»   » ಡಾ.ರಾಜ್ ಕುಟುಂಬವನ್ನ ಪರಿಚಯ ಮಾಡಿದ ಅಪರೂಪದ ವಿಡಿಯೋ

ಡಾ.ರಾಜ್ ಕುಟುಂಬವನ್ನ ಪರಿಚಯ ಮಾಡಿದ ಅಪರೂಪದ ವಿಡಿಯೋ

Posted By:
Subscribe to Filmibeat Kannada

ಡಾ.ರಾಜ್ ಕುಮಾರ್ ಅವರು ಕುಟುಂಬ ದೊಡ್ಡ ಕುಟುಂಬ. ಪತ್ನಿ, ಮಕ್ಕಳು, ಸಹೋದರ, ಭಾವ, ಹೀಗೆ ಎಲ್ಲರೂ ಒಟ್ಟಿಗೆ ಇದ್ದ ತುಂಬು ಕುಟುಂಬ. 1968ರಲ್ಲಿ ಈ ಕುಟುಂಬವನ್ನ ಸ್ವತಃ ರಾಜ್ ಕುಮಾರ್ ಅವರೇ ಪರಿಚಯ ಮಾಡಿಕೊಟ್ಟಿರುವ ಅಪರೂಪದ ವಿಡಿಯೋವೊಂದು ನಮಗೆ ಸಿಕ್ಕಿದೆ.[ಪತಿಯ ಹಾದಿಯಲ್ಲಿ ಪತ್ನಿ: ಅಂಧರ ಬಾಳಲ್ಲಿ ಹೊಸಬೆಳಕು ಮೂಡಿಸಲಿರುವ 'ದೊಡ್ಮನೆ' ಅಮ್ಮ]

ಡಾ.ರಾಜ್ ಕುಮಾರ್ ಅವರ ಮನೆಗೆ ಸ್ನೇಹಿತರು ಆಗಮಿಸಿರುವ ಸಂಧರ್ಭದಲ್ಲಿ ಅಣ್ಣಾವ್ರು ಕುಟುಂಬವನ್ನ ಅವರಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಆ ವೇಳೆ ಅಲ್ಲಿ ಯಾರೆಲ್ಲಾ ಇದ್ದರು ಎಂದು ನೋಡುವುದಾದರೇ, ರಾಜ್ ಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್, ಮೊದಲ ಮಗ ನಾಗರಾಜ ಪುಟ್ಟುಸ್ವಾಮಿ, (ಇದು ಶಿವರಾಜ್ ಕುಮಾರ್, ಇವರಿಗೆ ರಾಜ್ ಕುಮಾರ್ ಅವರ ತಂದೆಯ ಹೆಸರನ್ನ ಇಡಲಾಗಿತ್ತು) ಎರಡನೇ ಮಗಳು ಲಕ್ಷ್ಮಿ, ಮೂರನೇ ಮಗ ರಾಘವೇಂದ್ರ ರಾಜ್ ಇದ್ದರು. ಈ ವೇಳೆ ಪೂರ್ಣಿಮ ಮತ್ತೆ ಪುನೀತ್ ರಾಜ್ ಕುಮಾರ್ ಇರಲಿಲ್ಲ.[ಡಾ.ರಾಜ್ ಸಮಾಧಿ ಪಕ್ಕದಲ್ಲಿಯೇ ಪತ್ನಿ ಪಾರ್ವತಮ್ಮ ಅಂತ್ಯಕ್ರಿಯೆ]

Dr Rajkumar Introducing His Family

ಇನ್ನು ಸಹೋದರ ವರದರಾಜು, ತಮ್ಮನ ಪತ್ನಿ ಶಾರದ ಮತ್ತು ಅವರ ಮಕ್ಕಳು ಉಷಾ, ಲತಾ, ಆಶಾ, ಹಾಗೂ ರಾಜ್ ಕುಮಾರ್ ಅವರ ಭಾವ ಬಾಲಕೃಷ್ಣ, ಅವರ ಪತ್ನಿ ಶಾರದಮ್ಮ ಇಷ್ಟು ಜನರು ಅಂದು ರಾಜ್ ಕುಟುಂಬದಲ್ಲಿ ಒಟ್ಟಾಗಿ ನೆಲೆಸಿದ್ದರು. ಈ ವಿಡಿಯೋವನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.......

English summary
Kannada Legendry Actor Dr Rajkumar Introducing His Family to Freinds. Watch Video.....

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada