶನ್ ಮತ್ತೆ ಶೂಟಿಂಗ್ ಗೆ ಮರಳಿದ್ದು ಈಗ ಅವರ ಕೈ ಹೇಗಿದೆ? | FILMIBEAT KANNADA

  ಸೆಪ್ಟಂಬರ್ ಅಂತ್ಯದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಾರು ಮೈಸೂರಿನ ಬಳಿ ಅಪಘಾತಕ್ಕೆ ಒಳಗಾಗಿತ್ತು. ಈ ಕಾರಿನಲ್ಲಿ ದರ್ಶನ್, ಹಿರಿಯ ನಟ ದೇವರಾಜ್, ಪ್ರಜ್ವಲ್ ದೇವರಾಜ್, ದರ್ಶನ್ ಆಪ್ತ ಆಂಟೋನಿ ರಾಯ್ ಇದ್ದರು. ಈ ಅಪಘಾತದಲ್ಲಿ ದರ್ಶನ್ ಬಲಗೈಗೆ ಪೆಟ್ಟಾಗಿ, ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು.

  ಈ ಗಾಯದಿಂದ ಚೇತರಿಸಿಕೊಳ್ಳಲು ಒಂದು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಸೂಚಿಸಿದ್ದರು. ಅಲ್ಲಿಗೆ ದರ್ಶನ್ ಸಿನಿಮಾಗಳ ಚಿತ್ರೀಕರಣ ಎಲ್ಲವೂ ಸ್ಥಗಿತವಾಗಿತ್ತು. ಇದೀಗ, ಒಂದೂವರೆ ತಿಂಗಳಿನ ನಂತರ ಡಿ ಬಾಸ್ ಕಂಬ್ಯಾಕ್ ಮಾಡಿದ್ದಾರೆ.

  ಕೈಗಾಗಿದ್ದ ಗಾಯದಿಂದ ಚೇತರಿಸಿಕೊಂಡು ಶೂಟಿಂಗ್ ಗೆ ಹಾಜರಾಗ್ತಿದ್ದಾರೆ. ಇಷ್ಟು ದಿನ ಕೈಗೆ ಕಟ್ಟು ಹಾಕಿಕೊಂಡೇ ಬಹುತೇಕ ಎಲ್ಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ದರ್ಶನ್, ಅಪಘಾತ ನಂತರ ಮೊದಲ ಬಾರಿಗೆ, ಕೈಯನಲ್ಲಿದ್ದ ಕಟ್ಟು ಬಿಚ್ಚಿ ಪ್ರೆಸ್ ಮೀಟ್ ಗೆ ಆಗಮಿಸಿದ್ದರು. ಈ ವೇಳೆ ತಮ್ಮ ಕೈಗಾಗಿದ್ದ ಗಾಯದ ಕಲೆ ಎಲ್ಲರ ಗಮನ ಸೆಳೆಯಿತು. ದರ್ಶನ್ ಅವರ ಬಲಗೈ ಈಗ ಹೇಗಿದೆ.?

  ದರ್ಶನ್ ಅವರದ್ದು 'ಆರದ ಗಾಯ'

  ದರ್ಶನ್ ಅವರದ್ದು 'ಆರದ ಗಾಯ'

  ಅನು ಪ್ರಭಾಕರ್ ಅಭಿನಯದ 'ಅನುಕ್ತ' ಚಿತ್ರದ ಸುದ್ದಿಗೋಷ್ಠಿಗೆ ಅತಿಥಿಯಾಗಿ ಆಗಮಿಸಿದ್ದ ದರ್ಶನ್, ತಮ್ಮ ಬಲಗೈಗೆ ಹಾಕಲಾಗಿದ್ದ ಕಟ್ಟನ್ನ ಬಿಚ್ಚಿದ್ದಾರೆ. ಹೀಗಾಗಿ, ಅಪಘಾತದಲ್ಲಿ ದರ್ಶನ್ ಗೆ ಎಷ್ಟರ ಮಟ್ಟಿಗೆ ಗಾಯವಾಗಿತ್ತು ಎನ್ನುವುದಕ್ಕೆ ಈಗ ಸ್ಪಷ್ಟ ಉತ್ತರ ಸಿಕ್ಕಿದೆ. ಗಾಯವಾಗಿದ್ದ ಕಲೆ ದಾಸನ ಕೈಯಲ್ಲಿ ಹಾಗೆ ಉಳಿದುಕೊಂಡಿದೆ.

  ದರ್ಶನ್ ಕೈ ಚೇತರಿಕೆ ಕಂಡಿದ್ಯಾ,?

  ದರ್ಶನ್ ಕೈ ಚೇತರಿಕೆ ಕಂಡಿದ್ಯಾ,?

  ದರ್ಶನ್ ಗೆ ಶಸ್ತ್ರ ಚಿಕಿತ್ಸೆ ಆಗಿದ್ದ ಕಾರಣ, ತೂಕವನ್ನ ಎತ್ತಲು ಕಷ್ಟವಾಗಬಹುದು. ಆದ್ರೆ, ಶೂಟಿಂಗ್ ಮಾಡಲು ಯಾವುದೇ ಸಮಸ್ಯೆ ಇಲ್ಲ ಎನ್ನಲಾಗಿದೆ. ಹೀಗಾಗಿ, ಚಿತ್ರೀಕರಣಕ್ಕೆ ಹಾಜರ್ ಆಗಲು ದರ್ಶನ್ ಸಜ್ಜಾಗಿದ್ದಾರೆ. ಹಾಗ್ನೋಡಿದ್ರೆ, ದರ್ಶನ್ ಅವರ ಕೈ ಸಂಪೂರ್ಣವಾಗಿ ಚೇತರಿಕೆ ಕಂಡಿದ್ಯಾ ಎಂಬ ಅನುಮಾನ ಅಭಿಮಾನಿಗಳನ್ನ ಕಾಡುತ್ತಿದೆ.

  ಸ್ವೀಡನ್ ನಲ್ಲಿ ಯಜಮಾನ.!

  ಸ್ವೀಡನ್ ನಲ್ಲಿ ಯಜಮಾನ.!

  ದರ್ಶನ್ ಅಪಘಾತದಿಂದ ಯಜಮಾನ ಚಿತ್ರದ ಚಿತ್ರೀಕರಣ ನಿಂತಿತ್ತು. ಈಗಾಗಲೇ ಯಜಮಾನನ ಮಾತಿನ ಭಾಗದ ಶೂಟಿಂಗ್ ಮುಗಿದಿದೆ. ಬಾಕಿ ಉಳಿದಿರುವ ಹಾಡಿನ ಚಿತ್ರೀಕರಣಕ್ಕಾಗಿ ದರ್ಶನ್ ಸ್ವೀಡನ್ ಗೆ ಹಾರಲಿದ್ದಾರೆ. ನವೆಂಬರ್ 22 ರಿಂದ ಸ್ವೀಡನ್ ನಲ್ಲಿ 'ಯಜಮಾನ' ಸಾಂಗ್ ಶೂಟಿಂಗ್ ನಡೆಯಲಿದೆ.

  ಅಭಿಮಾನಿಗಳಲ್ಲಿ ಮೂಡಿದ ಖುಷಿ

  ಅಭಿಮಾನಿಗಳಲ್ಲಿ ಮೂಡಿದ ಖುಷಿ

  ಕರ್ನಾಟಕ ಸಂಘ, ಕತಾರ್ ಆಯೋಜಿಸಿದ್ದ 63ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಭಾಗಿಯಾಗಿದ್ರು. ಈ ವೇಳೆಯೂ ಕೈಯಲ್ಲಿ ಕಟ್ಟು ಹಾಕಿಕೊಂಡಿದ್ದರು. ಇತ್ತೀಚಿಗಷ್ಟೆ ಧರ್ಮ ಕೀರ್ತಿರಾಜ್ ಅಭಿನಯದ ಚಾಣಕ್ಷ ಚಿತ್ರದ ಪ್ರೆಸ್ ಮೀಟ್ ಗೆ ಬಂದಿದ್ದರು. ಅಲ್ಲಿಯೂ ಕೈಯಲ್ಲಿ ಕಟ್ಟು ಹಾಕಿದ್ದರು. ಈಗ ಆ ಕಟ್ಟನ್ನ ಬಿಚ್ಚಿ ಮೊದಲಿನಂತೆ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

  English summary
  'Yajamana' team heads to Sweden to shoot last portions. Darshan, who had to take a short break after his accident is back on sets after having recovered completely.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X