For Quick Alerts
  ALLOW NOTIFICATIONS  
  For Daily Alerts

  57 ದಿನ ಶೂಟ್ ಮಾಡಿದ್ದು 'ಮಾರ್ಟಿನ್' ಕ್ಲೈಮ್ಯಾಕ್ಸ್ ಅಲ್ಲ: ಧ್ರುವ ಸಿನಿಮಾದ ಸೀಕ್ರೆಟ್ ರಿವೀಲ್!

  |

  ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ರಿಲೀಸ್‌ಗೆ ರೆಡಿಯಾಗಬೇಕಿತ್ತು. ಆದರೆ, ಹಲವು ಕಾರಣಗಳಿಂದ ಸಿನಿಮಾ ಶೂಟಿಂಗ್ ಇನ್ನೂ ಮುಗಿದಿಲ್ಲ. ಈ ಕಾರಣಕ್ಕೆ ಮುಂದಿನ ವರ್ಷ ರಿಲೀಸ್ ಆಗುತ್ತಿದೆ.

  'ಮಾರ್ಟಿನ್' ಸ್ಯಾಂಡಲ್‌ವುಡ್‌ನಲ್ಲಿ ನಿರ್ಮಾಣ ಆಗಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ. ಧ್ರುವ ಸರ್ಜಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಜಗತ್ತಿಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಕಾರಣಕ್ಕೆ ಧ್ರುವ ಫ್ಯಾನ್ಸ್ ಸಿನಿಮಾಗಾಗಿ ಎದುರು ನೋಡುತ್ತಿದ್ದರು.

  'ಪೊಗರು' ಸಿನಿಮಾ ಕೂಡ ಮೂರು ಭಾಷೆಯಲ್ಲಿ ರಿಲೀಸ್ ಆಗಿತ್ತು. ತೆಲುಗು, ತಮಿಳು ಭಾಷೆಯಲ್ಲೂ 'ಪೊಗರು' ರಿಲೀಸ್ ಮಾಡಿದ್ದರು. ಈಗ 'ಮಾರ್ಟಿನ್' ಸಿನಿಮಾವನ್ನು 5 ಭಾಷೆಯಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಸದ್ಯ ಒಳ್ಳೆ ಹುಡುಗ ಪ್ರಥಮ್ ಸಿನಿಮಾ ಬಗ್ಗೆ ಧ್ರುವ ಫ್ಯಾನ್ಸ್ ಖುಷಿ ಪಡುವ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.

  'ಮಾರ್ಟಿನ್' ಕ್ಲೈಮ್ಯಾಕ್ಸ್‌ಗೆ ಕಾತುರ

  'ಮಾರ್ಟಿನ್' ಕ್ಲೈಮ್ಯಾಕ್ಸ್‌ಗೆ ಕಾತುರ

  'ಮಾರ್ಟಿನ್' ಸಿನಿಮಾ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿತ್ತು. ಧ್ರುವ ಸರ್ಜಾ ಸಿನಿಮಾದ ಕ್ಲೈಮ್ಯಾಕ್ಸ್ ಅನ್ನು ಭರ್ಜರಿಯಾಗಿ ಶೂಟ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿದ್ದು, ಸುಮಾರು 15 ದಿನಗಳ ಕಾಲ ಶೂಟಿಂಗ್ ನಡೆಯಲಿದೆ ಎಂದು ಸುದ್ದಿಯಾಗಿತ್ತು. ಅಲ್ಲದೆ ಈ ಸಿನಿಮಾ ಕ್ಲೈಮ್ಯಾಕ್ಸ್ ಸೀನ್‌ ಅನ್ನು ಸಾಹಸ ನಿರ್ದೇಶಕ ರವಿವರ್ಮಾ ಕಂಪೋಸ್ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಹೀಗಾಗಿ 'ಮಾರ್ಟಿನ್' ಕ್ಲೈಮ್ಯಾಕ್ಸ್ ಬಗ್ಗೆ ಕುತೂಹಲ ದುಪ್ಪಟ್ಟಾಗಿತ್ತು. ಆದ್ರೀಗ ನಟ-ನಿರ್ದೇಶಕ ಪ್ರಥಮ್ ಹೊಸ ಸೀಕ್ರೆಟ್ ಅನ್ನು ರಿವೀಲ್ ಮಾಡಿದ್ದಾರೆ.

  57 ದಿನ ಮಾರ್ಟಿನ್ ಕ್ಲೈಮ್ಯಾಕ್ಸ್ ಶೂಟ್

  57 ದಿನ ಮಾರ್ಟಿನ್ ಕ್ಲೈಮ್ಯಾಕ್ಸ್ ಶೂಟ್

  ಒಳ್ಳೆ ಹುಡುಗ ಪ್ರಥಮ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕುಟುಂಬಕ್ಕೆ ತೀರಾ ಹತ್ತಿರ. ಅವರ ಮನೆಯ ಪ್ರತಿಯೊಂದು ಕಾರ್ಯಕ್ರಮದಲ್ಲೂ ಪ್ರಥಮ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹೀಗಾಗಿ ಧ್ರುವ ಸರ್ಜಾ ಸಿನಿಮಾ ಬಗ್ಗೆ ಅವರು ಕೊಟ್ಟ ಮಾಹಿತಿ ಅಭಿಮಾನಿಗಳ ಕಣ್ಣರಳಿಸಿದೆ. " ಧ್ರುವ ಸರ್ಜಾ ಸಿನಿಮಾ ಶೂಟಿಂಗ್ ನಡೆಯುತ್ತಲೇ ಇದೆ. 55-56 ದಿನಗಳಿಂದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಲೇ ಇದೆ. ಬಹುಶ: 55 ದಿನ ಯಾರೂ ಶೂಟ್ ಮಾಡಿಲ್ಲ. ದೇಶದ ಮೊದಲನೇ ಸಿನಿಮಾ ಅನಿಸುತ್ತೆ. ಮೊನ್ನೆಗೆ 56ನೇ ದಿನ ಗ್ರಹಣ ಅಂತ ಬ್ರೇಕ್ ಕೊಟ್ಟಿದ್ದರು. ಒಂದೇ ಸಿನಿಮಾ 57 ದಿನಗಳ ಕಾಲ ಶೂಟ್ ಆದ ಸಿನಿಮಾ ಅದು ಮಾರ್ಟಿನ್." ಎಂದು ಹೇಳಿದ್ದಾರೆ.

  57 ದಿನ ಬರೀ ಪ್ರಿ-ಕ್ಲೈಮ್ಯಾಕ್ಸ್ ಶೂಟ್

  57 ದಿನ ಬರೀ ಪ್ರಿ-ಕ್ಲೈಮ್ಯಾಕ್ಸ್ ಶೂಟ್

  'ಮಾರ್ಟಿನ್' ಸಿನಿಮಾ ಕ್ಲೈಮ್ಯಾಕ್ಸ್ ಇನ್ನೂ ಶೂಟ್ ಆಗಿಲ್ಲ. 57 ದಿನಗಳ ಕಾಲ ಶೂಟ್ ಪ್ರಿ ಕ್ಲೈಮ್ಯಾಕ್ಸ್ ಶೂಟಿಂಗ್ ಅಷ್ಟೆ ಅಂತ ವೇದಿಕೆ ಪ್ರಥಮ್ ಹೇಳಿದ್ದಾರೆ. "ಅದೂ ಕ್ಲೈಮ್ಯಾಕ್ಸ್ ಅಲ್ಲ. ಇದು ಕ್ಲೈಮ್ಯಾಕ್ಸ್ ಫೈಟ್. ಅದಾದ ಬಳಿಕ ಕ್ಲೈಮ್ಯಾಕ್ಸ್. ನಾನು ಕೆಲವು ದಿನಗಳ ಕಾಲ ಶೂಟಿಂಗ್ ಹೋಗಿದ್ದೆ." ಎಂದು ಪ್ರಥಮ್ ಹೇಳಿದ್ದಾರೆ. ಹೀಗಾಗಿ ಮಾರ್ಟಿನ್ ಸಿನಿಮಾ ಬಗ್ಗೆ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಕ್ಲೈಮ್ಯಾಕ್ಸ್ ಹೇಗಿರುತ್ತೋ? ಸಿನಿಮಾ ಯಾವಾಗ ನೋಡುತ್ತೇವೋ? ಅಂತ ಕಾದು ಕೂತಿದ್ದಾರೆ.

  ಅರ್ಜುನ್-ಧ್ರುವ ಕಾಂಬೋ ಸಿನಿಮಾ

  ಅರ್ಜುನ್-ಧ್ರುವ ಕಾಂಬೋ ಸಿನಿಮಾ

  ಎ ಪಿ ಅರ್ಜುನ್ 2012ರಲ್ಲಿ ಧ್ರುವ ಸರ್ಜಾ ಸಿನಿಮಾ ಆಕ್ಷನ್ ಕಟ್ ಹೇಳಿದ್ದರು. ಆ ಬಳಿಕ ಮತ್ತೆ ಅರ್ಜುನ್ ಹಾಗೂ ಧ್ರುವ ಒಟ್ಟಿಗೆ ಸಿನಿಮಾ ಮಾಡಿರಲಿಲ್ಲ. ಈಗ ಮತ್ತೆ 10 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗಿದೆ. ಅರ್ಜುನ್ ಹಾಗೂ ಧ್ರುವ ಕಾಂಬಿನೇಷನ್ ಸಿನಿಮಾ 'ಮಾರ್ಟಿನ್' ಈ ಕಾರಣಕ್ಕಾಗಿಯೇ ಸಾಕಷ್ಡು ಕುತೂಹಲವನ್ನು ಕೆರಳಿಸಿದೆ. ಇದೇ ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರೀಕರಣ ತಡವಾಗಿದ್ದರಿಂದ 2023ಕ್ಕೆ 'ಮಾರ್ಟಿನ್' ರಿಲೀಸ್ ಪೋಸ್ಟ್‌ಪೋನ್ ಆಗಿದೆ.

  English summary
  Dhruva Sarja Starrer Martin Movie Climax Shoot For 57 Days Say Pratham, Know More.
  Friday, November 11, 2022, 23:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X