Don't Miss!
- Lifestyle
ಸಮಂತಾ ಮಯೋಸೈಟಿಸ್ನಿಂದ ಚೇತರಿಸಿಕೊಳ್ಳಲು ಪಾಲಿಸುತ್ತಿರುವ ಡಯಟ್
- Sports
IND vs NZ: ಯುಜ್ವೇಂದ್ರ ಚಾಹಲ್ ನನ್ನ ಬ್ಯಾಟಿಂಗ್ ಕೋಚ್ ಎಂದ ಸೂರ್ಯಕುಮಾರ್ ಯಾದವ್
- News
Srirangapatna bypass: ಸಂಚಾರಕ್ಕೆ ಮುಕ್ತವಾದ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ವೇಯ ಶ್ರೀರಂಗಪಟ್ಟಣ ಬೈಪಾಸ್
- Technology
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ದಿಯಾ' ಹೀರೊಗೆ 50 ಮಂದಿ ಸೆಲೆಬ್ರೆಟಿಗಳ ಸಾಥ್: 'ಕೆಟಿಎಂ' ಟೀಸರ್ ಗ್ರ್ಯಾಂಡ್ ರಿಲೀಸ್!
ಸ್ಯಾಂಡಲ್‌ವುಡ್‌ನಲ್ಲಿ ವಿಶೇಷ ಎನಿಸಿಕೊಂಡ ಹಲವು ಸಿನಿಮಾಗಳಿವೆ. ಇಂತಹ ಸಿನಿಮಾಗಳಲ್ಲಿ 'ದಿಯಾ' ಕೂಡ ಒಂದು. ಬಹುತೇಕ ಹೊಸಬರೇ ನಟಿಸಿದ್ದ ಈ ಸಿನಿಮಾ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಈ ಸಿನಿಮಾ ಮೂಲಕ ಇಬ್ಬರು ಹೀರೊಗಳು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಭರವಸೆ ಮೂಡಿಸಿದ್ದರು.
'ದಿಯಾ' ಸಿನಿಮಾದ ಇಬ್ಬರು ಹೀರೊಗಳಲ್ಲಿ ಒಬ್ಬರು ದೀಕ್ಷಿತ್ ಶೆಟ್ಟಿ ಹೊಸ ಭರವಸೆ ಮೂಡಿಸಿದ್ದರು. ಅದೇ ಹೀರೊ ಹೊಸ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಅಂದ್ಹಾಗೆ ಆ ಸಿನಿಮಾದ ಹೆಸರು ಕೂಡ ವಿಭಿನ್ನವಾಗಿದೆ. ಅದುವೇ 'ಕೆಟಿಎಂ'.
ದೀಕ್ಷಿತ್ ಶೆಟ್ಟಿ ನಟನೆಯ ಹೊಸ ಸಿನಿಮಾ 'ಕೆಟಿಎಂ' ಟೀಸರ್ ರಿಲೀಸ್ ಆಗಿದೆ. ಈ ಸಿನಿಮಾದ ಟೀಸರ್ ಅನ್ನು ವಿಶೇಷವಾಗಿ ರಿಲೀಸ್ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನ ಸುಮಾರು 50 ಮಂದಿ ಸೆಲೆಬ್ರೆಟಿಗಳು 'ಕೆಟಿಎಂ' ಟೀಸರ್ ರಿಲೀಸ್ ಮಾಡಿದ್ದಾರೆ. ಈ ಐವತ್ತು ಮಂದಿ ಸೆಲೆಬ್ರೆಟಿಗಳೂ ಸೋಶಿಯಲ್ ಮೀಡಿಯಾದಲ್ಲಿ ಏಕಕಾಲಕ್ಕೆ ಟೀಸರ್ ಬಿಡುಗಡೆ ಶುಭ ಕೋರಿದ್ದಾರೆ.
'ಅಥರ್ವ' ಸಿನಿಮಾಗೆ ಆಕ್ಷನ್ ಕಟ್ ಹೇಳಿರೋ ಅರುಣ್ 'ಕೆಟಿಎಂ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಅಂದ್ಹಾಗೆ ಈ ನಿರ್ದೇಶಕರ ಎರಡನೇ ಸಿನಿಮಾವಿದು. ಸದ್ಯ 'ಕೆಟಿಎಂ' ಸಿನಿಮಾದ ಶೂಟಿಂಗ್ ಮುಗಿದಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದು, ಪ್ರಚಾರವನ್ನು ಆರಂಭಿಸಿದೆ.
ವಿಕ್ರಮ್ ರವಿಚಂದ್ರನ್, ಶೃತಿ ಹರಿಹರನ್, ವಿಜಯ ರಾಘವೇಂದ್ರ, ದೀಪಿಕಾ ದಾಸ್, ಅನುಪಮಾ ಗೌಡ, ನವೀನ್ ಶಂಕರ್, ಮೇಘಾ ಶೆಟ್ಟಿ, ಸಿದ್ದು ಮೂಲಿಮನಿ, ಖುಷಿ ರವಿ, ಇಶಾನ್, ಶೈನ್ ಶೆಟ್ಟಿ ಸೇರಿದಂತೆ ಸುಮಾರು 50 ಮಂದಿ ಸೆಲೆಬ್ರೆಟಿಗಳು ಸೋಶಿಯಲ್ ಮೀಡಿಯಾದಲ್ಲಿ ಟೀಸರ್ ಬಿಡುಗಡೆ ಮಾಡಿದ್ದಾರೆ.

ಅಂದ್ಹಾಗೆ 'ಕೆಟಿಎಂ' ಸಿನಿಮಾ ಪಕ್ಕಾ ಲವ್ ಸ್ಟೋರಿ. ಈ ಸಿನಿಮಾದಲ್ಲಿ ದೀಕ್ಷಿತ್ ಶೆಟ್ಟಿ ನಾಯಕ ನಟನಾಗಿ ನಟಿಸಿದ್ದು, ನಾಲ್ಕು ಶೇಡ್‌ನಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕಾಜಲ್ ಕುಂದರ್ ಹಾಗೂ ಸಂಜನಾ ಡೋಸ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಷಾ ಭಂಡಾರಿ, ಪ್ರಕಾಶ್ ತುಮಿನಾಡು, ರಘು ರಮಣಕೊಪ್ಪ, ಶಾನಿಲ್ ಗುರು, ಬಾಬು ಹಿರಿಯಣಯ್ಯ, ದೇವ್ ದೇವಯ್ಯ,ಅಭಿಷೇಕ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತೋಷ್ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.
'ಕೆಟಿಎಂ' ಸಿನಿಮಾವನ್ನು ವಿನಯ್ ನಿರ್ಮಾಣ ಮಾಡಿದ್ದಾರೆ. ನವೀನ್ ಕ್ಯಾಮೆರಾ ವರ್ಕ್, ಚೇತನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಡುಪಿ, ಮಂಗಳೂರು, ಕಾರ್ಕಳ, ಬೆಂಗಳೂರಿನಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದೆ. ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮಾರ್ಚ್ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.