'ದೊಡ್ಡಹಟ್ಟಿ ಬೋರೇಗೌಡ' ಕಲಾತ್ಮಕ ಚಿತ್ರ ಅಲ್ಲ.. ಕಮರ್ಷಿಯಲ್ ಚಿತ್ರ !

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ಕಂಟೆಂಟ್ ಬೇಸ್ಡ್‌ ಸಿನಿಮಾಗಳು ಹೆಚ್ಚಾಗಿ ಸೆಟ್ಟೇರುತ್ತಿವೆ. ಒಂದ್ಕಡೆ ಪಕ್ಕಾ ಕಮರ್ಷಿಯಲ್ ಮಾಸ್ ಸಿನಿಮಾ. ಇನ್ನೊಂದು ಕಡೆ ಕಂಟೆಂಟ್ ಸಿನಿಮಾ. ಎರಡೂ ಪ್ರಕಾರದ ಸಿನಿಮಾಗಳನ್ನು ಬ್ಯಾಲೆನ್ಸ್ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ.

ಇಂತಹ ಕಂಟೆಂಟ್ ಅನ್ನೇ ನಂಬಿಕೊಂಡು ಮಾಡಿರುವ ಸಿನಿಮಾಗಳಲ್ಲಿ 'ದೊಡ್ಡಹಟ್ಟಿ ಬೋರೇಗೌಡ' ಕೂಡ ಒಂದು. ಪಕ್ಕಾ ಗ್ರಾಮೀಣ ಸೊಗಡಿನ ಈ ಸಿನಿಮಾ ತಂಡ ಸದ್ಯ ಟ್ರೈಲರ್ ಅನ್ನು ರಿಲೀಸ್ ಮಾಡಿದೆ. ಈ ಟ್ರೈಲರ್‌ಗೆ ಸಿನಿಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

'ದೊಡ್ಡಹಟ್ಟಿ ಬೋರೇಗೌಡ' ಸಿನಿಮಾವನ್ನು ಕೆ ಎಂ ರಘು ನಿರ್ದೇಶನ ಮಾಡಿದ್ದು, ಇದು ಪಕ್ಕಾ ಕಮರ್ಷಿಯಲ್ ಸಿನಿಮಾ, ಕಲಾತ್ಮಕ ಸಿನಿಮಾ ಅಂತ ಹೇಳುತ್ತಿದ್ದಾರೆ. " ನಾನು ಈ ಹಿಂದೆ 'ತರ್ಲೆ ವಿಲೇಜ್', 'ಪರಸಂಗ' ಸಿನಿಮಾಗಳನ್ನು ನಿರ್ದೇಶಿಸಿದ್ದೆ. ಈಗ ಗ್ರಾಮೀಣ ಸೊಗಡಿನ 'ದೊಡ್ಡಹಟ್ಟಿ ಬೋರೇಗೌಡ' ಚಿತ್ರವನ್ನು ನಿರ್ದೇಶಿಸಿದ್ದೇನೆ. ನಮ್ಮ ಚಿತ್ರ ಮನೆಯ ಸುತ್ತ ಹೆಣೆಯಲಾಗಿರುವ ಕಥೆ" ಎನ್ನುತ್ತಾರೆ ಕೆ ಎಂ ರಘು.

Doddahatti Boregowda is a Commercial Film Rather Than An Art Movie

ಗ್ರಾಮೀಣ ಪ್ರದೇಶದಲ್ಲಿ ಬಡವರಿಗೆ ಸರ್ಕಾರದಿಂದ ಆಶ್ರಯ ಯೋಜನೆಯಲ್ಲಿ ಮನೆಯನ್ನು ನೀಡುತ್ತಾರೆ. ವ್ಯಕ್ತಿಯೊಬ್ಬ ಆ ಮನೆಯನ್ನು ಪಡೆದುಕೊಳ್ಳಲು ಹೇಗೆಲ್ಲ ಕಷ್ಟ ಪಡುತ್ತಾನೆ ಎಂಬುದೇ ಈ ಸಿನಿಮಾದ ಕಥೆ. ಈಗಾಗಲೇ ಈ ಸಿನಿಮಾ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು, ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಗಿಟ್ಟಿಸಿಕೊಂಡಿದೆ.

'ದೊಡ್ಡಹಟ್ಟಿ ಬೋರೇಗೌಡ' ಸಿನಿಮಾ ಫೆಬ್ರವರಿ ತಿಂಗಳಲ್ಲಿ ತೆರೆಗೆ ಬರಲಿದೆ. ಈ ಸಿನಿಮಾ ವಿಶೇಷ ಅಂದ್ರೆ, ಈ ಕಮರ್ಷಿಯಲ್ ಸಿನಿಮಾಗಳಲ್ಲಿ ಗ್ರಾಮೀಣ ಪ್ರತಿಭೆಗಳೇ ಹೆಚ್ಚು ಅಭಿನಯಿಸಿವೆ. ಮೂರು ತಿಂಗಳ ಕಾಲ ಎಲ್ಲರಿಗೂ ತರಬೇತಿ ನೀಡಿ ಬಳಿಕ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ.

Doddahatti Boregowda is a Commercial Film Rather Than An Art Movie

ಮೈಸೂರಿನ ಬಳಿಯ ಬೀರಹುಂಡಿ ಎಂಬ ಹಳ್ಳಿಯ ಶಿವಣ್ಣ ಎಂಬುವವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಿಯಲ್ ಲೈಫ್‌ನಲ್ಲಿ ಗ್ರಾಮ ಪಂಚಾಯತಿ ಸದಸ್ಯರನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಂಗಭೂಮಿಯಲ್ಲಿ ನಟಿಸಿದ ಅನುಭವವಿದ್ದು,‌ ಇದು ಶಿವಣ್ಣ ಬೀರಹುಂಡಿಯ ಮೊದಲ ಸಿನಿಮಾ.

ಶಿವಣ್ಣ ಬೀರಹುಂಡಿ ಜೊತೆಗೆ ಗೀತಾ, ಲಾವಣ್ಯ, ಕಲಾರತಿ ಮಹದೇವ್, ಕಾತ್ಯಾಯಿನಿ, ಯೋಗೇಶ್ ಮುಂತಾದ ಕಲಾವಿದರು ನಟಿಸಿದ್ದಾರೆ. ಶಶಿಕುಮಾರ್ ಬಿ ಸಿ ಹಾಗೂ ಲೋಕೇಶ್ ಕೆ.ಎಂ ಸಿನಿಮಾವನ್ನು ನಿರ್ಮಿಸಿದ್ದಾರೆ.

More from Filmibeat

English summary
Doddahatti Boregowda is a Commercial Film Rather Than An Art Movie, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X