»   » ಕೆ.ಮಂಜು ಹೆಸ್ರಲ್ಲಿ ಯುವತಿಯರಿಗೆ ಬಲೆ ಬೀಸುತ್ತಿದ್ದ ನಕಲಿ ನಿರ್ಮಾಪಕ

ಕೆ.ಮಂಜು ಹೆಸ್ರಲ್ಲಿ ಯುವತಿಯರಿಗೆ ಬಲೆ ಬೀಸುತ್ತಿದ್ದ ನಕಲಿ ನಿರ್ಮಾಪಕ

Posted By:
Subscribe to Filmibeat Kannada

''ನಾನು ಕನ್ನಡದ ದೊಡ್ಡ ನಿರ್ಮಾಪಕ. ಮಂಜು ನನ್ನ ಹೆಸರು. ಸುಮಾರು 40 ಸಿನಿಮಾ ಮಾಡಿದ್ದೀನಿ. ನನ್ನ ಮುಂದಿನ ಸಿನಿಮಾದಲ್ಲಿ ಚಾನ್ಸ್ ಕೊಡ್ತೀನಿ, ನನ್ನ ಜೊತೆ ಬನ್ನಿ''......ಇದು ಕೆ.ಮಂಜು ಹೆಸರನ್ನ ಬಳಸಿಕೊಂಡು ಹೊರ ರಾಜ್ಯದ ಯುವತಿಯರನ್ನ ಮೋಸ ಮಾಡುತ್ತಿದ್ದ ನಕಲಿ ನಿರ್ಮಾಪಕನ ಅಸಲಿ ಕಥೆ.

ಸಿನಿಮಾ ಲೋಕದಲ್ಲಿ ಯುವತಿಯರು ಮೋಸ ಹೋಗುತ್ತಿರುವುದು ಹೊಸತೇನಲ್ಲ. ಹಲವು ಜನರು, ಹಲವು ರೀತಿಯಲ್ಲಿ ಯುವತಿಯರಿಗೆ ಅವಕಾಶ ಕೊಡಿಸುತ್ತೇನೆ ಎಂದು ನಂಬಿಸಿ ದ್ರೋಹ ಮಾಡಿದ್ದಾರೆ. ಈಗ ಇಂತಹದ್ದೇ ಮತ್ತೊಂದು ಘಟನೆ ಸ್ಯಾಂಡಲ್ ವುಡ್ ನಲ್ಲಿ ನಡೆದಿದೆ. ಈ ಘಟನೆಯನ್ನ ಕೇಳಿ ಇಡೀ ಗಾಂಧಿನಗರ ಬೆಚ್ಚಿಬಿದ್ದಿದೆ. ಈ ಖರ್ತನಾಕ್ ಮೋಸಗಾರನ ರಂಗಿನಾಟಕ್ಕೆ ಕನ್ನಡ ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಹೆಸರನ್ನ ಬಳಸಿಕೊಂಡಿರುವುದು ದುರಂತ. ಮುಂದೆ ಓದಿ.......

ನಟನೆ ಆಸೆ ತೋರಿಸಿ ಮೋಸ

ಸಿನಿಮಾದಲ್ಲಿ ಅವಕಾಶ ಕೊಡ್ತಿನಿ ಅಂತ ಹೇಳಿ ಯುವತಿಯರನ್ನ ಮೋಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಮಾಜದ ಮುಂದೆ ಬೆತ್ತಲಾಗಿದ್ದಾನೆ. ದುರದೃಷ್ಟ ಏನಪ್ಪಾ ಅಂದ್ರೆ ಈತ ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಪಕರ ಹೆಸರನ್ನ ಹೇಳಿಕೊಂಡು ಈ ರೀತಿ ಹುಡುಗಿಯರಿಗೆ ಮೋಸ ಮಾಡುತ್ತಿದ್ದನಂತೆ.

ಯಾರು ಈ ನಕಲಿ ನಿರ್ಮಾಪಕ?

ಅಂದ್ಹಾಗೆ, ಅವನ ಹೆಸರು ಮಂಜುನಾಥ್ ಮೂರ್ತಿ. ಮೂಲ ಚಿತ್ರದುರ್ಗದವರು. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದನಂತೆ. ಇವನ ಜೊತೆಯಲ್ಲಿ ಕೃಷ್ಣಪ್ಪ ಎಂಬ ವ್ಯಕ್ತಿ ಕೂಡ ಸಾಥ್ ಕೊಟ್ಟಿದ್ದನಂತೆ.

ಕೆ ಮಂಜು ಹೆಸರನ್ನ ದುರ್ಬಳಕೆ

ಅಂದ್ಹಾಗೆ, ಈ ಮಂಜುನಾಥ್ ಮೂರ್ತಿ, ಇಂತಹ ಕೆಲಸ ಮಾಡಲು ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು ಅವರ ಹೆಸರನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ. ಯುವತಿಯರಿಗೆ ನನ್ನ ಹೆಸರು ಮಂಜು, ನಾನು ಕನ್ನಡದಲ್ಲಿ ದೊಡ್ಡ ನಿರ್ಮಾಪಕ. ಸುಮಾರು 40 ಸಿನಿಮಾ ಮಾಡಿದ್ದೀನಿ ಎಂದು ಹೇಳಿಕೊಂಡಿದ್ದನಂತೆ.

ಹೊರರಾಜ್ಯದ ಹೆಣ್ಣು ಮಕ್ಕಳೇ ಟಾರ್ಗೆಟ್

ಇವರಿಗೆ ಹೊರ ರಾಜ್ಯದ ಹೆಣ್ಣು ಮಕ್ಕಳೇ ಟಾರ್ಗೆಟ್ ಆಗಿದ್ದರು. ಮಹಾರಾಷ್ಟ್ರದ ಪುಣೆಯ ಯುವತಿಯರನ್ನ ನಾಯಕಿ ಮಾಡ್ತೀವಿ ಅಂತ ಕರೆತರುತ್ತಿದ್ದರಂತೆ.

ಸೌದಿಗೆ ಮಾರಾಟ ಮಾಡುತ್ತಿದ್ದರು

ಹೊರ ರಾಜ್ಯಗಳಿಂದ ಕರೆದುಕೊಂಡ ಬಂದ ಯುವತಿಯರನ್ನ ಹೈದರಾಬಾದ್ ಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದುಕೊಂಡು ಹೋಗುತ್ತಿದ್ದರಂತೆ. ನಂತರ ಅವರನ್ನ ಸೌದಿ ಅರೇಬಿಯಾ ಮಾರಾಟ ಮಾಡುತ್ತಿದ್ದರು ಎಂಬ ಭಯಾನಕ ಸುದ್ದಿಯೊಂದನ್ನ ಮೋಸ ಹೋದ ಯುವತಿ ಖಾಸಗಿ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.

ಕೆ ಮಂಜುಗೆ ಮಾಹಿತಿ

ಮಂಜುನಾಥ್ ಮೂರ್ತಿ ಅವರಿಂದ ಮೋಸ ಹೋದ ಯುವತಿಯೊಬ್ಬರು ನಿರ್ಮಾಪಕ ಕೆ.ಮಂಜು ಅವರನ್ನ ಸಂಪರ್ಕ ಮಾಡಿ ಸತ್ಯ ಬಿಚ್ಚಿಟ್ಟಿದ್ದಾರೆ. ಈಗ ಈ ಸಂಬಂಧ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.[ನಿರ್ಮಾಪಕ ಕೆ.ಮಂಜುಗೆ ಸಿಕ್ಕ ಕೇರಳ ಕುಟ್ಟಿ ಯಾರು?]

English summary
A fake film producer Manjunath used Prominent Kannada film producer K.Manju's name, assured many girls to give them a chance in cinema. Later he was selling them to Saudi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada