For Quick Alerts
  ALLOW NOTIFICATIONS  
  For Daily Alerts

  ಅಂಬಾಸಿಡರ್ ಕಾರಿಗೆ 'ಹೆಡ್‌ಬುಷ್' ಪೋಸ್ಟರ್ ಅಂಟಿಸಿ ಪ್ರಚಾರಕ್ಕೆ ಬಿಟ್ಟ ಡಾಲಿ: ಎಲ್ಲೆಲ್ಲಿ ಓಡುತ್ತೆ?

  |

  'ಬಡವ ರಾಸ್ಕಲ್' ಸಿನಿಮಾ ನಿರ್ಮಾಣದ ಬಳಿಕ ಡಾಲಿ ಧನಂಜಯ್ ಮತ್ತೊಂದು ಸಿನಿಮಾಗೆ ಕೈ ಹಾಕಿದ್ದಾರೆ. ಅದುವೇ 'ಹೆಡ್‌ಬುಷ್'. ಭೂಗತಲೋಕದ ಮಾಜಿ ಡಾನ್ ಜಯರಾಜ್ ಚರಿತ್ರೆಯನ್ನು ಆಧರಿಸಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ.

  ಕಳೆದ ಕೆಲವು ದಿನಗಳಿಂದ 'ಹೆಡ್ ಬುಷ್' ಸಿನಿಮಾ ವಿವಾದಗಳಿಂದಲೇ ಹೆಸರು ಮಾಡಿತ್ತು. ಜಯರಾಜ್ ಪುತ್ರ ಹಾಗೂ ಸೊಸೆ 'ಹೆಡ್ ಬುಷ್' ಸಿನಿಮಾದ ವಿರುದ್ಧ ತಿರುಗಿಬಿದ್ದಿದ್ದಾರೆ. ಡಾಲಿ ಧನಂಜಯ್ ಹಾಗೂ ಸಿನಿಮಾ ತಂಡದ ವಿರುದ್ಧ ಕಿಡಿಕಾರುತ್ತಿದ್ದಾರೆ. ಈ ಮಧ್ಯೆನೇ ಭರ್ಜರಿ ಪ್ರಚಾರಕ್ಕೆ ಚಿತ್ರತಂಡ ಮುಂದಾಗಿದೆ.

  'ನಾನು ನಿನ್ನ ಸಹವಾಸ ಮಾಡಿದ್ದಕ್ಕೆ ನನ್ನ ಹೆಂಡ್ತಿ ಮನೆ ಬಿಟ್ಟು ಹೋಗಿದ್ಲು': ಡಾಲಿಗೆ ಯೋಗಿ ಅವಾಜ್!'ನಾನು ನಿನ್ನ ಸಹವಾಸ ಮಾಡಿದ್ದಕ್ಕೆ ನನ್ನ ಹೆಂಡ್ತಿ ಮನೆ ಬಿಟ್ಟು ಹೋಗಿದ್ಲು': ಡಾಲಿಗೆ ಯೋಗಿ ಅವಾಜ್!

  ಅಂಬಾಸಿಡರ್ ಕಾರಿಗೆ 'ಹೆಡ್ ಬುಷ್' ಪೋಸ್ಟರ್

  'ಹೆಡ್ ಬುಷ್' ಸಿನಿಮಾದ ಪ್ರಚಾರವನ್ನು ವಿಭಿನ್ನವಾಗಿ ಮಾಡುವುದಕ್ಕೆ ಚಿತ್ರತಂಡ ಮುಂದಾಗಿದೆ. ಡಾನ್ ಜಯರಾಜ್ ಬದುಕಿದ್ದಾಗ ಅಂಡಾಸಿಡರ್ ಕಾರನ್ನು ಬಳಸುತ್ತಿದ್ದರು. ಹೀಗಾಗಿ ಅಂಬಾಸಿಡರ್‌ ಕಾರನ್ನೇ ಪ್ರಚಾರದ ಪ್ರಮುಖ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.

  ಬಿಳಿ ಬಣ್ಣದ ಅಂಬಾಸಿಡರ್ ಕಾರಿಗೆ 'ಹೆಡ್‌ ಬುಷ್' ಸಿನಿಮಾದ ಪೋಸ್ಟರ್ ಅನ್ನು ಅಂಟಿಸಲಾಗುತ್ತಿದೆ. ಈ ಕಾರು ಊರೆಲ್ಲಾ ಸುತ್ತುತ್ತಾ ಸಿನಿಮಾದ ಪ್ರಚಾರ ಮಾಡುತ್ತಿದೆ. ಇಂತಹದ್ದೊಂದು ವಿಶಿಷ್ಟ ಕಲ್ಪನೆಗೆ ಚಿತ್ರತಂಡ ಮುಂದಾಗಿದೆ.

  ಇಡೀ ರಾಜ್ಯ ಸುತ್ತಲಿದೆ 'ಹೆಡ್ ಬುಷ್' ಕಾರು

  'ಹೆಡ್ ಬುಷ್' ಪೋಸ್ಟರ್ ಅಂಟಿಸಿದ ನಾಲ್ಕು ಕಾರುಗಳು ಈಗಾಗಲೇ ಸಿದ್ಧವಾಗಿವೆ. ಈ ಕಾರು ಇಡೀ ರಾಜ್ಯವನ್ನು ಸುತ್ತಲಿವೆ. ರಾಜ್ಯದ ಪ್ರತಿಯೊಂದು ಮೂಲೆ ಮೂಲೆಗೂ ಹೋಗಿ ಈ ನಾಲ್ಕು ಕಾರುಗಳು ಪ್ರಚಾರವನ್ನು ಮಾಡಲಿದೆ. ಈ ಶೀಘ್ರದಲ್ಲಿಯೇ ಈ ಕಾರುಗಳು ರಸ್ತೆಗಿಳಿಯಲಿವೆ.

  ಧನಂಜಯ್ ನಿರ್ಮಿಸಿ ನಟಿಸಿರೋ 'ಹೆಡ್ ಬುಷ್' ಸಿನಿಮಾ ಅಕ್ಟೋಬರ್ 21ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಹೀಗಾಗಿ ಕಳೆದ ಕೆಲವು ದಿನಗಳಿಂದ ಧನಂಜಯ್ ಡಾನ್ ಜಯರಾಜ್ ಅವತಾರವೆತ್ತಿ ಸುತ್ತುತ್ತಿದ್ದಾರೆ. ಡಾ.ರಾಜ್‌ ಕಪ್ ಕ್ರಿಕೆಟ್ ಪಂದ್ಯ ಆಡಲು ದುಬೈಗೆ ತೆರಳುವಾಗಲೂ ಧನಂಜಯ್ ರೆಟ್ರೋ ಲುಕ್‌ನಲ್ಲಿ ಪ್ರಯಾಣ ಮಾಡಿದ್ದರು. ಅಲ್ಲದೆ ದುಬೈನಲ್ಲೂ ಜಯರಾಜ್ ಲುಕ್‌ನಲ್ಲಿ ಸುತ್ತಾಡಿದ್ದರು.

  Dhananjay Starrer Head Bush Team Ambassador Car Promotion

  'ಮಾನ್ಸೂನ್ ರಾಗ' ಬಳಿಕ 'ಹೆಡ್ ಬುಷ್'

  ಇತ್ತೀಚೆಗಷ್ಟೇ ಡಾಲಿ ಧನಂಜಯ್ ಹಾಗೂ ರಚಿತಾ ರಾಮ್ ಅಭಿನಯದ 'ಮಾನ್ಸೂನ್ ರಾಗ' ರಿಲೀಸ್ ಆಗಿತ್ತು. ಆದರೆ, ಈ ಸಿನಿಮಾ ಥಿಯೇಟರ್‌ನಲ್ಲಿ ಯಾಕೋ ಹೆಚ್ಚಾಗಿ ಸದ್ದು ಮಾಡಲೇ ಇಲ್ಲ. ಈಗ ಪಕ್ಕಾ ಮಾಸ್ ಹಾಗೂ ಕಮರ್ಷಿಯಲ್ ಸಿನಿಮಾವನ್ನು ರಿಲೀಸ್ ಮಾಡಲು ಮುಂದಾಗಿದ್ದಾರೆ.

  ಹೆಡ್‌ ಬುಷ್ ಸಿನಿಮಾದಲ್ಲಿ ಲೂಸ್ ಮಾದ ಯೋಗಿ, ರಘು ಮುಖರ್ಜಿ ಸೇರಿದಂತೆ ಸ್ಯಾಂಡಲ್‌ವುಡ್ ಸ್ಟಾರ್ ನಟರು ಒಂದೊಂದು ಪಾತ್ರದಲ್ಲಿ ನಟಿಸಿದ್ದಾರೆ. ಡಾಲಿ ಧನಂಜಯ್ ಡಾನ್ ಜಯರಾಜ್ ಅವತಾರವೆತ್ತಿದ್ದಾರೆ. ಯುವಪ್ರತಿಭೆ ಶೂನ್ಯ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.

  English summary
  Dhananjay Starrer Head Bush Team Ambassador Car Promotion, Know More
  Friday, September 30, 2022, 21:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X