»   » ಉಸ್ಸಪ್ಪಾ.. ಅಂತೂ ’ರನ್ನ’ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್!

ಉಸ್ಸಪ್ಪಾ.. ಅಂತೂ ’ರನ್ನ’ ಚಿತ್ರ ಬಿಡುಗಡೆಗೆ ದಿನಾಂಕ ಫಿಕ್ಸ್!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರ ಕುಂಬಳಕಾಯಿ ಹೊಡೆದ ಸುಮಾರು ಎರಡುವರೆ ತಿಂಗಳ ನಂತರ ಕೊನೆಗೂ ಚಿತ್ರದ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.

ತೆಲುಗಿನ ಸೂಪರ್ ಹಿಟ್ ಪವನ್ ಕಲ್ಯಾಣ್ ಅಭಿನಯದ 'ಅತ್ತಾರಿಂಟಿಕಿ ದಾರಿಯೇದಿ' ಚಿತ್ರದ ರಿಮೇಕ್ ಆಗಿರುವ ರನ್ನ ಚಿತ್ರದ ಬಿಡುಗಡೆ ದಿನಾಂಕವನ್ನು ಖುದ್ದು ಸುದೀಪ್ ಟ್ವೀಟ್ ಮಾಡುವ ಮೂಲಕ ಖಚಿತ ಪಡಿಸಿದ್ದಾರೆ.

ಚಿತ್ರ ಬಿಡುಗಡೆಯ ಸುತ್ತಮುತ್ತ ಹತ್ತು ಹಲವು ಗೊಂದಲಗಳಿವೆ, ಸೋಮವಾರ (ಮೇ 18) ಚಿತ್ರ ಸೆನ್ಸಾರಿಗೆ ಹೋಗಲಿದೆ ಎಂದು ಕಿಚ್ಚ ಸುದೀಪ್ ಈ ಹಿಂದೆ ಟ್ವೀಟ್ ಮಾಡಿದ್ದರು. ( ಹೊಸ ಪದ್ದತಿಗೆ ನಾಂದಿ ಹಾಡಿದ ರನ್ನ)

ತೆಲುಗು ಚಿತ್ರದ ರಿಮೇಕ್ ಆಗಿದ್ದರೂ ರನ್ನ ಚಿತ್ರದಲ್ಲಿ ಈ ನಾಡಿನ ನೇಟಿವಿಟಿಗೆ ತಕ್ಕಂತೆ ನಿರೂಪಣೆಯಲ್ಲಿ ಬದಲಾವಣೆ ತರಲಾಗಿದೆ ಎಂದು ರನ್ನ ಚಿತ್ರದ ನಿರ್ದೇಶಕ ನಂದ ಕಿಶೋರ್ ಹೇಳಿದ್ದಾರೆ.

ರನ್ನ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದ್ದು, ನಿರ್ಮಾಪಕರು ಅಥವಾ ಡಿಸ್ಟ್ರಿಬ್ಯೂಟರ್ ಮೂಲಕ ಚಿತ್ರ ಬಿಡುಗಡೆಯಾಗದೇ ನೇರ ಚಿತ್ರಮಂದಿರದ ಮಾಲೀಕರು ಚಿತ್ರದ ರೈಟ್ಸ್ ಪಡೆದಿರುತ್ತಾರೆ ಎನ್ನುವುದು ವಿಶೇಷ. (ತಂತ್ರಜ್ಞರಿಗೆ ರನ್ನ ತಂಡದಿಂದ ಸರ್ಪ್ರೈಸ್)

ತೆರೆಯ ಮೇಲೆ ಕಾಣಿಸಲಿರುವ ತಂತ್ರಜ್ಞರ ಕುಟುಂಬ

ಕನ್ನಡದಲ್ಲಿ ಇದೇ ಮೊದಲು ಎನ್ನುವಂತೆ, ರನ್ನ ಚಿತ್ರದ ಪ್ರತಿಯೊಬ್ಬ ತಂತ್ರಜ್ಞರ ಕುಟುಂಬವನ್ನು ಟೈಟಲ್ ಕಾರ್ಡಿನಲ್ಲಿ ತೋರಿಸೋ ಕೆಲಸವನ್ನು ನಿರ್ದೇಶಕ ನಂದಕಿಶೋರ್ ಮಾಡಿದ್ದಾರೆ.

ಜೂನ್ ಮೊದಲವಾರದಲ್ಲಿ

ಸುದೀಪ್, ಹರಿಪ್ರಿಯಾ, ರಚಿತಾ ರಾಮ್, ಚಿಕ್ಕಣ್ಣ ಪ್ರಮುಖ ಭೂಮಿಕೆಯಲ್ಲಿರುವ ರನ್ನ ಚಿತ್ರ ಜೂನ್ ನಾಲ್ಕು ರಾಯರ ದಿನದಂದು ಬಿಡುಗಡೆಯಾಗಲಿದೆ.

ಟ್ವೀಟ್ ಮೂಲಕ ಸುದೀಪ್

ರನ್ನ ಚಿತ್ರ ಜೂನ್ ನಾಲ್ಕರಂದು ಬಿಡುಗಡೆಯಾಗಲಿದೆ. ಅಭಿಮಾನಿಗಳ ಎಲ್ಲಾ ಸಹಕಾರಕ್ಕೆ ಆಭಾರಿಯಾಗಿದ್ದೇನೆ. ಗಾಡ್ ಬ್ಲೆಸ್ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಸೆನ್ಸಾರ್ ಕ್ಲೀನ್ ಚಿಟ್

ರನ್ನ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ನೀಡಿದೆ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್ U/A ಸರ್ಟಿಫಿಕೇಟ್ ನೀಡಿದೆ.

ಮಾಣಿಕ್ಯ ನಂತರ ರನ್ನ

ಸುದೀಪ್ ನಟಿಸಿ ನಿರ್ದೇಶಿಸಿದ್ದ ಮಾಣಿಕ್ಯ ಚಿತ್ರ ಹೋದ ವರ್ಷ ಮೇ ಒಂದರಂದು ಬಿಡುಗಡೆಯಾಗಿತ್ತು. ಒಂದು ವರ್ಷದ ನಂತರ ಈಗ ರನ್ನ ಚಿತ್ರ ಬಿಡುಗಡೆಗೆ ಸಜ್ಜಾಗಿದೆ, ಹಾಗಾಗಿ ಸುದೀಪ್ ಅಭಿಮಾನಿಗಳಲ್ಲಿ ಚಿತ್ರದ ಮೇಲೆ ಭಾರೀ ನಿರೀಕ್ಷೆಯಿದೆ.

English summary
After a series of postponements Sudeep's Ranna has confirmed its releasing date on June 4th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada