For Quick Alerts
  ALLOW NOTIFICATIONS  
  For Daily Alerts

  'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ಗೆ ದರ್ಶನ್-ಸುದೀಪ್ ಬರ್ತಾರಾ? ಅಪ್ಪು ಫ್ಯಾನ್ಸ್ ಹೇಳಿದ್ದೇನು?

  |

  ಈ ವರ್ಷದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು 'ಗಂಧದ ಗುಡಿ'. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ದರ್ಶನ ನೀಡುವ ಕೊನೆಯ ಸಿನಿಮಾ. ಅಲ್ಲದೆ, ಇದು ಅಪ್ಪು ವೃತ್ತಿ ಬದುಕಿನಲ್ಲೇ ವಿಶಿಷ್ಟ ಸಿನಿಮಾ. ಈ ಕಾರಣಕ್ಕೆ ಸಿನಿಮಾ ಬಿಡುಗಡೆ ಜೊತೆ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.

  ಅಕ್ಟೋಬರ್ 21ಕ್ಕೆ ಪ್ರಿ-ರಿಲೀಸ್ ಈವೆಂಟ್‌ ಅನ್ನು ಗ್ರ್ಯಾಂಡ್ ಆಗಿ ಮಾಡುವುದಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಕೊಟ್ಯಾಂತರ ರೂಪಾಯಿ ವೆಚ್ಚದಲ್ಲಿ ಈ ಪ್ರಿ-ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಅಪ್ಪು ಅಭಿಮಾನಿಗಳು ಚಿತ್ರತಂಡಕ್ಕೆ ಸಾಥ್ ನೀಡುತ್ತಿದ್ದಾರೆ.

  'ಗಂಧದ ಗುಡಿ' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಹೇಗಿದೆ ಸಿದ್ಧತೆ? 5 ಲಕ್ಷ ಅಪ್ಪು ಫ್ಯಾನ್ಸ್ ಬರೋ ಸಾಧ್ಯತೆ!'ಗಂಧದ ಗುಡಿ' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಹೇಗಿದೆ ಸಿದ್ಧತೆ? 5 ಲಕ್ಷ ಅಪ್ಪು ಫ್ಯಾನ್ಸ್ ಬರೋ ಸಾಧ್ಯತೆ!

  'ಗಂಧದ ಗುಡಿ' ಪ್ರಿ-ರಿಲೀಸ್ ಈವೆಂಟ್‌ಗೆ ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಆಗಮಿಸುತ್ತಿದ್ದಾರೆ. ಜೊತೆ ಪರಭಾಷೆಯ ಕಲಾವಿದರೂ ಕೂಡ ಬರುತ್ತಿದ್ದಾರೆ. ಈ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನ ಇಬ್ಬರೂ ಸೂಪರ್‌ಸ್ಟಾರ್‌ ದರ್ಶನ್ ಹಾಗೂ ಸುದೀಪ್ ಇಬ್ಬರೂ ಬರುತ್ತಾರಾ? ಒಂದೇ ವೇದಿಕೆ ಮೇಲೆ ಇಬ್ಬರನ್ನೂ ನೋಡಬಹುದಾ? ಅನ್ನೋ ಪ್ರಶ್ನೆಗ ಎದಿದ್ದೆ. ಅದಕ್ಕೆ ಅಪ್ಪು ಅಭಿಮಾನಿಗಳು ಏನು ಹೇಳಿದ್ದಾರೆ ಅನ್ನುವುದನ್ನು ತಿಳಿಯಲು ಮುಂದೆ ಓದಿ.

  ಅಪ್ಪುಗಾಗಿ ದರ್ಶನ್-ಸುದೀಪ್ ಒಂದಾಗ್ತಾರಾ?

  ಅಪ್ಪುಗಾಗಿ ದರ್ಶನ್-ಸುದೀಪ್ ಒಂದಾಗ್ತಾರಾ?

  ಸ್ಯಾಂಡಲ್‌ವುಡ್‌ನ ಇಬ್ಬರು ಸೂಪರ್‌ಸ್ಟಾರ್‌ಗಳಲ್ಲಿ ದರ್ಶನ್ ಹಾಗೂ ಸುದೀಪ್ ದೋಸ್ತಿ ಬಗೆ ಗೊತ್ತಿಲ್ಲದ ವಿಷಯವೇನು ಇಲ್ಲ. ಕುಚಿಕು ಗೆಳೆಯರಾಗಿದ್ದವರು, ಒಂದೇ ಆತ್ಮ ಎರಡು ದೇಹ ಅಂತಿದ್ದವರು. ಅದ್ಯಾವುದೋ ಕಾರಣಕ್ಕೆ ಇಬ್ಬರೂ ಹಾವು-ಮುಂಗುಸಿಯಂತಾಗಿದ್ದಾರೆ. ಆದರೆ, ಅಭಿಮಾನಿಗಳಿಗೆ ಇಬ್ಬರೂ ಮತ್ತೆ ಒಂದಾಗಬೇಕು. ಒಟ್ಟಿಗೆ ಓಡಾಡಬೇಕು. ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆಯಿದೆ. ಅದಕ್ಕೆ 'ಗಂಧದ ಗುಡಿ' ಪ್ರಿ-ರಿಲೀಸ್ ಕಾರ್ಯಕ್ರಮ ಸಾಕ್ಷಿಯಾಗುತ್ತಾ? ಅನ್ನೋದನ್ನು ಎದುರು ನೋಡುತ್ತಿದ್ದಾರೆ. ಇಬ್ಬರು ಅಭಿಮಾನಿಗಳ ಈ ಆಸೆಗೆ ಅಪ್ಪು ಫ್ಯಾನ್ಸ್‌ ಕಡೆಯಿಂದ ಚಿಕ್ಕದೊಂದು ಸುಳಿವು ಸಿಕ್ಕಿದೆ.

  'ಗಂಧದ ಗುಡಿ'ಯಲ್ಲಿ ದರ್ಶನ್-ಸುದೀಪ್?

  'ಗಂಧದ ಗುಡಿ'ಯಲ್ಲಿ ದರ್ಶನ್-ಸುದೀಪ್?

  ಅಕ್ಟೋಬರ್ 21ಕ್ಕೆ ಅದ್ಧೂರಿಯಾಗಿ ನಡೆಯುತ್ತಿರುವ 'ಗಂಧದ ಗುಡಿ' ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ದಿಗ್ಗಜರ ಸಮಾಗಮ ಆಗಲಿದೆ. ಸ್ಯಾಂಡಲ್‌ವುಡ್‌ನ ಎಲ್ಲಾ ಗಣ್ಯರಿಗೂ ಆಹ್ವಾನ ನೀಡಲಾಗಿದೆ. ಕರ್ನಾಟದ ಮೂಲೆ ಮೂಲೆಯಲ್ಲಿರುವ ಪುನೀತ್ ಅಭಿಮಾನಿಗಳಿಗೂ ಆಹ್ವಾನ ಹೋಗಿದೆ. ಈ ಮಧ್ಯೆ ದರ್ಶನ್ ಹಾಗೂ ಸುದೀಪ್ ಕೂಡ ಆಗಮಿಸುತ್ತಿರೋ ಬಗ್ಗೆ ಸುಳಿವು ಸಿಕ್ಕಿದೆ. "ಈ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಕಲಾವಿದರೂ, ಕನ್ನಡದ ಟಾಪ್ ಸ್ಟಾರ್‌ಗಳೇನಿದ್ದಾರೆ ಅವರೆಲ್ಲರೂ ಬರುತ್ತಾರೆ. ಯಶ್ ಇರಬಹುದು. ದರ್ಶನ್ ಅವರು ಇರಬಹುದು. ಸುದೀಪ್ ಅವರು ಇರಬಹುದು. ಪ್ರತಿಯೊಬ್ಬರೂ ಬರುತ್ತಿದ್ದಾರೆ. ಅಣ್ಣಾವ್ರ ಫ್ಯಾಮಿಲಿಯಲ್ಲಿ ಎಲ್ಲರೂ ಬರುತ್ತಿದ್ದಾರೆ. " ಎಂದು ಅಪ್ಪು ಅಭಿಮಾನಿಗಳು ಹೇಳಿದ್ದಾರೆ.

  ಪರಭಾಷೆಯ ಸ್ಟಾರ್‌ಗಳು ಬರ್ತಾರೆ

  ಪರಭಾಷೆಯ ಸ್ಟಾರ್‌ಗಳು ಬರ್ತಾರೆ

  "ಹೊರಗಡೆ ನಟರು ಪ್ರತಿಯೊಬ್ಬರು ಬರುತ್ತಾರೆ. ಕಮಲ್ ಹಾಸನ್ ಇರಬಹುದು. ಬಾಲಕೃಷ್ಣ ಇರಬಹುದು. ಈತರ ಎಲ್ಲಾ ನಟರೂ ಬರುತ್ತಾರೆ. ಅವರೆಲ್ಲರಿಗೂ ಕರ್ನಾಟಕಕ್ಕೆ ಸ್ವಾಗತ ಕೋರುತ್ತೇವೆ. ಈ ಕಾರ್ಯಕ್ರಮ ಯಶಸ್ವಿ ಆದರೆ, ಬಾಸ್‌ಗೆ ಒಳ್ಳೆಯದಾಗುತ್ತೆ. ಮೇಡಂಗೆ ಒಳ್ಳೆಯದಾಗಲಿ ಅಂತ ನಾವೆಲ್ಲ ಅಭಿಮಾನಿಗಳು ತುಂಬು ಹೃದಯದಿಂದ ಆಶಿಸುತ್ತೇವೆ." ಎಂದು ಅಪ್ಪು ಫ್ಯಾನ್ಸ್ ಆಶಯ ವ್ಯಕ್ತಪಡಿಸಿದ್ದಾರೆ.

  https://www.youtube.com/watch?v=NaeYQMKZlTQ

  ಲಕ್ಷಾಂತರ ಜನರು ಬರುತ್ತಾರೆ

  ಲಕ್ಷಾಂತರ ಜನರು ಬರುತ್ತಾರೆ

  "21ನೇ ತಾರೀಕು ಗಂಧದ ಗುಡಿ ಪ್ರಿ-ರಿಲೀಸ್ ಕಾರ್ಯಕ್ರಮ ಶುರುವಾಗುತ್ತೆ. ಅವತ್ತು ಲಕ್ಷಾಂತರ ಜನ ಬರುತ್ತಾರೆ. ಈ ಕಾರ್ಯಕ್ರಮಕ್ಕೆ ಡಾ.ರಾಜ್ ಕುಟುಂಬದ ಅಭಿಮಾನಿಗಳಿಗೂ ಹಾಗೂ ಎಲ್ಲಾ ಅಭಿಮಾನಿಗಳಿಗೂ ಸ್ವಾಗತ ಕೋರುತ್ತೇವೆ. ಬರುವವರಿಗೆ ಎಲ್ಲಾ ಅನುಕೂಲಗಳನ್ನು ಮಾಡಿಕೊಳ್ಳಬೇಕು ಅಂತ ಸ್ನೇಹಿತರು ಹಾಗೂ ಬಾಸ್ ಮನೆಯವರೆಲ್ಲಾ ಮಾತಾಡಿಕೊಂಡಿದ್ದೇವೆ. ಊಟ, ವಸತಿ, ಅಲ್ಲಿ ಏನಾದರೂ ತೊಂದರೆಯಾದರೆ, ಆಂಬುಲೆನ್ಸ್ ಪ್ರತಿಯೊಂದು ಅನುಕೂಲನೂ ಇರುತ್ತೆ." ಎನ್ನುತ್ತಾರ ಅಪ್ಪು ಅಭಿಮಾನಿಗಳು.

  Exclusive: ಕರ್ನಾಟಕದಾದ್ಯಂತ 'ಪುನೀತ್ ಫುಡ್ ಫೆಸ್ಟಿವಲ್': 'ಗಂಧದ ಗುಡಿ' ಫ್ಲೇವರ್ಸ್ ಸವಿಯಲು ರೆಡಿಯಾಗಿ!Exclusive: ಕರ್ನಾಟಕದಾದ್ಯಂತ 'ಪುನೀತ್ ಫುಡ್ ಫೆಸ್ಟಿವಲ್': 'ಗಂಧದ ಗುಡಿ' ಫ್ಲೇವರ್ಸ್ ಸವಿಯಲು ರೆಡಿಯಾಗಿ!

  English summary
  Fans Says Darshan And Sudeep Will Come For Gandhada Gudi Pre-Release Event, Know More.
  Friday, October 14, 2022, 17:01
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X