Just In
Don't Miss!
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರು to ಹಾಸನ: 192 ಕಿ.ಮೀ ಸೈಕಲ್ ತುಳಿದ ದಿಗಂತ್!
ಫಿಟ್‌ನೆಸ್ ಫ್ರೀಕ್ ನಟರು ಸಾಕಷ್ಟಿದ್ದಾರೆ ಸ್ಯಾಂಡಲ್‌ವುಡ್‌ನಲ್ಲಿ ಅದರಲ್ಲಿ ದಿಗಂತ್ ಸಹ ಒಬ್ಬರು. ಜಿಮ್‌ಗೆ ಹೋಗಿ ಬೆವರಿಳುವುದಕ್ಕಿಂತಲೂ ಹೊರಾಂಗಣ ವ್ಯಾಯಾಮಕ್ಕೆ ಹೆಚ್ಚು ಒತ್ತು ನೀಡುತ್ತಾರೆ ದಿಗಂತ್.
ನಿನ್ನೆಯಷ್ಟೆ ನಟ ದಿಗಂತ್ ಹೊಸ ಸಾಹಸವೊಂದನ್ನು ಮಾಡಿದ್ದಾರೆ. ಬರೋಬ್ಬರಿ 192 ಕಿ.ಮೀ ದೂರ ಸೈಕಲ್ ತುಳಿದಿದ್ದಾರೆ. ಬೆಂಗಳೂರಿನಿಂದ ಹಾಸನಕ್ಕೆ ಸೈಕಲ್ ಹೊಡೆದಿದ್ದಾರೆ ದಿಗಂತ್. ಕಾರಿನಲ್ಲಿ ಹೋದರೆ 3:30 ಗಂಟೆ ಸಮಯ ಹಿಡಿಯುವ ಹಾದಿಯನ್ನು ಸೈಕಲ್‌ನಲ್ಲಿ 8 ಗಂಟೆ 23 ನಿಮಿಷಕ್ಕೆ ಮುಗಿಸಿದ್ದಾರೆ ದಿಗಂತ್.
ಸಾಹಸ ಕ್ರೀಡೆಗಳ ಹವ್ಯಾಸ ಬೆಳೆಸಿಕೊಂಡಿರುವ ದಿಗಂತ್, ಆಗಾಗ್ಗೆ ಸೈಕಲ್ ಸವಾರಿ ಹೋಗುತ್ತಿರುತ್ತಾರೆ. ಜೊತೆಗೆ ಕೆಲ ಗೆಳೆಯರು ಹಾಗೂ ಪತ್ನಿ ಐಂದ್ರಿತಾ ರೇ ಅನ್ನೂ ಸಹ ಕರೆದೊಯ್ಯುತ್ತಾರೆ.
ತಮ್ಮ ಬೆಂಗಳೂರು-ಹಾಸನ ಸೈಕಲ್ ಸವಾರಿಯ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿರುವ ದಿಗಂತ್, 'ಬಹಳ ಅದ್ಭುತವಾದ ರೈಡ್ ಇದಾಗಿತ್ತು, ಈ ರೈಡ್, ಸಾಧನೆಯಲ್ಲ ಬದಲಿಗೆ ನನ್ನ ಸಹಿಷ್ಣುತೆಯ ಪರೀಕ್ಷೆ' ಎಂದು ಬರೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ಪತ್ನಿಯೊಂದಿಗೆ ಸೇರಿ ಮುಲ್ಕಿಯಲ್ಲಿ ಸರ್ಫಿಂಗ್ ಮಾಡಿದ್ದರು, ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದಕ್ಕೂ ಮುನ್ನಾ, ಸೇತುವೆಯೊಂದರ ಮೇಲಿಂದ ನೀರಿಗೆ ಹಿಮ್ಮುಖವಾಗಿ ಪಲ್ಟಿ ಹೊಡೆದಿದ್ದ ವಿಡಿಯೋವನ್ನು ಹಂಚಿಕೊಂಡಿದ್ದರು ದಿಗಂತ್.
ನಟ ಪುನೀತ್ ರಾಜ್‌ಕುಮಾರ್ ಸಹ ಗೆಳೆಯರೊಂದಿಗೆ ಸೈಕಲ್ ರೈಡ್‌ಗೆ ಹೋಗುತ್ತಿರುತ್ತಾರೆ. ಮಜಾ ಟಾಕೀಸ್‌ಗೆ ಬಂದಾಗ ಈ ಬಗ್ಗೆ ಮಾತನಾಡಿದ್ದ ಪುನೀತ್ ರಾಜ್‌ಕುಮಾರ್, 'ನನಗೆ ಸೈಕಲ್ ರೈಡ್‌ಗೆ ಹೋಗುವುದರಲ್ಲಿ ದಿಗಂತ್ ಸ್ಪೂರ್ತಿ, ನಾವೆಲ್ಲಾ ನಗರದಲ್ಲಿ ಸೈಕಲ್ ಹೊಡೆದರೆ, ಆತ ಬೆಂಗಳೂರಿನಿಂದ ಮೈಸೂರಿಗೆ ಸೈಕಲ್ ನಲ್ಲಿ ಬಂದುಬಿಡುತ್ತಾರೆ' ಎಂದಿದ್ದರು.