twitter
    For Quick Alerts
    ALLOW NOTIFICATIONS  
    For Daily Alerts

    ಸರ್ಕಾರಿ ಶಾಲಾ ವಿದ್ಯಾರ್ಥಿಗಳು 'ಗಂಧದ ಗುಡಿ' ವೀಕ್ಷಿಸಲು 100 ಟಿಕೆಟ್ ಖರೀದಿಸಿದ ಪ್ರಿಯಾ ಕೃಷ್ಣ!

    |

    ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತೆರೆಮೇಲೆ ಕಾಣಿಸಿಕೊಳ್ಳಲಿರುವ ಕೊನೆಯ ಸಿನಿಮಾ 'ಗಂಧದ ಗುಡಿ'. ಇದೊಂದು ಮಾಮೂಲಿ ಸಿನಿಮಾ ಅಲ್ಲ. ಅಪ್ಪು ವೃತ್ತಿ ಬದುಕಿನಲ್ಲಿಯೇ ವಿಭಿನ್ನ ಸಿನಿಮಾ. ಎಲ್ಲಾ ವರ್ಗಕ್ಕೂ ಸಲ್ಲುವ ವಿಶಿಷ್ಠ ಸಿನಿಮಾ.

    ಕರುನಾಡಿನ ಪ್ರಕೃತಿ ಸಂಪತ್ತನ್ನು ತೆರೆಮೇಲೆ ತೋರಿಸುವ ಪ್ರಯತ್ನಕ್ಕೆ ಪುನೀತ್ ರಾಜ್‌ಕುಮಾರ್ ಮುಂದಾಗಿದ್ದರು. ಅದನ್ನು ಕಣ್ತುಂಬಿಕೊಳ್ಳುವ ಮುನ್ನವೇ ಕಣ್ಮರೆಯಾಗ್ಬಿಟ್ಟರು. ಈಗ ಅವರ ಕನಸು ಜನರಿಗೆ ತಲುಪಲು ವೇದಿಕೆ ಸಜ್ಜಾಗಿದೆ. ಅಕ್ಟೋಬರ್ 28ಕ್ಕೆ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಈ ಸಂದರ್ಭದಲ್ಲಿ ಸರ್ಕಾರಿ ಮಕ್ಕಳು ಸಿನಿಮಾ ವೀಕ್ಷಿಸಲು ಉಚಿತವಾಗಿ ಸುಮಾರು 100 ಟಿಕೆಟ್‌ಗಳನ್ನು ನೀಡಿದ್ದಾರೆ.

    Ex MLA Priya Krishna Donated 100 Gandhada Gudi Tickets To Govt School Children

    ಗೋವಿಂದರಾಜನಗರದ ಮಾಜಿ ಎಂಎಲ್‌ಎ ಪ್ರಿಯಾ ಕೃಷ್ಣ ಸರ್ಕಾರಿ ಶಾಲೆ ಮಕ್ಕಳಿಗೆ ಗಂಧದ ಗುಡಿ ಸಿನಿಮಾ ವೀಕ್ಷಿಸಲು ನೆರವಾಗಿದ್ದಾರೆ. ಮಕ್ಕಳಿಗೆ ಅನುಕೂಲವಾಗಲೆಂದು ಸುಮಾರು 100 ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗಿದೆ. ಯುಗ ಎಂಬ ಎಂಜಿಓ ಮೂಲಕ ಈ ವ್ಯವಸ್ಥೆಯನ್ನು ಮಾಡಿದ್ದಾರೆ.

    ನಾಳೆ (ಅಕ್ಟೋಬರ್ 28) ಬೆಳಗ್ಗೆಯ 10.30ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾಗಡಿ ರಸ್ತೆಯಲ್ಲಿರುವ ಕಾಮಾಕ್ಷಿಪಾಳ್ಯದ ವಿಕ್ಟರಿ ಸಿನಿಮಾದಲ್ಲಿ 100 ಸರ್ಕಾರಿ ಶಾಲೆಯ ಮಕ್ಕಳು ಗಂಧದ ಗುಡಿ ಸಿನಿಮಾವನ್ನು ವೀಕ್ಷಣೆ ಮಾಡಲಿದ್ದಾರೆ.

    Ex MLA Priya Krishna Donated 100 Gandhada Gudi Tickets To Govt School Children

    ಅಪ್ಪು ಕೊನೆಯ ಸಿನಿಮಾ 'ಗಂಧದ ಗುಡಿ' ಕೇವಲ ಸಿನಿಮಾ ಅಷ್ಟೇ ಅಲ್ಲ. ಮಕ್ಕಳಿಗೆ ಅದೊಂದು ಶಿಕ್ಷಣಿಕ ಪ್ರವಾಸವೂ ಕೂಡ ಹೌದು. ಕರ್ನಾಟಕ ರಮಣೀಯ ಪ್ರದೇಶಗಳು, ವನ್ಯಜೀವಿಗಳು, ಸಸ್ಯರಾಶಿಗಳನ್ನು ಈ ಸಿನಿಮಾ ಮೂಲಕ ತಿಳಿಸಲಾಗಿದೆ.

    'ಗಂಧದ ಗುಡಿ' ಒಂದು ಸಿನಿಮಾದ ಅನುಭವವನ್ನೂ ನೀಡುತ್ತೆ. ಜೊತೆಗೆ ಇಂದಿನ ಪೀಳಿಗೆಗೆ ಒಂದು ಸಂದೇಶವನ್ನೂ ರವಾನಿಸುತ್ತೆ. ಈ ಕಾರಣಕ್ಕೆ 'ಗಂಧದ ಗುಡಿ' ಒಂದು ವಿಶಿಷ್ಠ ಅನುಭವವೂ ಹೌದು.

    English summary
    Ex MLA Priya Krishna Donated 100 Gandhada Gudi Tickets To Govt School Students, Know More.
    Thursday, October 27, 2022, 23:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X