For Quick Alerts
  ALLOW NOTIFICATIONS  
  For Daily Alerts

  'ಹೆಡ್ ಬುಷ್' ಮೂರು ದಿನಗಳ ಕಲೆಕ್ಷನ್ ಎಷ್ಟು? ವಿತರಕರ ವಲಯದ್ದೇನಿದೆ ಟಾಕ್?

  |

  ಕನ್ನಡ ಸಿನಿಮಾಗಳು ಎಲ್ಲೆಡೆ ಸದ್ದು ಮಾಡುತ್ತಿವೆ. 'ಕೆಜಿಎಫ್' ಬಳಿಕ ಸ್ಯಾಂಡಲ್‌ವುಡ್ ಸಿನಿಮಾಗಳ ಕಡೆ ಎಲ್ಲರೂ ತಿರುಗಿ ನೋಡುವಂತಾಗಿದೆ. ಪ್ಯಾನ್ ಇಂಡಿಯಾ ಸಿನಿಮಾಗಳು ದೇಶದಾದ್ಯಂತ ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ಕನ್ನಡದಲ್ಲಷ್ಟೇ ತೆರೆಕಂಡ ಸಿನಿಮಾಗಳು ಕರ್ನಾಟಕದಲ್ಲಿ ಸೌಂಡ್ ಮಾಡುತ್ತಿವೆ.

  ಡಾಲಿ ಧನಂಜಯ್ ನಿರ್ಮಿಸಿದ್ದ ಎರಡನೇ ಸಿನಿಮಾ 'ಹೆಡ್ ಬುಷ್'. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಅಂಡರ್‌ವರ್ಲ್ಡ್‌ ಕಥೆಯನ್ನು ತೆರೆಮೇಲೆ ತೋರಿಸುತ್ತಿದ್ದಾರೆ. ಬಹಳ ದಿನಗಳ ಬಳಿಕ 70-80ರ ದಶಕದ ಭೂಗತಲೋಕದ ಕಥೆಯನ್ನು ಸಿಲ್ವರ್ ಸ್ಕ್ರೀನ್ ಮೇಲೆ ತೋರಿಸಲಾಗುತ್ತಿದೆ.

  ಕನ್ನಡದಲ್ಲಷ್ಟೇ ತೆರೆಕಂಡ ಸಿನಿಮಾ 'ಹೆಡ್ ಬುಷ್' ಬಾಕ್ಸಾಫೀಸ್‌ ಸದ್ದು ಮಾಡಲು ಆರಂಭಿಸಿದೆ. ಸಿನಿಮಾ ಬಿಡುಗಡೆಯಾದ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಬಾಕ್ಸಾಫೀಸ್‌ ಕಲೆಕ್ಷನ್‌ನಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ ಅನ್ನೋದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.

  'ಹೆಡ್ ಬುಷ್' ಕಲೆಕ್ಷನ್ ಬಗ್ಗೆ ಏನಿದೆ ಟಾಕ್?

  'ಹೆಡ್ ಬುಷ್' ಕಲೆಕ್ಷನ್ ಬಗ್ಗೆ ಏನಿದೆ ಟಾಕ್?

  ಕಳೆದ ವಾರವಷ್ಟೇ 'ಹೆಡ್ ಬುಷ್' ಸಿನಿಮಾ ಗ್ರ್ಯಾಂಡ್ ಆಗಿ ರಿಲೀಸ್ ಆಗಿತ್ತು. ದೀಪಾವಳಿ ಹಬ್ಬ ಆರಂಭಕ್ಕೂ ಮುನ್ನ ಬಿಡುಗಡೆಯಾಗಿದ್ದ ಸಿನಿಮಾ ನಾಲ್ಕನೇ ದಿನ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. ಧನಂಜಯ್ ಜೊತೆ ಯೋಗಿ, ರಘು ಮುಖರ್ಜಿ ಬಾಲು ನಾಗೇಂದ್ರ, ಶ್ರುತಿ ಹರಿಹರನ್ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ ಸಹಜವಾಗಿಯೇ ನಿರೀಕ್ಷೆ ಇತ್ತು. ಧನಂಜಯ್ ನಿರ್ಮಾಣ ಮಾಡಿರುವ ಎರಡನೇ ಸಿನಿಮಾ 'ಹೆಡ್‌ ಬುಷ್' ಮೂರು ದಿನಗಳಲ್ಲಿ ಡಿಸೆಂಟ್ ಕಲೆಕ್ಷನ್ ಮಾಡಿದೆ ಅನ್ನೋ ಮಾತು ವಿತರಕರ ವಲಯದಲ್ಲಿ ಕೇಳಿ ಬರುತ್ತಿದೆ.

  3 ದಿನಗಳಲ್ಲಿ ಕಲೆಕ್ಷನ್ ಆಗಿದ್ದೆಷ್ಟು?

  3 ದಿನಗಳಲ್ಲಿ ಕಲೆಕ್ಷನ್ ಆಗಿದ್ದೆಷ್ಟು?

  'ಹೆಡ್ ಬುಷ್' ಮಾಸ್ ಸಿನಿಮಾ. ಅಗ್ನಿ ಶ್ರೀಧರ್ ಬರೆದ 'ಮೈ ಡೇಸ್ ಇನ್ ದಿ ಅಂಡರ್‌ವರ್ಲ್ಡ್‌' ಪುಸ್ತಕವನ್ನು ಆಧರಿಸಿ 'ಹೆಡ್ ಬುಷ್' ನಿರ್ಮಾಣ ಆಗಿದೆ. 70ರ ದಶಕದ ಭೂಗತ ಲೋಕದ ಸನ್ನಿವೇಶವನ್ನು ತೆರೆಮೇಲೆ ತೋರಿಸಲು ಮುಂದಾಗಿದ್ದರು. ಅಕ್ಟೋಬರ್ 21ಕ್ಕೆ ತೆರೆಕಂಡಿರೋ ಈ ಸಿನಿಮಾ ಮೂರು ದಿನಗಳಲ್ಲಿ 9 ಕೋಟಿ ರೂಪಾಯಿ (Gross) ಕಲೆ ಹಾಕಿದೆ ಅನ್ನೋ ಚರ್ಚೆ ವಿತರಕರ ವಲಯದಲ್ಲಿ ಓಡಾಡುತ್ತಿದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ 'ಹೆಡ್ ಬುಷ್' 3 ದಿನಗಳ ಒಟ್ಟು ಕಲೆಕ್ಷನ್ 9 ಕೋಟಿ ರೂ. ಅನ್ನೋ ಪೋಸ್ಟರ್‌ಗಳು ಕೂಡ ಹರಿದಾಡುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಇನ್ನೂ ಮಾಹಿತಿ ನೀಡಬೇಕಿದೆ.

  ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?

  ಎಲ್ಲೆಲ್ಲಿ ಹೇಗಿದೆ ರೆಸ್ಪಾನ್ಸ್?

  'ಹೆಡ್ ಬುಷ್' ಸಿನಿಮಾ ಕರ್ನಾಟಕದಾದ್ಯಂತ ಸುಮಾರು 493 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಸಿನಿಮಾ ಬಿಡುಗಡೆಯಾದ ಎರಡನೇ ದಿನ ಸುಮಾರು 21 ಶೋಗಳನ್ನು ಹೆಚ್ಚುವರಿಯಾಗಿ ಮಲ್ಟಿಪ್ಲೆಕ್ಸ್‌ನಲ್ಲಿ ಹೆಚ್ಚಿಸಲಾಗಿದೆ ಅನ್ನೋದು ವಿತರಕರ ವಲಯದಲ್ಲಿ ಕೇಳಿ ಬರುತ್ತಿರೋ ಮಾತು. ಇನ್ನೊಂದು ಕಡೆ ಬೆಂಗಳೂರು, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನದಲ್ಲಿ ಸಿನಿಮಾ ಕಲೆಕ್ಷನ್ ಉತ್ತಮವಾಗಿದೆ ಅಂತಿವೆ ಮೂಲಗಳು.

  ಈ ವಾರ 'ಹೆಡ್‌ ಬುಷ್'ಗೆ ನಿರ್ಣಾಯಕ!

  ಈ ವಾರ 'ಹೆಡ್‌ ಬುಷ್'ಗೆ ನಿರ್ಣಾಯಕ!

  'ಹೆಡ್ ಬುಷ್' ಈ ವಾರ ಥಿಯೇಟರ್‌ನಲ್ಲಿ ಗಟ್ಟಿಯಾಗಿ ನೆಲೆಯೂರಬೇಕಿದೆ. ಯಾಕಂದ್ರೆ ಮುಂದಿನ ವಾರ 'ಗಂಧದ ಗುಡಿ' ಬಿಡುಗಡೆಯಾಗುತ್ತಿದೆ. ಈಗಾಲೇ ಸಿನಿಮಾದ ಬುಕಿಂಗ್ ಕೂಡ ಓಪನ್ ಆಗಿದೆ. ಹೀಗಾಗಿ 'ಕಾಂತಾರ' ಹಾಗೂ 'ಗಂಧದ ಗುಡಿ' ನಡುವೆ ಬಿಗ್ ಫೈಟ್ ಮಾಡಬೇಕಾಗಬಹುದು. ಸದ್ಯ ಬಾಕ್ಸಾಫೀಸ್ ಕಲೆಕ್ಷನ್ ಸ್ಟಡಿಯಾಗಿದ್ದು, ಹಬ್ಬ ಮುಗಿದ ಬಳಿಕ ಬಾಕ್ಸಾಫೀಸ್‌ನಲ್ಲಿ ಹೇಗೆ ಸದ್ದು ಮಾಡಬಹುದು ಅನ್ನೋ ಕುತೂಹಲವಿದೆ.

  English summary
  Dhananjay Starrer Head Bush Movie Box Office Collection Day 3 Report, Know More.
  Monday, October 24, 2022, 19:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X