Don't Miss!
- News
ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಅಧಿಕ ಸಾವುನೋವುಗಳ ಭೀತಿ!
- Automobiles
ಭಾರತದಲ್ಲಿ ಹೆಚ್ಚು ಪವರ್ಫುಲ್ ಆಗಿರುವ ಕಮ್ಮಿ ಬೆಲೆಯ ಕಾರುಗಳು: ಟಾಟಾದಿಂದ ಮಹೀಂದ್ರಾವರೆಗೆ...
- Technology
ಆಪಲ್ ಗ್ರಾಹಕರಿಗೆ ಬಿಗ್ ಶಾಕ್; ಆದ್ರೂ, ಗ್ರಾಹಕರಿಗೆ ಕೊನೆಯ ಅವಕಾಶ ನೀಡಿದೆ!
- Sports
WIPL 2023: ಮಹಿಳಾ ಐಪಿಎಲ್ಗಾಗಿ ತನ್ನ ಕೋಚಿಂಗ್ ಬಳಗ ಪ್ರಕಟಿಸಿದ ಮುಂಬೈ ಇಂಡಿಯನ್ಸ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಭಿಮಾನಿ ಬೆನ್ನು ತುಂಬಾ ಅಭಿಷೇಕ್ ಅಂಬರೀಶ್ ಟ್ಯಾಟೂ: ರೆಬೆಲ್ ಮನೆಗೆ ರಾಣಾ ದಗ್ಗುಬಾಟಿ ಭೇಟಿ!
ಕಳೆದೊಂದು ವಾರದಿಂದ ರೆಬೆಲ್ ಸ್ಟಾರ್ ಪುತ್ರನ ಬಗ್ಗೆನೇ ಸುದ್ದಿ ಹರಿದಾಡುತ್ತಿದೆ. ಎಲ್ಲಿ ನೋಡಿದರೂ, ಅಭಿಷೇಕ್ ಅಂಬರೀಶ್ ಬಗ್ಗೆನೇ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣಗಳು ಒಂದೆರಡಲ್ಲ. ಒಂದ್ಕಡೆ ಸಿನಿಮಾ, ಮತ್ತೊಂದು ಕಡೆ ನಿಶ್ಚಿತಾರ್ಥ, ಇನ್ನೊಂದು ಕಡೆ ಅಭಿಮಾನಿಗಳು.
ಅಭಿಷೇಕ್ ಅಂಬರೀಶ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಪಾಸಿಟಿವ್ ವಿಷಯಗಳೇ ಕೇಳಿಬರುತ್ತಿದೆ. ಒಂದೇ ಸಿನಿಮಾಗೆ ಹುಚ್ಚು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇನ್ನೊಂದು ಕಡೆ ಸಿನಿಮಾವೊಂದು ಈಗ ತಾನೇ ಮುಗಿದು ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಡಿಸೆಂಬರ್
11ಕ್ಕೆ
ಯಂಗ್
ರೆಬೆಲ್
ಸ್ಟಾರ್
ನಿಶ್ಚಿತಾರ್ಥ?
ಅಭಿ
ಕೈ
ಹಿಡಿಯಲಿರೋ
ಹುಡುಗಿ
ಹಿನ್ನೆಲೆಯೇನು?
ಇತ್ತ ದಿಢೀರನೇ ಟಾಲಿವುಡ್‌ನ ಬಲ್ಲಾಳದೇವ ರಾಣಾ ದಗ್ಗುಬಾಟಿ ಮನೆ ವಿಸಿಟ್ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಅತ್ತ ಅಭಿಮಾನಿಯೊಬ್ಬರ ಬೆನ್ನ ತುಂಬೆಲ್ಲಾ ಅಭಿಷೇಕ್ ಅಂಬರೀಶ್ ಫೋಟೊಗಳನ್ನು ಹಾಕಿಕೊಂಡಿದ್ದಾರೆ. ಅಷ್ಟಕ್ಕೂ ಅಭಿ ಲೈಫ್‌ನಲ್ಲಿ ಏನು ನಡೀತಿದೆ ಅನ್ನೋ ಡಿಟೈಲ್ಸ್ ಇಲ್ಲಿದೆ.

ಅಂಬಿ ಮನೆಗೆ ರಾಣಾ ದಗ್ಗುಬಾಟಿ ವಿಸಿಟ್
ಯಂಗ್ ರೆಬೆಲ್ ಸ್ಟಾರ್ ನಿಶ್ಚಿತಾರ್ಥದ ವಿಷಯ ಎಲ್ಲೆಡೆ ಹರಿದಾಡುತ್ತಿದೆ. ಇಷ್ಟೆಲ್ಲಾ ಸುದ್ದಿ ಓಡಾಡುತ್ತಿದ್ದರೂ ಅಭಿಷೇಕ್ ಅಂಬರೀಶ್ ಹಾಗೂ ಸುಮಲತಾ ಇಬ್ಬರೂ ಗುಟ್ಟು ಬಿಟ್ಟುಕೊಡುತ್ತಿಲ್ಲ. ಮೂಲಗಳ ಪ್ರಕಾರ, ಮುಂಬರುವ ಭಾನುವಾರ (ಡಿಸೆಂಬರ್ 11) ಅಭಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಈ ಮಧ್ಯೆ ರಾಣಾ ದಗ್ಗುಬಾಟಿ ದಿಢೀರನೇ ಅಭಿಷೇಕ್ ಅಂಬರೀಶ್ ಮನೆಗೆ ವಿಸಿಟ್ ಕೊಟ್ಟಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ರಾಣಾ ಭೇಟಿಯ ಹಿನ್ನೆಲೆಯೇನು?
ಅಭಿಷೇಕ್ ಅಂಬರೀಶ್ ನಿಶ್ಚಿತಾರ್ಥದ ಸುದ್ದಿ ಓಡಾಡುತ್ತಿರುವಾಗಲೇ ರಾಣಾ ದಗ್ಗುಬಾಟಿ ವಿಸಿಟ್ ಕೊಟ್ಟಿದ್ದು ಚರ್ಚೆಗಂತೂ ಎಡೆ ಮಾಡಿಕೊಟ್ಟಿದೆ. ಆದರೆ, "ರಾಣಾ ದಗ್ಗುಬಾಟಿ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಅಭಿಷೇಕ್ ಅಂಬರೀಶ್‌ರನ್ನು ಭೇಟಿ ಮಾಡಿದ್ದಾರೆ. ಇದೊಂದು ಸೌಜನ್ಯದ ಭೇಟಿ ಎಂದು" ಮೂಲಗಳು ಹೇಳುತ್ತಿವೆ. ಆದರೂ, ಅಭಿಮಾನಿಗಳು ರಾಣಾ ಹಾಗೂ ಅಭಿಷೇಕ್ ಭೇಟಿ ಬಗ್ಗೆ ಅನುಮಾನವಂತೂ ಇದ್ದೇ ಇದೆ.

ಬೆನ್ನು ತುಂಬಾ ಅಭಿ ಟ್ಯೂಟು
ಅಭಿಷೇಕ್ ಅಂಬರೀಶ್ ಕೆಲವು ದಿನಗಳ ಹಿಂದಷ್ಟೇ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ದುನಿಯಾ ಸೂರಿ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಇದೇ ವೇಳೆ ಅಭಿಮಾನಿ ಅಶ್ವಥ್ ಬೆನ್ನಿನ ತುಂಬಾ ಅಭಿಷೇಕ್ ಅಂಬರೀಶ್ ಟ್ಯೂಟೂ ಹಾಕಿಸಿಕೊಂಡಿದ್ದಾನೆ. ಮದ್ದೂರು ತಾಲೂಕು ಕೊಪ್ಪ ಹೋಬಳಿ ಹರಳಕೆರೆ ಗ್ರಾಮದ ನಿವಾಸಿಯಾಗಿರುವ ಈತ ಅಪ್ಪಟ ಅಭಿ ಅಭಿಮಾನಿ. ಈ ಕಾರಣಕ್ಕೆ 'ಬ್ಯಾಡ್ ಮ್ಯಾನರ್ಸ್' ಸಿನಿಮಾದ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ.

ಟ್ಯಾಟೂ ನೋಡಿ ಅಭಿ ಹೇಳಿದ್ದೇನು?
ಟ್ಯಾಟೂ ಹಾಕಿಸಿಕೊಂಡಿದ್ದು ಗೊತ್ತಾಗುತ್ತಿದ್ದಂತೆ ಅಭಿಷೇಕ್ ಅಂಬರೀಶ್ ಅಭಿಮಾನಿಯನ್ನು ಕರೆಸಿಕೊಂಡು ಭೇಟಿ ಮಾಡಿದ್ದಾರೆ. ಇದೇ ವೇಳೆ ಅಭಿಮಾನಿಗೆ ಬೈದಿದ್ದಾರೆ. " ಹೀಗೆಲ್ಲಾ ಯಾಕೆ ಟ್ಯಾಟೂವನ್ನು ಹಾಕಿಸಿಕೊಳ್ಳುತ್ತೀರಾ. ನನ್ನ ಟ್ಯಾಟೂ ಬದಲು ನಿಮ್ಮ ತಂದೆ-ತಾಯಿಯ ಟ್ಯಾಟೂ ಹಾಕಿಸಿಕೊಳ್ಳಿ. ಟ್ಯೂಟೂ ಬದಲು ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಮಾ ಪೋಸ್ಟರ್‌ಗಳನ್ನು ಶೇರ್ ಮಾಡಿ. ಸಿನಿಮಾಗೆ ಸಪೋರ್ಟ್ ಮಾಡಿ" ಎಂದು ಅಭಿಷೇಕ್ ಅಂಬರೀಶ್ ಹೇಳಿ ಕಳುಹಿಸಿದ್ದಾರೆ.