»   » 'ಬಂಗಾರ s/o ಬಂಗಾರದ ಮನುಷ್ಯ'ನನ್ನ ನೋಡಲಿರುವ 'ಮಣ್ಣಿನ ಮಗ'

'ಬಂಗಾರ s/o ಬಂಗಾರದ ಮನುಷ್ಯ'ನನ್ನ ನೋಡಲಿರುವ 'ಮಣ್ಣಿನ ಮಗ'

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಬಂಗಾರ s/o ಬಂಗಾರದ ಮನುಷ್ಯ' ಕಳೆದ ಶುಕ್ರವಾರವಷ್ಟೇ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ.

ರೈತರ ಸಮಸ್ಯೆಗಳನ್ನೇ ಪ್ರಧಾನವಾಗಿಟ್ಟುಕೊಂಡು ಕಥೆ ಮಾಡಲಾಗಿರುವ ಈ ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ರೈತರ ಪರ ಹೋರಾಡುವ ನಾಯಕನಾಗಿ ಮಿಂಚಿದ್ದಾರೆ. ಹೀಗೆ, ರೈತರ ಪರ ದನಿ ಎತ್ತಿರುವ ಚಿತ್ರವನ್ನ 'ಮಣ್ಣಿನ ಮಗ' ಎಚ್.ಡಿ.ದೇವೇಗೌಡರು ವೀಕ್ಷಿಸಲಿದ್ದಾರಂತೆ.[ವಿಮರ್ಶೆ: 'ಬಂಗಾರದ ಮನುಷ್ಯ'ನ ಪ್ರತಿರೂಪ ಶಿವಣ್ಣನ ಈ 'ಬಂಗಾರ' ರೂಪ]

Ex PM HD DeveGowda To Watch Bangara S/o Bangarada Manushya

ಸಾಮಾನ್ಯವಾಗಿ ಎಚ್.ಡಿ.ದೇವೇಗೌಡರು ಸಿನಿಮಾಗಳನ್ನ ನೋಡುವುದಿಲ್ಲ. ಆದ್ರೆ, ಇದು ರೈತರ ಕುರಿತಾದ ಚಿತ್ರ ಎಂಬ ಕಾರಣಕ್ಕೆ ನೋಡಲು ಮುಂದಾಗಿದ್ದಾರೆ. ಹೇಳಿ-ಕೇಳಿ ಎಚ್.ಡಿ.ದೇವೇಗೌಡರು ರೈತ ನಾಯಕ. ರೈತರಿಗಾಗಿ ಹಲವು ಚಳವಳಿಗಳು, ಹೋರಾಟಗಳನ್ನ ಮಾಡಿದ್ದಾರೆ. ಹೀಗಾಗಿ, ದೇವೇಗೌಡ ಅವರನ್ನ 'ಮಣ್ಣಿನ ಮಗ' ಎಂದೇ ಕರೆಯುತ್ತಾರೆ.['ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರ ನೋಡಿ ಭೇಷ್ ಎಂದ್ರಾ ವಿಮರ್ಶಕರು.?]

'ಬಂಗಾರ s/o ಬಂಗಾರದ ಮನುಷ್ಯ' ಚಿತ್ರದಲ್ಲೂ ಅದೇ ರೀತಿಯಾದ ರೈತ ಹೋರಾಟ, ರೈತರ ಸಮಸ್ಯೆಗಳು, ಆ ಸಮಸ್ಯೆಗಳಿಗೆ ಪರಿಹಾರ, ಹೀಗೆ, ಇನ್ನು ಹಲವು ವಿಷಯಗಳನ್ನ ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಈ ಚಿತ್ರವನ್ನ ದೇವೇಗೌಡ ಅವರು ನೋಡಲೇಬೇಕೆಂದು ಮನಸ್ಸು ಮಾಡಿದ್ದಾರೆ. ಸೋಮವಾರ (ಮೇ 22) ಮೈಸೂರಿನ DRC ಮಲ್ಟಿಪ್ಲೆಕ್ಸ್ ನಲ್ಲಿ ದೇವೇಗೌಡ ಅವರು 'ಬಂಗಾರ s/o ಬಂಗಾರದ ಮನುಷ್ಯ'ನನ್ನ ನೋಡಲಿದ್ದಾರೆ.

Ex PM HD DeveGowda To Watch Bangara S/o Bangarada Manushya

'ಬಂಗಾರ s/o ಬಂಗಾರದ ಮನುಷ್ಯ' ಚಿತ್ರವನ್ನ ಯೋಗಿ.ಜಿ.ರಾಜ್ ನಿರ್ದೇಶನ ಮಾಡಿದ್ದಾರೆ. ಶಿವರಾಜ್ ಕುಮಾರ್, ವಿದ್ಯಾ ಪ್ರದೀಪ್, ಶ್ರೀನಿವಾಸ ಮೂರ್ತಿ, ಚಿಕ್ಕಣ್ಣ, ಸಾಧುಕೋಕಿಲಾ, ಶರತ್ ಲೋಹಿತಾಶ್ವ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಜಯಣ್ಣ-ಭೋಗೇಂದ್ರ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ.

English summary
Former Prime Minister HD DeveGowda Will be watching last week's Kannada Release Bangara S/o Bangarada Manushya on Monday in Mysuru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada