For Quick Alerts
  ALLOW NOTIFICATIONS  
  For Daily Alerts

  'ವಿಕ್ರಾಂತ್ ರೋಣ' ಮುಂದೆ ಅಂಗಾತ ಮಲಗಿದ 'ರಾಮಾ ರಾವ್' & 'ಏಕ್ ವಿಲನ್'!

  |

  ಈ ವಾರ 'ವಿಕ್ರಾಂತ್ ರೋಣ' ಒಂದು ದಿನ ಮೊದಲೇ ಬಿಡುಗಡೆಯಾಗಿತ್ತು. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆದ ಬಳಿಕ ಬಾಲಿವುಡ್ ಹಾಗೂ ಟಾಲಿವುಡ್‌ನಲ್ಲಿ ಹೊಸ ಸಿನಿಮಾ ರಿಲೀಸ್ ಆಗಿತ್ತು. ತೆಲುಗಿನಲ್ಲಿ 'ರಾಮಾ ರಾವ್ ಆನ್ ಡ್ಯೂಟಿ' ಹಾಗೂ ಬಾಲಿವುಡ್‌ನಲ್ಲಿ 'ಏಕ್ ವಿಲನ್ ರಿಟರ್ನ್ಸ್' ರಿಲೀಸ್ ಆಗಿತ್ತು.

  ಟಾಲಿವುಡ್‌ನಲ್ಲಿ 'ರಾಮಾ ರಾವ್ ಆನ್ ಟ್ಯೂಟಿ' ಹಾಗೂ ಬಾಲಿವುಡ್‌ನಲ್ಲಿ 'ಏಕ್‌ ವಿಲನ್ ರಿಟರ್ನ್ಸ್' ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗೆ ಟಕ್ಕರ್ ಕೊಡಬಹುದು ಎಂದೇ ನಿರೀಕ್ಷೆ ಮಾಡಲಾಗಿತ್ತು. ಇಂದು (ಜುಲೈ 29) ಈ ಎರಡೂ ಸಿನಿಮಾ ಗ್ರ್ಯಾಂಡ್‌ ರಿಲೀಸ್ ಆಗಿವೆ. ರಿವ್ಯೂ ಕೂಡ ಹೊರಬಿದ್ದಿದೆ.

  ಒಂದೇ ಥಿಯೇಟರ್‌ನಲ್ಲಿ ₹25 ಲಕ್ಷ: ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಮೊದಲ ದಿನದ ಗಳಿಕೆ ಎಷ್ಟು?ಒಂದೇ ಥಿಯೇಟರ್‌ನಲ್ಲಿ ₹25 ಲಕ್ಷ: ಕರ್ನಾಟಕದಲ್ಲಿ 'ವಿಕ್ರಾಂತ್ ರೋಣ' ಮೊದಲ ದಿನದ ಗಳಿಕೆ ಎಷ್ಟು?

  ಎರಡೂ ಸಿನಿಮಾಗಳು ಫಸ್ಟ್ ಡೇ ಫಸ್ಟ್ ಶೋನೇ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ 'ವಿಕ್ರಾಂತ್ ರೋಣ' ಮುಂದಿನ ಒಂದು ವಾರ ಬಾಕ್ಸಾಫೀಸ್‌ನಲ್ಲಿ ಚಮತ್ಕಾರ ಮಾಡಬಹುದು ಎಂಬ ನಿರೀಕ್ಷೆ ಮಾಡಲಾಗುತ್ತಿದೆ. ಅಷ್ಟಕ್ಕೂ ನಿರೀಕ್ಷೆ ಹುಟ್ಟಿಸಿದ ಎರಡು ಸಿನಿಮಾಗಳು ಹಣೆಬರಹ ಏನಾಗಿದೆ? 'ವಿಕ್ರಾಂತ್ ರೋಣ'ಗೆ ಲಾಭ ಹೇಗೆ ಆಗಬಹುದು? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ವಿಕ್ರಾಂತ್ ರೋಣ' ಗಳಿಕೆ: 2 ಚಿತ್ರಗಳ ದಾಖಲೆ ಉಡೀಸ್!ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ 'ವಿಕ್ರಾಂತ್ ರೋಣ' ಗಳಿಕೆ: 2 ಚಿತ್ರಗಳ ದಾಖಲೆ ಉಡೀಸ್!

  ಮರಳಿ ಬರಲೇ ಇಲ್ಲ 'ಏಕ್ ವಿಲನ್'

  ಮರಳಿ ಬರಲೇ ಇಲ್ಲ 'ಏಕ್ ವಿಲನ್'

  ಜಾನ್ ಅಬ್ರಹಾಂ, ಅರ್ಜುನ್ ಕಪೂರ್, ದಿಶಾ ಪಟಾನಿ ಹಾಗೂ ತಾರಾ ಸುತಾರಿಯಾ ಬಾಲಿವುಡ್‌ನ ಈ ನಾಲ್ವರು ಸೆಲೆಬ್ರೆಟಿಗಳ ಒಟ್ಟಿಗೆ ಕಾಣಿಸಿಕೊಂಡ ಸಿನಿಮಾ 'ಏಕ್ ವಿಲನ್ ರಿಟರ್ನ್ಸ್'. ಇದು 2014ರಲ್ಲಿ ತೆರೆಕಂಡಿದ್ದ 'ಏಕ್ ವಿಲನ್' ಸಿನಿಮಾದ ಸೀಕ್ವೆಲ್. ಆದರೆ, ಮೊದಲ ದಿನವೇ ಸಿನಿಮಾಗೆ ನೆಗೆಟಿವ್ ರೆಸ್ಪಾನ್ಸ್ ಸಿಕ್ಕಿದೆ. 'ಏಕ್ ವಿಲನ್ ರಿಟರ್ನ್ಸ್' ಸಿನಿಮಾ ಕಥೆ ಹಾಗೂ ಚಿತ್ರಕಥೆಯಲ್ಲಿ ಧಮ್ ಇಲ್ಲಾ ಅಂತ ಮಾಧ್ಯಮಗಳು ವಿಮರ್ಶೆ ಮಾಡಿವೆ. ಅಲ್ಲದೆ ಇದು ಪ್ಲಾಪ್ ಸಿನಿಮಾ ಅಂತ ತೀರ್ಪು ಕೂಡ ಕೊಟ್ಟಿವೆ. ಹೀಗಾಗಿ ಬಾಲಿವುಡ್‌ ಮತ್ತೊಂದು ಸೋಲಿನ ಕಹಿಯನ್ನು ಉಣ್ಣಲೇ ಬೇಕಿದೆ.

  ಮೊದಲ ದಿನವೇ 'ರಾಮಾ ರಾವ್' ನಿವೃತ್ತಿ

  ಮೊದಲ ದಿನವೇ 'ರಾಮಾ ರಾವ್' ನಿವೃತ್ತಿ

  ಬಾಲಿವುಡ್‌ ಕಥೆ ಹೀಗಾದೆ, ಇತ್ತ ಟಾಲಿವುಡ್‌ ಕೂಡ ಸೋಲಿನ ಕಹಿ ಸವಿಯಬೇಕಾಗಿದೆ. ರವಿತೇಜಾ ಅಭಿನಯಿಸಿದ ಸಿನಿಮಾ 'ರಾಮಾ ರಾವ್ ಆನ್ ಡ್ಯೂಟಿ' ಬಹಳ ದಿನಗಳ ಹಿಂದೆನೇ ರಿಲೀಸ್ ಆಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ಕೊನೆಗೂ ಇಂದು (ಜುಲೈ 29) ರಿಲೀಸ್ ಆಗಿದೆ. ಮೊದಲಾರ್ಧವೇ ಸಿನಿಮಾ ಲ್ಯಾಗ್ ಇದೆ. ನಾಯಕನ ಎದುರು ನಿಲ್ಲುವುದಕ್ಕೆ ಸರಿಯಾದ ಖಳನಾಯಕನೇ ಇಲ್ಲ ಅನ್ನೋದು ಆರೋಪ. ತೆಲುಗು ಆಡಿಯನ್ಸ್‌ಗೆ ಈ ಸಿನಿಮಾ ನಿರಾಸೆ ಮಾಡಿರೋದಂತೂ ಸತ್ಯ.

  'ವಿಕ್ರಾಂತ್ ರೋಣ'ಗೆ ಲಾಭ

  'ವಿಕ್ರಾಂತ್ ರೋಣ'ಗೆ ಲಾಭ

  ಬಾಲಿವುಡ್‌ನಲ್ಲಿ ರಿಲೀಸ್ ಆಗಿರುವ 'ಏಕ್ ವಿಲನ್ ರಿಟರ್ನ್ಸ್' ಹಾಗೂ ಟಾಲಿವುಡ್‌ ಸಿನಿಮಾ 'ರಾಮ ರಾವ್ ಆನ್ ಡ್ಯೂಟಿ' ಈ ಎರಡೂ ಸಿನಿಮಾಗಳು 'ವಿಕ್ರಾಂತ್ ರೋಣ'ನಿಗೆ ಟಕ್ಕರ್ ಕೊಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಕನ್ನಡ ಪ್ಯಾನ್ ಇಂಡಿಯಾ ಸಿನಿಮಾಗೂ ಇದೇ ಆತಂಕವಿತ್ತು. ಆದರೆ, ನೆಗೆಟಿವ್ ರಿವ್ಯೂ ಸಿಕ್ಕಿದ್ದರಿಂದ ಕೊಂಚ ನಿರಾಳವಾಗಿದೆ. ಈ ವಾರ ಪೂರ್ತಿ 'ವಿಕ್ರಾಂತ್ ರೋಣ'ಗೆ ಲಾಭ ಆಗುವ ಸಾಧ್ಯತೆಯಿದೆ. ಒಂದು ವೇಳೆ ವೀಕ್‌ ಎಂಡ್‌ನಲ್ಲಿ ಈ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವುದರಲ್ಲಿ ಗೆದ್ದರೆ, ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯುವುದನ್ನು ತಡೆಯುವುದಕ್ಕೆ ಯಾರಿಂದಲೂ ಸಾಧ್ಯವಿರಲ್ಲ.

  2ನೇ ದಿನ ಗಳಿಕೆ ಮೇಲೆ ಕಣ್ಣು

  2ನೇ ದಿನ ಗಳಿಕೆ ಮೇಲೆ ಕಣ್ಣು

  ಕಿಚ್ಚ ಸುದೀಪ್ ಎರಡನೇ ದಿನದ ಗಳಿಕೆ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಮೊದಲನೇ ದಿನ ವಿಶ್ವದಾದ್ಯಂತ 35 ಕೋಟಿ ರೂ. ಕಲೆ ಹಾಕಿರುವ ಸಿನಿಮಾ, ಎರಡನೇ ದಿನ ಎಷ್ಟು ಕಲೆಕ್ಷನ್ ಮಾಡಬಹುದೆಂಬ ಕುತೂಹಲವಂತೂ ಇದ್ದೇ ಇದೆ. ಮೂಲಗಳ ಪ್ರಕಾರ, ಬಾಲಿವುಡ್‌ ಹಾಗೂ ಟಾಲಿವುಡ್‌ನಲ್ಲಿ ನೆಗೆಟಿವ್ ರಿವ್ಯೂ ಬಂದಿದ್ದರೂ, ಉತ್ತಮ ಕಲೆಕ್ಷನ್ ಆಗಿದೆ ಎಂದೇ ಹೇಳಲಾಗುತ್ತಿದೆ. ಒಂದು ವೇಳೆ ಸಿನಿಮಾ ಎರಡನೇ ದಿನವೂ 35 ರಿಂದ 50 ಕೋಟಿ ರೂ. ಗಳಿಸಿದರೆ, ಕನ್ನಡಕ್ಕೆ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಸಿಗೋದು ಫಿಕ್ಸ್.

  Recommended Video

  Ram | Vikranth Rona | ಸುದೀಪ್ ಸರ್ ಜೊತೆಗೆ ಜಿಮ್ ಮಾಡಿಸ್ತಿದ್ರು | Filmibeat Kannada.
  English summary
  Ex Villain Returns, Rama Rao On Duty Flop Advantage For Sudeep Starrer Vikrant Rona, Know More.
  Friday, July 29, 2022, 22:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X