For Quick Alerts
  ALLOW NOTIFICATIONS  
  For Daily Alerts

  Exclusive: 'ರಾಜೇಂದ್ರ ಸಿಂಗ್ ಬಾಬು ಬಳಿ 'ಸ್ವಾತಿ ಮುತ್ತಿನ ಮಳೆ ಹನಿಯೇ' ಟೈಟಲ್ ಇಲ್ಲ' : ಭಾ ಮಾ ಹರೀಶ್

  |

  ಮೋಹಕತಾರೆ ರಮ್ಯಾ ಕಮ್‌ ಬ್ಯಾಕ್ ಮಾಡಿರೋ ಸಿನಿಮಾ 'ಸ್ವಾತಿ ಮುತ್ತಿನ ಮಳೆ ಹನಿಯೇ'. ನಿರ್ಮಾಪಕಿಯಾಗಿ ಮತ್ತೆ ಚಿತ್ರರಂಗಕ್ಕೆ ಕಾಲಿಡೋಕೆ ಮುಂದಾಗಿದ್ದ ನಟಿ ಆಪಲ್ ಬಾಕ್ಸ್ ಅನ್ನೋ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಇದೇ ನಿರ್ಮಾಣ ಸಂಸ್ಥೆಯ ಮೇರೆಗೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾವನ್ನು ನಿರ್ಮಿಸಿದ್ದಾರೆ.

  'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಶೂಟಿಂಗ್ ಮುಗಿದಿದ್ದು, ಇನ್ನೇನು ಬಿಡುಗಡೆ ಸಜ್ಜಾಗುತ್ತಿದೆ. ಈ ಹೊತ್ತಲ್ಲಿ ಈ ಸಿನಿಮಾ ಟೈಟಲ್ ವಿವಾದಕ್ಕೆ ಕಾರಣವಾಗಿದೆ. ಕನ್ನಡದ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಟೈಟಲ್ ಬಳಸಬಾರದು ಎಂದು ಆಕ್ಷೇಪ ಎತ್ತಿದ್ದಾರೆ.

  ರಮ್ಯಾ ನಟಿಸಬೇಕಿದ್ದ ಪಾತ್ರದಲ್ಲಿ ಸಿರಿ ರವಿಕುಮಾರ್; ಸ್ವಾತಿ ಮುತ್ತಿನ ಮಳೆ ಹನಿಯೇ ಫಸ್ಟ್ ಲುಕ್ ರಿಲೀಸ್ರಮ್ಯಾ ನಟಿಸಬೇಕಿದ್ದ ಪಾತ್ರದಲ್ಲಿ ಸಿರಿ ರವಿಕುಮಾರ್; ಸ್ವಾತಿ ಮುತ್ತಿನ ಮಳೆ ಹನಿಯೇ ಫಸ್ಟ್ ಲುಕ್ ರಿಲೀಸ್

  ಕರ್ನಾಟಕ ವಾಣಿಜ್ಯ ಮಂಡಳಿಗೆ ಈಗಾಗಲೇ ರಾಜೇಂದ್ರ ಸಿಂಗ್ ಬಾಬು ಪತ್ರ ಬರೆದಿದ್ದು, ಈ ಟೈಟಲ್ ಅನ್ನು ತಾವೇ ನೋಂದಾಯಿಸಿದ್ದು, ಬೇರೆಯವರಿಗೆ ಬಳಸಲು ಅವಕಾಶ ಕೊಡಬಾರದು ಎಂದು ಹೇಳಿದ್ದಾರೆ. ಈ ವಿವಾದಕ್ಕೆ ಫಿಲ್ಮ್ ಚೇಂಬರ್ ಅಧಕ್ಷ ಭಾ ಮಾ ಹರೀಶ್ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ ಈ ಶೀರ್ಷಿಕೆ ಯಾರ ಬಳಿ ಇದೆ ಅಂತಾನೂ ಹೇಳಿದ್ದಾರೆ.

  ವಿವಾದದಲ್ಲಿ ರಮ್ಯಾ ಸಿನಿಮಾ ಟೈಟಲ್?

  ವಿವಾದದಲ್ಲಿ ರಮ್ಯಾ ಸಿನಿಮಾ ಟೈಟಲ್?

  ರಮ್ಯಾ ನಟಿಸಬೇಕಿದ್ದ ಸಿನಿಮಾ ಇದು. ಆಪಲ್ ಬಾಕ್ಸ್ ಮೂಲಕ ತಾವೇ ನಿರ್ಮಾಪಕಿಯಾಗಿ ಕಮ್ ಬ್ಯಾಕ್ ಮಾಡಲು ಮುಂದೆ ಬಂದಾಗ ಸಿನಿಮಾಗೆ 'ಸ್ವಾತಿ ಮುತ್ತಿನ ಮಳೆ ಹನಿಯೇ' ಅಂತ ಫಿಕ್ಸ್ ಆಗಿತ್ತು. ರಾಜ್ ಬಿ ಶೆಟ್ಟಿ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಕೇವಲ ನಿರ್ಮಾಪಕಿಯಾಗಿ ಮಾತ್ರ ಉಳಿದುಕೊಂಡ ರಮ್ಯಾ ನಟನೆಯಿಂದ ಹೊರಬಂದಿದ್ದರು. ಈಗ ಈ ಟೈಟಲ್ ಅನ್ನು ರಮ್ಯಾ ಕೊಡಬಾರದು ಅಂತ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಫಿಲ್ಮ್ ಚೇಂ‍ಬರ್ ಮೆಟ್ಟಿಲೇರಿದ್ದಾರೆ. ಆದರೆ, ಫಿಲ್ಮ್ ಚೇಂಬರ್ ಬೇರೆನೇ ಕಾರಣವನ್ನು ನೀಡುತ್ತಿದೆ.

  ರಾಜೇಂದ್ರ ಸಿಂಗ್ ಬಾಬು ಬಳಿ ಇಲ್ಲ ಟೈಟಲ್

  ರಾಜೇಂದ್ರ ಸಿಂಗ್ ಬಾಬು ಬಳಿ ಇಲ್ಲ ಟೈಟಲ್

  'ಸ್ವಾತಿ ಮುತ್ತಿನ ಮಳೆ ಹನಿಯೇ' ಟೈಟಲ್ ಹಾಗೂ ರಾಜೇಂದ್ರ ಸಿಂಗ್ ಬಾಬು ಅವರಿಗೊಂದು ಸಂಬಂಧವಿದೆ. ಅವರೇ ನಿರ್ದೇಶಿಸಿದ 'ಬಣ್ಣದ ಗೆಜ್ಜೆ' ಸಿನಿಮಾದ ಒಂದು ಹಾಡು 'ಸ್ವಾತಿ ಮುತ್ತಿನ ಮಳೆ ಹನಿಯೇ'. ಇದೇ ಟೈಟಲ್ ಅನ್ನು ತಾವಯ ನೋಂದಾಯಿಸಿರುವುದಾಗಿ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಹೇಳುತ್ತಿದ್ದಾರೆ. ಆದರೆ, ಈ ಸಂಬಂಧ ಫಿಲ್ಮಿಬೀಟ್ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಸಂಪರ್ಕಿಸಿದ್ದಾಗ, ಅಧ್ಯಕ್ಷರಾಗಿರುವ ಭಾ ಮಾ ಹರೀಶ್ ಈ ಶೀರ್ಷಿಕೆ ರಾಜೇಂದ್ರ ಸಿಂಗ್ ಬಾಬು ಬಳಿ ಇಲ್ಲ ಎಂದು ಹೇಳಿದ್ದಾರೆ.

  ಯಾರ ಬಳಿಕ ಇದೆ ಟೈಟಲ್ ?

  ಯಾರ ಬಳಿಕ ಇದೆ ಟೈಟಲ್ ?

  ಫಿಲ್ಮ್ ಚೇಂಬರ್ ಅಧ್ಯಕ್ಷರ ಪ್ರಕಾರ, "ಸ್ವಾತಿ ಮುತ್ತಿನ ಮಳೆ ಹನಿಯೇ' ಟೈಟಲ್ 'ಪೊಗರು' ಚಿತ್ರದ ನಿರ್ಮಾಪಕ ಬಿ ಕೆ ಗಂಗಾಧರ್ ಅವರ ಬಳಿ ಇದೆ. ಫಿಲ್ಮ್ ಚೇಂಬರ್‌ನಲ್ಲಿ ಕೊನೆಯದಾಗಿ ಅವರ ಹೆಸರಿನಲ್ಲಿಯೇ ರಿಜಿಸ್ಟರ್ ಆಗಿದೆ. ಅವರು ಈಗಾಗಲೇ ರಮ್ಯಾ ಅವರಿಗೆ ಈ ಟೈಟಲ್ ಪತ್ರದಲ್ಲಿ ಬರೆದು ಕೊಟ್ಟಿದ್ದಾರೆ. ಇನ್ನು ಫಿಲ್ಮ್ ಚೇಂಬರ್ ಬಂದು ಅವರು ಆ ಪತ್ರವನ್ನು ಸಲ್ಲಿಸುತ್ತಿದ್ದಂತೆ ಅದು ನಟಿ ರಮ್ಯಾ ಅವರಿಗೆ ವರ್ಗಾವಣೆಯಾಗುತ್ತೆ." ಎಂದು ಭಾ ಮಾ ಹರೀಶ್ ಫಿಲ್ಮಿಬೀಟ್‌ಗೆ ತಿಳಿಸಿದ್ದಾರೆ.

  ಯಾರಿಗೆ ಸಿಗುತ್ತೆ ಟೈಟಲ್?

  ಯಾರಿಗೆ ಸಿಗುತ್ತೆ ಟೈಟಲ್?

  ಕಹಾನಿ ಮೇ ಟ್ವಿಸ್ಟ್ ಅನ್ನೋ ಹಾಗೇ ರಾಜೇಂದ್ರ ಸಿಂಗ್ ಬಾಬು ಗೆಳೆಯ ಅಂಬರೀಶ್ ಹಾಗೂ ಸುಹಾಸಿನಿ ಅವರ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುತ್ತಿದ್ದರು. ಆ ಸಿನಿಮಾ ಶೆ. 80ರಷ್ಟು ಮುಗಿದಿದ್ದು, ರೆಬೆಲ್ ಸ್ಟಾರ್ ನಿಧನದ ಬಳಿಕ ಶೂಟಿಂಗ್ ಬಾಕಿ ಉಳಿದಿದೆ. ಈ ಕಾರಣಕ್ಕೆ ಯಾರಿಗೂ ಟೈಟಲ್ ಕೊಡಬಾರದು ಎಂದು ಪತ್ರದಲ್ಲಿ ಹೇಳಿದ್ದಾರೆ. ಇತ್ತ ರಮ್ಯಾ ಈಗಾಗಲೇ ಇದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮುಗಿಸಿದ್ದಾರೆ. ಈ ಎರಡು ಸಿನಿಮಾಗಳಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ಯಾರ ಪಾಲಾಗುತ್ತೆ ಅನ್ನೋದು ಸದ್ಯಕ್ಕಿರೋ ಪ್ರಶ್ನೆ.

  English summary
  Film Chamber Clafication On Swati Muttin Male Haniye Title Controversy, Know More.
  Monday, December 12, 2022, 18:02
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X