For Quick Alerts
  ALLOW NOTIFICATIONS  
  For Daily Alerts

  ದೊಡ್ಮನೆ ಮತ್ತೊಂದು ಕುಡಿ ಚಿತ್ರರಂಗಕ್ಕೆ ಎಂಟ್ರಿ:ಇನ್ಮುಂದೆ ಅಣ್ಣಾವ್ರ ಮೊಮ್ಮಕ್ಕಳ ದರ್ಬಾರ್!

  |

  ಸ್ಯಾಂಡಲ್‌ವುಡ್‌ಗೆ ಅಣ್ಣಾವ್ರ ಕುಟುಂಬದ ಕುಡಿ ಒಬ್ಬೊಬ್ಬರಾಗಿಯೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಮ್‌ಕುಮಾರ್ ಪುತ್ರಿ ಧನ್ಯಾ ರಾಮ್‌ಕುಮಾರ್ ಹಾಗೂ ಧೀರೇನ್ ರಾಮ್ ಕುಮಾರ್ ಬಳಿಕ ಮತ್ತೊಬ್ಬ ಅಣ್ಣಾವ್ರ ಮೊಮ್ಮಗ ಎಂಟ್ರಿ ಕೊಡುತ್ತಿದ್ದಾರೆ.

  ಡಾ.ರಾಜ್‌ಕುಮಾರ್ ಅವರ ಮಗಳು ಲಕ್ಷ್ಮಿ ಹಾಗೂ ಅಳಿಯ ಗೋವಿಂದರಾಜು ಪುತ್ರ ಷಣ್ಮುಖ ಗೋವಿಂದರಾಜು ಮೊದಲ ಸಿನಿಮಾ ಸೆಟ್ಟೇರಿದೆ. ಈಗಾಗಲೇ ಸಿನಿಮಾದ ಕೆಲವು ಭಾಗದ ಚಿತ್ರೀಕರಣ ಕೂಡ ಮುಗಿದಿದೆ.

  ಡಾ. ರಾಜ್‌ಕುಮಾರ್ ನಂದಿನಿ ಹಾಲಿನ ಉತ್ಪನ್ನ ಜಾಹೀರಾತು ವಿಡಿಯೋ ವೈರಲ್ಡಾ. ರಾಜ್‌ಕುಮಾರ್ ನಂದಿನಿ ಹಾಲಿನ ಉತ್ಪನ್ನ ಜಾಹೀರಾತು ವಿಡಿಯೋ ವೈರಲ್

  ಸದ್ದಿಲ್ಲದೆ ಷಣ್ಮುಖ ಗೋವಿಂದರಾಜು ಸಿನಿಮಾದ ಕಥೆಯನ್ನು ಕೇಳಿ, ಮನೆಯವರಿಗೂ ಒಪ್ಪಿಸಿ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಎ2 ಮೀಡಿಯಾ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅಷ್ಟಕ್ಕೂ ಸಿನಿಮಾ ಸಿಕ್ಕಿದ್ದು ಹೇಗೆ? ಮೊದಲ ಬಾರಿ ಅಭಿನಯದ ಅನುಭವ ಹೇಗಿತ್ತು? ಅನ್ನೋದನ್ನು ಹೇಳಿದ್ದಾರೆ. ಆ ಸಂದರ್ಶನದ ಝಲಕ್ ಇಲ್ಲಿದೆ.

  'ಆಸೆಯಿತ್ತು.. ಕನಸಿತ್ತು..'

  'ಆಸೆಯಿತ್ತು.. ಕನಸಿತ್ತು..'

  "ನನಗೆ ನಟಿಸಬೇಕು ಅನ್ನುವ ಐಡಿಯಾ ಇರಲಿಲ್ಲ. ಆಸೆಯಿತ್ತು, ಕನಸಿತ್ತು. ಯಾವಾಗ ಅನ್ನೋದು ನನಗೆ ಗೊತ್ತಿರಲಿಲ್ಲ. ನಮ್ಮ ಡೈರೆಕ್ಟರ್ ಸರ್ ಅಶೋಕ್, ನಮ್ಮ ಪ್ರಡ್ಯೂಸರ್ ಮಾದೇಶ ಅವರು ಒಳ್ಳೆ ಕಥೆಯನ್ನು ತೆಗೆದುಕೊಂಡು ಬಂದು, ಸಿನಿಮಾ ಮಾಡೋಣ ಅಂದಾಗ ನನಗೆ ನಂಬುವುದಕ್ಕೆ ಆಗಲಿಲ್ಲ. ಯಾಕಂದ್ರೆ, ನಾನು ಯಾರಿಗೂ ಕೇಳಿಕೊಂಡಿರಲಿಲ್ಲ. ನನ್ನ ಹೆಂಡ್ತಿ, ಮೂರು ನಾಲ್ಕು ಕ್ಲೋಸ್ ಫ್ರೆಂಡ್ಸ್ ಬಿಟ್ಟರೆ ಬೇರೆ ಯಾರಿಗೂ ಹೇಳಿರಲಿಲ್ಲ." ಎಂದು ಮೊದಲ ಸಿನಿಮಾ ಬಗ್ಗೆ ಹೇಳಿದ್ದಾರೆ.

  'ರಾಘಣ್ಣ ಕಂಡಂತೆ ಕಾಣುತ್ತೀಯಾ ಅಂದ್ರು'

  'ರಾಘಣ್ಣ ಕಂಡಂತೆ ಕಾಣುತ್ತೀಯಾ ಅಂದ್ರು'

  "ಅವರಿಗೆ ಹೇಗೆ ಐಡಿಯಾ ಬಂತು ಅನ್ನೋದು ಗೊತ್ತಿಲ್ಲ. ಯಾರೂ ಹೇಳಿರಲಿಕ್ಕೆ ಸಾಧ್ಯವಿಲ್ಲ. ನಾನು ಅವರಿಗೆ ಕೇಳಿದೆ, ಆಗ ಅವರು ನಾನು ಹಲವು ಬಾರಿ ನಿಮ್ಮನ್ನು ನೋಡಿದ್ದೇನೆ. ನಿಮ್ಮ ತಾತನ ಬಗ್ಗೆ, ಮಾಮನ ಬಗ್ಗೆ ಮಾತಾಡಿದಾಗ ನಾನು ನೋಡಿದ್ದೀನಿ. ಆಗ ನನಗೆ ಆರಂಭದಲ್ಲಿ ರಾಘುಮಾಮ ಹೇಗೆ ಕಂಡಿದ್ದರೋ ಹಾಗೆ ಕಾಣಿಸಿದ್ರಿ. ನನ್ನ ಕೈಯಲ್ಲಿ ಒಂದು ಕಥೆಯಿತ್ತು. ಅದರಲ್ಲಿ ನಿಮ್ಮನ್ನೇ ಕಲ್ಪನೆ ಮಾಡಿಕೊಂಡೆ ಅಂತ ಹೇಳಿದ್ರು." ಅಂತ ಷಣ್ಮುಖ ಗೋವಿಂದರಾಜು ಹೇಳಿದ್ದಾರೆ.

  'ಲೇಡಿ ಲಕ್ ನನ್ನ ಲೈಫ್‌ನಲ್ಲಿ ನಿಜ ಆಯ್ತು'

  'ಲೇಡಿ ಲಕ್ ನನ್ನ ಲೈಫ್‌ನಲ್ಲಿ ನಿಜ ಆಯ್ತು'

  ಅಣ್ಣಾವ್ರ ಕುಟುಂಬದ ಕುಡಿಗಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮೊದಲು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ವಿನಯ್, ಧನ್ಯಾ,ಧೀರೇನ್ ಬಿಟ್ಟು ಉಳಿದವರು ಮದುವೆ ಬಳಿಕವೇ ಚಿತ್ರರಂಗಕ್ಕೆ ಬಂದಿದ್ದಾರೆ. ಷಣ್ಮುಖ ಗೋವಿಂದರಾಜು ಕೂಡ ವಿವಾಹದ ಬಳಿಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. "ಮದುವೆ ಆದ್ಮೇಲೆ ಎಲ್ಲರೂ ಆಕ್ಟಿಂಗ್‌ಗೆ ಬಂದ್ರು. ಅದು ನಡೆದುಕೊಂಡು ಬಂದಿದೆ. ಲೇಡಿ ಲಕ್ ಅಂತ ಏನು ಹೇಳ್ತಾರೆ ಅದು ನನ್ನ ಲೈಫ್‌ನಲ್ಲಿ ನಿಜ ಆಗಿದೆ ಅಂತ ಹೇಳ್ತೀನಿ." ಎಂದು ಅವಕಾಶ ಸಿಕ್ಕಿದ್ದರ ಬಗ್ಗೆ ಪತ್ನಿಗೆ ಕ್ರೆಡಿಟ್ ಕೊಡುತ್ತಾರೆ.

  ಫಸ್ಟ್ ಡೇ ಶೂಟ್ ಹೇಗಿತ್ತು?

  ಫಸ್ಟ್ ಡೇ ಶೂಟ್ ಹೇಗಿತ್ತು?

  "ಮೊದಲ ದಿನ ಶೂಟಿಂಗ್‌ಗೆ ಹೋಗುವಾಗಲೂ ಎಗ್ಸೈಟ್ಮೆಂಟ್ ಇತ್ತು. ಆದರೆ, ಹೋದ್ಮೇಲೆ ನನಗೆ ನರ್ವಸ್ ಆಯ್ತು. ನಿರ್ದೇಶಕರು ಸರ್ ನನಗೆ ನೀವು ನೀನಾಗಿಯೇ ಇರಬೇಕು. ಕ್ಯಾರೆಕ್ಟರ್‌ಗೆ ನೀವು ಹೇಗಿದ್ದೀರೋ ಹಾಗೇ ಇರಿ. ಏನೇ ಡೈಲಾಗ್ ಕೊಟ್ರೂ ನೀವು ನಿಮ್ಮದು ಮಾಡಿಕೊಂಡು ಹೇಳಿ. ಅಲ್ಲಿ ನನಗೆ ದೊಡ್ಡ ಕಾನ್ಫಿಡೆನ್ಸ್ ಬಂತು." ಎಂದು ಷಣ್ಮುಖ ಗೋವಿಂದರಾಜು ಮೊದಲ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

  English summary
  Dr.Rajkumar Grandson Shanmukha Govindhraj Debut Movie Shooting Started, Know More.
  Monday, January 16, 2023, 16:41
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X