For Quick Alerts
  ALLOW NOTIFICATIONS  
  For Daily Alerts

  'ಅಬ ಜಬ ದಬ' ಅಂತಿರೋ ಪೃಥ್ವಿ ಅಂಬರ್ ಸಿನಿಮಾ ಕಥೆಯೇನು?

  |

  ಸದ್ಯ ಕನ್ನಡ ಸಿನಿಮಾ ಯಶಸ್ಸಿನ ಉತ್ತುಂಗದಲ್ಲಿದೆ. ಎಲ್ಲಾ ಭಾಷೆಯವರ ಕಣ್ಣು ಕನ್ನಡ ಚಿತ್ರರಂಗದ ಮೇಲೆ ಬಿದ್ದಿದೆ. ಇಂತಹ ಸಂದರ್ಭದಲ್ಲಿ ಸ್ಮಾಲ್ ಬಜೆಟ್ ಸಿನಿಮಾಗಳೂ ಕೂಡ ಗಮನ ಸೆಳೆಯುವುದಕ್ಕೆ ಶುರು ಮಾಡಿದೆ.

  ಕೆಲವು ಸಿನಿಮಾಗಳು ಟೈಟಲ್‌ನಿಂದಲೇ ಗಮನ ಸೆಳೆಯುತ್ತವೆ. ಸದ್ಯ ಶೀರ್ಷಿಕೆಯಿಂದ ಗಮನ ಸೆಳೆದ ಸಿನಿಮಾಗಳಲ್ಲಿ 'ಅಬ ಜಬ ದಬ' ಹೇಳುವುದಕ್ಕೆ ಸ್ವಲ್ಪ ಕಷ್ಟ ಅಂತ ಅನಿಸಿದರೂ, ಈ ಟೈಟಲ್ ಹಿಂದೊಂದು ಮುಗ್ಧವಾದ, ಸುಂದರವಾದ ಕಥೆಯಿದೆ.

  'ಕನ್ನಡ್ ಗೊತ್ತಿಲ್ಲ' ಅನ್ನೋ ಟೈಟಲ್ ಇಟ್ಟು ಮಯೂರ ರಾಘವೇಂದ್ರ ಸಿನಿಮಾ ನಿರ್ದೇಶನ ಮಾಡಿದ್ದರು. ಈಗ ಅದೇ ನಿರ್ದೇಶಕ ಔಟ್ ಅಂಡ್ ಔಟ್ ಹಾಸ್ಯ ಭರಿತ 'ಅಬ ಜಬ ದಬ' ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.

  ಅಂದ್ಹಾಗೆ ಈ ಟೈಟಲ್ ಹುಟ್ಟಿದ್ದೇಗೆ ಅನ್ನೋದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಈ ಟೈಟಲ್ ಬಗ್ಗೆ ನಿರ್ದೇಶಕ ಮಯೂರ ರಾಘವೇಂದ್ರ ಹೀಗಂತಾರೆ. "ಕನ್ನಡ್ ಗೊತ್ತಿಲ್ಲ ಚಿತ್ರದ ನಂತರ ನಾನು ರಚಿತಾ ರಾಮ್ ಅವರಿಗೊಂದು ಸಿನಿಮಾ ಮಾಡಬೇಕಿತ್ತು. ಅದು ದೊಡ್ಡ ಬಜೆಟ್ ನ ಚಿತ್ರವಾಗಿರುವುದರಿಂದ ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಈ ಔಟ್ ಎಂಡ್ ಔಟ್ ಕಾಮಿಡಿಯಿರುವ ಈ ಚಿತ್ರದ ಕಥೆ ಸಿದ್ದಾವಾಯಿತು. ಕಥೆಗೆ ಒಳ್ಳೆಯ ಟೈಟಲ್ ಬೇಕಿತ್ತು. ಮನೆಯಲ್ಲಿ ನನ್ನ ಅಣ್ಣ, ಅವಳ ಮಗಳಿಗೆ ಅದೇನು ಹೇಳುತ್ತಾಳೊ.. ಗೊತ್ತೆ ಆಗಲ್ಲ "ಅಬ ಜಬ ದಬ" ಅಂತಾಳೆ ಎಂದ. ನಾನು ತಕ್ಷಣ ಈ ಶೀರ್ಷಿಕೆ ಚೆನ್ನಾಗಿದೆ ಅಂತ ಅದೇ ಇಟ್ಟಿದ್ದೀನಿ." ಅಂತ ಟೈಟಲ್‌ ಬಗ್ಗೆ ರಿವೀಲ್ ಮಾಡಿದ್ದಾರೆ.

  'ಅಬ ಜಬ ದಬ' ಈ ಸಿನಿಮಾವನ್ನು ಅನಂತ ಕೃಷ್ಣ ನಿರ್ಮಾಣ ಮಾಡುತ್ತಿದ್ದಾರೆ. ಪೃಥ್ವಿ ಅಂಬರ್ - ಅಂಕಿತ ಅಮರ್ ನಾಯಕ - ನಾಯಕಿ. ಇವರೊಂದಿಗೆ ಅಚ್ಯುತಕುಮಾರ್ ಕುಮಾರ್, ಸುಧಾರಾಣಿ, ಹಿರಿಯ ನಟಿ ಊರ್ವಶಿ, ಬಾಬು ಹಿರಣ್ಣಯ್ಯ, ಸಂಗೀತಾ ಭಟ್ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಿರಿಧರ್ ದಿವಾನ್ ಛಾಯಾಗ್ರಹಣವಿದ್ಧರೆ. ಸಮೀರ ಸಿಂಹ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.‌

  Dia Fame Pruthvi Ambaar Starrer Aba Jaba Daba Movie Shooting In Full Swing

  ಪೃಥ್ವಿ ಅಂಬರ್ ಹಾಗೂ ಅಂಕಿತ ಅಮರ್ ನಟಿಸುತ್ತಿರುವ ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ. ಬೆಂಗಳೂರಿನಲ್ಲಿ ಶೂಟಿಂಗ್ ನಡೆದಿದ್ದು, ಇನ್ನು ಹತ್ತು ದಿನಗಳ ಚಿತ್ರೀಕರಣ ಮುಗಿದರೆ, ಬಹುತೇಕ ಶೂಟಿಂಗ್ ಮುಗಿದಂತೆ.

  "ನನಗೆ ಮಯೂರ ರಾಘವೇಂದ್ರ ಕಥೆ ಇಷ್ಟವಾಯಿತು. ಇದು ಬರೀ ಕಾಮಿಡಿ ಸಿನಿಮಾ ಅಲ್ಲ. ಫ್ಯಾಂಟಸಿ ಕಾಮಿಡಿ ಸಿನಿಮಾ. ಚಿತ್ರದ ಹಾಡುಗಳು ಚೆನ್ನಾಗಿದೆ. ಊರ್ವಶಿ ಅವರಂತಹ ಹಿರಿಯ ನಟರೊಂದಿಗೆ ನಟಿಸಿದ್ದು ಸಂತೋಷವಾಗಿದೆ. ನನ್ನ ಪಾತ್ರ ಅದ್ಭುತವಾಗಿದೆ" ಎನ್ನುತ್ತಾರೆ ಪೃಥ್ವಿ ಅಂಬರ್.

  ಈ ಸಿನಿಮಾದಲ್ಲಿ ಎಸ್.ಪಿ.ಬಿ ಅವರ ಅಭಿಮಾನಿಯಾಗಿ ನಾಯಕಿ ಅಂಕಿತ ಅಮರ್ ಕಾಣಿಸಿಕೊಂಡಿದ್ದಾರೆ. ಇದು ಅಂಕಿತ ನಟಿಸುತ್ತಿರುವ ಮೊದಲ ಸಿನಿಮಾ. ಪ್ರಿಯಾ ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ವರ್ಷಗಳ ಬಳಿಕ ಸಂಗೀತ ಭಟ್ ಮತ್ತೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸುನಂದಾ ಕಾಂಬ್ರೇಕರ್ ಅನ್ನೋ ಪಾತ್ರ ಇವರದ್ದು. ಹೀಗಾಗಿ ಔಟ್ ಅಂಡ್ ಔಟ್ ಕಾಮಿಡಿ ಸಿನಿಮಾ ಸದ್ಯದ್ರಲ್ಲೇ ಪ್ರೇಕ್ಷಕರನ್ನು ರಂಜಿಸಲಿದೆ.

  English summary
  Dia Fame Pruthvi Ambaar Starrer Aba Jaba Daba Movie Shooting In Full Swing, Know More.
  Friday, October 14, 2022, 22:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X