Don't Miss!
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ಕ್ರಾಂತಿ' ಟ್ರೈಲರ್ ಲಾಂಚ್‌ನಲ್ಲಿ ಸುದೀಪ್ ಗೆಸ್ಟ್ ಆಗಿ ಬರಬೇಕು" ದರ್ಶನ್ ಟ್ವೀಟ್ ಬಳಿಕ ಹೊಸ ಬೇಡಿಕೆ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೇಲೆ ಚಪ್ಪಲಿ ಎಸೆದ ಪ್ರಕರಣ ಇನ್ನೂ ಹಾಟ್ ಟಾಪಿಕ್ ಆಗಿಯೇ ಇದೆ. ಈ ಮಧ್ಯೆ ದರ್ಶನ್ ತನ್ನ ಬೆಂಬಲಕ್ಕೆ ನಿಂತಿರೋ ಎಲ್ಲಾ ತಾರೆಯರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಕಿಚ್ಚ ಸುದೀಪ್‌ಗೂ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು.
ನಿನ್ನೆ (ಡಿಸೆಂಬರ್ 21) ಯಿಂದ ಇದೇ ವಿಚಾರವಾಗಿ ಸ್ಯಾಂಡಲ್‌ವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ದರ್ಶನ್ ಹಾಗೂ ಕಿಚ್ಚ ಸುದೀಪ್ ಮತ್ತೆ ಒಂದಾಗೇ ಬಿಟ್ರು ಅನ್ನೋ ಲೆವೆಲ್‌ಗೆ ಇಬ್ಬರ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.
ಸುದೀಪ್
ಬೆಂಬಲಕ್ಕೆ
ದರ್ಶನ್
ಧನ್ಯವಾದ:
ಹಳೆಯದನ್ನು
ಮರೆತು
ಇಬ್ಬರು
ಅಪ್ಪಿಕೊಳ್ಳಿ
ಎಂದ
ಜಗ್ಗೇಶ್
ಕಿಚ್ಚ ಸುದೀಪ್‌ಗೆ ಧನ್ಯವಾದ ಹೇಳಿ ದರ್ಶನ್ ಮಾಡಿದ ಟ್ವೀಟ್ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಏನಾಗುತ್ತಿದೆ? ಇಬ್ಬರ ಅಭಿಮಾನಿಗಳು ಏನು ಹೇಳುತ್ತಿದ್ದಾರೆ? ಕುಚಿಕು ಅಭಿಮಾನಿಗಳ ಸಂಭ್ರಮ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಾಜ್ಯದ ಹಲವಡೆ ಕಟೌಟ್, ಬ್ಯಾನರ್
ಕಳೆದ ಐದು ವರ್ಷಗಳಿಂದ ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಕಿತ್ತಾಡುವುದನ್ನೇ ನೋಡುವುದಕ್ಕೆ ಸಿಗುತ್ತಿತ್ತು. ಇಬ್ಬರೂ ಕಿತ್ತಾಟಗಳನ್ನು ನೋಡಿ, ಈ ಜೋಡಿ ಇನ್ಮುಂದೆ ಒಂದಾಗುವುದೇ ಇಲ್ಲವೇನೋ ಅನ್ನೋ ನಿರ್ಧಾರಕ್ಕೆ ಅದೆಷ್ಟೋ ಮಂದಿ ಬಂದಿದ್ದರು. ಆದ್ರೀಗ ಅದೇ ಅಭಿಮಾನಿಗಳು ದರ್ಶನ್ ಮಾಡಿದ ಒಂದೇ ಒಂದು ಟ್ವೀಟ್‌ಗೆ ಒಂದಾಗಿದ್ದಾರೆ. ಪೋಸ್ಟರ್, ಕಟ್‌ಔಟ್‌ಗಳೆಲ್ಲಾ ರಾರಾಜಿಸುತ್ತಿದೆ. ಕುಚಿಕು ಗೆಳೆಯರ ಬಗ್ಗೆ ಪಾಸಿಟಿವ್ ಆಗಿ ಮಾತಾಡುತ್ತಿದ್ದಾರೆ. ಹೊಸ ಬೇಡಿಕೆಗಳನ್ನು ಇಡುತ್ತಿದ್ದಾರೆ.

'ಕ್ರಾಂತಿ' ಟ್ವೀಟ್‌ಗೆ ಸುದೀಪ್ ಬರಲಿ'
ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಖುಷಿಗೆ ಪಾರವೇ ಇಲ್ಲ. ಇಬ್ಬರು ಒಂದಾಗೇ ಬಿಟ್ಟರು ಅಂತಲೇ ಡಿ ಬಾಸ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಭಾವಿಸಿದ್ದಾರೆ. ಇದೇ ಜೋಷ್‌ನಲ್ಲಿ ದರ್ಶನ್ ಅಭಿಮಾನಿಗಳು 'ಕ್ರಾಂತಿ' ಸಿನಿಮಾದ ಟ್ರೈಲರ್ ಲಾಂಚ್‌ಗೆ ಕಿಚ್ಚ ಸುದೀಪ್‌ರನ್ನು ಅತಿಥಿಯಾಗಿ ಕರೆಸಿ ಅಂತ ಟ್ವೀಟ್ ಮಾಡುತ್ತಿದ್ದಾರೆ. ಕುಚಿಕುಗಳ ಪುನರ್‌ಸಮ್ಮಿಲನಕ್ಕೆ ದೊಡ್ಡ ವೇದಿಕೆಯಲ್ಲಿಯೇ ಆಗಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ.

ಹೊಸ ಪೋಸ್ಟರ್ ರಿಲೀಸ್
ಇಬ್ಬರು ಸೂಪರ್‌ಸ್ಟಾರ್‌ಗಳ ಸಮ್ಮಿಲನಕ್ಕೆ ಅಭಿಮಾನಿಗಳೇ ವೇದಿಕೆಯನ್ನು ರೆಡಿ ಮಾಡುತ್ತಿದ್ದಾರೆ. ಇಬ್ಬರನ್ನೂ ಒಟ್ಟಿಗೆ ನೋಡಬೇಕು ಅಂತ ಆಸೆಯನ್ನು ಹೊರ ಹಾಕುತ್ತಿದ್ದಾರೆ. ಹೀಗಾಗಿ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳು ಕುಚಿಕು ಅಭಿಮಾನಿಗಳು ಅನ್ನೋ ಪೋಸ್ಟರ್ ಅನ್ನೇ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದರೊಂದಿಗೆ ಮೀಮ್‌ಗಳು ಕೂಡ ಸಿಕ್ಕಾಪಟ್ಟೆ ಓಡಾಡುತ್ತಿವೆ.

ಕಿಚ್ಚ ಸುದೀಪ್, ದರ್ಶನ್ ಒಂದಾಗ್ತಾರಾ?
ದರ್ಶನ್ ಒಂದು ಟ್ವೀಟ್‌ನಿಂದ ಇಬ್ಬರ ನಡುವಿನ ಸಮರಕ್ಕೆ ಅಂತ್ಯ ಬೀಳುತ್ತಾ? ಅನ್ನೋ ಪ್ರಶ್ನೆ ಅಂತೂ ಇದ್ದೇ ಇದೆ. ದರ್ಶನ್ ಟ್ವೀಟ್ ಬಳಿಕ ಇಬ್ಬರ ನಡುವೆ ಏನಾದರೂ ಮಾತುಕತೆ ನಡೆದಿದೆಯಾ? ಇಲ್ಲಾ ಒಂದು ಟ್ವೀಟ್‌ಗಷ್ಟೇ ಸೀಮಿತ ಆಗುತ್ತಾ? ಅನ್ನೋ ಕುತೂಹಲವಂತೂ ಇದ್ದೇ ಇದೆ. ಇದಕ್ಕೆ ಮುಂದಿನ ದಿನಗಳಲ್ಲಿ ದರ್ಶನ್ ಹಾಗೂ ಕಿಚ್ಚ ಸುದೀಪ್ ಇಬ್ಬರೂ ಪ್ರತಿಕ್ರಿಯೆ ನೀಡಬಹುದು.